ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಬಹುದಿನದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇದೇ ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ.
ಧ್ರುವ ಸರ್ಜಾ ಅವರು ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರು ಅಕ್ಕಪಕ್ಕದ ಮನೆಯವರಾಗಿದ್ದಾರೆ.
ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಧ್ರುವ ಹುಟ್ಟುಹಬ್ಬದ ದಿನ ತಾವು ಶೀಘ್ರದಲ್ಲೇ ಲವ್ ಮ್ಯಾರೇಜ್ ಆಗುವುದಾಗಿ ಹೇಳಿದ್ದರು.
ಧ್ರುವಾ ಸರ್ಜಾರವರದ್ದು ೧೬ ವರ್ಷದ ಪ್ರೀತಿ
ಸ್ಯಾಂಡಲ್ ವುಡ್ ನ ಆ್ಯಕ್ಷನ್ ಪ್ರಿನ್ಸ್ ತಮ್ಮ 16ನೇ ವಯಸ್ಸಿನಲ್ಲೇ ಪ್ರೀತಿಯಲ್ಲಿ ಬಿದ್ದಿದ್ದರು.ಹಾಗಾಗಿ ಧ್ರುವ ಹಾಗೂ ಪಕ್ಕದ ಮನೆ ಹುಡುಗಿ ಪ್ರೇರಣಾ ಅವರದ್ದು 16 ವರ್ಷದ ಪ್ರೀತಿ.ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದ್ದು, ಸಿಂಪಲ್ ಆಗಿ ಡಿಸೆಂಬರ್ 9 ರಂದು ಧ್ರುವ್ ಅಸರ್ಜಾ ಮತ್ತು ಪ್ರೆರನಾರವರ ಎಂಗೇಜ್ಮೆಂಟ್ ನಡೆಯಲಿದೆ.
ನಟ ಧ್ರುವ ಸರ್ಜಾ ವರಿಸಿಲಿರುವ ಹುಡುಗಿ ಪ್ರೇರಣಾ ಬಸವನಗುಡಿಯ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಸದ್ಯ ಈಗ ಪ್ರೇರಣಾ ಮನೆಯಲ್ಲಿದ್ದಾರೆ.
ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ.
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ. ಈ ಕಲ್ಯಾಣ ಮಂಟಪದಲ್ಲಿ ಖ್ಯಾತ ನಟ, ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ಅವರು ನಿಶ್ಚಿತಾರ್ಥಕ್ಕೆ ಆಂಜನೇಯ ಮೂರ್ತಿಯ ಸೆಟ್ ಹಾಕಲಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಧ್ರುವ ಅಣ್ಣ ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರನ್ನು ವರಿಸಿದ್ದರು, ಮದುವೆಯಾಗಿತ್ತು. ಈಗ ತಮ್ಮ ಬಹುಕಾಲದ ಗೆಳತಿಯ ಜೊತೆ ಮದುವೆಯಾಗಲು ಧ್ರುವ ಸರ್ಜಾ ನಿರ್ಧರಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಸಿನಿಮಾ ಯಾರಿಗೇನು ಕಡಿಮೆ ಇಲ್ಲದಂತೆ ಒಂದರ ಮೇಲೊಂದು ಹಿಟ್ ಆಗುತ್ತಲೇ ಇವೆ.. ಕಿರಿಕ್ ಪಾರ್ಟಿ, ರಾಜಕುಮಾರ, ಹೆಬ್ಬುಲಿ, ತಾರಕ್, ಈಗ ಇದೇ ಲಿಸ್ಟ್ ಗೆ ಸೇರ್ಪಡೆಯಾಗಲು ಯೂತ್ಸ್ ಸಿನಿಮಾ #ಕಾಲೇಜ್ ಕುಮಾರ್ ಬರುತ್ತಿದೆ.
ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗ್ತಿದ್ದೇನೆ ಅಂತಾ ಅಮ್ಮನಿಗೆ ಪತ್ರ ಬರೆದು ಹೋದ ಮಗಳ ನಿಜವಾದ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಮುಂಬೈನಲ್ಲಿ 14 ವರ್ಷದ ಬಾಲಕಿಯೊಬ್ಬಳು ತನ್ನ ಅಮ್ಮನಿಗೆ ಈ ರೀತಿ ಪತ್ರ ಬರೆದಿದ್ದಾಳೆ. “ಅಮ್ಮಾ ನಾನು ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಹಾಗಂತ ನಾನು ಯಾವುದೋ ಹುಡುಗನೊಂದಿಗೆ ಓಡಿ ಹೋಗುತ್ತಿಲ್ಲ. ನೀವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಅಂತಾ ದೇವರ ಮೇಲೆ ಆಣೆ ಮಾಡು” ಎಂದು ಪತ್ರದಲ್ಲಿ…
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕಜಿಎಫ್’ ಸಿನಿಮಾ ಭಾರತದಾದ್ಯಂತ ಎಲ್ಲೆಡೆ ಹವಾ ಕ್ರಿಯೆಟ್ ಮಾಡಿದ್ದು, ಸಿನಿತಾರೆಯರು ಸೇರಿದಂತೆ ಅಭಿನಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆಯುತ್ತಿದೆ. ಅಭಿಮಾನಿಗಳ ರೀತಿ ಎಂಜಾಯ್ ಮಾಡಿಕೊಂಡು ಸಿನಿಮಾ ನೋಡಲು ಸ್ಯಾಂಡಲ್‍ವುಡ್ ನಟ ಲುಂಗಿ, ಹವಾಯಿ ಚಪ್ಪಲಿ ಧರಿಸಿಕೊಂಡು ಸಿನಿಮಾ ನೋಡಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರು ಮಾರು ವೇಷದಲ್ಲಿ ಥಿಯೇಟರ್ಗೆ ಹೋಗಿ ಕೆಜಿಎಫ್ ಚಿತ್ರ ವೀಕ್ಷಣೆ ಮಾಡಿದ್ದು, ಈ ವೇಳೆ ಥಿಯೇಟರ್ ನಲ್ಲಿ ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ.ನಟ ಜಗ್ಗೇಶ್ ಅವರು ಲುಂಗಿ, ಹವಾಯಿ…
ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ‘ಐ ಲವ್ ಯು’ ಭರ್ಜರಿ ಯಶಸ್ಸು ಕಂಡಿದೆ. ಈ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಮೂಡಿಬರಲಿದೆ. ಈ ಹಿಂದೆ ಉಪೇಂದ್ರ ಅಭಿನಯದ ಆರ್. ಚಂದ್ರು ನಿರ್ದೇಶನದ ಬ್ರಹ್ಮ, ನಂತರ ‘ಐ ಲವ್ ಯು’ ಯಶಸ್ಸು ಕಂಡಿದ್ದು, ಮುಂದಿನ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಅಂದ ಹಾಗೆ, ಈ ಹೊಸ ಚಿತ್ರ ಭೂಗತ ಜಗತ್ತಿನ ಕಥಾಹಂದರವನ್ನು ಹೊಂದಿದ್ದು, ಘಟಾನುಘಟಿ ಕಲಾವಿದರು ಅಭಿನಯಿಸಲಿದ್ದಾರೆ. ಹೈಬಜೆಟ್ ನಲ್ಲಿ…
ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಕೆಫೀನ್‌ನ ಇನ್ನೊಂದು ಉತ್ತಮ ಗುಣವೆಂದರೆ ಇದರ ಸೇವನೆಯಿಂದ ರಕ್ತದಲ್ಲಿ ಅಡ್ರಿನಲಿನ್ ಎಂಬ ಹಾರ್ಮೋನು ಬಿಡುಗಡೆಯಾಗುವುದು. ನಮ್ಮ ದೈಹಿಕ ಚಟುವಟಿಕೆಗಳಿಗೆ ಈ ಹಾರ್ಮೋನು ಅಗತ್ಯವಾಗಿದೆ. ಕಾಫಿ ಸೇವನೆಯ ಮೂಲಕ ಹೆಚ್ಚಿನ ಅಡ್ರಿನಲಿನ್ ಲಭ್ಯವಾಗುವುದರಿಂದ ನಿಮ್ಮ ಹಲವು ದೈಹಿಕ ಚಟುವಟಿಕೆಗಳು ಚುರುಕಾಗುತ್ತವೆ. ಕೆಫಿನ್ ಅಧಿಕವಾಗಿ ಇರುವಂತಹ ಕಾಫಿ ಸೇವನೆ ಮಾಡಬಾರದು ಎನ್ನುವಂತಹ ಮಾತನ್ನು ನಾವು ಹೆಚ್ಚಿನವರ ಬಾಯಿಯಿಂದ ಕೇಳುತ್ತಲಿರುತ್ತೇವೆ. ಕಾಫಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸುವವರು ಹಲವಾರು ಮಂದಿ. ಆದರೆ ಕೆಲವು ಜನರು ಕಾಫಿ ಆರೋಗ್ಯಕ್ಕೆ ಒಳ್ಳೆಯದು…
ಮನುಷ್ಯ ಎಷ್ಟು ವರ್ಷ ಬದುಕಿರಬಲ್ಲ…? ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು….? ಮನುಷ್ಯನ ವಯಸ್ಸಿಗೆ ಮಿತಿ ಇದ್ಯಾ….? ಇಂತಹ ಹತ್ತಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತವೆ. ಅಮೆರಿಕದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 5 ತಂಡಗಳಾಗಿ ಪ್ರತ್ಯೇಕ ಸಂಶೋಧನೆ ನಡೆಸಿದ್ದು, ಮನುಷ್ಯನ ಆಯಸ್ಸು ಗರಿಷ್ಠ 114.9 ವರ್ಷ ಅಥವಾ ಅದನ್ನು ಮೀರಲೂಬಹುದು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಆದ್ರೆ ಈ ಸಂಶೋಧನೆಯಲ್ಲಿ ನಿಖರತೆ ಇಲ್ಲ ಅನ್ನೋದು ಇನ್ನು ಕೆಲವರ ವಾದ. ಮನುಷ್ಯ 120…