ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಂತೂ ಜಿಮ್’ಗೆ ಹೋಗಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸುವುದು ಸಾಮಾನ್ಯ. ಇದರಲ್ಲಿ 6 ಪ್ಯಾಕ್ ,8 ಪ್ಯಾಕ್ ಹೀಗೆ ಏನೇನೋ ಇದೆ. ಈ ವಿಷಯ ಯಾಕೆ ಈಗ ಅಂತೀರಾ! ವಿಷಯ ಇದೆ. ಏನು ಗೊತ್ತಾ? ಏಳು ವರ್ಷದ ಪುಟ್ಟ ಬಾಲಕನೊಬ್ಬ ತನನ ಚಿಕ್ಕ ವಯಸ್ಸಿನಲ್ಲೇ ತನ್ನ ದೇಹವನ್ನು 8 ಪ್ಯಾಕ್ ಮಾಡಿದ್ದಾನೆ.
ಇದೇನಪ್ಪ ಏಳು ವರ್ಷದ ಪೋರ 8 ಪ್ಯಾಕ್ ಮಾಡೋದು ಅಂದ್ರೆ ಏನು ಸುಮ್ನೆ ತಮಾಷೆ ವಿಚಾರ ಅಲ್ಲ ಆದ್ರೂ ಈ ಪೋರ ಇಂತ ದಾಖಲೆ ಮಾಡಿ ವಿಶ್ವದ ಗಮನ ಸೆಳೆದ ಪುಟ್ಟ ಪೋರ ಯಾರು ಅಂತೀರಾ ಇಲ್ಲಿದೆ ನೋಡಿ.
ಹೌದು ನಿಜಾವಾಗಿ ಅಶ್ಚರ್ಯ ಮೂಡಿಸುವಂತಹದ್ದು, ಏಳು ವರ್ಷದ ಚೀನಿ ಹುಡುಗ ತನ್ನ ದೇಹ ಸ್ವರೂಪ ಮತ್ತು ಎಂಟು-ಪ್ಯಾಕ ಗಳಿಸಿ ಎಲ್ಲರ ಗಮನ ಎಳೆದು ಸಮಾಜಿಕ ಜಾಲತಾಣಗಳಲ್ಲಿ ಹಿರೋ ಆಗಿದ್ದಾನೆ.
ಈ ಬಾಲಕನ 8 ಪ್ಯಾಕ್ ಮಾಡಿದ್ದು ಹೇಗೆ ಗೊತ್ತಾ ?
ಈ ಬಾಲಕ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್ಝೌ ನಿವಾಸಿಯಾಗಿದ್ದಾನೆ. ವ್ಯಾಯಾಮಶಾಲೆಯಲ್ಲಿ 2 ವರ್ಷಗಳವರೆಗೆ ಜಿಮ್ನಾಸ್ಟಿಕ್ ತರಬೇತಿಯನ್ನು ಪಡೆದಿದ್ದಾನೆ. ಈ ಬಾಲಕನ ಹೆಸರು ಚೆನ್ ಯಿ ಆಗಿದೆ.
ಒಂದು ಖಾಸಗಿ ಚಾನಲ್ ವರದಿಯ ಪ್ರಕಾರ, ಚೆನ್ ಯಿ ಅವರ ಚಿತ್ರಗಳನ್ನು ಜೂಲೈ 2 ರಂದು ಜಿಮ್ನಾಸ್ಟಿಕ್ ಆಟದ ಸಂದರ್ಭದಲ್ಲಿ ಅವರ ದೈನಂದಿನ ಬಟ್ಟೆಗೆ ಬದಲಾಗುತ್ತಿರುವಾಗ ತೆಗೆದಿದ್ದು ಎಂದು ವರದಿಯಾಗಿದೆ.
ಇವನ 8 ಪ್ಯಾಕ್ ದೇಹವನ್ನು ನೋಡಿದ ಜನರು ಅಚ್ಚರಿಗೊಂದಿದ್ದಾರೆ. ಯಾಕೆಂದ್ರೆ 7 ವರ್ಷದ ಹುಡುಗರು ಆಟ ಪಾಟಗಳಲ್ಲಿ ಕಾಲ ಕಳೆಯುವುದು ಹೆಚ್ಚು. ಹಾಗಾಗಿ ಈ ಪುಟ್ಟ ಬಾಲಕನ ದೇಹವನ್ನು ಹುರಿಗಳಿಸಿರುವ ಸಾಧನೆ ಅಚ್ಚರಿ ತರವಂತದ್ದೆ ಆಗಿದೆ.
ಈಗ ಈ ಪುಟ್ಟ ಬಾಲಕನ ಸಾಧನೆಯನ್ನು ಮೆಚ್ಚಿ ‘ultimate muscle boy’ ಎಂಬ ಬಿರುದನ್ನು ಕೊಟ್ಟಿದ್ದಾರೆ.
ಪದಕ ವೀರ ಈ ಬಾಲಕ!
ಕೆಲವೊಂದು ವರದಿಗಳ ಪ್ರಕಾರ, 19 ನೇ ಹ್ಯಾಂಗ್ಝೌ ಸಿಟಿ ಸ್ಪೋರ್ಟ್ಸ್ ಗೇಮ್ಸ್ ನಲ್ಲಿ ಆರು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿ ಪದಕವನ್ನು ಒಳಗೊಂಡಂತೆ ಎಲ್ಲ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಎಂದಾದರೂ ಚೆಕ್ ಬೌನ್ಸ್ ಆದ ಸಂದರ್ಭವನ್ನು ಎದುರಿಸಿದ್ದೀರಾ? ಇದು ಮುಜುಗರದ ವಿಚಾರ ಮಾತ್ರವಲ್ಲ, ನಿಮ್ಮ ಹಣಕಾಸಿನ ಅರ್ಹತೆ ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರವೂ ಹೌದು. ನಾನಾ ಕಾರಣಗಳಿಗೋಸ್ಕರ ಚೆಕ್ ಬೌನ್ಸ್ ಆಗಬಹುದು. ಹಾಗಂತ ಇವುಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮೊದಲು ಚೆಕ್ ಬೌನ್ಸ್ ಆಗಲು ಮುಖ್ಯ ಕಾರಣಗಳೇನೆಂದು ತಿಳಿಯೋಣ. ನೀವು ಬರೆದ ಅಥವಾ ಪಡೆದ ಚೆಕ್ ಹಿಂತಿರುಗಿತು ಎಂದರೆ ಬ್ಯಾಂಕ್ ಅದನ್ನು ಮಾನ್ಯಗೊಳಿಸಿಲ್ಲ ಎಂದರ್ಥ. ಚೆಕ್ ಬೌನ್ಸ್ ಆಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಕೆಲವು ನೀವು ಬರೆದ ಅಥವಾ ಪಡೆದ…
ಹೈದರಾಬಾದ್, ಆಗಸ್ಟ್ 14: ತೆಲಂಗಾಣದಲ್ಲಿ ಮಧ್ಯಂತರ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೂಚಿಸಿದ್ದಾರೆ. ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಒಟ್ಟು 27 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮುಖ್ಯ ಕಾರ್ಯದರ್ಶಿ ಎಸ್ಕೆ ಜೋಶಿ ಅವರಿಗೆ ವರದಿ ನೀಡುವಂತೆ ತಿಳಿಸಿದ್ದಾರೆ. ಒಟ್ಟು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿಮೂರು ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ.ತೆಲಂಗಾಣ ರಾಜ್ಯದ ಮಧ್ಯಂತರ ಪರೀಕ್ಷಾ ಮಂಡಳಿ(TSBIE)ಯು ಏ. 18ರಂದು ಫಲಿತಾಂಶವನ್ನುಪ್ರಕಟಿಸಿತ್ತು. ಅಚ್ಚರಿಯೆಂದರೆ ಈ ವೇಳೆ ಸಾವಿರಾರು…
1. ಕಬ್ಬಿನ ಹಾಲು ದೇಹಕ್ಕೆ ಶಕ್ತಿ ತುಂಬುವುದರ ಜತೆಗೆ ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಸಹಕಾರಿ 2. ಕಬ್ಬಿನ ಹಾಲು ಕುಡಿದರೆ ನಿದ್ದೆ ಚೆನ್ನಾಗಿ ಬರುವುದು. ತಾಜಾ ಕಬ್ಬಿನ ರಸವನ್ನು ನಿಯಮಿತವಾಗಿ ಸೇವಿಸಿದರೆ ಇನ್ಸೊಮ್ನಿಯ(ನಿದ್ರೆ ಹೀನತೆ) ಸಮಸ್ಯೆಯೂ ದೂರವಾಗುತ್ತದೆ. 3. ತೂಕ ಕಡಿಮೆ ಮಾಡಿಕೊಳ್ಳುವವರಿಗೂ ಶುಗರ್ಕೇನ್ ಜ್ಯೂಸ್ ಬೆಸ್ಟ್. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನೈಸರ್ಗಿಕ ಸಕ್ಕರೆ ಕೊಬ್ಬು ಕರಗಿಸುವಲ್ಲಿ ಸಹಕಾರಿ. 4. ಕಬ್ಬಿನ ಹಾಲು ಕಾಮಾಲೆ ರೋಗದಿಂದ ಗುಣವಾಗಲು ಉತ್ತಮ ಮನೆಮದ್ದು. ದಿನಕ್ಕೊಂದು ಲೋಟ ಕಬ್ಬಿನಹಾಲು ಕುಡಿಯುವುದರಿಂದ ಯಕೃತ್…
ಭಾರತ-ಚೀನಾ ಗಡಿ ವಿವಾದದಲ್ಲಿ 20 ಜನ ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆ ರೋಣ ಪಟ್ಟಣದ ಯುವಕನೊರ್ವ ಭಾರತೀಯ ಸೈನಿಕರ ಬಗ್ಗೆ ಅಶ್ಲೀಲ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಪಟ್ಟಣದ ಬಸವರಾಜ ಗೋಮಾಡಿ, ಬಸವರಾಜ್ ಯಶ್ ಎಂಬ ಹೆಸರಿನಿಂದ ಪೋಸ್ಟ್ ಹರಿಬಿಟ್ಟಿದ್ದಾನೆ. ಕರ್ನಾಟಕದ ಅದರಲ್ಲೂ ಶಾಂತಿನಾಡು ಗದಗ ಜಿಲ್ಲೆಯ ಯುವಕ ಚೀನಾ ಸೈನಿಕರಿಗೆ ಸಪೋರ್ಟ್ ಮಾಡಿದ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದೆ. ‘ಹೆಚ್ಚೆಚ್ಚು ಭಾರತೀಯ ಸೈನಿಕರನ್ನು ಚೀನಾದವರು ಕೊಲ್ಲಲಿ ಈ ದರಿದ್ರ…
ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ಬೇಡುವ ಹಬ್ಬವೇ ‘ಭೀಮನ ಅಮವಾಸ್ಯೆ.
ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ.