ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಲಗುವುದಕ್ಕೂ ಮುನ್ನ ಹಿತವಾದ, ಧ್ಯಾನ, ಯೋಗ ಸಂಗೀತವನ್ನು ಆಲಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಭಾರತೀಯ ಸಂಶೋಧಕರು ಹೇಳಿದ್ದಾರೆ.

ಈ ರೀತಿಯ ಮ್ಯೂಸಿಕ್ ಥೆರೆಪಿಯನ್ನು ಆಸ್ಪತ್ರೆಗಳಲ್ಲಿ ಪ್ರಯೋಗಿಸಲಾಗುತ್ತಿದ್ದು, ಯೋಗ ಸಂಗೀತವನ್ನು ಮಲಗುವುದಕ್ಕೂ ಮುನ್ನ ಆಲಿಸುವುದು ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜಸ್ಥಾನದ ಜೈಪುರದ ಹೆಚ್ ಜಿ ಎಸ್ಎಂಎಸ್ ಆಸ್ಪತ್ರೆಯ ನರೇಶ್ ಸೇನ್ ಹೇಳಿದ್ದಾರೆ.
ಈ ಅಧ್ಯಯನವನ್ನು ಜರ್ಮನಿಯಲ್ಲಿರುವ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಕಾಂಗ್ರೆಸ್ 2018 ರಲ್ಲಿ ಮಂಡಿಸಲಾಗಿದೆ. ಆರೋಗ್ಯಕರವಾಗಿದ್ದ ಸುಮಾರು 149 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು.

149 ಜನರ ಪೈಕಿ ಕೆಲವರು ಮಲಗುವುದಕ್ಕೂ ಮುನ್ನ ಯೋಗ ಸಂಗೀತವನ್ನು ಆಲಿಸಿದರೆ, ಇನ್ನು ಕೆಲವರು ಪಾಪ್ ಮ್ಯೂಸಿಕ್ ಗೆ ಕಿವಿಕೊಟ್ಟಿದ್ದರು, ಮತ್ತೆ ಕೆಲವರು ಯಾವುದೇ ಸಂಗೀತವನ್ನೂ ಕೇಳದೇ ಹಾಗೆಯೇ ನಿದ್ದೆ ಮಾಡಿದ್ದರು.
ಸಮೀಕ್ಷೆಗೊಳಪಡಿಸಲಾಗಿದ್ದ ವ್ಯಕ್ತಿಗಳ ಹೃದಯ ಬಡಿತವನ್ನು ಸೆಷನ್ ನಲ್ಲಿಯೂ ಸಂಗೀತ ನಿಲ್ಲುವುದಕ್ಕೆ ಅಥವಾ ನಿಶಬ್ದ ಮೂಡುವುದಕ್ಕೂ 5 ನಿಮಿಷಗಳ ಮುನ್ನ ಮಾಪನ ಮಾಡಲಾಗಿತ್ತು. ಇದರ ಜೊತೆಗೆ ಆಂಕ್ಸೈಟಿ ಮಟ್ಟವನ್ನೂ ಮಾಪನ ಮಾಡಲಾಗಿತ್ತು,

ಯೋಗ ಸಂಗೀತ ಕೇಳುವ ವೇಳೆಯಲ್ಲಿ ಹೃದಯ ಬಡಿತ ವ್ಯತ್ಯಾಸ ಹೆಚ್ಚಾಗಿದ್ದು, ಪಾಪ್ ಮ್ಯೂಸಿಕ್ ನ್ನು ಕೇಳುವ ವೇಳೆಯಲ್ಲಿ ಇಳಿಕೆಯಾಗಿತ್ತು, ನಿಶಬ್ದವಾಗಿದ್ದಾಗ ಯಾವುದೇ ಬದಲಾವಣೆಗಳೂ ಇರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಇನ್ನು ಯೋಗ ಸಂಗೀತ ಕೇಳುತ್ತಿದ್ದವರ ಆಂಕ್ಸೈಟಿ (ಆತಂಕ ಮಟ್ಟ) ಮಟ್ಟ ಕಡಿಮೆಯಾಗಿದ್ದು, ಪಾಪ್ ಮ್ಯೂಸಿಕ್ ನ್ನು ಕೇಳಿದ ನಂತರ ಹಾಗೂ ಯಾವುದೇ ಸಂಗೀತ ಕೇಳದಿದ್ದಾಗ ಆಂಕ್ಸೈಟಿ ಮಟ್ಟ ಹೆಚ್ಚಿರುವುದು ಸಮೀಕ್ಷೆಯಲ್ಲಿ ದಾಖಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಕೀಲ ನಾಗನಗೌಡ ಪಾಟೀಲರು ಪ್ರಾಮಾಣಿಕರೆಂದೇ ಗುರುತಿಸಿಕೊಂಡವರು. ಸಹಕಾರಿ ಕಾಯ್ದೆಗಳಿಗೆ ಸಂಬಂಧಿಸಿದ ಬ್ಯಾಂಕ್ಗಳ ಕೇಸುಗಳನ್ನು ನಡೆಸುವುದಲ್ಲಿ ನಿಪುಣರು ಅವರು. ಕಠಿಣ ಪರಿಶ್ರಮದಿಂದ ಮೇಲೆ ಬಂದು ಹಣ ಸಂಪಾದಿಸಿದರು. ಯಾವ ದುರಭ್ಯಾಸಕ್ಕೂ ಕೈಹಾಕದ ಕಾರಣ, ಬೆಂಗಳೂರಿನ ಬಸವನಗುಡಿಯಲ್ಲಿ ದೊಡ್ಡದಾದ ಬಂಗಲೆಯನ್ನೂ ಕಟ್ಟಿಸಿದರು. ಒಂದು ಹೆಣ್ಣು, ಒಂದು ಗಂಡು ಮಗುವಿನ ತಂದೆಯಾದ ಪಾಟೀಲರಿಗೆ ಎಲ್ಲ ಪೋಷಕರಂತೆ ಮಕ್ಕಳ ಉಜ್ವಲ ಭವಿಷ್ಯದ ಚಿಂತೆ. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಮಾಡಬೇಕೆಂದು ಕೊಂಡರು. ಭರ್ಜರಿಯಾಗಿ ಅವರ ಮದುವೆ ಮಾಡುವ ಕನಸು ಕಂಡರು. ಹಾಗೂ ಹೀಗೂ ಹಣ…
ಇಂದು ಶುಕ್ರವಾರ, 23/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಪ್ರತಿಬಾರಿ ಆಲೂಗಡ್ಡೆಯನ್ನ ಬೇಯಿಸುವಾಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಎಂದರೆ ಆಲೂಗಡ್ಡೆ ಬೇಯುವಾಗ ಒಡೆದುಹೋಗುತ್ತದೆ ಎಂಬುದು. ಆಲೂಗಡ್ಡೆ ಒಡೆದು ಅದರೊಳಗೆ ನೀರು ಸೇರಿ ಆಲೂಗಡ್ಡೆಯ ರುಚಿ ಹಾಳಾಗುತ್ತದೆ.
ಸ್ವಿಟ್ಜರ್ಲ್ಯಾಂಡ್ನ ಈ ಪ್ರಕೃತಿ ಮನೋಹರ ಪಟ್ಟಣಕ್ಕೆ ವಲಸೆ ಬರುವವರಿಗೆ ಅಲ್ಲಿಯ ಸರಕಾರವೇ 60,000 ಡಾ.(ಸುಮಾರು 38.7 ಲ.ರೂ.) ನೀಡುತ್ತದೆ. ಸರಕಾರದ ಈ ಕೊಡುಗೆಗೆ ಕಾರಣವಿದೆ. ಈ ಪಟ್ಟಣದಲ್ಲಿ ಜನಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.
ಸುಂದರವಾದ ಹಾಗೂ ಸದೃಢವಾದ ಕೂದಲನ್ನು ಪ್ರತಿಯೊಬ್ಬ ಹುಡುಗಿಯೂ ಬಯಸುತ್ತಾಳೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಕೂದಲು ಉದುರುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆಯಾಗಿ ಬದಲಾಗಿದೆ. ನೀವು ಕೂದಲಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
ರುಚಿ ರುಚಿ ಕರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ಕರ್ಜೂರ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಮಿನರಲ್, ಫೈಬರ್, ವಿಟಮಿನ್ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಕರ್ಜೂರ ತಿನ್ನುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ನಮ್ಮ ದೇಹ ಸೇರುತ್ತದೆ.