ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವೆಲ್ಲಾ ಸಿನಿಮಾದಲ್ಲಿ ಸಿನಿಮಾ ನಾಯಕರು ತಮ್ಮ ಎರಡೂ ಕೈ ಗಳಲ್ಲಿ ಬರೆಯುವದನ್ನು ನೋಡಿರುತ್ತೇವೆ.ಆದ್ರೆ ನಿಜ ಜೀವನದಲ್ಲಿ ಸಾಧ್ಯವೇ..?ಹೌದು, ಸಾಧ್ಯ ತಿಳಿಯಲು ಮುಂದೆ ಓದಿ…
ಸಾಮಾನ್ಯವಾಗಿ ನಾವೆಲ್ಲರೂ ಒಂದು ಕೈನಲ್ಲಿ ಬರೆಯುವುದನ್ನು ರೂಢಿಸಿಕೊಂಡಿರುತ್ತೇವೆ, ಆದರೆ ಈ ಶಾಲೆಯಲ್ಲಿನ ಮಕ್ಕಳು ತಮ್ಮ ಎರಡೂ ಕೈಗಳಲ್ಲಿ ಬರೆಯುವುದನ್ನು ರೂಡಿಸಿಕೊಂಡಿವೆಯಂತೆ! ಈ ವರದಿ ನಿಮಗೆ ಆಶ್ಚರ್ಯ ಉಂಟು ಮಾಡಿದರೂ ಸತ್ಯ..!
ಇದು ನಡೆಯುತ್ತಿರುವುದು ಮಹಾರಾಷ್ಟ್ರದ ಸಿಂಗ್ರೌಲಿ ಎಂಬ ಪುಟ್ಟ ಗ್ರಾಮದ ವೀಣಾ ವಂದಿನಿ ಶಾಲೆ. ಈ ಶಾಲೆಯ ಎಲ್ಲಾ 300 ಮಕ್ಕಳೂ ಎರಡೂ ಕೈಗಳಲ್ಲೂ ಏಕಕಾಲದಲ್ಲಿ ಬರೆಯುತ್ತಾರೆ. ಈ ಶಾಲೆಯ ಸಂಸ್ಥಾಪಕರೂ ಮತ್ತು ಮುಖ್ಯಶಿಕ್ಷಕರೂ ಆಗಿರುವ ವಿಪಿ ಶರ್ಮಾ ನಿವೃತ್ತ ಯೋಧ.
ಹಾಗು ಇವರಿಗೆ ದೇಶದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ರೇ ಅವರಿಗೆ ತಮ್ಮ ಶಾಲೆಯಲ್ಲಿ ಈ ರೀತಿಯ ತರಬೇತಿ ನೀಡಲು ಪ್ರೇರಣೆಯಂತೆ. ಈ ಶಾಲೆಯ ಮಕ್ಕಳಿಗೆ 1ನೇ ತರಗತಿಯಿಂದಲೇ ಎರಡೂ ಕೈಗಳಲ್ಲೂ ಬರವಣಿಗೆ ಅಭ್ಯಾಸ ಮಾಡಿಸುತ್ತಾರೆ.
ಒಂದರಿಂದ ಮೂರನೇ ತರಗತಿಯ ಎಲ್ಲಾ ಮಕ್ಕಳೂ ಎರಡೂ ಕೈಗಳಲ್ಲಿ ಒಂದು ಭಾಷೆಯಲ್ಲಿ ಬರೆಯುತ್ತಾರೆ. ಏಳರಿಂದ ಎಂಟನೇ ತರಗತಿ ಮಕ್ಕಳು ಎರಡೂ ಕೈಗಳಲ್ಲಿ ಪ್ರತ್ಯೇಕ ಭಾಷೆಗಳಲ್ಲಿ ಬರೆಯುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತೂಕ ಹೆಚ್ಚಿದ್ದರೆ ಹೇಗೆ ಸಮಸ್ಯೆಯೋ ಹಾಗೆಯೇ ತೂಕ ಕಡಿಮೆ ಇದ್ದರೂ ಕಷ್ಟ. ಜಾಹಿರಾತಿನಲ್ಲಿ ಬಂದ ಪುಡಿಯನ್ನೆಲ್ಲ ತಿಂದು ತೇಗಿದರೂ ಪ್ರಯೋಜನವಾಗಿಲ್ಲವೇ? ಅವೆಲ್ಲ ಏನೂ ಬೇಡ, ಸೂಕ್ತ ಆಹಾರ ಸೇವಿಸಿ ಸಾಕು. ತೂಕ ಕಳ್ಕೊಳೋ ಬಗ್ಗೆ ಎಲ್ಲರೂ ಮಾತಾಡ್ತಾರೆ, ಎಲ್ಲ ಪತ್ರಿಕೆಗಳಲ್ಲೂ ಅದಕ್ಕೆ ಸಂಬಂಧಪಟ್ಟ ಟಿಪ್ಸ್, ಲೇಖನ ದಿನಕ್ಕೊಂದರಂತೆ ಹರಿದು ಬರುತ್ತವೆ, ಇಂಟರ್ನೆಟ್ನಲ್ಲಿ ತೂಕ ಕಳೆದುಕೊಂಡವರ ಸಕ್ಸಸ್ ಸ್ಟೋರಿಗಳಿಗೂ ಕೊರತೆ ಇಲ್ಲ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ. ಕಡ್ಡಿ, ಸಿಳ್ಳೆಕ್ಯಾತ, ಅಸ್ಥಿಪಂಜರ ಎಂದೆಲ್ಲ ಕರೆಸಿಕೊಂಡು,…
ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಷಯರೋಗದಿಂದ ಬಳಲಿ ಮಾರ್ಚ್ನಲ್ಲಿ ಆಸ್ಪತ್ರೆಗೆ ದಾಖಲಾದಾಗ ಕೇವಲ 23 ಕೆ.ಜಿಯಷ್ಟಿತ್ತು ಅವರ ತೂಕ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರ ಆರೋಗ್ಯ ಸುಧಾರಿಸಿದ್ದು ತೂಕದಲ್ಲೂ 20 ಕೆ.ಜಿಯಷ್ಟು ಹೆಚ್ಚಾಗಿದ್ದಾರೆ. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು. ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ….
ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ… ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ…
ಬಿ. ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರ 100 ದಿನಗಳನ್ನು ಪೂರೈಸಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ನೂರು ಪುಟಗಳ ಪುಸ್ತಕವನ್ನು ನವೆಂಬರ್ 5ರಂದು ಬಿಡುಗಡೆ ಮಾಡಲಾಗುತ್ತದೆ. ಮಂಗಳವಾರ ಯಡಿಯೂರಪ್ಪ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ನೂರು ದಿನಗಳ ಸಾಧನೆ ಕುರಿತ ‘100 ದಿನ 100 ಸಾಧನೆ’ ಎಂಬ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ನವೆಂಬರ್ 2ರಂದು ಯಡಿಯೂರಪ್ಪ ಸರ್ಕಾರ ನೂರು ದಿನಗಳನ್ನು ಪೂರೈಸಿದೆ. ನವೆಂಬರ್ 11ರಂದು 15ಕ್ಷೇತ್ರಗಳ ಉಪ ಚುನಾವಣೆ ನೀತಿ…
ನಕಲಿ ಸಿಮ್ ಕಾರ್ಡ್ ಬಳಸಿ ಕೆಲವರು ಪಾತಕ ಕೃತ್ಯಗಳನ್ನು ನಡೆಸುತ್ತಿರುವುದು ಅಗಾಗ ವರದಿಯಾಗುತ್ತಲೇ ಇದೆ. ಮೊಬೈಲ್ ಸಿಮ್ ಕಾರ್ಡ್ ಗಳ ದುರ್ಬಳಕೆ ತಪ್ಪಿಸಲು ಆಧಾರ್ ಲಿಂಕ್ ಮಾಡುವುದನ್ನು ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ.
ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.