ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿದೆ.ಈಗ ಗಾದೆ ಏತಕ್ಕೆ ಬಂತು ಅಂತೀರಾ…ವಿಷಯ ಇದೆ.ಅದೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ , ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸಿಗದೇ ಇರೋ ವಿಷಯವೇ ಇಲ್ಲ.
ಇಂತಹ ಗೂಗಲ್ ಕಂಪನಿಯಲ್ಲಿ ಕೆಲಸ ಸಾಕು ಎನ್ನುವುದು ಎಷ್ಟೋ ಜನರ ಕನಸಾಗಿದೆ.ಇದು ಇಂಟರ್ನೆಟ್ ಸಂಬಂಧಿತ ಸೇವೆಗಳನ್ನು ಮತ್ತು ಉತ್ಪನ್ನಗಳನ್ನು ಒದಗಿಸುವ ವಿಶೇಷ ಅಮೆರಿಕನ್ ಬಹುರಾಷ್ಟ್ರೀಯ ನಿಗಮದ ಸಂಸ್ಥೆಯಾಗಿದೆ. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂ ನಲ್ಲಿ ಇದೆ.ಈ ಕಂಪನಿ 88000ಕ್ಕಿಂತ ಹೆಚ್ಚು ಉದ್ಯೋಗಿಗಳು ಇದ್ದಾರೆ.
ಜಗತ್ತಿನಾದ್ಯಂತ ಇರುವ ಈ ಬೃಹತ್ ಕಂಪನಿಯು ಮೇಕೆಗಳನ್ನು ತನ್ನ ಉದೊಗಿಗಳನ್ನಾಗಿ ನೇಮಿಸಿಕೊಂಡಿದೆ.ಇದು ನಿಮಗೆ ಕಾಮಿಡಿ ಅಂತ ಅನ್ನಿಸುತ್ತಿರಬಹುದು.ಆದ್ರೆ ಇದು ನಿಜ. ಗೂಗಲ್ ಕಂಪನಿ ಸುಮಾರು 200 ಮೇಕೆಗಳನ್ನು ತನ್ನ ಕೆಲಸಗಾರರನ್ನಾಗಿ ನೇಮಿಸಿಕೊಂಡಿದೆ, ಸಾಲದೆಂಬಂತೆ ಅವುಗಳಿಗೆ ಸಂಬಳ ಸಮೇತ ಅವುಗಳಿಗೆ ಹೊಟ್ಟೆ ತುಂಬ ಆಹಾರ ನೀಡ್ತಾ ಇದೆ.
ಗೂಗಲ್ ಕಂಪನಿ ಮುಖ್ಯ ಕಚೇರಿಯಲ್ಲಿ ಆಡುಗಳಿವೆ. ಅವುಗಳಿಗೆ ಕಂಪನಿ ಸಂಬಳ ಕೂಡ ನೀಡ್ತಾ ಇದೆ. ಕಚೇರಿ ಮುಂದಿರುವ ಹುಲ್ಲುಗಳನ್ನು ತಿನ್ನುವುದು ಈ ಆಡುಗಳ ಕೆಲಸವಾಗಿದೆ. ವಾರಕ್ಕೊಮ್ಮೆ ಆಡುಗಳನ್ನು ಹುಲ್ಲಿರುವ ಜಾಗಕ್ಕೆ ಬಿಡಲಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಆಡುಗಳು ಅವುಗಳನ್ನು ತಿಂದು ಮುಗಿಸುತ್ತವೆ.
ಗೂಗಲ್ ಕಂಪನಿ ಮುಖ್ಯ ಕಚೇರಿಯ ಮುಂದಿರುವ ಹುಲ್ಲು ಕೀಳಲು, ಗೂಗಲ್ ಯಂತ್ರಗಳನ್ನು ಬಳಸುವುದಿಲ್ಲ. ಇದ್ರಿಂದ ಬರುವ ಧೂಳು ಹಾಗೂ ಶಬ್ದ ಕಚೇರಿಯ ಸಿಬ್ಬಂದಿಗೆ ತೊಂದರೆಯನ್ನುಂಟು ಮಾಡುತ್ತದೆ ಎಂಬ ಕಾರಣಕ್ಕೆ ಗೂಗಲ್ ಯಂತ್ರವನ್ನು ಬಳಸುವುದಿಲ್ಲವಂತೆ. ಇನ್ನೂ ವಿಶೇಷ ಏನಂದ್ರೆ ಹುಲ್ಲು ತಿನ್ನುವ ಕುರಿತು ಆಡುಗಳಿಗೆ ತರಬೇತಿ ಕೂಡ ನೀಡಲಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆತ ಸಾಫ್ಟವೇರ್ ಟೆಕ್ಕಿ. ಒಳ್ಳೆಯ ಪ್ಯಾಕೇಜ್ನ ಸಂಬಳ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಇಬ್ಬರು ಮುದ್ದಾದ ಮಕ್ಕಳ ಸಂಸಾರ. ಸಕಲ ಆಧುನಿಕ ಸೌಲಭ್ಯಗಳಿರುವ ಅಪಾರ್ಟ್ಮೆಂಟ್ನಲ್ಲಿ ಬ್ಯಾಂಕ್ ಸಾಲದಿಂದ ಖರೀದಿಸಿದ ಮೂರು ಬೆಡ್ ರೂಮ್ನ ಐಷಾರಾಮಿ ಫ್ಲ್ಯಾಟ್. ಸದಾ ಚಟುವಟಿಕೆಯಿಂದ, ನಗುವಿನಿಂದ ತುಂಬಿರುತ್ತಿದ್ದ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಆತಂಕ ಕಾಣುತ್ತಿದೆ. ಮಕ್ಕಳ ವಿದ್ಯಾಭ್ಯಾಸ, 30-40 ಲಕ್ಷದಷ್ಟಿರುವ ಗೃಹಸಾಲ ಅವನನ್ನು ಅಣಕಿಸುತ್ತಿವೆ. ಸಹೋದ್ಯೋಗಿಗಳು ಬಿಟ್ಟು ಹೋದ ತಿರುಗುವ ಕುರ್ಚಿಗಳು ಅವನನ್ನು ಬೆವರಿಸುತ್ತವೆ. ತನ್ನ ಕುರ್ಚಿಯೂ ಹೀಗೆ ಬರಿದಾಗಬಹುದೇನೋ ಎನ್ನುವ ಅವ್ಯಕ್ತ ಭಯ ಅವನನ್ನು ಕಾಡಲು ಶುರು ಮಾಡಿದೆ. ಸಂಜೆ ಆಫೀಸು ಮುಗಿಯುವಾಗ ಬರುವ ಇ ಮೇಲ್ ತೆರೆಯುವಾಗ ಕೈ ನಡುಗುತ್ತದೆ. ಹಾಗೆಯೇ ಮುಂಜಾನೆ ಆಫೀಸಿನಲ್ಲಿ ಲಾಗ್ ಇನ್ ಮಾಡುವಾಗ ಎಸಿ ಕ್ಯಾಬಿನ್ನಲ್ಲಿಯೂ ಬೆವರುತ್ತಾನೆ.
ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಐಟಿ ಕಾರಿಡಾರ್ನಲ್ಲಿ ಮೊದಲು ಮೆಟ್ರೋ ಮುಗಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಸಿಎಂ ಮುಂದೆ ತಲೆಯಾಡಿಸಿ ಬಂದಿರೋ ಅಧಿಕಾರಿಗಳು, ಈಗ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರೋ ಸಿಎಂ ಯಡಿಯೂರಪ್ಪ, ನಗರಕ್ಕೆ ಸಂಬಂಧಿಸಿದ ಒಂದೊಂದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸ್ತಿದ್ದಾರೆ. ಇದೇ ರೀತಿ BMRCL ಸಭೆ ನಡೆಸಿದಾಗ ಮೆಟ್ರೋ ಎರಡನೇ ಹಂತದ ಪ್ರಗತಿಗೆ ಸಿಎಂ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ….
ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ. ಮಾತನಾಡಿದ…
ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ ಉತ್ತರ ಕಂಡುಕೊಳ್ಳಬೇಕೆಂಬ ತವಕದಿಂದ ರಾಜ ಮಾರುವೇಷದಲ್ಲಿ ಸಂಚಾರ ಹೊರಟ.
ಮೆಲ್ಬೋರ್ನ್: ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ! ಹೀಗೆಂದು ಮಾನವ ವರ್ತನೆಗಳಲ್ಲಿ ಕಂಪ್ಯೂಟರ್ ಗಳು (Computers in Human Behavior) ಎಂಬ ನಿಯತಕಾಲಿಕೆಯ ಸಂಶೋಧನಾ ವರದಿ ಹೇಳುತ್ತಿದೆ. ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್ಫೋನ್ ನ ನಿರಂತರ ಬಳಕೆ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮಾನಸಿಕ ಆರೋಗ್ಯದ ಮಟ್ಟ ಅತ್ಯುತ್ತಮವಾಗಿಲ್ಲದವರು, ನಕಾರಾತ್ಮಕ ಭಾವನೆಯುಳ್ಳವರು,…
ಲೋಕಸಮರದ ಫಲಿತಾಂಶಕ್ಕೂ ಮುನ್ನ ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ. ಈಗಾಗಲೇ ಆಡಳಿತರೂಢ ಸರ್ಕಾರಕ್ಕೆ ಬಹುಮತವಿಲ್ಲ ವಿಶೇಷ ಅಧಿವೇಶನ ಕರೆಯಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಂ ಕಮಲ್ನಾಥ್ ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಸುಮಾರು 10 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿಯಲ್ಲಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಶಾಸಕರಿಗೆ ಆಫರ್ ಸುರಿಮಳೆಯ ಫೋನ್ ಕರೆಗಳು ಬರುತ್ತಿವೆ. ಬೇಕಾದರೆ ಆ 10 ಶಾಸಕರ ಹೆಸರನ್ನು ಬಹಿರಂಗಗೊಳಿಸಬಲ್ಲೆ ಎಂದು ಕಮಲ್…