ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.
ಆಂಧ್ರಪ್ರದೇಶ ಮೂಲದ ಈ ಬಾಲಕಿಯ ಹೆಸರು ಸಾಯಿ ಶ್ರೀ. ಈಕೆಗೆ ಬೋನ್ ಮ್ಯಾರೋ ಕ್ಯಾನ್ಸರ್ ಇದೆ ಎಂದು 2016ರ ಆಗಸ್ಟ್ 27ರಂರಂದು ವೈದ್ಯರು ಹೇಳಿದ್ದರು. ಆದ್ರೆ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಅಮ್ಮನ ಬಳಿ ಇಲ್ಲ. ಮನೆ ಮಾರಿ ಹಣ ಕೊಡಿ. ಅಮ್ಮನಿಗೆ ಹಣ ಕೊಡಲು ಇಷ್ಟವಿಲ್ಲ ಅಂದ್ರೆ ನೀವೇ ಬಂದು ಆಸ್ಪತ್ರೆಯಲ್ಲಿ ಹಣ ಕಟ್ಟಿ ಎಂದು ಸಾಯಿ ಶ್ರೀ ವಿಡಿಯೋ ಮೂಲಕ ತನ್ನ ತಂದೆಗೆ ಹಣ ನೀಡುವಂತೆ ಕೇಳಿದ್ದಳು.
ಸಾಯಿ ಶ್ರೀ ತಂದೆ ಮದಮ್ಶೆಟ್ಟಿ ಶಿವಕುಮಾರ್ ತನ್ನ ಪತ್ನಿ ಸುಮಾ ಶ್ರೀ ಮತ್ತು ಮಗಳಿಂದ 8 ವರ್ಷದ ಹಿಂದೆಯೇ ದೂರವಾಗಿದ್ರು. ವರದಿಯ ಪ್ರಕಾರ ಸಾಯಿ ಶ್ರೀ ತನ್ನ ತಾಯಿಯೊಂದಿಗೆ ವಿಜಯವಾಡದಲ್ಲಿ ನೆಲೆಸಿದ್ದು, ತಂದೆ ಬೆಂಗಳೂರಿನಲ್ಲಿದ್ದರು ಎನ್ನಲಾಗಿದೆ.
ಶಿವ ಕುಮಾರ್ ಮತ್ತು ಸುಮಾ ದೂರವಾಗುವುದಕ್ಕೂ ಮುನ್ನ ಮಗಳಾದ ಸಾಯಿ ಶ್ರೀ ಹೆಸರಲ್ಲಿ ಒಂದು ಫ್ಲಾಟ್ ಖರೀದಿಸಿದ್ರು. ಮನೆ ಮಾರಿ ಮಗಳ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮುಂದಾದಾಗ ಗಂಡ ಶಿವ ಕುಮಾರ್, ತೆಲುಗು ದೇಶಂ ಪಾರ್ಟಿಯ ಶಾಸಕ ಬೋಂಡಾ ಉಮಾಮಹೇಶ್ವರ್ ರಾವ್ ಅವರ ನೆರವಿನಿಂದ ಮನೆ ಮಾರಾಟ ಮಾಡದಂತೆ ತಡೆದಿದ್ದರು ಎಂದು ಸುಮಾ ಆರೋಪಿಸಿದ್ದಾರೆ.
ಶಾಸಕರ ಬೆಂಬಲ ಇದ್ದ ಕಾರಣ ಶಿವ ಕುಮಾರ್ ಕಳಿದಿದ್ದ ಗೂಂಡಾಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ಆಂಧ್ರಪ್ರದೇಶದ ಪೊಲೀಸರು ನಿರಾಕರಿಸಿದ್ರು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರೋ ಬಾಲಾಲ ಹಕ್ಕುಳ ಸಂಗಂನ ಅಧ್ಯಕ್ಷರಾದ ಅಚ್ಯುತ್ ರಾವ್, ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದಲ್ಲಿ ಅರ್ಜಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಹಣ ನೀಡಲು ಶಕ್ತರಾಗಿದ್ದರೂ ತಂದೆ ಮಗಳ ಚಿಕಿತ್ಸೆಗೆ ಹಣ ನೀಡಿಲ್ಲವೆಂಬುದನ್ನು ಮನಗಂಡ ರಾಜ್ಯ ಮಾನವ ಹಕ್ಕುಗಳ ಆಯೋಗ, ಈ ಬಗ್ಗೆ ವಿಸ್ತøತ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.
ಈ ವಿಡಿಯೋ ಸದ್ಯ ದೇಶದಾದ್ಯಂತ ವೈರಲ್ ಆಗಿದ್ದು, ತಂದೆಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ ಮೇಳದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ವಿವಾಹದ ದಿನಾಂಕ ನಿಗದಿಯಾಗಿದ್ದರೆ ಅದನ್ನು ಮುಂದೂಡಿ ಇಲ್ಲವೇ ಸ್ಥಳ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದೆ. ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಹಾಗೂ ಪುಷ್ಯ ಪೂರ್ಣಿಮಾದಂದು ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹಾಗೆಯೇ ಫೆಬ್ರವರಿಯಲ್ಲಿ ಮೌನಿ ಅಮಾವಾಸ್ಯೆ, ಬಸಂತ ಪಂಚಮಿ ಹಾಗೂ…
ಮ್ಯಾನ್ಮಾರ್ನಲ್ಲಿ ಹೆಚ್ಚುತ್ತಿರುವ ರೊಹಿಂಗ್ಯಾ ವಿರೋಧಿ ಹಿಂಸಾಚಾರದಿಂದ ಕಂಗೆಟ್ಟಿರುವ ರೊಹಿಂಗ್ಯಾ ಮುಸ್ಲಿಮರು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಸಮುದ್ರ ದಾಟಿ ಬಾಂಗ್ಲಾದೇಶಕ್ಕೆ ಬರುತ್ತಿದ್ದಾರೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತೀರಾ..? ಹಾಗಿದ್ರೆ ಹುಷಾರ್ 10 ಸಾವಿರ ಫೈನ್ ಕಟ್ಟಲೇಬೇಕು. ಇದು ಕೇಂದ್ರ ಸರ್ಕಾರದ ಹೊಸ ನಿಯಮ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಹೊಸ ಮೋಟಾರು ವಾಹನ ಕಾಯ್ದೆ ಮಸೂದೆ ಮಂಡಿಸಿದೆ. ಹೊಸ ಮಸೂದೆ ಪ್ರಕಾರ ಮದ್ಯಪಾನ ಮಾಡಿದ್ರೆ 10 ಸಾವಿರ ದಂಡ, ಅದೇ ರೀತಿ ರ್ಯಾಶ್ ಡ್ರೈವ್ ಮಾಡಿದ್ರೆ 5…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(5 ಏಪ್ರಿಲ್, 2019) ಅನಾವಶ್ಯಕ ಉದ್ವೇಗ ಮತ್ತು ಚಿಂತೆ ನಿಮ್ಮ ಜೀವನದ ರಸ ಹೀರಬಹುದು ಮತ್ತು ನಿಮ್ಮನ್ನು…
ನಮ್ಮ ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಪ್ರತಿಕ್ರಿಯಿಸುವ ರೀತಿ ಬೇರೆಯೇ ಇರುತ್ತದೆ. ಯಾಕೆಂದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ. ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಸೂಚನೆಯೊಂದು ರಾಜ್ಯದ ಶಿಕ್ಷಕರನ್ನು ಆತಂಕಕ್ಕೀಡು ಮಾಡಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯಲ್ಲಿರುವ ಶಿಕ್ಷಕರು ಉತ್ತಮ ರೀತಿಯಲ್ಲಿ ವೃತ್ತಿ ತರಬೇತಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಇಲ್ಲದಿದ್ದರೆ ಅವರನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.