ವಿಶೇಷ ಲೇಖನ

ಒಂದು ನಿಮಿಷ ಸಮಯ ಮಾಡಿಕೊಂಡು ಓದಿ, ಅಮ್ಮನ ಬಗ್ಗೆ 2 ಸಾಲುಗಳು…

1469

ಒಂದು ನಿಮಿಷ ಸಮಯ ಮಾಡಿಕೊಂಡು ಓದಿ, ಅಮ್ಮನ ಬಗ್ಗೆ 2 ಸಾಲುಗಳು ಪ್ರತಿ ತಾಯಿಯೂ ತನ್ನ ಹೆಣ್ಣುಮಗುವಿನಲ್ಲಿ ತನ್ನ ಬಾಲ್ಯವನ್ನು ಕಂಡು ಸಂತಸಪಡುವವಳು.

ಹಾಗೆಯೇ ತನಗೆ ಸಿಗದೆ ಇದ್ದ ಸುಖ, ಸೌಲಭ್ಯಗಳು ತನ್ನ ಮಗಳಿಗೆ ಸಿಗಬೇಕು, ಮುಂದೆ ಜೀವನದಲ್ಲಿ ಅವಳಿಗೆ ಯಾವ ರೀತಿಯಲ್ಲೂ
ಕಷ್ಟಗಳೂ ಬರಬಾರದು ಎಂದು ಹೃದಯಪೂರ್ವಕವಾಗಿ ಆಸೆ ಪಡುವ ಒಂದು ಜೀವ ಇದೆ ಈ ಭೂಮಿಯ ಮೇಲೆ ಎಂದರೆ
ಅದು ನಮ್ಮ ನಿಮ್ಮನ್ನೆಲ್ಲಾ ಹೆತ್ತ ತಾಯಿಮಾತ್ರ.

ಅವಳ ಪ್ರೀತಿ, ವಾತ್ಸಲ್ಯಕ್ಕೆ ಸರಿಸಾಟಿ ಯಾರೂಇಲ್ಲ…..ತಾಯಿಯೇ ಮಕ್ಕಳಿಗೆ ಎಲ್ಲಾ…ಇದನ್ನು ನಂಬಿದವರಿಗೆ ಯಾವತ್ತೂ
ಕೆಟ್ಟದಾಗಿಲ್ಲ…ನಾವು ಕಾಣದೆ ಇರೋ ಸ್ವರ್ಗ ಹೇಗಿದೆಯೋ ಗೊತ್ತಿಲ್ಲ ಆದರೆ ನಾವು ಕಾಣುವ  ಅಮ್ಮನ ಮಡಿಲೇ ಸ್ವರ್ಗಕ್ಕಿಂತ ಮಿಗಿಲು,ಅನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ….ಇದನ್ನು ಯಾರೂ ಅಲ್ಲಗೆಳೆಯುವಂತಿಲ್ಲ..

ಅಮ್ಮ

ನಾ ಹುಟ್ಟಿದ ಮೇಲೆ ತಾನೆ ನೀ ನಿನಗಾಗಿ ಬದುಕೋದ ಮರೆತದ್ದು.. ನನ್ನಲ್ಲೆ ನಿನ್ನ ಬದುಕ ಕಾಣತೊಡಗಿದ್ದು ಎಂತಹ ಅನುಬಂದವಿದು ಸೃಷ್ಟಿಕರ್ತನ ನಿಷ್ಕಲ್ಮಶ ಸಂಬಂದವಿದು..

ನಾ ಗರ್ಭದಲ್ಲಿರುವಾಗಲೇ ನನ್ನ ಮೇಲೆ ಕಟ್ಟತೊಡಗಿದ ಕನಸುಗಳನೆಲ್ಲ ಎಲ್ಲರೊಡನೆ ವಿವರಿಸುತ್ತಿದ್ದೆ.. ಅಂದೆ ನಿನ್ನೆಲ್ಲಾ ಕನಸು ನಾನಗತೊಡಗಿದೆ..

ಅತ್ತರೆ ಹಸಿವೆಂದು ಮೊದಲು ಎದೆಹಾಲ ಉಣಿಸಿ.. ನನ್ನ ಖುಶಿಗೆಂದು ಅಪ್ಪನಿಂದ ಏನೆಲ್ಲಾ ಆಟಾಸಾಮಾನ ತರಸಿ.. ನನ್ನ ನಗುವ ನೀ ನೋಡುತ್ತಿದ್ದೆ..

ತುತ್ತು ತಿನ್ನಲು ಹಟತೊಟ್ಟರೆ ಮುತ್ತು ನೀಡುತ, ಅಪ್ಪನನ್ನೇ ಆನೆ ಮಾಡಿ ನನ್ನ ಅಂಬಾರಿಯಂತೆ ಕೂರಿಸಿ ಏನೆಲ್ಲಾ ಆಟ ಆಡಿಸಿ ಚಂದಮಾಮನ ಕೊಡಿಸೋ ಆಸೆ ತೋರಿಸಿ ನನ್ನ ಕಿಲ ಕಿಲ ನಗುವಲಿ ಆ ನಗುವ ನಡುವಲಿ ತುತ್ತು ತಿನ್ನಿಸಿ ಏನೆಲ್ಲಾ ಸಂತಸವ ಕಾಣುತ್ತಿದ್ದೆ..

ನೀನು ನಿನಗೋಸ್ಕರ ಅಂದಿನಿಂದ ಖುಷಿಪಟ್ಟ ದಿನ ನಾ ನೋಡಲೇ ಇಲ್ಲವಲ್ಲ ಕಾರಣ ನಿನಗೆ ನಾನೇ ಎಲ್ಲ ಅಲ್ಲ.. ನನ್ನ ಕಣ್ಣಲೊಂದು ಹನಿ ಬಿದ್ದರೆ ಅಂದು ಮರುಗಿದವಳು ನೀನೆ ಇಂದಿಗೂ ಎಲ್ಲಿದ್ದರು ಕನಳುವಳು ನೀನೆ.. ನಿನ್ನ ಋಣ ಹೇಗೆ ತೀರಿಸಲಿ ಮರು ಜನ್ಮದಲ್ಲಾದರೂ ನನಗೆ ಕರುಣಿಸು ನಿನ್ನ ಸ್ಥಾನವ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ