ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾತ್ರಿ ಎಲ್ಲಾ ಮದುವೆ ಗಂಡಿನ ಜೊತೆ ಮಾಡಿದ ಶಾಸ್ತ್ರ ಸಂಪ್ರದಾಯಗಳಿಗೆ ನಗು ನಗುತ್ತಲೇ ನವ ವಧು ಪಾಲ್ಗೊಂಡಿದ್ದಳು.ಆದರೆ ಬೆಳಿಗ್ಗೆ ತಾಳಿ ಕಟ್ಟುವ ಮಹೂರ್ತದಲ್ಲಿ ತಾನು ಪ್ರ್ರಿತಿಸುತ್ತಿದ್ದ ಹುಡುಗ ಬಂದು ಎದುರಿಗೆ ನಿಂತಿರುವುದನ್ನ ನೋಡಿದ್ದಾಳೆ.
ಆತ ಅಳುವುದನ್ನು ಕಂಡು ಮನಸ್ಸು ಕರಗಿ ನಾನು ಈ ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು, ನಾನು ನನ್ನ ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ತಿಳಿಸಿದ್ದಳು ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರೇ ಮುಂದೇ ನಿಂತು ಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ.
ಈ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲ ಪಟ್ಟಣದ ವಿಶ್ವಶಾಂತಿ ಸಮುದಾಯ ಭವನದಲ್ಲಿ ಭಾನುವಾರ ನಡೆದಿದೆ.ರಾತ್ರಿ ಆರತಕ್ಷತೆ ಯಾವುದೇ ಸಮಸ್ಯಯಿಲ್ಲದೆ ತುಂಬಾ ಭರ್ಜರಿಯಾಗೇ ನಡೆದಿದೆ.ಆದರೆ ಮರುದಿನ ಮಹುರ್ತದ ಸಂದರ್ಭದಲ್ಲಿ ವಧುವಿನ ಪ್ರಿಯಕರ ಸಂಜು ಪ್ರತ್ಯಕ್ಷವಾಗಿದ್ದನು. ಹಾಗಾಗಿ ವಧು ಪದ್ಮಪ್ರೀಯ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಮದುವೆ ನಿರಾಕರಿಸಿದ್ದಳು.
ಫೇಸ್ ಬುಕ್ ಮುಖಾಂತರ ಸಂಜು ಮತ್ತು ಪದ್ಮಪ್ರಿಯಾ ಪರಿಚಯವಾಗಿದ್ದು ಹಲವು ವರ್ಷಗಳಿಂದ ಇವರಿಬ್ಬರು ಪ್ರೀತಿ ಮಾಡುತ್ತಿದರು.ಇದು ಮನೆಯವರಿಗೆ ಗೊತ್ತಾದ ನಂತರ ಪದ್ಮಪ್ರಿಯಾ ತಂದೆ ತಾಯಿಗಳು ಅವರ ಸಂಬಂದಿಯೇ ಆಗಿದ್ದ ರಂಗನಾಥ್‍ನೊಂದಿಗೆ ಮದುವೆ ನಿಶ್ಚಯಿಸಿದ್ದರು. ಪ್ರಿಯಕರ ಬಂದಿದ್ದರಿಂದ ಎರಡು ಕುಟುಂಬದವರ ನಡುವೆ ಕೆಲಕಾಲ ಗಲಾಟೆ ನಡೆದಿತ್ತು.
ನಂತರ ಈ ಗಲಾಟೆಯ ನಡುವೆ ಬಂದ ಪೊಲೀಸರು ಸಂಜು ಹಾಗೂ ಪದ್ಮಪ್ರಿಯಾ ಇಬ್ಬರನ್ನು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಅಲ್ಲಿ ವಧು ಪದ್ಮಪ್ರಿಯ ನಿಮ್ಮ ತಂದೆ ತಾಯಿಗಳು ಬಂದ್ರೆ ನಿನ್ನ ಜೊತೆ ಬರುವುದಾಗಿ ಸಂಜುವಿಗೆ ಹೇಳಿದ್ದಾರೆ.ನಂತರ ನೆಲಮಂಗಲ ಪಟ್ಟಣ ಗಣೇಶನ ಗುಡಿಯಲ್ಲಿ ಸ್ನೇಹಿತರು ಹಾಗೂ ಕೆಲ ಸಂಬಂಧಿಗಳ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಘೋಷಿಸುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯೋಗದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಕರೆಯಲಾಗಿದ್ದು, ಈ ಸಂದರ್ಭದಲ್ಲಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಲಾಗುತ್ತದೆ ಎನ್ನಲಾಗಿದೆ. ಮಹಾರಾಷ್ಟ್ರ ವಿಧಾನಸಭಾ ಅವಧಿ ಮುಂದಿನ ತಿಂಗಳು ಅಂತ್ಯವಾಗಲಿದ್ದು, ಹರಿಯಾಣ ವಿಧಾನಸಭಾ ಅವಧಿ ನವಂಬರ್ 2 ಕ್ಕೆ ಕೊನೆಗೊಳ್ಳಲಿದೆ. ಇನ್ನು ಜಾರ್ಖಂಡ್ ವಿಧಾನಸಭಾ ಅವಧಿ ಡಿಸೆಂಬರ್ 27ಕ್ಕೆ ಅಂತ್ಯವಾಗಲಿದ್ದು, ದೀಪಾವಳಿಗೂ ಮುನ್ನ…
ನಮ್ಮ ಇಂದಿನ ಕ್ಷೇತ್ರ ಮಾಲೂರು (ಕೋಲಾರದ ಮಾಲೂರು). ಬರದನಾಡು ಒಂದು ಕಾಲದ ಕೃಷಿ ಪ್ರಧಾನ ನಾಡು, ಅತಿ ಹೆಚ್ಚು ಕೃಷಿ ಪ್ರಧಾನ ಜಾತಿ ಒಕ್ಕಲಿಗರನ್ನು ಒಂದಿರುವ ಕ್ಷೇತ್ರ. ಆದರೆ ಇಂದು ರಾಜಕೀಯ ಗಾಳಕ್ಕೆ ಸಿಲುಕಿ ತಾಲೂಕಿನ ಚಿತ್ರಣವೇ ಬದಲು
ನಮಗೆ ಗೊತ್ತಿರುವ ಹಾಗೆ ಶ್ರೀ ರಾಮ ಭಕ್ತ ಹನುಮಂತನ ಜನ್ಮ ವೃತ್ತಾಂತ, ಹನುಮಂತ ದೇವರು, ಭಗವಾನ್ ಶಿವನ ಅಂಶದ ಅವತಾರ ಇವೆಲ್ಲವೂ ನಮಗೆ ಗೊತ್ತಿದೆ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಹನುಮಂತನ ಈ ಅವತಾರಕ್ಕೆ ಮುಂಚೆ, ಎಷ್ಟೋ ಯುಗಗಳ ಹಿಂದಯೇ ಹನುಮಂತನ ಮತ್ತೊಂದು ಅವತಾರವಾಗಿತ್ತು. ಆ ಅವತಾರವೇ ವೃಶ ಕಪಿ ಅವತಾರ.
ಹೌದು ಆಯುರ್ವೇದದಲ್ಲಿ ಹೇಳಿರುವಂತೆ ಹಲವು ರೋಗಗಳಿಗೆ ಹಲವು ರೀತಿಯ ಮದ್ದುಗಳನ್ನು ನೀಡಲಾಗಿದೆ. ಆದ್ರೆ ರೀತಿಯಾಗಿ ಡೆಂಘಿ ಜ್ವರಕ್ಕೆ ಒಂದು ರಾಮಭಾಣವಾಗಿ ಈ ಬೆಲ್ಲ ಮತ್ತು ಈರುಳ್ಳಿ ಸಹಾಯವಾಗಿದೆ. ಇದಕ್ಕೆ ಉದಾಹರಣೆಯಾಗಿ ಅರೋಗ್ಯ ಇಲಾಖೆಯ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ. ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಆದರೆ ಇದಕ್ಕೊಂದು ವೈಜ್ಞಾನಿಕ ಕಾರಣ ಇದೆ. ಅದರ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.
ಊಟ ಆದ್ಮೇಲೆ ಬಾಳೆ ಹಣ್ಣು ತಿನ್ನುವುದು ಸಾಮಾನ್ಯವಾಗಿದೆ. ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ ಅಂತ ತಜ್ಞರು ಹೇಳಿದ್ದಾರೆ.