ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದಿನ ದಿನಗಳಲ್ಲಿ ಪ್ರಾಮಾಣಿಕತೆ ಎಂಬುದು ಎಲ್ಲಿದೆ. ಬಹುತೇಕ ಮಂದಿ ಪ್ರಾಮಾಣಿಕವಾಗಿ ಇರುವುದಿಲ್ಲ. ಆ ರೀತಿ ಇರುವವರು ನೂರಕ್ಕೋ, ಕೋಟಿಗೋ ಒಬ್ಬರಿರುತ್ತಾರೆ. ಅಂತಹವರಲ್ಲಿ ಈಗ ನಾವು ಹೇಳಲಿರುವ ಈತನೂ ಇದ್ದಾನೆ. ಆತನೊಬ್ಬ ಆಟೋಡ್ರೈವರ್. ಆದರೆ ಪ್ರಾಮಾಣಿಕತೆಗೆ ಹೆಸರುವಾಸಿ. ಮಹಿಳೆಯೊಬ್ಬರು ತನ್ನ ಆಟೋದಲ್ಲಿ ತನ್ನ ಬ್ಯಾಗ್ ಮರೆತಿದ್ದರೆ ಅದನ್ನು ಅವರಿಗೆ ಹಿಂತಿರುಗಿಸಿದ. ಆತನಿಗೆ ಆ ಮಹಿಳೆ ಊಹಿಸದಂತಹ ಬಹುಮಾನ ನೀಡಿದರು.
ಅದು ಮುಂಬೈನಲ್ಲಿನ ಚೆಂಚೂರ್ ಎಂಬ ಪ್ರದೇಶ. ಅಲ್ಲಿ ಸರಳಾ ನಂಬೂದರಿ (68) ಎಂಬ ಮಹಿಳೆ ಇಂಗ್ಲಿಷ್ ಮೀಡಿಯಂ ಶಾಲೆಯನ್ನು ನಡೆಸುತ್ತಿದ್ದಾರೆ. ಆದರೆ ಕಳೆದ ವರ್ಷ ಡಿಸೆಂಬರ್ 21ರಂದು ಆಕೆ ಮಧ್ಯಾಹ್ನ ಶಾಲೆ ಮುಗಿದ ಕೂಡಲೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಇರುವ ಪಾರ್ಕ್ ಮಾಡಿರುವ ತನ್ನ ಕಾರಿನ ಬಳಿಗೆ ಹೋಗಲು ಆಟೋ ಒಂದನ್ನು ಕರೆದರು.
ಅದರಲ್ಲಿ ಆಕೆ ಹೋದರು. ಕಾರು ಬಳಿಗೆ ತಲುಪಿ ಅದನ್ನು ಓಡಿಸುತ್ತಾ ಸ್ವಲ್ಪ ದೂರ ಹೋದಾಗ ಆಗಲೇ ಆಕೆಗೆ ನೆನಪಾಗಿದ್ದು, ಆಟೋದಲ್ಲಿ ತಾನು ಬ್ಯಾಗ್ ಮರೆತಿದ್ದೇನೆಂದು. ಅದರಲ್ಲಿ ರೂ.80 ಸಾವಿರ ನಗದು, ತನ್ನ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು, ಮನೆಯ ಬೀಗ, ಪಾನ್ ಕಾರ್ಡ್ ಇನ್ನಿತರೆ ಮುಖ್ಯವಾದ ಪತ್ರಗಳು, ನಗದು ಇತ್ತು.
ಆ ರೀತಿ ತಾನು ಬ್ಯಾಗ್ ಆಟೋದಲ್ಲಿ ಮರೆತಿದ್ದೇನೆಂದು ಗ್ರಹಿಸಿದ ಸರಳಾ ಕೂಡಲೆ ತನ್ನನ್ನು ಆ ಆಟೋ ಡ್ರೈವರ್ ಇಳಿಸಿದ ಪ್ರದೇಶದ ಬಳಿಗೆ ಹೋದರು. ಅಲ್ಲಿ ಆಟೋ ಇಲ್ಲ. ಪಕ್ಕದಲ್ಲೇ ಇದ್ದ ಪಾನ್ ಶಾಪ್ ಆತನನ್ನು ಕೇಳಿದರು. ಆದರೂ ಆಟೋ ಡ್ರೈವರ್ ವಿವರಗಳು ಗೊತ್ತಾಗಲಿಲ್ಲ. ಇದರಿಂದ ಆಕೆ ವಿಧಿಯಿಲ್ಲದೆ ಪೊಲೀಸರಿಗೆ ದೂರು ನೀಡೋಣ ಎಂದುಕೊಂಡರು. ಆದರೆ ಅಷ್ಟರಲ್ಲೇ ಆ ಆಟೋ ಡ್ರೈವರ್ ಬಂದು ಆಕೆಗೆ ಬ್ಯಾಗ್ ವಾಪಸ್ ಮಾಡಿ ಹೊರಟು ಹೋದರು. ಆರಂಭದಲ್ಲಿ ಶಾಕ್ ಆದರೂ, ಆತನ ವಿವರಗಳನ್ನು ತಿಳಿದುಕೊಳ್ಳಲು ಹೋಗಲಿಲ್ಲ.
ಬಳಿಕ ಆತನ ಬಗ್ಗೆ ತಿಳಿದುಕೊಳ್ಳಲು ತೀವ್ರವಾಗಿ ಪ್ರಯತ್ನಿಸಿದರು. ಕಡೆಗೆ ಹೇಗೋ ತಿಳಿದುಕೊಂಡರು. ಆತನ ಹೆಸರು ಅಮಿತ್ ಗುಪ್ತಾ ಎಂದು ಗೊತ್ತಾಯಿತು. ಇದರಿಂದ ಆತನನ್ನು ಶಾಲೆಗೆ ಕರೆಸಿ ಆತನಿಗೆ ರೂ.10 ಸಾವಿರ ನಗದನ್ನು ಬಹುಮಾನವಾಗಿ ನೀಡಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ, ಕೊಡಗುಜಿಲ್ಲೆಯಲ್ಲಿ ವರ್ಗಭೂಮಿ ಹೊಂದಿರುವವರಿಗೆ ಲಭ್ಯವಾಗುವಬಾಣೆ ಜಮೀನು ಹಂಚಿಕೊಳ್ಳುವ ಅಧಿಕಾರವನ್ನುಸುಪ್ರೀಂ ಕೋರ್ಟ್ ನೀಡಿದೆ. ಈ ಮೂಲಕ ಬಾಣೆ ಜಮೀನು ಕೂಡ ಸೀಮಿತ ಆಸ್ತಿ ಹಕ್ಕಿನ ವ್ಯಾಪ್ತಿಯನ್ನು ಹೊಂದಿದೆಎಂಬ ವಾದಕ್ಕೆ ಸುಪ್ರೀಂನ ಮುದ್ರೆ ಬಿದ್ದಂತಾಗಿದೆ. ಕೊಡಗಿನ ಬಾಣೆ ಭೂಮಿಗೆ ಸಮಾನಂತರವಾಗಿ ವ್ಯಾಖ್ಯಾನಿಸಲಾಗುವ ಕುಮ್ಕಿ, ಕಾಣೆ, ಬೆಟ್ಟಭೂಮಿ, ಹಾದಿ ಭೂಮಿ, ಕಾನ್ ಮತ್ತು ಸೊಪ್ಪಿನ ಬೆಟ್ಟ, ಜಮ್ಮಾ ಮತ್ತು ಮೊಟಸ್ಥಳಗಳನ್ನು ಹೊಂದಿರುವ ರಾಜ್ಯದ ಉದ್ದಗಲದಲ್ಲಿನ ಲಕ್ಷಾಂತರ ರೈತರಿಗೆ ಸುಪ್ರೀಂಕೋರ್ಟ್‌ನ ಈ ಆದೇಶ ತುಸು ನೆಮ್ಮದಿಯನ್ನು ನೀಡಿದೆ. ಕೊಡಗಿನ ಕೋಟಿಯಂಗದ ಬಿ. ಮೋಟಯ್ಯ…
ಈಗಂತೂ ಈ ಜಗತ್ತಿನಲ್ಲಿ ಒಬ್ಬರೊನ್ನೊಬ್ಬರು ನಂಬುವುದು ತುಂಬಾ ಕಷ್ಟ. ಯಾರ ಮೇಲೂ ಯಾರಿಗೂ ನಂಬಿಕೆ ಅನ್ನುವುದೇ ಇಲ್ಲ.ಇದಕ್ಕೆ ಕಾರಣಗಳು ಬೇಕಾದಷ್ಟು ಇವೆ. ನಮ್ಮಲ್ಲಿರುವ ಅಥವಾ ಬೇರೆಯವರಲ್ಲಿರುವ ಕೆಲವೊಂದು ನ್ಯೂನತೆಗಳು ಬೇರೆಯವರನ್ನು ನಂಬದಂತೆ ಮಾಡಿರುತ್ತವೆ.
ಪುರಾತನ ಮತ್ತು ಮುಜರಾಯಿ ಇಲಾಖೆಗೆ ಸೇರಿದ ಹಾಸನದ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಅರ್ಚನೆ ಮಾಡಲಾಗುತ್ತದೆ.ಇದರ ಜೊತೆಗೆ ಅಧಿಕಾರಿಯ ಹೆಸರಿನಲ್ಲಿ ಮರ ಬೆಳೆಸಲಾಗುತ್ತಿದ್ದು ಪ್ರತಿದಿನ ಜಲಾಭಿಷೇಕ ಕೂಡ ನಡೆಯುತ್ತದೆ. ಈ ಪುರಾತನ ದೇವಾಲಯ ಶಿಥಿಲಾವಸ್ಥೆಗೆ ತೆರಳಿದ್ದರೂ ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನಹರಿಸಲಿಲ್ಲ. ಆದರೆ ರೋಹಿಣಿ ಸಿಂಧೂರಿಯವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆ ಮಾಡಿದ್ದರು. 2017ರಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಬಂದ ರೋಹಿಣಿ ಸಿಂಧೂರಿ ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ತಕ್ಷಣ 30 ಲಕ್ಷ ಹಣ…
ಚಿಕನ್ ಕಬಾಬ್ ಕಂಡ ತಕ್ಷಣ ಅಹಾ ಎಂದು ತಿನ್ನುವವರು ಈ ಸುದ್ದಿಯನ್ನು ನೋಡಲೇ ಬೇಕು. ಏಕೆಂದರೆ ರಸ್ತೆ ಬದಿಯಲ್ಲಿ ತಿನ್ನುವ ಕಲರ್ ಫುಲ್ಕಬಾಬ್ ಅನ್ನು ಕೊಳಕು ಜಾಗದಲ್ಲಿ ತಯಾರಿಸುತ್ತಾರೆ. ಹಣ ಕೊಟ್ಟು ಸಿಕ್ಕಸಿಕ್ಕ ಕಡೆ ಕಬಾಬ್ ತಿಂದರೆ ಫ್ರೀಯಾಗಿ ಕಾಯಿಲೆಗಳು ಕೂಡ ಬರುತ್ತದೆ. ಏಕೆಂದರೆ ಕಬಾಬ್ ತಯಾರಿಸುವ ವ್ಯಕ್ತಿ ಸಿಗರೇಟ್ ಸೇದಿಕೊಂಡು ಅದರ ಹೊಗೆಯನ್ನು ಕಬಾಬ್ ಮಸಾಲೆ ಪಕ್ಕ ಉಫ್ ಉಫ್ ಎಂದು ಉದುತ್ತಾನೆ.ಅಲ್ಲದೆ ಸಿಗರೇಟಿನ ವೇಸ್ಟ್ಅನ್ನು ಕಬಾಬ್ ಮಸಾಲೆಯ ಪಕ್ಕವೇ ಹಾಕುತ್ತಾನೆ. ಸಿಗರೇಟು ಸೇದಿದ ಹಾಗೂ…
ತಾಯಿ ಹೊಟ್ಟೆಯಲ್ಲಿದ್ದಾಗ ಮಗು 9 ತಿಂಗಳು ಲಯಬದ್ಧವಾಗಿ ತಾಯಿಯ ಹೃದಯದ ಬಡಿತವನ್ನು ಕೇಳುತ್ತಾ, ಅದರಲ್ಲೇ ತನ್ಮಯವಾಗಿರುತ್ತದೆ. ತಾಯಿಯ ಎದೆಬಡಿತದ ಶಬ್ಧ ತನಗೆ ರಕ್ಷಣೆ ಎಂದೇ ಮಗು ಭಾವಿಸಿರುತ್ತದೆ.
ನಮ್ಮ ಬಳಿ ಹಣ ಇದ್ದರೆ ಅದನ್ನ ಯಾರು ಬೇಕಾದರೂ ಕದ್ದುಕೊಂಡು ಹೋಗಬಹುದು ಆದರೆ ನಮ್ಮ ಬಳಿ ಇರುವ ಬುದ್ದಿವಂತಿಕೆಯನ್ನ ಪ್ರಪಂಚದ ಯಾವ ಶಕ್ತಿಯಿಂದ ಕೂಡ ಕದ್ದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಬುದ್ಧಿಶಕ್ತಿಯಿಂದ ಇಡೀ ಪ್ರಪಂಚವನ್ನ ಆಳಬಹುದು, ತನ್ನ ಬುದ್ದಿಶಕ್ತಿಯಿಯನ್ನ ಬಳಸಿಕೊಂಡ ಈ ಭಾರತದ ಹುಡುಗಿ ಇಡೀ ಪ್ರಪಂಚವೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾಳೆ. ಇನ್ನು ಈಕೆ ಮಾಡಿದ ಕೆಲಸಕ್ಕೆ ದೊಡ್ಡ ದೊಡ್ಡ ಕಂಪನಿಗಳು ಶಾಕ್ ಆಗಿದ್ದು ಈಕೆಯನ್ನ ತಮ್ಮ ಕಂಪನಿಗೆ ಸೇರಿಸಿಕೊಳ್ಳಲು ದೊಡ್ಡ ದೊಡ್ಡ…