ಸುದ್ದಿ

ಪ್ರಿಯತಮೆಯ ಅಂತ್ಯಕ್ರಿಯೆ ಮುಗಿಸಿದ ನಂತರ ಸಾವನಪ್ಪಿದ ಪ್ರಿಯತಮ!ಏಕೆ ಗೊತ್ತಾ?

267

ತನ್ನ ಪ್ರಿಯತಮೆಯ ಸಾವಿನಿಂದ ನೊಂದಿದ್ದ ಪ್ರಿಯಕರ ಆಕೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಬಳಿಕ ಮನೆಗೆ ಬಂದು ತಾನೂ ಸಾವಿಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

22 ವರ್ಷದ ವಿತೀಶ್ವರನ್ ಆತ್ಮಹತ್ಯೆಗೆ ಶರಣಾದ ಪ್ರಿಯತಮ. ಈತ ಬಾಲ್ಯದಲ್ಲಿರುವಾಗಲೇ ತನ್ನ ಪೋಷಕರನ್ನು ಕಳೆದುಕೊಂಡಿದ್ದು, ತನ್ನ ಚಿಕ್ಕಪ್ಪನ ಮನೆಯಲ್ಲಿ ವಾಸಿಸುತ್ತಿದ್ದನು. ವಿತೀಶ್ವರನ್ ವಿದ್ಯಾಭ್ಯಾಸ ಮುಗಿದ ಬಳಿಕ ಬೇರೆ ರಾಜ್ಯಕ್ಕೆ ಕೆಲಸಕ್ಕಾಗಿ ಹೋಗಿದ್ದನು. ಅಲ್ಲಿಂದ ಕೆಲವು ತಿಂಗಳ ನಂತರ ತಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದನು.

ಕೊಡಲು ಜಿಲ್ಲೆಯ ಪರಮೇಶ್ವಾನಲ್ಲೂರು ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ವಿತೀಶ್ವರನ್ ಎಂಬ ಈ ಯುವಕ ತನ್ನ ಗ್ರಾಮದ ರಥಿನಾ ಪ್ರಿಯ ಎಂಬಾಕೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ.
ತಮ್ಮ ಗ್ರಾಮಕ್ಕೆ ಬಂದ ನಂತರ ರಥಿನಾ ಪ್ರಿಯಾ 21 ಎಂಬ ಹುಡುಗಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಬಿಎಸ್‍ಸಿ ವ್ಯಾಸಂಗ ಮಾಡುತ್ತಿದ್ದಳು.

ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಮೊಬೈಲ್ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದ ರಥಿನಾ ಪ್ರಿಯಾ ತಾಯಿ, ಮಗಳಿಗೆ ಬೈದಿದ್ದು ಇದರಿಂದ ನೊಂದ ಆಕೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ವಿಷಯ ತಿಳಿದು ಖಿನ್ನತೆಗೊಳಗಾಗಿದ್ದ ವಿತೀಶ್ವರನ್, ಪ್ರೇಯಸಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು, ಮನೆಗೆ ಬಂದ ಬಳಿಕ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಒಳ ಉಡುಪಿಗೆ ಕೈ ಹಾಕಿ ಲೈಂಗಿಕ ದೌರ್ಜನ್ಯ: ಮಹಿಳೆ ಒಬ್ಬಳು ಟ್ರಂಪ್ ವಿರುದ್ಧ ಆರೋಪ ಮಾಡಿದ್ದಾಳೆ…

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್ ನಿಯತಕಾಲಿಕೆಯ ಲೇಖಕಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.ಮ್ಯಾನ್‍ಹಟನ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ತನ್ನ ಮೇಲೆ ಟ್ರಂಪ್ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. 75 ವರ್ಷದ ಇ ಜೀನ್ ಕ್ಯಾರೋಲ್ 1995-96 ರಲ್ಲಿ ಮ್ಯಾನ್‍ಹಟನ್‍ನ ಬರ್ಗ್‍ಡ್ರಾಫ್ ಅಂಗಡಿಯಲ್ಲಿ ನಡೆದಿರುವ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆಗ ಟ್ರಂಪ್‍ಗೆ 40-50 ವರ್ಷ ಆಗಿರಬಹುದು. 49-50 ವಯಸ್ಸಿನ ನನ್ನನ್ನು, ತನ್ನ ಸ್ನೇಹಿತೆಗೆ ಯಾವ ಉಡುಗೊರೆ ನೀಡಬಹುದು ಎಂದು ಕೇಳಿದ್ದರು. ಅದಕ್ಕೆ ನಾನು ಬೂದು ಬಣ್ಣದ…

  • ಉಪಯುಕ್ತ ಮಾಹಿತಿ

    ನಮ್ಮ ಅಡುಗೆ ಮನೆಯ ವೇಸ್ಟ್ – ನಮ್ಮ ಮಣ್ಣಿಗೆ ಬೆಸ್ಟ್

    1. ಬಳಸಿದ ನಂತರ ಬಿಸಾಡುವ ಮೊಟ್ಟೆಯ ಕವಚ ಮಣ್ಣಲ್ಲಿ ಬೆರೆತರೆ ಗಿಡದ ಬೆಳವಣಿಗೆಯನ್ನು ಪ್ರಚೋದಿಸುವ ಹಾಗೂ ತರಕಾರಿ ಬೆಳೆಗಳಿಗೆ ತಗುಲುವ ಕೊಳೆರೋಗಗಳನ್ನು ತಡೆಗಟ್ಟುವ ಕ್ಯಾಲ್ಸಿಯಂ ಆಂಶ ಸಿಗುತ್ತದೆ. 2. ಕಾಫೀ ಗಸಿಯನ್ನು ಮಣ್ಣಿಗೆ ಸೇರಿಸಿ ಮಣ್ಣಲ್ಲಿ ಖನಿಜಾಂಶ – ಸಾರಜನಕ – ವಿಟಮಿನ್ನುಗಳನ್ನು ಹೆಚ್ಚಿಸಬಹುದು 3. ಟೀ ಗಸಿಯನ್ನೂ ಸಹ ಕಾಂಪೋಸ್ಟ್ ಮೂಲಕ ಮಣ್ಣಿಗೆ ಸೇರಿಸಿ ಮಣ್ಣಿನ ಗುಣಮಟ್ಟ ಹೆಚ್ಚಿಸಬಹುದು 4. ಬಾಳೇಹಣ್ಣಿನ ಸಿಪ್ಪೆಯನ್ನು ನೇರವಾಗಿ ಮಣ್ಣ ಮೇಲೆ ಹಾಕಿ, ಮಣ್ಣಿಗೆ ಕ್ಯಾಲ್ಸಿಯಂ, ಮೆಗ್ನೇಷಿಯಂ ಮತ್ತು ಪೊಟ್ಯಾಷ್…

  • ತಂತ್ರಜ್ಞಾನ

    ನಿಮ್ಮ ಫೇಸ್ ಬುಕ್ ಪ್ರೊಫೈಲ್ ಫೋಟೋ ಬಗ್ಗೆ, ಇನ್ಮೇಲೆ ನೀವು ತಲೆ ಕೆಡಿಸ್ಕೋಬೇಡಿ!ಏಕೆ ಗೊತ್ತಾ….

    ಫೇಸ್‌ಬುಕ್ನಲ್ಲಿ ಪ್ರೊಫೈಲ್ ಚಿತ್ರವನ್ನು ನಾವು ಹಾಕುವುದಕ್ಕೆ ಮುಂಚೆ ಹಿಂಜರಿಯುವುದು ಸಹಜ.ನಿಮಗೆಲ್ಲಾ ಗೊತ್ತಿರುವ ಹಾಗೆ ಕೆಲವರು ಪ್ರೊಫೈಲ್ ಫೋಟೋಗಳನ್ನು ದುರುಪಯೋಗ ಮಾಡಿಕೊಳ್ಳುವ ತುಂಬಾ ಘಟನೆಗಳು ನಡೆಯುತ್ತಿರುತ್ತವೆ.

  • ಜ್ಯೋತಿಷ್ಯ

    ಇದ್ದಕಿದ್ದಂತೆ ನಿಮ್ಮ ಜೇಬಿನಲ್ಲಿರುವ ನಾಣ್ಯ ಅಥ್ವಾ ನೋಟು ಕೆಳಗಡೆ ಬಿದ್ರೆ ಏನಾಗುತ್ತೆ ಗೊತ್ತಾ..?

    ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಹಣ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ. ನಿಮ್ಮ ಜೇಬಿನಿಂದ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುವ ಮೊದಲು ಅದ್ರಿಂದಾಗುವ ಶುಭ…

  • ಸುದ್ದಿ

    ಅಸ್ಸಾಂನ 700 ಹಳ್ಳಿ ಜಲಾವೃತ-ಅಪಾಯದ ತುದಿ ಮೀರಿ ಹರಿಯುತ್ತಿರೋ ಬ್ರಹ್ಮಪುತ್ರ…..ಜನ ಜೀವನ ಅಸ್ತ ವ್ಯಸ್ತ….!

    ಮಳೆರಾಯನ ಆರ್ಭಟಕ್ಕೆ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಸ್ಸಾಂನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು, ಸುಮಾರು 4 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಭಾರೀ ಭೂಕುಸಿತ ಮುಂದುವರಿದಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ಹ್ ಮತ್ತು ಗೋಲಘಾಟ್ ಸೇರಿದಂತೆ ಒಟ್ಟು 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಸುಮಾರು ನಾಲ್ಕು ಲಕ್ಷ…

  • ಸುದ್ದಿ

    7 ವರ್ಷಗಳಲ್ಲಿ 7 ಬಾರಿ ಗರ್ಭಪಾತ ; ಕರಳು ಚಿಮ್ಮುತ್ತೆ ಮಹಿಳೆಯ ಹೃದಯ ವಿದ್ರಾವಕ ಕಥೆ….

    ಹೈದ್ರಾಬಾದ್ ನ ಮಹಿಳೆಯೊಬ್ಬಳ ನೋವಿನ ಕಥೆ ಬಹಿರಂಗವಾಗಿದೆ. ಮಹಿಳೆಗೆ ಒಂದಲ್ಲ ಎರಡಲ್ಲ 7 ಬಾರಿ ಗರ್ಭಪಾತವಾಗಿದೆ. ಪ್ರತಿ ಬಾರಿ ಗರ್ಭ ಧರಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗಂಡನ ಮನೆಯವರು ಲಿಂಗ ಪರೀಕ್ಷೆ ನಂತ್ರ ಗರ್ಭಪಾತ ಮಾಡಿಸ್ತಿದ್ದರಂತೆ. ಸುಮತಿ ಏಳು ವರ್ಷಗಳಲ್ಲಿ 7 ಬಾರಿ ಗರ್ಭ ಧರಿಸಿದ್ದಾಳೆ. ಪ್ರತಿ ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಒಂದು ಗರ್ಭಪಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಗರ್ಭಪಾತ ನಡೆಯುತ್ತಿತ್ತು. ಗರ್ಭ ಧರಿಸಿದ ಮೇಲೆ ಖುಷಿ ಪಡುವ ಬದಲು ಅಳುತ್ತಿದ್ದ ಸುಮತಿ ಈ ಬಾರಿ ಹೆಣ್ಣಾಗದಿರಲಿ ಎಂದು…