ಸುದ್ದಿ

65 ವರ್ಷದ ವೃದ್ಧೆಯೊಬ್ಬರು ಕಳೆದ 19 ವರ್ಷಗಳಿಂದ ಸಾರ್ವಜನಿಕ ಶೌಚಾಲಯದಲ್ಲೇ ಜೀವನವನ್ನು ನಡೆಸುತ್ತಿದ್ದಾರೆ,..ಇದಕ್ಕೆ ಕಾರಣವೇನೆಂದು ತಿಳಿಯಿರಿ..?

42

ಚೆನ್ನೈನ  65 ವರ್ಷದ ವೃದ್ಧೆಯೊಬ್ಬರು ಕಳೆದ 19 ವರ್ಷಗಳಿಂದ ಸಾರ್ವಜನಿಕ ಶೌಚಾಲಯದಲ್ಲೇ ಜೀವನ ನಡೆಸುತ್ತಿರುವ ಮನಕಲಕುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

ವಾಸಿಸಲು ಮನೆ ಇಲ್ಲದ ಕಾರಣದಿಂದಾಗಿ ಕರುಪ್ಪಾಯಿ ಅವರು ಶೌಚಾಲಯದ ಕೋಣೆಯಲ್ಲೇ ವಾಸವಾಗಿದ್ದಾರೆ. ವೃದ್ಧೆ ಕರುಪ್ಪಾಯಿ ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಿ ಅದರಿಂದ ಬರುವ ಹಣದಿಂದಲೇ ಜೀವನ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೃದ್ಧೆ, ಹಿರಿಯ ನಾಗರಿಕ ಪಿಂಚಣಿಗಾಗಿ ನಾನು ಅನೇಕ ಬಾರಿ ಅರ್ಜಿ ಸಲ್ಲಿಸಿದ್ದೇನೆ. ಅದು ಆಗದಿದ್ದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದೇನೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜೀವನ ನಡೆಸಲು ನನಗೆ ಬೇರೆ ಆಧಾರವಿಲ್ಲ. ಹೀಗಾಗಿ ಸಾರ್ವಜನಿಕ ಶೌಚಾಲಯದಲ್ಲೇ ಜೀವನ ನಡೆಸುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛಗೊಳಿಸಿದರೆ ಪ್ರತಿದಿನ 70ರಿಂದ 80 ರೂ. ಸಿಗುತ್ತದೆ. ಅದರಿಂದಲೇ ಜೀವನ ನಡೆಸುತ್ತಿದ್ದೇನೆ. ನನಗೆ ಒಬ್ಬಳು ಮಗಳಿದ್ದಾಳೆ. ಆದರೆ ಇಲ್ಲಿಯವರೆಗೂ ಆಕೆ ನನ್ನ ಭೇಟಿಯಾಗಲು ಬಂದಿಲ್ಲ ಎಂದು ವೃದ್ಧೆ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಗುಲ ದರ್ಶನ

    ಮೊದಲ ದಿನವೇ ಅಯ್ಯಪ್ಪ ಸ್ವಾಮಿ ಹುಂಡಿಗೆ ದಾಖಲೆಯ ಹಣ . ಮೊದಲ ದಿನ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಭಕ್ತರು ಎಷ್ಟು ಗೊತ್ತಾ?

    ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದ ಶನಿವಾರ 3.32 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿ ಮೊದಲ ದಿನ ಗಳಿಸಿದ 1.28 ಕೋಟಿ ರೂ.ಗಳಿಗೆ ಹೋಲಿಸಿದಲ್ಲಿ ಸುಮಾರು ಎರಡೂವರೆ ಪಟ್ಟು ಹೆಚ್ಚಾದಂತಾಗಿದೆ. ದೇವಾಲಯದ ಬಾಗಿಲು ತೆಗೆದ ನಂತರ ಇದುವರಗೆ 70000 ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಟ್ರಾವಂಕೋರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್.ವಾಸು ಈ ವಿಷಯವನ್ನು ತಿಳಿಸಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಪ್ರತಿದಿನ 4೦,೦೦೦ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ…

  • ತಂತ್ರಜ್ಞಾನ

    ನೀವು ಫೇಸ್ಬುಕ್ ನಲ್ಲಿ ಬೇರೆಯವರ ಫೋಟೋ ಹಾಕುವ ಮುನ್ನ ನಿಮ್ಗೆ ಇದು ತಿಳಿದಿರಬೇಕು..!

    ಫೋಟೋ ಪೋಸ್ಟ್ ಮಾಡಿದ ವ್ಯಕ್ತಿ ನಿಮಗೆ ಟ್ಯಾಗ್ ಮಾಡಿಲ್ಲವಾದಲ್ಲಿ ಮಾತ್ರ ಈ ಸಂದೇಶ ನಿಮಗೆ ಬರಲಿದೆ. ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ಫೋಟೋವನ್ನು ಗುರುತಿಸಲು ಫೇಶಿಯಲ್ ರೆಕಗ್ನೈಸ್ ಟೆಕ್ನಾಲಜಿಯನ್ನು ಬಳಸಲಿದೆ.

  • ಸುದ್ದಿ

    ಇಲ್ಲಿದೆ ನೋಡಿ ಮದ್ಯ ಪ್ರಿಯರಿಗೊಂದು ಸಿಹಿಸುದ್ದಿ…!

    ಗೋವಾ ಪ್ರವಾಸಮಾಡ ಹೊರಟಿರುವ ಪ್ರವಾಸಿಗರೂ ಮತ್ತು ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಇದ್ದು, ಇನ್ನು ಮುಂದೆ ಗೋವಾದಿಂದಹೆಚ್ಚು ಮದ್ಯದ ಬಾಟಲಿಗಳನ್ನು ಮನೆಗೊಯ್ಯಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ.  ಅಚ್ಚರಿ ಪಡಬೇಡಿಇದು ನಿಜ…. ಹೌದು.. ಗೋವಾ ಪ್ರವಾಸಕ್ಕೆ ಹೋಗುವ ಮದ್ಯಪ್ರಿಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿನೀಡಿದ್ದು, ಇನ್ನು ಮುಂದೆ ಪ್ರವಾಸ ಮುಗಿಸಿ ಮನೆಗೆ ಮರಳುವ ಇತರೆ ರಾಜ್ಯಗಳ ಪ್ರವಾಸಿಗರು ಹೆಚ್ಚುವರಿಮದ್ಯದ ಬಾಟಲಿಗಳನ್ನು ಮನೆಗೆ ಕೊಂಡೊಯ್ಯಬಹುದು.  ಆದಾಯ ಕೊರತೆಯಿಂದ ಕಂಗೆಟ್ಟಿರುವ ಗೋವಾ ಸರ್ಕಾರ ಇಂತಹುದೊಂದು ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಶೀಘ್ರದಲ್ಲಿಯೇ ಈ…

  • ಉಪಯುಕ್ತ ಮಾಹಿತಿ, ಜ್ಯೋತಿಷ್ಯ

    ಹರಿದ ಬಟ್ಟೆ, ಜೀನ್ಸ್ ತೊಡೋದರಿಂದ ಏನಾಗುತ್ತೆ ಗೊತ್ತಾ?

    ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. ಇದ್ರ ಜೊತೆಗೆ ಫೆಂಗ್ ಶೂಯಿಯಲ್ಲಿ ಬಟ್ಟೆಗೂ ಮಹತ್ವ ನೀಡಲಾಗಿದೆ.  ಯಾವ ಬಟ್ಟೆ ಧರಿಸ್ತೇವೆ ಹಾಗೆ ಬಟ್ಟೆಯನ್ನು ಹೇಗೆ ಬಳಸ್ತೇವೆ ಎಂಬುದು ಫೆಂಗ್ ಶೂಯಿಯಲ್ಲಿ ಮಹತ್ವ ಪಡೆದಿದೆ. ನೀವು ಧರಿಸುವ ಬಟ್ಟೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಆದ್ರೆ ಇದೇ ಬಟ್ಟೆ ನಿಮ್ಮ ದುರಾದೃಷ್ಟಕ್ಕೆ ಕಾರಣವಾಗಬಹುದು. ಮನೆಯಿಂದ ಹೊರ ಹೋಗುವಾಗಲ್ಲ…

  • ಸುದ್ದಿ

    ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸಲು ಎಲ್‌ಪಿಜಿ ಡೀಲರ್ಬಳಿಯೇ ಹೋಗುತ್ತಿದ್ದಿರಾ ;ಇನ್ಮುಂದೆ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು,ಇಲ್ಲಿದೆ ನೋಡಿ ಮಾಹಿತಿ,.!!

    ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸಲು ಎಲ್‌ಪಿಜಿ ಡೀಲರ್ಬಳಿಯೇ ಹೋಗಬೇಕೆಂದೇನಿಲ್ಲ. ಆನ್‌ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು. ಜತೆಗೆ ಈ ಪ್ರಕ್ರಿಯೆಯನ್ನುಪೂರ್ತಿಯಾಗಿ ಡಿಜಿಟಲೀಕರಣ ಮಾಡಿರುವುದರಿಂದ, ಅಗತ್ಯವಿರುವವರು ಪ್ರಯೋಜನ ಪಡೆದುಕೊಳ್ಳಬಹುದು. ಅಲ್ಲದೆಡೀಲರ್ ಬಳಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸುವುದು ಕಿರಿಕಿರಿ ಪ್ರಕ್ರಿಯೆ ಎನ್ನಿಸಿದರೆ, ಆನ್‌ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು. ದೇಶದ ಪ್ರಮುಖ 3 ಎಲ್‌ಪಿಜಿ ಪೂರೈಕೆದಾರ ಕಂಪನಿಗಳ ವೆಬ್‌ಸೈಟ್ ಮೂಲಕ ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ. ಜತೆಗೆ ಪ್ರತಿ ಕಂಪನಿಗಳು ಕೂಡ ಪ್ರತ್ಯೇಕ ಆ್ಯಪ್‌ ಹೊಂದಿದ್ದು, ಅದರ…

  • ಸುದ್ದಿ

    ಅಲ್ಲು ಅರ್ಜುನ್ ಬಳಿ ಕ್ಷಮೆ ಯಾಚಿಸಿದ ರಶ್ಮಿಕಾ ಮಂದಣ್ಣ..!ಯಾಕೆ ಗೊತ್ತಾ?

    ನಟಿ ರಶ್ಮಿಕಾ ಮಂದಣ್ಣ ತೆಲುಗು ನಟ ಅಲ್ಲು ಅರ್ಜುನ್ ಮತ್ತು ತಂಡಕ್ಕೆ ಕ್ಷಮೆ ಕೇಳಿದ್ದಾರೆ. ಅಲ್ಲು ಅರ್ಜುನ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಇಂದು (ಅಕ್ಟೋಬರ್ 30) ನಡೆದಿದೆ. ನಟ ಅಲ್ಲು ಅರ್ಜುನ್, ನಿರ್ಮಾಪಕ ಅಲ್ಲು ಅರವಿಂದ್, ನಿರ್ದೇಶಕ ಸುಕುಮಾರ್, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಸೇರಿದಂತೆ ಇಡೀ ತಂಡ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಬೇರೆ ಸಿನಿಮಾದ ಚಿತ್ರೀಕರಣ ಇದ್ದ ಕಾರಣ ರಶ್ಮಿಕಾ ಈ ಸಿನಿಮಾದ ಪೂಜಾ ಕಾರ್ಯಕ್ರಮದಲ್ಲಿ…