ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆರನೇ ವೇತನ ಆಯೋಗ ನೀಡಿರುವ ಶಿಫಾರಸುಗಳನ್ನು ಸಂಪೂರ್ಣ ಜಾರಿಗೊಳಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಸುಮಾರು 12 ಲಕ್ಷ ಸರ್ಕಾರಿ ನೌಕರರಿಗೆ ಶೇ.30ರಷ್ಟು ವೇತನವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ವೇತನ ಪರಿಷ್ಕರಣೆಯಾಗಲಿದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಪರ್ ಕೊಡುಗೆಯನ್ನು ನೀಡಿದ್ದು, ಚುನಾವಣೆಯಲ್ಲಿ ಸರ್ಕಾರಿ ನೌಕರರ ಮತಗಳಿಸುವ ಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ವೇತನ ಹೆಚ್ಚಳವನ್ನು ನೇರ ಹಾಗೂ ಸ್ಪಷ್ಟವಾಗಿ ಘೋಷಿಸದೆ ಪರೋಕ್ಷವಾಗಿ 6ನೇ ವೇತನ ಆಯೋಗದ ಎಲ್ಲಾ ಶಿಫಾರಸುಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದಾರೆ.
ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರಿ ನೌಕರರು ಸಲ್ಲಿಸಿದ್ದ ಬೇಡಿಕೆಯನ್ನು ಪರಿಶೀಲಿಸಲು ಕಳೆದ ಆಯವ್ಯಯದಲ್ಲಿ 6ನೇ ವೇತನ ಆಯೋಗವನ್ನು ಘೋಷಿಸಲಾಗಿತ್ತು. 2017ರ ಜೂನ್‍ನಲ್ಲಿ ಆಯೋಗವನ್ನು ರಚಿಸಲಾಗಿದೆ. ಆಯೋಗ ತನ್ನ ಮೊದಲ ವರದಿಯನ್ನು ಇತ್ತೀಚೆಗೆ ಸಲ್ಲಿಸಿದ್ದು, ಒಟ್ಟಾರೆ ಶೇ.30ರಷ್ಟು ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿದೆ. ಇದರಿಂದ ರಾಜ್ಯದಲ್ಲಿರುವ 5.93ಲಕ್ಷ ನೌಕರರು ಹಾಗೂ 5.73ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ. ಆಯೋಗದ ಎಲ್ಲಾ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದರಿಂದ 10,508 ಕೋಟಿ ರೂ.ಗಳು ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿರುವ ಸಿದ್ದರಾಮಯ್ಯ, ಈ ಆರ್ಥಿಕ ಹೊರೆಯನ್ನು ನಿಭಾಯಿಸುವ ಮೂಲಕ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲಗಳ ಕೊರತೆಯಾಗದಂತೆ ಆರ್ಥಿಕ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದು ಒಂದು ರೀತಿಯ ತಂತ್ರ ಆಗಿದ್ದು 10,508 ಕೋಟಿ ರೂ.ಗಳು ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ. ಆಯೋಗ 2ನೇ ವರದಿ ನೀಡುವ ವರೆಗೆ 6ನೇ ವೇತನದ ಕನಸು ಕನಸಾಗಿಗೆ ಉಳಿಯಲಿದೆ. ಮುಂದೆ ಚುನಾವಣೆ ಇರುವ ಕಾರಣ ಇದು ಆಗುವ ಭರವಸೆಯೇ ಆಗಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿಶ್ವದಲ್ಲಿ ಅನೇಕ ಶಾಲೆಗಳು ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿವೆ. ವಿದ್ಯಾಭ್ಯಾಸ ಹೇಳುವ ವಿಧಾನ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಂದ ಶಾಲೆ ಹೆಸರು ಮಾಡಿರುತ್ತದೆ. ಆದ್ರೆ ಈ ಶಾಲೆ ಎಲ್ಲಕ್ಕಿಂತ ಭಿನ್ನವಾಗಿದೆ. ಇಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸ ಹೇಳುವ ಜೊತೆಗೆ ಅವ್ರ ಮದುವೆ ಜವಾಬ್ದಾರಿಯನ್ನೂ ಶಾಲೆಯೇ ಹೊರುತ್ತದೆ. ಹೌದು, ಭಿನ್ನವಾಗಿರುವ ಈ ಶಾಲೆ ಗುಜರಾತಿನ ಅಹಮದಾಬಾದ್ ನಲ್ಲಿದೆ. ಈ ಶಾಲೆ ಹೆಸರು ‘ಬ್ಲೈಂಡ್ ಕನ್ಯಾ ಪ್ರಕಾಶ್ ಘರ್’. ನಾಲ್ಕು ಮಕ್ಕಳೊಂದಿಗೆ ಶಾಲೆ ತೆರೆಯಲಾಗಿತ್ತು. ಆದ್ರೀಗ ಶಾಲೆ ಹೆಸ್ರು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ದಿವ್ಯಾಂಗ…
ಟಿಪ್ಪು ಸುಲ್ತಾನ್ ಜಯಂತಿಯ ವಿಚಾರದಲ್ಲಿ ಕಾಂಗ್ರೆಸ್ -ಬಿಜೆಪಿ ನಡುವೆ ನಡೆಯುತ್ತಿರುವ ವಾಕ್ಸಮರದ ಮಧ್ಯೆಯೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟಿಪ್ಪು ಗುಣಗಾನ ಮಾಡಿದ್ದಾರೆ.
ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.
ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು. ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ…
ಈ ಹಿಂದೆ ಮಹಿಳೆಯರ ಸುರಕ್ಷತೆಗಾಗಿ ಉತ್ತರ ಪ್ರದೇಶದಲ್ಲಿ ಪಿಂಕ್ ಬಸ್ ರೋಡಿಗೆ ಇಳಿದಿವೆ. ಬೆಂಗಳೂರಿನಲ್ಲಿ ಇಂದಿರಾ ಸಾರಿಗೆ ಆಯಿತು ಇದೀಗ ಪಿಂಕ್ ಆಟೋ ಮಹಿಳೆಯಾರ ಸುರಕ್ಷತೆಗಾಗಿ ರಸ್ತೆಗಿಳಿಯಲಿವೆ.
ಕೆ.ಎ.ಎಸ್. ಅಧಿಕಾರಿಯಾಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು