ವಿಚಿತ್ರ ಆದರೂ ಸತ್ಯ

80 ಲಕ್ಷ ವರ್ಷ ಹಿಂದಿನ ಡೈನೋಸಾರ್ ಯುಗದ ತಿಮಿಂಗಿಲ ಪತ್ತೆ ..!ತಿಳಿಯಲು ಈ ಲೇಖನ ಓದಿ …

541

ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ. ಈ ಜೀವಂತ ಪಳೆಯುಳಿಕೆ ಟೈರನ್ನೋಸರಸ್ ರೆಕ್ಸ್ ಹಾಗೂ ಟ್ರೈಸೆರಟಾಪ್ಸ್ ಇದ್ದಂತಹ ಕಾಲದ್ದಾಗಿರಬೇಕು ಹಾಗೂ 80 ಲಕ್ಷ ವರ್ಷ ಹಳೆಯದ್ದಾಗಿರಬೇಕೆಂದು ಅಂದಾಜಿಸಲಾಗಿದೆ.

ಯುರೋಪಿಯನ್ ಯೂನಿಯನ್ ಪ್ರಾಜೆಕ್ಟ್ ಸಂಶೋಧಕರು ಈ ಹಾವಿನಂತಿರುವ ಗಂಡು ತಿಮಿಂಗಿಲವನ್ನು ಅಲ್ಗಾರ್ವೇ ತೀರದಲ್ಲಿ ಈ ಬೇಸಿಗೆಯಲ್ಲಿ ಪತ್ತೆ ಹಚ್ಚಿದ್ದರು. ಈ ಜೀವಿ ಉದ್ದ, ಸಪೂರವಾಗಿದ್ದು ಹಾವಿನಂತಹ ದೇಹಾಕೃತಿ ಹೊಂದಿದೆ ಹಾಗೂ 1.5 ಮೀಟರ್ ಉದ್ದವಿದೆ. ಈ ಜೀವಿಯನ್ನು ‘ಖ್ಲಾಮಿಡೊಸೆಲಖಸ್ ಎಂಗುನಿಯಸ್’ ಎಂದು ಹೆಸರಿಸಲಾಗಿದ್ದು ಅದರ 300 ಹಲ್ಲುಗಳು 25 ಸಾಲುಗಳಲ್ಲಿ ಫ್ರಿಲ್ ಮಾದರಿ ಜೋಡಿಸಲ್ಪಟ್ಟಿವೆ. ಈ ತಿಮಿಂಗಿಲಕ್ಕೆ ಆರು ಜತೆ ಗಿಲ್ ಅಥವಾ ಶ್ವಾಸಾಂಗವಿದ್ದು ಅದರ ಅಂಚುಗಳು ನೆರಿಗೆಯಾಕಾರದಲ್ಲಿವೆ. ಸಾಗರ ತಳದಲ್ಲಿ ಸಾಕಷ್ಟು ಪೋಷಕಾಂಶಗಳು ದೊರೆಯದೆ ಈ ಜೀವಿ ಬೆಳೆದಿಲ್ಲವೆನ್ನಲಾಗಿದೆ.

ಪೋರ್ಚುಗೀಸ್ ಇನ್‍ಸ್ಟಿಟ್ಯೂಟ್ ಫಾರ್ ದಿ ಸೀ ಎಂಡ್ ಎಟ್ಮಾಸ್ಫಿಯರ್ ಈ ಜೀವಿಯನ್ನು `ಲಿವಿಂಗ್ ಫಾಸ್ಸಿಲ್’ ಎಂಉ ಬಣ್ಣಿಸಿದೆ. ಆಸ್ಟ್ರೇಲಿಯಾ, ಜಪಾನ್ ಮತ್ತು ನ್ಯೂಜಿಲೆಂಡಿನಲ್ಲಿ ಇತ್ತೀಚೆಗೆ ಪತ್ತೆ ಹಚ್ಚಲಾದ ತಿಮಿಂಗಿಲಗಳ ಪಟ್ಟಿಗೆ ಇದು ಸೇರಿದೆ.

ಈ ಜೀವಿ ಸಾಮಾನ್ಯವಾಗಿ ಸಾಗರ ತಳದಲ್ಲಿ 390ರಿಂದ 200 ಅಡಿಯಷ್ಟು ಕೆಳಗಿರುವುದರಿಂದ ಅದನ್ನು 19ನೇ ಶತಮಾನಕ್ಕಿಂತ ಮೊದಲು ಪತ್ತೆ ಹಚ್ಚಲಾಗಿಲ್ಲ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ನೂರಾರು ಎಕರೆ ಬೆಳೆ ನಾಶ…!

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಹಂತದ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾಳಾಗಿದೆ. ರಾಯಚೂರಿನ ಗೋನಾಳ ಬಳಿ ನಿರ್ಮಾಣ ಹಂತದಲ್ಲಿರುವ ನಾರಾಯಣಪುರ ಬಲದಂಡೆ ಕಾಲುವೆಗೆ ನೀರನ್ನು ಹರಿಸಿರುವುದರಿಂದ ಹತ್ತಿ, ತೊಗರಿ ಸೇರಿ ಲಕ್ಷಾಂತರ ರೂಪಾಯಿ ಬೆಳೆ ಹಾಳಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ 126 ಕಿ.ಮೀ ನಿಂದ 186 ಕಿ.ಮೀ ವರೆಗಿನ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಇನ್ನೂ ನಡೆದಿದೆ. ಅಧಿಕಾರಿಗಳು ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ…

  • ವಿಚಿತ್ರ ಆದರೂ ಸತ್ಯ

    ಹೆಂಡ್ತಿ ಮಾತು ಕೇಳಿ, ಇಲ್ಲಂದ್ರೆ ನಿಮಗೆ, ನಿಮ್ಮ ಗಡ್ಡಕ್ಕೆ ಅನಾಹುತ ತಪ್ಪಿದ್ದಲ್ಲ !!!

    ಇದು ನಿಮಗೆ ತಮಾಷೆ ಅನ್ನಿಸಬಹುದು, ಏನಪ್ಪಾ ಆ ತಮಾಷೆ ಅಂತಿರಾ. ಹೌದು, ಉತ್ತರಪ್ರದೇಶದ ಅಲಿಘಡ್ ಎಂಬಲ್ಲಿ ಈ ತಮಾಷೆ ನಡೆದಿದೆ. ಗಡ್ಡ ಶೇವ್ ಮಾಡಲು ನಿರಾಕರಿಸಿದ ಕಾರಣಕ್ಕೆ

  • ಆಧ್ಯಾತ್ಮ, ವಿಜ್ಞಾನ

    ವ್ಯಾಸ ಮಹರ್ಷಿಗಳು ಆ ಕಾಲದಲ್ಲೇ ಹೇಳಿದ್ದನ್ನು, ಕಂಡುಹಿಡಿಯುತ್ತಿರುವ ವಿಜ್ಞಾನಿಗಳು..!ನಿಜ..!ತಿಳಿಯಲು ಈ ಲೇಖನ ಓದಿ…

    ವಿಜ್ಞಾನಿಗಳು ಆಧುನಿಕ ಉಪಕರಣಗಳಿಂದ ಕಂಡುಹಿಡಿಯುತ್ತಿರುವ ಎಷ್ಟೋ ಸಂಶೋಧನೆಗಳನ್ನು, ನಮ್ಮ ಋಷಿ ಮುನಿಗಳು ಆಗಿನ ಕಾಲದಲ್ಲೇ ಕಂಡುಹಿಡಿದಿದ್ದರು ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ.

  • ಸಿನಿಮಾ

    ಮುಂಬೈನ ರಸ್ತೆ ರಸ್ತೆಗಳಲ್ಲಿ ಕನ್ನಡದ KGF ಹವಾ..!

    ಈಗ ಕರ್ನಾಟಕ ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಕೆಜಿಎಫ್ ಸಿನಿಮಾದ್ದೇ ಸೌಂಡ್. ಇದೀಗ ಮುಂಬೈನಲ್ಲೂ ರಾಕಿ ಭಾಯ್ ಹವಾ ಶುರುವಾಗಿದೆ. ಕೆಜಿಎಫ್ ಹಿಂದಿ ಅವತರಣಿಕೆ ಸಿನಿಮಾ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಹಿಂದಿ ಪ್ರಮೋಷನ್ ಕೂಡ ಭರದಿಂದ ಸಾಗುತ್ತಿದ್ದು, ಮುಂಬೈನ ಪ್ರಮುಖ ಸ್ಥಳಗಳಲ್ಲಿ ಯಶ್, ಪೋಸ್ಟರ್ಸ್ ಗಳು ರಾರಾಜಿಸುತ್ತಿವೆ. ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರಕ್ಕಾಗಿ ರಿಕ್ರಿಯೇಟ್…

  • ಕರ್ನಾಟಕ

    ಪೆಟ್ರೋಲ್ ಜಿಎಸ್ಟಿ ವ್ಯಾಪ್ತಿಗೆ ಬಂದ್ರೆ, 1ಲೀಟರ್ ಬೆಲೆ ಇಷ್ಟಾಗಬಹುದು!ಮಾಹಿತಿಗಾಗಿ ಈ ಲೇಖನಿ ಓದಿ…

    ಪೆಟ್ರೋಲ್ ಬೆಲೆ 2014ರ ನಂತರ ಭಾರೀ ಏರಿಕೆಯಾಗಿದೆ. ಜುಲೈ ತಿಂಗಳಿನಿಂದ ದೇಶದಾದ್ಯಂತ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ಗಳನ್ನು ತಂದರೆ ಇವುಗಳ ಬೆಲೆ ಅರ್ಧದಷ್ಟು ಅಗ್ಗವಾಗಲಿದೆ ಎಂದು ದತ್ತಾಂಶಗಳನ್ನು ವಿಶ್ಲೇಷಿಸುವ ಫ್ಯಾಕ್ಟಲಿಡಾಟ್‌ಇನ್‌ (Factly.in) ಅಂತರ್ಜಾಲ ತಾಣವು ಅಭಿಪ್ರಾಯಪಟ್ಟಿದೆ.

  • ಸುದ್ದಿ

    ಮಳೆ ಆತಂಕದಲ್ಲಿರುವ ಕೊಡಗಿನ ಜನತೆಗೆ ನೋಟಿಸ್ ಶಾಕ್ ನೀಡಿದ ನಗರಸಭೆ….!

    ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಕಳೆದ ಬಾರಿ ಸುರಿದ ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿತ್ತು. ಪರಿಣಾಮ ಈಗ ಸಣ್ಣದಾಗಿ ಮಳೆ ಸುರಿದ್ರೂ ಜನರು ಆತಂಕಪಡುತ್ತಿದ್ದಾರೆ. ಇದೇ 20ರಿಂದ ಪುನಃ ನಿರಂತರ ಮಳೆ ಬೀಳುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳ ಜನರಿಗೆ ಮಡಿಕೇರಿ ನಗರಸಭೆ ನೋಟಿಸ್ ನೀಡಿದೆ. ಇದು ಜನರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ. ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಇಲ್ಲದಿದ್ದರೂ ಶಾಂತಾವಾಗಿಯೇ…