ಜೀವನಶೈಲಿ

ಬೆಳಗಿನ ತಿಂಡಿ ಬಿಟ್ಟುಬಿಡಿ, ತೂಕ ಇಳಿಸಿಕೊಳ್ಳಿ ! ತಿಳಿಯಲು ಈ ಲೇಖನ ಓದಿ…

470

ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ ಊಟದ ವರೆಗೆ ಏನೂ ತಿನ್ನದೆ ಉಪವಾಸ ವಿದ್ದರೆ ಪ್ರತಿನಿತ್ಯ ಸುಮಾರು 350 ರಷ್ಟು ಕಡಿಮೆ ಕ್ಯಾಲೊರಿ ಆಹಾರ ಸೇವಿಸಬಹುದು ಮತ್ತು ಇದರಿಂದ ದೇಹದ ತೂಕವನ್ನು  ಇಳಿಸಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.

ನಾವು ಸೇವಿಸುವ ಆಹಾರದಲ್ಲಿ ಬೆಳಗಿನ  ಉಪಹಾರ ಅತ್ಯಂತ ಪ್ರಮುಖ  ಎಂಬ ಸಾಮಾನ್ಯ ನಂಬಿಕೆ ನಮ್ಮಲ್ಲಿದೆ. ಆದರೆ ಇಂದಿನ ಜೀವನಕ್ರಮದಲ್ಲಿ ಹಲವು ದೇಶಗಳಲ್ಲಿ ಮೂರರಲ್ಲಿ ಒಬ್ಬರು ಮಕ್ಕಳು ಮತ್ತು ವಯಸ್ಕರು ಬೆಳಗಿನ ಉಪಹಾರ ಸೇವಿಸುವುದಿಲ್ಲ ಎನ್ನುತ್ತಾರೆ ಅಧ್ಯಯನದ ಲೇಖಕ ಡಾ.ಕೀತ್ ಟೋಲ್ಫ್ರೆ.

ಉಪವಾಸ ಮಾಡುವ ಮೂಲಕ ದೇಹದ ತೂಕವನ್ನು ಇಳಿಸುವುದರಿಂದ  ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಇದರಿಂದ ಕಾಲ ಕ್ರಮೇಣ ವ್ಯಕ್ತಿಯು ಸೇವಿಸುವ ಆಹಾರದ ಕ್ಯಾಲೊರಿ ಪ್ರಮಾಣ ಕಡಿಮೆಯಾಗುತ್ತದೆಯಲ್ಲದೆ ಕೊಬ್ಬಿನ ಶೇಖರಣೆಯಲ್ಲಿ ತೊಡಗಿಸಿ ಕೊಂಡಿರುವ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ ಎಂದು ಅಮೆರಿಕಾ ದ ಲೌಬರೂ ಮತ್ತು  ಬೆಡ್ಫೋಡ್ರೇಜೈರ್ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಅಧ್ಯಯನ ತಂಡ 11ರಿಂದ 15 ವರ್ಷದೊಳಗಿನ 4೦ ಹೆಣ್ಣು ಮಕ್ಕಳ ಮೇಲೆ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಭಾಗಿಯಾದವರು ಮೂರು ದಿನಗಳವರೆಗೆ ಬೆಳಗಿನ ಉಪಹಾರ ಸೇವಿಸಿರಲಿಲ್ಲ ಹಗುರವಾಗಿ  ಹಾಲು, ಜ್ಯೂಸ್ ಇತ್ಯಾದಿಗಳನ್ನು ಮಾತ್ರ ಸೇವಿಸಿದ್ದರು. ಆದರೆ ಅವರ ದೈಹಿಕ ಚಟುವಟಿಕೆಗಳಲ್ಲಿ ಯಾವುದೇ ಕುಂಠಿತವಾಗಿರಲಿಲ್ಲ. ಅಲ್ಲದೆ ಬೆಳಗಿನ ಉಪಹಾರವನ್ನು ಬಿಡುವುದರಿಂದ ಇಡೀ ದಿನದಲ್ಲಿ ಸೇವಿಸುವ ಒಟ್ಟಾರೆ ಆಹಾರ ಪ್ರಮಾಣದಲ್ಲಿ 353 ಕ್ಯಾಲರಿಗಳಷ್ಟು  ಕಡಿಮೆಯಾಗುತ್ತಿತ್ತು,  ಇದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ.

ಸಾಮಾನ್ಯವಾಗಿ ಜನರು 115 ಕ್ಯಾಲೊರಿಗಳಷ್ಟು ಬೆಳಗಿನ ಉಪಹಾರದಿಂದ ಪಡೆದರೆ ಮಧ್ಯಾಹ್ನದ ಊಟವೊಂದ ರಿಂದಲೇ 468 ಕ್ಯಾಲೂರಿಗಳಷ್ಟು ಸಿಗುತ್ತದೆ. ಬೆಳೆಗಿನಉಪಹಾರ ಸೇವನೆಯನ್ನು ದೇಹದ ತೂಕ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಯಾಗಿ ಬಳಸಬಹುದು ಎಂದು ಡಾ.ಟೊಲ್ಫ್ರಿ ಹೇಳುತ್ತಾರೆ. ಈ ಅಧ್ಯಯನ ನ್ಯೂಟ್ರಿಶನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಗುಲ ದರ್ಶನ

    ತಲಕಾವೇರಿ ತೀರ್ಥೋದ್ಭವ ಸಂಭ್ರಮ: ಬ್ರಹ್ಮ ಕುಂಡಲದಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕೊಡವರ ಕುಲದೇವತೆ..!

    ಕಾವೇರಿ ಕೊಡವರ ಕುಲದೇವಿ,ಕಾವೇರಿ ಜನ್ಮಸ್ಥಳ ತಲಕಾವೇರಿಯಲ್ಲಿ  ಅರ್ಚಕರ ಮಂತ್ರಘೋಷ ,ಮಂಗಳವಾದ್ಯ  ನಡುವೆ ತಡರಾತ್ರಿ ಸರಿಯಾಗಿ 12 ಗಂಟೆ 57 ನಿಮಿಷಕ್ಕೆ ಕರ್ಕಾಟಕಲಗ್ನ, ರೋಹಿಣಿ ನಕ್ಷತ್ರದಲ್ಲಿ ಘಟಿಸಿದ ಪವಿತ್ರ ತೀರ್ಥೋದ್ಭವವನ್ನು ರಾಜ್ಯ ಮತ್ತು ಹೊರರಾಜ್ಯದಿಂದಬಂದ ನೂರಾರು ಭಕ್ತರು ಕಣ್ತುಂಬಿಕೊಂಡರು. 12:59ಕ್ಕೆ ತೀರ್ಥೋದ್ಭವ ಘಟಿಸಲಿದೆ ಎಂದು ಹೇಳಲಾಗಿತ್ತಾದರೂ 2 ನಿಮಿಷ ಮುನ್ನವೇ ತೀರ್ಥೋದ್ಭವಾಯಿತು. 30 ಕ್ಕೂ ಹೆಚ್ಚು ಅರ್ಚಕರ ಮಂತ್ರಘೋಷ, ಮಂಗಳವಾದ್ಯದ ನಡುವೆ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಈ ವಿಸ್ಮಯಕ್ಕೆ ಅಪಾರ ಭಕ್ತ…

  • ಸುದ್ದಿ

    ನೀರಿಗಾಗಿ ಕಾದು ಕುಳಿತಿದ್ದವರು ನಲ್ಲಿ ತಿರುವಿದ ತಕ್ಷಣ ಬಂತು ರಕ್ತ…ಕಾರಣ?

    ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ. ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ. ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ…

  • ಸಾಧನೆ, ಸ್ಪೂರ್ತಿ

    ಮಂಗಳೂರಿನಿಂದ, ಬೆಂಗಳೂರಿಗೆ ಕೇವಲ 4 ಗಂಟೆ 32 ನಿಮಿಷದಲ್ಲಿ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ.

    ನಲ್ವತ್ತು ದಿನಗಳ ಹಸುಗೂಸನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಅವರು ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ ಆರು ಗಂಟೆಯಲ್ಲಿ ಬೆಂಗಳೂರು ತಲುಪಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ…

  • ಸಿನಿಮಾ

    ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಚಿತ್ರದ ಆಫರ್ ತಿರಸ್ಕರಿಸಿದ ರಿಯಲ್ ಸ್ಟಾರ್?ಈ ಸುದ್ದಿ ನೋಡಿ

    ತಮ್ಮ ಪ್ರಜಾಕೀಯ ಪಕ್ಷದ ಮೂಲಕ ಲೋಕಸಭಾ ಚುನಾವಣಾ ಸಮರಕ್ಕೆ ಸಿದ್ಧರಾಗಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಚಿತ್ರದ ಆಫರ್ ಗೆ ನೋ ಎಂದು ಹೇಳಿದ್ದಾರೆ. ಹೌದು.. ಪ್ರಸ್ತುತ ಪ್ರಜಾಕೀಯದಲ್ಲಿ ಬಿಸಿಯಾಗಿರುವ ನಟ ಉಪೇಂದ್ರ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದು, ಇದೇ ಕಾರಣಕ್ಕೆ ತಮ್ಮದೇ ಚಿತ್ರಗಳನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಜಾಕೀಯದತ್ತ ಗಮನ ಕೇಂದ್ರೀಕರಿಸುವ ನಟ ಉಪೇಂದ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ನೂತನ…

  • Animals, India, National, tourism

    ಇದು ಒಂಟೆಗಳ ಜಾತ್ರೆ !

    ರಂಗು ರಂಗಾದ ನಮ್ಮ ದೇಶದಲ್ಲಿ ನಾನಾ ವಿಧಗಳ ಜಾತ್ರೆ, ಮೇಳಗಳು ಆಯೋಜನೆಗೊಳ್ಳುವುದು ಸಾಮಾನ್ಯ. ಅಷ್ಟೆ ಏಕೆ, ಪ್ರಾಣಿಗಳಿಗೆಂದು ಸಮರ್ಪಿತವಾದ ಉತ್ಸವಗಳೂ ಕೂಡ ನಮ್ಮಲ್ಲಿ ಕಂಡುಬರುತ್ತವೆ. ಇಂದಿನ ಈ ಲೇಖನದಲ್ಲಿ ಒಂಟೆಗಳ ಉತ್ಸವದ ಕುರಿತು ತಿಳಿಯಿರಿ. ಇದೊಂದು ವಿಶಿಷ್ಟ ಉತ್ಸವವಾಗಿದ್ದು ರಾಜಸ್ಥಾನ ರಾಜ್ಯದಲ್ಲಿ ಈ ಮೇಳವು ಕಂಡುಬರುತ್ತದೆ ರಾಜಸ್ತಾನಲ್ಲಿ ಪ್ರತಿವರ್ಷ ಪುಷ್ಕರ್‌ ಮೇಳ ನಡೆಯುತ್ತದೆ. ಈ ಮೇಳವೇ ಒಂಟೆಗಳಿಗಾಗಿ ಸ್ಪರ್ಧೆಯನ್ನು ಇಟ್ಟಿರುವಂತಹದ್ದು. ಈ ಮೇಳವು ನೋಡಲೂ ತುಂಬಾ ಸುಂದರವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸುತ್ತಾರೆ. ಪುಷ್ಕರ್…

  • ಸುದ್ದಿ

    ಪ್ರೀತಿಯೇ ವಿಷವಾಯ್ತ..!ಪ್ರೇಯಸಿ ತಂದುಕೊಟ್ಟ ವಿಷ ಸೇವಿಸಿ ಪ್ರೇಮಿ ಸಾವು….

    ತನ್ನ ಪ್ರಿಯತಮೆಯೇ ನನಗೆ ವಿಷ ಕೊಟ್ಟಳು ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.ನಂಜನಗೂಡಿನ ಕಸುವಿನಹಳ್ಳಿ ಗ್ರಾಮ ನಿವಾಸಿ ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ.ಈತ ಬೆಳವಾಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುವವನಾಗಿದ್ದು ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸಿದ್ದರಾಜು ಬೆಳವಾಡಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು ಆಕೆಯ ಪೋಷಕರು ಈ ಇಬ್ಬರ ಪ್ರೀತಿಗೆ ಒಪ್ಪಿರಲಿಲ್ಲ. ಅಲ್ಲದೆ ಯುವತಿ ಸಹ ಇತ್ತೀಚೆಗೆ ಆತನಿಂದ ದೂರಾಗಿ ಪೋಷಕರು ತೋರೊಸೊದ್ದ ಇನ್ನೊಬ್ಬ…