ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಮುದ್ರ ಗರ್ಭದಲ್ಲಿ ಮುತ್ತು ರತ್ನ ಹವಳಗಳಷ್ಟೇ ಅಲ್ಲದೇ ಬಂಗಾರ ಕೂಡ ಇದೆ. ಆದರೆ ಇವನ್ನೆಲ್ಲ ಬಿಟ್ಟೂ ಕೆಲವು ಸೋಜಿಗಗಳು ಸಿಗುತ್ತವೆ. ಇವುಗಳಲ್ಲಿ ಡೈವಿಂಗ್ ಬೆಲ್ ಸ್ಪೈಡರ್ ಕೂಡ ಒಂದು. ಇದು ನೆಲದ ಜೇಡವಾದರೂ ಬಲೆ ಕಟ್ಟುವುದು ಸಮುದ್ರದ ಆಳದಲ್ಲಿ. ಜೀವನದ ಬಹುಪಾಲು ಸಮಯವನ್ನು ನೀರಿನಡಿಯಲ್ಲೇ ಸವೆಸುತ್ತದೆ.
ಸಮುದ್ರದ ಜೇಡಗಳು :-
ನೀರಿನಡಿಯಲ್ಲಿ ಇದು ಉಸಿರಾಡಲು ಕಂಡುಕೊಂಡ ಪರಿ ಅದ್ಭುತ. ತನ್ನ ಹೊಟ್ಟೆಯ ರೋಮಗಳಲ್ಲಿ ಗಾಳಿಯ ಗುಳ್ಳೆ ಯನ್ನು ಹಿಡಿದುಕೊಂಡು ನೀರಿನಾಳಕ್ಕೆ ಹೋಗುತ್ತದೆ. ಅಲ್ಲಿ ಬಲೆಯನ್ನು ಕಟ್ಟಿ ಈ ಗುಳ್ಳೆಯನ್ನು ಬಲೆಯಲ್ಲಿ ಬಂಧಿಸಿಟ್ಟು ಅದರಲ್ಲಿ ತಲೆ ಇರಿಸಿ ಕುಳಿತುಕೊಳ್ಳುತ್ತದೆ. ಈ ಗುಳ್ಳೆ ನೀರಿನಿಂದ ಆಮ್ಲಜನಕ ಹೀರುವುದರಿಂದ ಜೇಡಕ್ಕೆ ಸುಮಾರು ಒಂದು ದಿನಕ್ಕೆ ಆಗುವಷ್ಟು ಆಮ್ಲಜನಕ ಸಿಗುತ್ತದೆ. ಮಾರನೇ ದಿನ ಬಂದು ಇನ್ನೊಂದು ಗುಳ್ಳೆ ಒಯ್ದರಾಯಿತು. ಹೆಣ್ಣು ಜೇಡ ದೊಡ್ಡ ಗುಳ್ಳಯನ್ನೇ ಒಯ್ದು ಅದರಲ್ಲಿ ಮೊಟ್ಟೆ ಕೂಡ ಇಡುತ್ತದೆ.
ಸಮುದ್ರದ ಆಳದಲ್ಲಿ ನದಿಗಳು ಕೂಡ ಹರಿಯುತ್ತವೆ :-
ಮೆಕ್ಸಿಕೊ ದಲ್ಲಿ ಇಂಥಹ ನದಿಯೊಂದು 2010 ರಲ್ಲಿ ಡೈವಿಂಗ್ ಮಾಡುವವರು ಗಮನಿಸಿದರು. ಸುಮಾರು 25 ಅಡಿ ಆಳದಲ್ಲಿ ಸುಂದರವಾದ ನದಿಯನ್ನು ನೋಡಿದ ಇವರಿಗೆ ಇದು ಕನಸೋ ನನಸೋ ಅಂತ ಗೊತ್ತಾಗಲಿಲ್ಲ. ಆ ನದಿಗೆ ದಂಡೆಗಳು , ಆ ದಂಡೆಗುಂಟ ಮರಗಳು, ನದಿಯ ನೀರಿನ ಮೇಲೆ ಮೋಡದಂಥ ಹೊಗೆ ನೋಡಿ ಇವರಿಗೆ ತಾವು ಭೂಮಿಯ ಮೇಲೆ ಗಾಳಿಯಲ್ಲಿ ಹಾರುತ್ತಾ ನದಿಯನ್ನು ನೋಡುತ್ತಿರುವ ಅನುಭವ ಆಗಿದೆ.
ನೀರಿನಲ್ಲಿ ನೀರು ಹರಿಯಲು ಹೇಗೆ ಸಾಧ್ಯ? ಅಸಲಿಗೆ ಈ ನದಿಯ ನೀರು ಉಪ್ಪು ಮತ್ತು ಹೈಡ್ರೋಜನ್ ಸಲ್ಫೈಡ್ ಮಿಶ್ರಣವಾಗಿರುವುದರಿಂದ ಉಳಿದ ನೀರಿಗಿಂತಲೂ ಹೆಚ್ಚು ಭಾರ. ಆದುದರಿಂದ ಉಳಿದ ನೀರಿನಲ್ಲಿ ಮಿಕ್ಸ್ ಆಗುವುದಿಲ್ಲ ಮತ್ತು ಹರಿಯುತ್ತದೆ ಕೂಡ. ಆದರೆ ಹೈಡ್ರೋಜನ್ ಸಲ್ಫೈಡ್ ಒಂದು ವಿಷ. ಆದುದರಿಂದ ಇದರಲ್ಲಿ ಮೀನುಗಳು ಇರುವುದಿಲ್ಲ.
ಸಮುದ್ರದಾಳದಲ್ಲಿ ಅರಣ್ಯ ಕೂಡ ಇವೆ:-
ನೂರೈವತ್ತು ಅಡಿ ಆಳದಲ್ಲಿ ಹುಟ್ಟಿದ ಮರಗಳು ನೀರಿನ ಮೇಲ್ಮೈ ತನಕ ಬೆಳೆಯುತ್ತವೆ. ದಿನಕ್ಕೆ ಎರಡಡಿ ಬೆಳೆಯುವ ಮರಗಳೂ ಇವೆ.
ಸಮುದ್ರ ಮಧ್ಯದಲ್ಲಿ ದೊಡ್ಡ ದೊಡ್ಡ ಸಿಂಕ್ ಹೋಲ್ಗಳು :-
ಸುತ್ತಲೂ ಪಾಚಿ ಬೆಳೆದಿದ್ದರೂ ಈ ದೊಡ್ಡ ಹೊಂಡದಲ್ಲಿ ಮಾತ್ರ ಕ್ಲಿಯರ್ ನೀರು ಇರುತ್ತದೆ. ಸುಮಾರು ಆರು ನೂರು ಅಡಿ ಸಿಂಕ್ ಹೋಲ್ ನಲ್ಲಿ ಸ್ಕ್ಯೂಬಾ ಡೈವ್ ಮಾಡುವುದು ಅತ್ಯಂತ ಸಾಹಸದ ಕೆಲಸ. ಕೆಳಗೆ ಹೋದಾಗ ಸೂರ್ಯ ಕಿರಣದ ಒಂದೇ ಒಂದು ಸ್ರೋತ ಕಂಡುಬರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಪಂದ್ಯ ನಡೆಯಿತು. ಅಲ್ಲದೆ ಬುಧವಾರ ವರನಟ ಡಾ. ರಾಜ್ಕುಮಾರ್ ಅವರ ಹುಟ್ಟುಹಬ್ಬ ಆಗಿದ್ದರಿಂದ ಕ್ರೀಡಾಂಗಣದ ಸ್ಕ್ರೀನ್ನಲ್ಲಿ ಅವರ ಫೋಟೋ ಹಾಕಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ. ಬುಧವಾರ ರಾಜ್ಕುಮಾರ್ ಅವರ ಹುಟ್ಟುಹಬ್ಬ ಇರುವುದರಿಂದ ಕ್ರೀಡಾಂಗಣದ ಎಲ್ಇಡಿ ಸ್ಕ್ರೀನ್ನಲ್ಲಿ ಅವರ ಫೋಟೋ ಹಾಕುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿತ್ತು. ಫೋಟೋ ಕೆಳಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕೂಡ ಬರೆದಿತ್ತು. ಇದನ್ನು ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಾಯಲ್…
ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್ಸ್ಕ್ರೀನ್ನಲ್ಲಿ ಹೊಸ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
ಪಶು ಪಕ್ಷಿಗಳನ್ನ ಆರಾಧನೆ ಮಾಡುವ ಸಂಪ್ರದಾಯ ನಮ್ಮ ಹಿಂದುಗಳದ್ದು, ನಮ್ಮ ಪೂರ್ವಜರ ಕಾಲದಲ್ಲಿಂದ ಗೋವುಗಳ ಪೂಜೆಯನ್ನ ಸಾಂಪ್ರದಾಯಕವಾಗಿ ಮಾಡಿಕೊಂಡು ಬಂದಿದ್ದೇವೆ. ಇನ್ನು ಗೋವನ್ನ ಕಾಮಧೇನು ಎಂದು ಕರೆಯುತ್ತಾರೆ, ಗೋವಿಗೆ ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನ ನೀಡುತ್ತಾ ನಮಸ್ಕಾರ ಮಾಡುವುದು ನಾವು ಸನಾತನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಪದ್ಧತಿಯಾಗಿದೆ. ಇನ್ನು ಸಕಲ ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತದೆ, ಇನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಗೋವು ಕಾಣಿಸಿಕೊಂಡರೆ ಅದೂ ಶುಭ ಸೂಚನೆ ಎಂದು ಹೇಳುತ್ತಾರೆ ಪಂಡಿತರು….
ನಾವು ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನೀರು ಕುಡಿಯಲು ಸರಿಯಾದ ಸಮಯ ಯಾವುದು? ಶರೀರದಲ್ಲಿ ನೀರಿನ ಪರಿಣಾಮವನ್ನು ಗರಿಷ್ಠವಾಗಿಸಲು ಅದನ್ನು ಸೇವಿಸಲು ಅತ್ಯುತ್ತಮ ಸಮಯ ಯಾವುದು ಮತ್ತು ಹಾನಿಕಾರಕ ಪರಿಣಾಮವನ್ನು ತಪ್ಪಿಸಲು ನೀರನ್ನು ಯಾವ ಸಮಯ ದಲ್ಲಿ ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಹೆದ್ದಾರಿಗಳ ಮೇಲೆ ಬಿಳಿ, ಹಳದಿ ಬಣ್ಣಗಳಲ್ಲಿ ಹಾಕುವ ಹಲವು ವಿಧದ ಪಟ್ಟೆಗಳನ್ನು ಸಹ ಎಲ್ಲರೂ ನೋಡಿಕೊಂಡು ಹೋಗಬೇಕು. ಇಷ್ಟಕ್ಕೂ ಆ ಪಟ್ಟೆಗಳನ್ನು ಯಾಕೆ ಹಾಕುತ್ತಾರೆ? ಅವುಗಳ ಉಪಯೋಗವೇನು ಎಂದು ಈಗ ತಿಳಿದುಕೊಳ್ಳೋಣ.
ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.