ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾರ್ಬಿ ಡಾಲ್ ಅನ್ನು ಎಲ್ರೂ ಇಷ್ಟಪಡ್ತಾರೆ. ಕೆಲವು ಯುವತಿಯರು ಬಾರ್ಬಿಯಂತೆ ಸ್ಲಿಮ್ & ಬ್ಯೂಟಿಫುಲ್ ಆಗಿ ಕಾಣಲು ಸರ್ಕಸ್ ಮಾಡ್ತಾರೆ. ಇದಕ್ಕಾಗಿ ಚಿತ್ರ ವಿಚಿತ್ರ ಕಾಸ್ಮೆಟಿಕ್ ಚಿಕಿತ್ಸೆ ತೆಗೆದುಕೊಳ್ತಾರೆ.ಜೆಕ್ ರಿಪಬ್ಲಿಕ್ ದೇಶದ ಯುವತಿಯೊಬ್ಬಳು ಬಾರ್ಬಿಯಂತೆ ಕಾಣಲು ತಿಂಗಳಿಗೆ ಬರೋಬ್ಬರಿ ಸಾವಿರ ಪೌಂಡ್(90 ಸಾವಿರ ರೂ.) ಖರ್ಚು ಮಾಡಿ ಸುದ್ದಿಯಾಗಿದ್ದಾಳೆ.
ಪೆರುಗ್ವೆಯ ಯುವತಿಯೊಬ್ಬಳು ಬಾರ್ಬಿಯಂತೆ ಕಾಣಲು ತಿಂಗಳಿಗೆ 1000 ಪೌಂಡ್ ಖರ್ಚು ಮಾಡ್ತಿದ್ದಾಳೆ. ಗೇಬ್ರಿಯೆಲಾ ಜಿರಾಕೊವಾಗೆ 16 ವರ್ಷದವಳಿದ್ದಾಗಿನಿಂದ್ಲೇ ಬಾರ್ಬಿ ಹುಚ್ಚು ಶುರುವಾಗಿತ್ತು. ಇದಕ್ಕಾಗಿ ಆಕೆ ಉದ್ದನೆಯ ಕೃತಕ ಕೂದಲು, ಬಾರ್ಬಿಯಂತಹ ಕಣ್ರೆಪ್ಪೆ, ತುಟಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.
ಗೇಬ್ರಿಯೆಲಾಗೆ ಈಗ 18 ವರ್ಷವಾಗಿದ್ದು ಆಕೆಯ ಹತ್ತಿರ 300 ಬಾರ್ಬಿಗಳಿವೆ. ಅಷ್ಟೇ ಅಲ್ಲದೇ ಬಾರ್ಬಿಯಂತೆ ಕಾಣಲು ತನ್ನ ಸ್ತನವನ್ನು ಕೂಡ ಹೆಚ್ಚಿಸಿಕೊಂಡಿದ್ದಾಳೆ. ಬಾರ್ಬಿಯಂತೆ ಸೌಂದರ್ಯ ಪಡೆಯಲು ಆಕೆ ಮತ್ತಷ್ಟು ಸೌಂದರ್ಯವರ್ಧಕ ಶಸ್ತಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾಳೆ. ಈ ಶಸ್ತ್ರಚಿಕಿತ್ಸೆಯಲ್ಲಿ ಆಕೆಗೆ ಬಟ್ ಇಂಪ್ಲಾಂಟ್ಸ್, ರಿಬ್ ರಿಮೂವಲ್ಸ್ ಹಾಗೂ ಸ್ತನ ಹೆಚ್ಚಿಸಿಕೊಳ್ಳುವಂತೆ ಮಾಡಲಾಗುತ್ತದೆ. ಈ ಎಲ್ಲ ಶಸ್ತ್ರಚಿಕಿತ್ಸೆಯಿಂದ ಜೀವಂತವಾದ ಬಾರ್ಬಿ ಡಾಲ್ ನಂತೆ ಗೇಬ್ರಿಯೆಲಾ ಆಗಲಿದ್ದಾಳೆ.
ಬೇರೆ ಜೀವಂತ ಬಾರ್ಬಿ ಡಾಲ್ ಹಾಗೂ ನನ್ನ ಹತ್ತಿರ ಇರುವ ಬಾರ್ಬಿ ಡಾಲ್ ನೋಡಿ ಈ ರೀತಿ ಶಸ್ತ್ರಚಿಕಿತ್ಸೆ ಮಾಡಕೊಳ್ಳಲು ನನಗೆ ಸ್ಪೂರ್ತಿ ಆಯ್ತು. ನಾನು ಚಿಕ್ಕವಳು ಆಗಿದ್ದಾಗಿನಿಂದ ನನ್ನ ಹತ್ತಿರ ಸಾಕಷ್ಟು ಬಾರ್ಬಿ ಡಾಲ್ಗಳಿವೆ. ನಂತರ ನಾನು ನಿಜವಾದ ಬಾರ್ಬಿ ಡಾಲ್ ನನ್ನು ನೋಡಿದೆ. ಆಗ ಇದು ನನಗಾಗಿಯೇ ಇದೆ ಎಂದುಕೊಂಡೆ. ನನಗೆ ನೈಸರ್ಗಿಕ ಲುಕ್ನಲ್ಲಿ ಯಾವುದೇ ನಂಬಿಕೆ ಇಲ್ಲ. ನೈಸರ್ಗಿಕ ಸೌಂದರ್ಯ ಈಗ ಇರುವುದಿಲ್ಲ ಎಂದು ಹೇಳಿದ್ದಾಳೆ.
ಪ್ರತಿದಿನ ಬಾರ್ಬಿಯಂತೆ ಮೇಕಪ್ ಮಾಡಿಕೊಳ್ಳಲು ಗೇಬ್ರಿಯೆಲಾಗೆ 3.5 ಗಂಟೆಗಳು ಬೇಕಾಗುತ್ತವೆ. ತನ್ನ ಇಮೇಜ್ ಕಾಪಾಡಿಕೊಳ್ಳಲು ಫುಲ್ ಮೇಕಪ್ ನಲ್ಲಿ ಇರುವುದು ಅನಿವಾರ್ಯ ಎನ್ನುತ್ತಾಳೆ. ಗೇಬ್ರಿಯಾಲಾಳ ತಾಯಿ ಕೂಡ ಇದಕ್ಕೆ ಸಪೋರ್ಟ್ ಮಾಡ್ತಿದ್ದಾಳಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿದಿನ ನಾವು ಯಾವುದಾದರೊಂದು ಪ್ರಯೋಗಳನ್ನು ಮಾಡುತ್ತಿರುತ್ತಾರೆ ವಿಧವಿಧವಾದ ವಸ್ತುಗಳ ಮೇಲೆ ಪ್ರಯೋಗಗಳನ್ನು ಮಾಡುತ್ತಾರೆ. ಕೆಲವರು ಮನುಷ್ಯರ ಮೇಲೆ ಪ್ರಯೋಗ ಮಾಡಿದರೆ ಇನ್ನು ಕೆಲವರು ಮನುಷ್ಯನರ ಆಲೋಚನೆಗಳ ಮೇಲೆ ಪ್ರಯೋಗ ಮಾಡುತ್ತಾರೆ. ಪ್ರಯೋಗ ಮಾಡುವ ಕೆಲವರು ವಿಚಿತ್ರವಾದ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ರೀತಿಯ ವಿಚಿತ್ರ ಪ್ರಯೋಗಗಳಲ್ಲಿ ಒಂದು ನಾವು ತಿಳಿಸಿಕೊಡುತ್ತೇವೆ ನೋಡಿ. ಒಬ್ಬ ವ್ಯಕ್ತಿಗೆ ಪ್ರಯೋಗಗಳ ಮೇಲೆ ಅವುಗಳನ್ನು ಮಾಡುವುದರ ಮೇಲೆ ತುಂಬಾ ಹುಚ್ಚು ಆಸಕ್ತಿ ಹುಚ್ಚು ಎಷ್ಟರ ಮಟ್ಟಿಗೆ ಇದೆ ಅಂದರೆ ಕೋಳಿ ಮೊಟ್ಟೆಯಲ್ಲಿ ಮನುಷ್ಯರನ್ನು ಹುಟ್ಟಿಸಬೇಕು…
ಇಂದು ಅಂಬರೀಶ್ ಅವರ 68ನೇ ಜನ್ಮದಿನವಾಗಿದ್ದು, ಈ ಹಿಂದೆ ಅವರ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅಂಬಿ ನಿಧನದ ನಂತರ ಅಭಿಮಾನಿಗಳು ಅವರ ಸಮಾಧಿ ಸ್ಥಳಕ್ಕೆ ತೆರಳಿ ಜನ್ಮದಿನವನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಲಾಕ್ಡೌನ್ ಕಾರಣದಿಂದ ಅದು ಸಾಧ್ಯವಾಗಿಲ್ಲ. ಸುಮಲತಾ ಅವರು ಟ್ವೀಟ್ ಮಾಡುವ ಮೂಲಕ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. “ಅಂಬರೀಶ್ ಅವರು ಇಂದು 68ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ವಿಧಿ…
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕಾಂಗ್ರೆಸ್ ಮೂವರು ನಾಯಕರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕೈ ಹಿರಿಯ ನಾಯಕ ಸಿದ್ದಾರಾಮಯ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಕೃಷ್ಣ ಬೈರೇಗೌಡ ಕೆಕೆ ಗೆಸ್ಟ್ ಹೌಸ್ ನಿಂದ ಒಂದೇ ಕಾರಿನಲ್ಲಿ ತೆರಳಿದ್ದಾರೆ. ಸುಪ್ರೀಂಕೋರ್ಟ್ ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ತೀರ್ಪನ್ನು ಪ್ರಕಟ ಮಾಡಿದೆ. ವಿಶ್ವಾಸಮತದ ವೇಳೆ ಅತೃಪ್ತ ಶಾಸಕರು ಹಾಜರಾಗಬಹುದು ಅಥವಾ ಹಾಜರಾಗದೇ ಇರಬಹುದು ಎಂದು ತೀರ್ಪಿತ್ತಿದ್ದು, ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದೆ. ವಿಶ್ವಾಸ ಮತ ಯಾಚನೆ ಮಾಡಲು ಸಿಎಂ ಕುಮಾರಸ್ವಾಮಿ ನಿರ್ಧಾರ…
ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್ಸ್ಕ್ರೀನ್ನಲ್ಲಿ ಹೊಸ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
ತಮ್ಮನ್ನು ಹೆತ್ತು ಹೊತ್ತು ಬೆಳೆಸಿದವರನ್ನು ನಿರ್ಲಕ್ಷಿಸುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದರ ಪರಿಣಾಮ ವಯೋವೃದ್ಧರು ತಮ್ಮ ಜೀವನ ಸಂಧ್ಯಾಕಾಲದಲ್ಲಿ ಅಸಹಾಯಕರಂತೆ ಬದುಕಬೇಕಾಗಿದೆ. ಇದೀಗ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಇರುವ ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೆಲವೊಂದು ತಿದ್ದುಪಡಿಗಳನ್ನು ತರಲಾಗಿದ್ದು. ಇದರ ಜೊತೆಗೆ ಹೆತ್ತವರನ್ನು ನಿರ್ಲಕ್ಷಿಸುವವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳವರೆಗೆ ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ….
ಶಾಲಾ ಬಾಲಕನೊಬ್ಬ ಎಂಟು ಡಾಲರ್ ಮೌಲ್ಯದ ಊಟ ಮಾಡಿ, ಬಳಿಕ ಹಣ ಪಾವತಿಸಲು ಸಾಧ್ಯವಾಗಿಲ್ಲವೆಂದು ಸರ್ವ್ ಮಾಡಿದ ಲಂಚ್ ಲೇಡಿಯನ್ನು ವಜಾಗೊಳಿಸಿರುವ ಘಟನೆ ನಡೆದಿದೆ. ಈ ಘಟನೆ ನ್ಯೂ ಹ್ಯಾಮ್ಶೈರ್ ಭಾಗದ ಮಸ್ಕೋಮಾ ವ್ಯಾಲಿಯಲ್ಲಿರುವ ಶಾಲಾ ಭಾಗದಲ್ಲಿ ನಡೆದಿದೆ. ಬೋನಿ ಕಿಂಬಲ್ ಎನ್ನುವ ಲಂಚ್ ಲೇಡಿ, ಬಾಲಕ ಕೇಳಿರುವ ಆಹಾರ ಒದಗಿಸಿದ್ದಾಳೆ. ಆದರೆ ತಿಂದ ಬಳಿಕ ಪಾವತಿಸಲು ಬಾಲಕನ ಬಳಿ ಹಣವಿಲ್ಲ. ಆದ್ದರಿಂದ ಹಣವಿಲ್ಲದ ಬಾಲಕನಿಗೆ ಆಹಾರ ನೀಡಿದ್ದಕ್ಕೆ ಆಕೆಯನ್ನು ವಜಾಗೊಳಿಸಲಾಗಿದೆ. ಈ ವಿಷಯ ಹರಡುತ್ತಿದ್ದಂತೆ ವಿದ್ಯಾರ್ಥಿಗಳು…