ಉಪಯುಕ್ತ ಮಾಹಿತಿ

ವೀಳ್ಯದೆಲೆಯಾ ಬಗ್ಗೆ ನಿಮ್ಗೆ ಗೊತ್ತಿಲ್ಲದಿರೋ ಮಾಹಿತಿ…ತಿಳಿಯಲು ಈ ಲೇಖನ ಓದಿ ಮತ್ತು ಮರೆಯದೇ ಶೇರ್ ಮಾಡಿ..

743

ವೀಳ್ಯದೆಲೆ ಎಂದರೆ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚು ಬಳಸುವ ಎಲೆ.ತಾಂಬೂಲದಲ್ಲಿ ಪ್ರಮುಖ ಸ್ಥಾನ ಹೊಂದಿರುವ ವೀಳ್ಯದೆಲೆಗೆ ಸದಾ ಬೇಡಿಕೆ ಇದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.ಆದರೆ ಸಾಂಪ್ರದಾಯಕವಾಗಷ್ಟೆ ಅಲ್ಲ, ಇದರ ಔಷಧೀಯ ಗುಣಗಳು ಕೂಡ ಹಲವು.

ಆದರೆ ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಹಾಗೂ ತಿವಿದ ಗಾಯವಾಗಿದ್ದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ ಲಿವರ್ ಬೇಗ ಕ್ರಿಯಾ ಹೀನವಾಗಬಹುದು.

ಏಳು ಬಗೆಯ ವೀಳ್ಯದೆಲೆಗಳನ್ನು ಆಯುರ್ವೇದದಲ್ಲಿ ಬಣ್ಣಿಸಲಾಗಿದೆ. ವೀಳ್ಯದೆಲೆಯಿಂದಾದ ಹೆಂಡವನ್ನು ಆಯುರ್ವೇದದಲ್ಲಿ ಕೆಲ ರೋಗಗಳಿಗೆ ಮದ್ದನ್ನಾಗಿ ಉಪಯೋಗಿಸಲು ಹೇಳಿದೆ.

  • ಗಾಯಕ್ಕೆ ವೀಳ್ಯದೆಲೆಯ ರಸದ ಜೊತೆಗೆ ನಿಂಬೆಹಣ್ಣನ್ನು ಬೆರೆಸಿ ಹಚ್ಚಿದರೆ ಗಾಯ ಬೇಗ ಗುಣವಾಗುತ್ತದೆ.
  • ವೀಳ್ಯದೆಲೆಯನ್ನು ಕಿವಿಗಳ ಮೇಲೆ ಕಟ್ಟಿದರೆ ಗ್ಯಾಸ್ಟಿಕ್‌ನಿಂದ ಉಂಟಾಗುವ ತಲೆನೋವು ಗುಣವಾಗುತ್ತದೆ.
  • ಒಂದೆರಡು ವೀಳ್ಯದೆಲೆಯನ್ನು ದಿನಕ್ಕೆ ಎರಡು -ಮೂರು ಬಾರಿ ಜಗಿದರೆ ಕಫಯುಕ್ತ ಕೆಮ್ಮು ಕಡಿಮೆಯಾಗುತ್ತದೆ.
  • ವೀಳ್ಯದೆಲೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ ಅದನ್ನು ರುಬ್ಬಿ ಸಾವಯವ ಜೇನುತುಪ್ಪ ಬೆರೆಸಿ ಸುಟ್ಟ ಜಾಗಕ್ಕೆ ಹಚ್ಚಿಕೊಳ್ಳಿ. ಇದ್ರಿಂದ ಸುಟ್ಟ ಉರಿ ಕಡಿಮೆಯಾಗಿ ಹಿತವೆನಿಸುತ್ತದೆ.

  • ವೀಳ್ಯದೆಲೆ ರಸಕ್ಕೆ, ತುಳಸಿ ಎಲೆಯ ರಸ, 1 ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ನೆಗಡಿ ವಾಸಿ.
  • 5 ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಅದನ್ನು ಸ್ವಚ್ಛವಾಗಿ ತೊಳೆಯಿರಿ. ನಂತ್ರ ವೀಳ್ಯದೆಲೆಯನ್ನು ರುಬ್ಬಿ ಒಂದು ಟೀ ಚಮಚ ಜೇನು ತುಪ್ಪವನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿಯಂತೆ 2 ತಿಂಗಳು ಮಾಡಿ. ಒಣಗಿದ ಚರ್ಮ ಮೃದುವಾಗಿ ಚರ್ಮ ಕಾಂತಿ ಪಡೆಯುತ್ತದೆ.
  • ಮೊಡವೆಯನ್ನು ವೀಳ್ಯದೆಲೆ ದೂರ ಮಾಡುತ್ತದೆ. ವೀಳ್ಯದೆಲೆಯನ್ನು ನೀರಿಗೆ ಹಾಕಿ ಕುದಿಸಿ. ನೀರಿನ ಬಣ್ಣ ಬದಲಾದ ತಕ್ಷಣ ಗ್ಯಾಸ್ ಬಂದ್ ಮಾಡಿ. ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಕಡಿಮೆಯಾಗುತ್ತದೆ.

  • ವೀಳ್ಯದೆಲೆ ಬೇರನ್ನು ಜಗಿದರೆ ಸ್ವರವು ಮೃದುವಾಗುತ್ತದೆ.
  • ಮೊಡವೆಯನ್ನು ವೀಳ್ಯದೆಲೆ ದೂರ ಮಾಡುತ್ತದೆ. ವೀಳ್ಯದೆಲೆಯನ್ನು ನೀರಿಗೆ ಹಾಕಿ ಕುದಿಸಿ. ನೀರಿನ ಬಣ್ಣ ಬದಲಾದ ತಕ್ಷಣ ಗ್ಯಾಸ್ ಬಂದ್ ಮಾಡಿ. ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಕಡಿಮೆಯಾಗುತ್ತದೆ.
  • ಮೂರ್ನಾಲ್ಕು ಮಿಲಿ ವೀಳ್ಯದೆಲೆಯ ರಸವನ್ನು 1 ಚಮಚ ಜೇನು ತುಪ್ಪದ ಜತೆ ಸೇವಿಸಿದರೆ ಒಣ ಕೆಮ್ಮು ಕಮ್ಮಿಯಾಗುತ್ತದೆ.
  • ಕೆಮ್ಮು ಹಾಗೂ ಕಫದ ಸಮಸ್ಯೆಗೆ 1 ವೀಳ್ಯದೆಲೆಯಲ್ಲಿ ಒಂದೆರಡು ಹರಳು ಉಪ್ಪು ಹಾಗೂ ಒಂದೆರಡು ಕರಿಮೆಣಸನ್ನು ಸೇರಿಸಿ ಸೇವಿಸಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಹಣ ಕಾಸು

    ಚಿಲ್ಲರೆ ಅಭಾವ ತಪ್ಪಿಸಲು ಅತೀ ಶೀಘ್ರದಲ್ಲಿ ಬರಲಿವೆ 200 ರುಪಾಯಿ ನೋಟುಗಳು!

    ಜನರ ನಗದು ಚಲಾವಣೆಯನ್ನು ಸುಲಭವಾಗಿಸಲು 200 ರೂಪಾಯಿಯ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. 200 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

  • ಸ್ಪೂರ್ತಿ

    ಶಿಕ್ಷಕರಿಲ್ಲದ ಈ ಶಾಲೆಯಲ್ಲಿ, ಈ ಐಎಎಸ್ ಅಧಿಕಾರಿ ಮಾಡಿದ್ದೇನು ಗೊತ್ತಾ.?ತಿಳಿಯಲು ಈ ಲೇಖನ ಓದಿ…

    ಅಧಿಕಾರದ ಮದವನ್ನು ತುಂಬಿರುವಂತ ಎಷ್ಟೋ ಜನ ಐಎಎಸ್ ಅದಿಕಾರಿಗಳನ್ನ ಪ್ರಸ್ತುದಿನಗಳಲ್ಲಿ ಕಾಣಬಹುದು. ಆದರೆ ಕೆಲ ಐಎಎಸ್ ಅಧಿಕಾರಿಗಳು ತಮ್ಮ ರಕ್ತದಲ್ಲೇ ಸಮಾಜ ಸೇವೆ ಬೆರೆತು ಬಂದಿದೆ ಏನೋ ಅನ್ನೋ ರೀತಿಯಲ್ಲಿ ಕೆಲಸವನ್ನು ಮಾಡುತ್ತಾರೆ. ಕೆಲ ಐಎಎಸ್ ಅಧಿಕಾರಿಗಳ ಸೇವೆಯನ್ನು ನಾವು ನೋಡಿರುವ ಹಾಗೆ ಸಮಾಜಕ್ಕೆ ಅಥವಾ ಒಂದು ಸಮುದಾಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ನೋಡಿರುತ್ತಿವೆ.

  • ಸುದ್ದಿ

    ನಿವೃತ್ತಿ ವಯಸ್ಸಿನ ಗೊಂದಲಗಳಿಗೊಂದು ತೆರೆ : ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ…..!

    ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 33 ವರ್ಷ ಸೇವೆ ಸಲ್ಲಿಸಿದವರ ಅಥವಾ 60 ವರ್ಷ ತುಂಬಿದವರನ್ನು ಸೇವೆಯಿಂದ ನಿವೃತ್ತಿಗೊಳಿಸುವ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತ ಗೊಂದಲಗಳಿಗೆ ತೆರೆ ಬಿದ್ದಿದೆ. ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹ ಮತ್ತು ವದಂತಿಗಳು ಹರಡಿದ ಬಗ್ಗೆ ಕೇಂದ್ರ ಸರ್ಕಾರ…

  • ವಿಸ್ಮಯ ಜಗತ್ತು

    ಇಲ್ಲಿ ಬುಲೆಟ್ ಗೆ ದೇವಸ್ಥಾನ ಕಟ್ಟಿ ಪೂಜೆ ದಿನನಿತ್ಯ ಪೂಜೆ ಮಾಡ್ತಾರೆ..!ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…

    ನಮ್ಮಲ್ಲಿ ದೇವರಿಗೆ, ಗೋವುಗಳಿಗೆ, ದಸರಾ ಸಂಧರ್ಭದಲ್ಲಿ ವಾಹನಗಳಿಗೂ ಸಹ ನಾವು ಪೂಜೆ ಸಲ್ಲಿಸುತ್ತೇವೆ. ಆದರೆ ವಿಚಿತ್ರ ಎಂದರೆ ಇಲ್ಲಿ ಒಂದು ಬುಲೆಟ್ ಗೆ ಗುಡಿಯನ್ನು ಕಟ್ಟಿ ಪೂಜೆ ಸಲ್ಲಿಸುತ್ತಾರೆ ಎಂದರೆ ನೀವು ನಮ್ಬೋದಿಲ್ಲಾ..  ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ. ಈ ದೇವಾಲಯದಲ್ಲಿರುವ 350 ಸಿಸಿ ಯ ರಾಯಲ್ ಎನ್ ಫೀಲ್ಡ್  ಬುಲೆಟ್ ಬೈಕ್ ಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೈಕ್ ಗೆ ಪೂಜೆ ಸಲ್ಲಿಸಲೂ ಒಂದು ಕಾರಣವಿದೆ. ಅದೇನು…

  • ಜ್ಯೋತಿಷ್ಯ

    ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶುಕ್ರನ ದೆಸೆ ಚೆನ್ನಾಗಿದೆಯೇ…

    ಇಂದು ಶುಕ್ರವಾರ, 09/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ವ್ಯವಹಾರ ವೃದ್ಧಿಗೆ ಹಣ ವಿನಿಯೋಗ ಮಾಡಲು ಸೂಕ್ತ ದಿನ. ಸ್ವಂತ ಉದ್ಯಮಿಗಳಿಗೆ ಉತ್ತಮ ಲಾಭ. ಶ್ರೀದೇವತಾದರ್ಶನ ಭಾಗ್ಯ ತಂದೀತು. ವೈಯಕ್ತಿಕವಾಗಿ ಯಾವುದೇ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ವಿದ್ಯಾರ್ಥಿಗಳಿಗೆ ಪ್ರಗತಿಯ ದಿನ. ಬೆಂಕಿಯ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ ಅಗತ್ಯ. ಅಧಿಕಾರಿಗಳಿಗೆ ಅಭಿವೃದ್ಧಿ ಇರುತ್ತದೆ. ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ವೃಷಭ:- ಉತ್ತಮ ಜನರೊಂದಿಗೆ ಸಂಪರ್ಕ ಒದಗಿ ಬರುತ್ತದೆ. ಆಗಾಗ ಧನಾಗಮನದಿಂದ ಕಾರ್ಯಸಿದ್ಧಿಯಾಗುತ್ತದೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ…

  • ಉಪಯುಕ್ತ ಮಾಹಿತಿ

    ಗೊರಕೆ ಸಮಸ್ಯೆಯಿಂದ ನೀವೂ ಬಳಲುತ್ತಿದ್ದರೆ,ಈ ಕ್ರಮಗಳನ್ನು ಪಾಲಿಸಿ…ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    ಪಕ್ಕದಲ್ಲಿರುವವರ ನಿದ್ದೆ ಹಾಳು ಮಾಡುವ ಸುಲಭ ಉಪಾಯ ಗೊರಕೆ. ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ.ನಿಮ್ಮ ಈ ಗೊರಕೆಗೆ ಕಾರಣಗಳೇನು ಗೊತ್ತೇ? ತೂಕ ನಷ್ಟ ಮತ್ತು ವ್ಯಾಯಾಮ :- ಅತಿಯಾದ ತೂಕ ಅಥವಾ ದೊಡ್ಡ ಕುತ್ತಿಗೆ ಸುತ್ತಳತೆ ಹೊಂದುವ ಕೊಬ್ಬುನ್ನು ಕರಗಿಸುವುದು, ಹಾಗೂ ಪ್ರತಿನಿತ್ಯ ವ್ಯಾಯಾಮ ಪ್ರಾರಂಭಿಸುವುದು, ಇವೆಲ್ಲವೂ ಗಮನಾರ್ಹವಾಗಿ ಅನೇಕ ವ್ಯಕ್ತಿಗಳಲ್ಲಿ ಗೊರಕೆ ಕಡಿಮೆ ಮಾಡಲು ಸಹಕಾರಿಯಾಗುತ್ತವೆ.   ಮಲಗುವ ಸ್ಥಿತಿ ಬದಲಿಸಿ :- ಒಂದು ಬದಿಯಲ್ಲಿ ನಿದ್ರಿಸುವುದನ್ನು…