ಜ್ಯೋತಿಷ್ಯ

ನಿಮ್ಮ ಮಂಗಳವಾರ ರಾಶಿ ಭವಿಷ್ಯ ಶುಭವೋ ಅಶುಭವೋ ಈ ಲೇಖನ ನೋಡಿ ತಿಳಿಯಿರಿ…

459

ಮಂಗಳವಾರ, 03/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಉದ್ಯೋಗಾಕಾಂಕ್ಷಿಗಳಿಗೆ ಸದವಕಾಶ ಒದಗಿ ಬರಲಿದೆ. ಕೂಲವಾದೀತು. ವೃತ್ತಿರಂಗದಲ್ಲಿ ನಿಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಿದೆ. ವಿಶ್ವಾಸದ ದುರುಪಯೋಗವಾಗುತ್ತದೆ. ಆಗಾಗ ಅಡಚಣೆಗಳಿಂದಲೇ ಕಾರ್ಯಾನು ವೈಯಕ್ತಿಕ ಸಮಸ್ಯೆಗಳು ಬಗೆಹರಿದು ಮನೋಲ್ಲಾಸ ಮೂಡಲಿದೆ. ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ.

ವೃಷಭ:-

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರುತ್ಸಾಹ ತಂದೀತು. ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬದ ಬಾಧ್ಯತೆಗಳ ನಿರ್ವಹಣೆ ಸರಾಗ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ. ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ಆರೋಗ್ಯದ ಬಗ್ಗೆ ಗಮನ ಹರಿಸುತ್ತಾ ಇರಬೇಕು. ಶ್ರೀದೇವರ ದರ್ಶನ ಭಾಗ್ಯ ಸದ್ಯದಲ್ಲೇ ನೆರವೇರಲಿದೆ. ದಿನಾಂತ್ಯ ಶುಭ.

ಮಿಥುನ:

ವೃತ್ತಿ ರಂಗದಲ್ಲಿ ಗುರಿ ಸಾಧನೆಗೆ ಹೊಸ ಹಾದಿಯೊಂದನ್ನು ಕ್ರಮಿಸಲಿದ್ದೀರಿ. ಆರ್ಥಿಕವಾಗಿ ಅಧಿಕ ಖರ್ಚುವೆಚ್ಚಗಳಿದ್ದರೂ ಧನಾಗಮನಕ್ಕೆ ಸಮಸ್ಯೆ. ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರಾಗಲಿದೆ. ನವದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ಸಂತಸ ತಂದೀತು. ಹತ್ತಿರದ ಬಂಧುಗಳಿಂದ ಕಾರ್ಯಾನುಕೂಲ. ಕಾರ್ಯಕ್ಷೇತ್ರದಲ್ಲಿ ಅನೇಕ ರೀತಿಯ ಸಂಪರ್ಕ, ಸ್ನೇಹ, ವಿಶ್ವಾಸಗಳು ಮುನ್ನಡೆಗೆ ನೆರವಾಗಲಿದೆ.

 

ಕಟಕ :-

ವೃತ್ತಿರಂಗದಲ್ಲಿ ನಿರಾಸಕ್ತಿ ತೋರಿ ಬಂದರೂ ಮುಂದುವರಿಯುವುದು ಅನಿವಾರ್ಯವಾದೀತು. ಕಲಾವಿದರಿಗೆ ಹಚ್ಚಿನ ಸ್ಥಾನಮಾನ ಲಭ್ಯವಾಗಲಿದೆ. ಆಸ್ತಿ ಖರೀದಿಯ ಬಗ್ಗೆ ಚಿಂತನ ಮಂಥನ ನಡೆಸಲಿದ್ದೀರಿ. ದೈನಂದಿನ ಕೆಲಸಕಾರ್ಯಗಳಲ್ಲಿ ಧೈರ್ಯ ಮತ್ತು ವಿಶ್ವಾಸದ ಕೊರತೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಶಿಕ್ಷಕ ವರ್ಗದವರ ಸೂಕ್ತ ಸಲಹೆಗಳು ಉಪಯುಕ್ತ. ಆರೋಗ್ಯದಲ್ಲಿ ಜಾಗ್ರತೆ.

 

 

 ಸಿಂಹ:

ಹಿತೈಷಿಗಳ ಭೇಟಿಯ ಸಾಧ್ಯತೆ. ವ್ಯಾಪಾರದಲ್ಲಿ ಅಧಿಕ ಲಾಭ ಹೊಂದಲಿದ್ದೀರಿ. ಅನಾವಶ್ಯಕವಾಗಿ ಉದ್ವೇಗ ಮಾಡದಿರಿ. ಶುಭ ಕಾರ್ಯಗಳ ಚಿಂತನೆ ಸದ್ಯದಲ್ಲೇ ನೆರವೇರಲಿದೆ. ಆರ್ಥಿಕವಾಗಿ ಕಿರಿ ಇರಲಾರದು. ನಿರುದ್ಯೋಗಿಗಳಿಗೆ ಅವಕಾಶವನ್ನು ಕಾಯುವಂತಾದೀತು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಂದ ನೆರವು ದೊರಕಲಿದೆ. ದೂರದ ಪ್ರಯಾಣದ ಸಾಧ್ಯತೆ.

ಕನ್ಯಾ :-

ಕನ್ಯಾಮಣಿಯವರಿಗೆ ಕಂಕಣಭಾಗ್ಯ ಒದಗಿ ಬರುತ್ತದೆ. ಕರ್ತವ್ಯ ನಿರ್ವಹಣೆಯಲ್ಲಿ ಸ್ಪಷ್ಟ ನಿಲುವು ತಳೆಯುವುದರಿಂದ ಯಶಸ್ಸನ್ನು ಸಾಧಿಸುವಿರಿ. ಸಂಶೋಧನೆಗಳಲ್ಲಿ ತೊಡಗಿದವರಿಗೆ ಉತ್ತಮ ಪ್ರೋತ್ಸಾಹ ದೊರಕಲಿದೆ. ಬರವಣಿಗೆಯಿಂದಾಗಿ ಆದಾಯ ನಿರೀಕ್ಷಿಸಬಹುದು. ಅನಿರೀಕ್ಷಿತವಾಗಿ ಉತ್ತಮ ಅವಕಾಶಗಳು ಅಚ್ಚರಿ ತರುತ್ತವೆ. ದೂರ ಸಂಚಾರದಲ್ಲಿ ಕಾರ್ಯಸಾಧನೆ ಸಂತಸ ತಂದೀತು.

 

ತುಲಾ:

ವಾಹನ ವಹಿವಾಟುದಾರರಿಗೆ ಉತ್ತಮ ಆದಾಯದ ನಿರೀಕ್ಷೆ. ಲಾಭ ಸ್ಥಾನದ ಶನಿಯು ಆರ್ಥಿಕವಾಗಿ ಅಭಿವೃದ್ಧಿಗೆ ಸಾಧಕನಾದಾನು. ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗುತ್ತವೆ. ಶ್ರೀದೇವತಾದರ್ಶನ ಭಾಗ್ಯಕ್ಕಾಗಿ ಸಂಚಾರ ಒದಗಿ ಬಂದೀತು. ಔದ್ಯೋಗಿಕ ವಿಷಯದಲ್ಲಿ ಅನುಕೂಲತೆಗಳು ಒದಗಿಬರುವವು. ಸಾಮಾಜಿಕ ಕಾರ್ಯಕರ್ತರಿಗೆ ಹೆಚ್ಚಿನ ಕಾರ್ಯಬಾಹುಳ್ಯ. ಸಡಗರದ ದಿನವಾಗಲಿದೆ.

ವೃಶ್ಚಿಕ :-

ನಿರೀಕ್ಷಿತ ಕಾರ್ಯಸಾಧನೆಗಾಗಿ ಒದ್ದಾಟ ವಿರುತ್ತದೆ. ಕುಟುಂಬದ ಕ್ಲಿಷ್ಟ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳುವುದರಿಂದ ಹಿರಿಯರ ಪ್ರಶಂಸೆಯನ್ನು ಹೊಂದಲಿದ್ದೀರಿ. ಅಧಿಕ ಧನಾಗಮನದಿಂದ ಮನಸ್ಸಿಗೆ ನೆಮ್ಮದಿ. ಹೂಡಿಕೆಗಳಲ್ಲಿ ಹಣ ವಿನಿಯೋಗ. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆಗೆ ಅನುಕೂಲವಾಗಲಿದೆ. ಸಾಂಸಾರಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಅಧಿಕ ರೂಪದಲ್ಲಿರುತ್ತವೆ.

 

ಧನಸ್ಸು:

ಉದ್ಯೋಗದಲ್ಲಿ ಮಹತ್ತರ ಬದಲಾವಣೆಯಾಗುವ ವಿಚಾರವಾಗಿ ಹಿರಿಯರೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಶುಭಮಂಗಲ ಕಾರ್ಯಗಳು ನೆರವೇರುತ್ತವೆ. ಮುಖ್ಯವಾಗಿ ದೇಹಾರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ಸಾಂಸಾರಿಕವಾಗಿ ದಾಯಾದಿಗಳ ಕಿರಿಕಿರಿ ಇರುತ್ತದೆ. ಸಂಚಾರದಲ್ಲಿ ಜಾಗ್ರತೆ ಬೇಕು. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಉತ್ತಮ ಅವಕಾಶ ನಿಮ್ಮಪಾಲಿಗೆ ಒದಗಲಿದೆ.

ಮಕರ :-

ಕ್ರಯವಿಕ್ರಯಗಳು ಲಾಭಕರವಾದಾವು ಸಾಂಸಾರಿಕವಾಗಿ ಸಹಕಾರ, ಸೂಕ್ತ ಸಲಹೆಗಳು ಉಪಯುಕ್ತವಾದಾವು. ದೀರ್ಘಕಾಲದ ಪ್ರಯಾಣ ಮಾಡುವ ಸಾಧ್ಯತೆ. ಆರಕ್ಷಕರು/ ರಕ್ಷಣಾ ಕಾರ್ಯದಲ್ಲಿ ನಿರತರಾದವರಿಗೆ ಬಿಡುವಿಲ್ಲದ ಕೆಲಸ. ವ್ಯಾಪಾರದಲ್ಲಿ ಹೆಚ್ಚಿನ ಲಾಭ. ಹಣ್ಣು, ಹೂವು, ತರಕಾರಿ ವ್ಯಾಪಾರದಲ್ಲಿ ಲಾಭ. ಕಾರ್ಯ ಒತ್ತಡಗಳಿದ್ದರೂ ಮುನ್ನಡೆ ಸಮಾಧಾನ ಸಿಗಲಿದೆ. ಮುಂದುವರಿಯಿರಿ.

 

ಕುಂಭ:-

ಸಾಮಾಜಿಕ ಕಾರ್ಯಚಟುವಟಿಕೆಗಳು, ಮನರಂಜನಾ ಕಾರ್ಯಕ್ರಮಗಳನ್ನು ಅಯೋಜಿಸುವ ವಿಚಾರವಾಗಿ ಚರ್ಚೆ ನಡೆಸಲಿದ್ದೀರಿ. ಹಂತ ಹಂತವಾಗಿ ತೋರಿ ಬರುವ ಅಭಿವೃದ್ಧಿ ಸಮಾಧಾನ ತಂದೀತು. ಜೀವನ ನಿಮಗೆ ಪಾಠ ಕಲಿಸಲಿದೆ. ಸ್ವಂತ ಬಲದಿಂದಲೇ ಮುಂದುವರಿಯಬೇಕು. ಆರೋಗ್ಯ ಭಾಗ್ಯ ಉತ್ತಮವಿದೆ.ಭೋಜನಕೂಟದಲ್ಲಿ ಭಾಗಿಯಾಗುವ ಸಾಧ್ಯತೆ. ಮಿತ್ರರಿಂದ ಸಹಕಾರ.

ಮೀನ:-

ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳಿ. ಬಹುದಿನಗಳ ಕಾರ್ಯಬಾಹುಳ್ಯದಿಂದಾಗಿ ದೇಹಕ್ಕೆ ಆಯಾಸದ ಅನುಭವ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲಿದ್ದೀರಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶ. ಮನೆಯಲ್ಲಿ ಹಬ್ಬದ ವಾತಾವರಣ. ವಿದ್ಯಾರ್ಥಿಗಳಿಗೆ ಅಚ್ಚರಿಯ ಸುದ್ಧಿ ಸಂತಸ ತರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ದೂರ ಸಂಚಾರದಲ್ಲಿ ಜಾಗ್ರತೆ ಇರಲಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಹಮದಾಬಾದ್: ಬಿಸಿಲ ಬೇಗೆಯಿಂದ ಕಾರನ್ನು ತಂಪಾಗಿಸಲು ಮಹಿಳೆ ಮಾಡಿದ ಉಪಾಯವೇನು ಗೊತ್ತೆ?….ಇಲ್ಲಿದೆ ನೋಡಿ!

    ಹಮದಾಬಾದ್: ಕಾರಿನೊಳಗೆ ಧಗೆ ಹೆಚ್ಚಾದರೆ, ಕಾರು ಬಿಸಿಯಾದರೇ ಕಾರಿನಲ್ಲಿ ಎಸಿ ಹಾಕಿಕೊಳ್ಳುತ್ತೇವೆ, ಕಾರನ್ನು ನೆರಳಿಗೆ ನಿಲ್ಲಿಸುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಕಾರನ್ನು ತಂಪಾಗಿಸಲು ವಿಶೇಷ ಪ್ರಯೋಗ ಮಾಡಿದ್ದಾರೆ. ಅಹಮದಾಬಾದ್​ ನಗರದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದ್ದು ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗಿದೆ. ಹೀಗಾಗಿ ಇಡೀ ಕಾರಿಗೆ ಸಗಣಿಯನ್ನು ಹಚ್ಚಿ ಕಾರನ್ನು ತಂಪಾಗಿರಿಸುವ ಜತೆಗೆ ಚಾಲನೆ ವೇಳೆ ತಂಪಾದ ಅನುಭವವನ್ನು ಪಡೆಯುವ ಪ್ರಯತ್ನವನ್ನು ಇಲ್ಲಿನ ಮಹಿಳೆಯೊಬ್ಬರು ಮಾಡಿದ್ದಾರೆ. ಸೆಜಲ್ ಶಾ ಎಂಬ ಮಹಿಳೆ ತಮ್ಮ ಟಯೋಟೋ ಆಲ್ಟೀಸ್ ಕಾರಿನ…

  • ದೇಶ-ವಿದೇಶ

    ಭಾರತದ ಈ ಪುಟ್ಟ ಬಾಲಕನ ಬುದ್ದಿವಂತಿಕೆ ಪ್ರಮಾಣ ಅಳೆಯಲು ವಿಜ್ನ್ಯಾನಿಗಳಿಗೂ ಕಷ್ಟವಾಗಿದೆ!ಹಾಗಾದ್ರೆ ಈ ಬಾಲಕನ ಸಾಧನೆ ಏನು ಗೊತ್ತಾ?

    ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.

  • ಆರೋಗ್ಯ

    9 ಕ್ಯಾನ್ಸರ್‌ ಔಷಧಗಳ ಬೆಲೆ ಇಳಿಕೆ

    ಮಾರ್ಚ್‌ನಲ್ಲಿ ಸುಮಾರು 380 ಔಷಧಗಳ ದರಗಳನ್ನು ಸರಕಾರ ಕಡಿತಗೊಳಿಸಿತ್ತು.ಈ ಮೂಲಕ ಇದುವರೆಗೂ ಸುಮಾರು 1000 ಕ್ಯಾನ್ಸರ್‌ ಚಿಕಿತ್ಸೆ ಔಷಧಗಳ ದರವನ್ನು ಸರಕಾರ ಇಳಿಸಿದೆ ಎಂದು ತಿಳಿದುಬಂದಿದೆ. ಕಳೆದ ಫೆಬ್ರವರಿಯಲ್ಲಿ ಸರಕಾರ ಸುಮಾರು 42 ಕ್ಯಾನ್ಸರ್‌ ಔಷಧಗಳ ದರವನ್ನು ಶೇ. 30 ರಷ್ಟು ಇಳಿಸಿತ್ತು. ಇದರಿಂದ ಸುಮಾರು 355 ಬ್ರ್ಯಾಂಡ್‌ನ ಔಷಧಗಳ ಬೆಲೆಯಲ್ಲಿ ಕಡಿತವಾಗಿತ್ತು. ಕ್ಯಾನ್ಸರ್‌ ಚಿಕಿತ್ಸೆಗೆ ಸಂಬಂಧಿಸಿದ ಕೆಲವು ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧಗಳ ಬೆಲೆ ನಿಯಂತ್ರಣ ಆಯೋಗ (ಎನ್‌ಪಿಪಿಎ) ಶೇ. 60ರಷ್ಟು ಇಳಿಕೆ ಮಾಡಿದೆ. ಎರ್ಲೊಟಿನಾಬ್‌,…

  • ಆರೋಗ್ಯ

    10 ಸಾವಿರ ಮಂದಿಯಿಂದ ಗಿನ್ನೀಸ್ ದಾಖಲೆಯ ಬೃಹತ್ ಯೋಗ ಪ್ರದರ್ಶನ

    ಜಿಲ್ಲಾಡಳಿತ, ಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ,ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಗಿನ್ನೀಸ್ ದಾಖಲೆಯ ಯೋಗಾಥಾನ್ ಅಂಗವಾಗಿ ನಡೆದ 10 ಸಾವಿರಕ್ಕೂ ಹೆಚ್ಚು ಮಂದಿಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದರು. ನಡುಗುವ ಚಳಿಯಲ್ಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯುವಜನರು ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೇರಿದರು. ವಿವಿಧ ಶಾಲೆ,ಕಾಲೇಜುಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಗಮನ ಸೆಳೆದರು.ನಗರ ಮಾತ್ರವಲ್ಲದೇ ತಾಲ್ಲೂಕಿನ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ಯೋಗ ಪ್ರದರ್ಶನಕ್ಕೆ 1100 ಮಕ್ಕಳನ್ನು ಕರೆತಂದಿದ್ದ…

  • ಸುದ್ದಿ

    ಇಲ್ಲಿ ಮಹಿಳೆಯರು ಹೆಚ್ಚು ಮೇಕಪ್ ಮಾಡಿಕೊಂಡಲ್ಲಿ ಕಠಿಣ ಶಿಕ್ಷೆ ಪಕ್ಕಾ..!ಎಲ್ಲಿ ಗೊತ್ತ?

    ಈ ದೇಶದಲ್ಲಿ ಮಹಿಳೆಯರು ಹೆಚ್ಚು ಮೇಕಪ್ ಮಾಡಿಕೊಂಡರೆ ಕಠಿಣ ಶಿಕ್ಷೆಗೆ ವಿಧಿಸಲಾಗುತ್ತದೆ. ಸಂಪ್ರದಾಯ ದೇಶ ಸೌದಿ ಅರೇಬಿಯಾದಲ್ಲಿ ಪುರುಷರಂತೆ ಮಹಿಳೆಯರಿಗೆ ಸಮಾನ ಹಕ್ಕುಗಳು ಇಲ್ಲ. ಈ ದೇಶದಲ್ಲಿ ಶರ್ಯ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ.ಷ್ಟರ ಮಟ್ಟಿಗೆ ಎಂದರೆ ಮಹಿಳೆಯರು ತಾವು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ತಮ್ಮ ಗಂಡನ ಆಯ್ಕೆಯನ್ನು ಕೂಡ ಮಾಡಿಕೊಳ್ಳಲು ಇಲ್ಲಿ ಸ್ವತಂತ್ರ ಇಲ್ಲ. ಅಂತ ಕಟ್ಟು ಪಾಡುಗಳನ್ನು ಮೀರಿದರೆ ಕಠಿಣವಾಗಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ ಸೌದಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯ ಪ್ರದರ್ಶಿಸುವ ಹಾಗೆ ಇಲ್ಲ.ಹೌದು…

  • ಆರೋಗ್ಯ

    ನಮ್ಮ ಹಿರಿಯರು ಆಹಾರವನ್ನು ಸೇವಿಸುವಾಗ ಮಾತನಾಡಬಾರದು ಎಂದು ಹೇಳುತ್ತಾರೆ..!ಏಕೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ …

    ನಮ್ಮ ಹಿರಿಯರು ಊಟ ಮಾಡುವಾಗ ಹೆಚ್ಚು ಮಾತಾಡಬೇಡಿ ಎಂದು ಕೂಗಿ ಕೂಗಿ ಹೇಳಿದರು ನಮಗೆ ಕೇಳಿಸಿದರು ಕೇಳಿಸಲಿಲವೇನೋ ಇಲ್ಲ ಎಂಬಂತೆ ವರ್ತಿಸುತ್ತೇವೆ, ಆದರೆ ಹೀಗೆ ಊಟ ಮಾಡುವಾಗ ಮಾತಾಡಿ ಹಲವು ಬಾರಿ ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಸಂಗತಿಗಳು ಸಹ ನಡೆದಿರುತ್ತವೆ, ಆದರೂ ನಮಗೆ ಹೆಚ್ಚಾಗಿ ಊಟಕ್ಕೆ ಕುಳಿತಾಗಲೇ ಇಲ್ಲ ಸಲ್ಲದ ವಿಷಯಗಳು ನೆನಪಾಗುತ್ತವೆ.