ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ಸಲ ಹಾವು ಕಚ್ಚಿದರೂ ಇಹ ಲೋಕ ಸೇರುವವರ ಮಧ್ಯೆ ಇಲ್ಲೊಬ್ಬಳು ಹುಡುಗಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಅದೆಷ್ಟು ಬಾರಿ ಹಾವು ಕಚ್ಚಿದ್ದರೂ ಈಕೆ ಸಾವನ್ನಪ್ಪಿಲ್ಲ. ಹಿಮಾಚಲ ಪ್ರದೇಶದ 18ರ ಕಿಶೋರಿ ಮನೀಷಾ 3 ವರ್ಷದ ಅಂತರದಲ್ಲಿ ವಿಷಕಾರಿ ಹಾವುಗಳಿಂದ 34 ಬಾರಿ ಕಚ್ಚಿಸಿಕೊಂಡಿದ್ದರೂ ಈಕೆಗೆ ಏನೂ ಆಗಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೀಷಾ ಅಪ್ಪ ಸುಮೀರ್ ವರ್ಮಾ ಇದೆಲ್ಲಾ ಆಕೆಗೆ ಮಾಮೂಲಿ ಎನ್ನುತ್ತಾರೆ.
‘ಕಳೆದ ಮೂರು ವರ್ಷಗಳ ಅಂತರದಲ್ಲಿ 30ಕ್ಕೂ ಹೆಚ್ಚು ಬಾರಿ ನನಗೆ ಹಾವು ಕಚ್ಚಿದೆ. ನಾನು ಹಾವು ಕಂಡ ತಕ್ಷಣ ಅದರ ಜತೆ ಆಟವಾಡಲು ಆರಂಭಿಸುತ್ತೇನೆ. ತಕ್ಷಣ ಹಾವು ನನಗೆ ಕಚ್ಚುತ್ತದೆ. ನಾನು ಶಾಲಾ ದಿನಗಳಲ್ಲಿ ಓದುತ್ತಿದ್ದಾಗ ಹಲವು ಹಾವುಗಳು ನನಗೆ ಕಚ್ಚಿವೆ. ಒಮ್ಮೊಮ್ಮೆ ದಿನಕ್ಕೆ ಎರಡು ಮೂರು ಬಾರಿ ಹಾವುಗಳೂ ಕಚ್ಚಿದ್ದಿದೆ.
ಜ್ಯೋತಿಷಿಗಳು ನನಗೆ ದೇವರ ಜತೆ ಸಂಬಂಧ ಇದೆ ಎನ್ನುತ್ತಾರೆ,’ ಎಂದು ಹೇಳುತ್ತಾಳೆ ಯುವತಿ. ವಿವಿಧ ಆಸ್ಪತ್ರೆಗಳಲ್ಲಿರುವ ದಾಖಲೆಗಳ ಪ್ರಕಾರ ಇದೇ ಫೆಬ್ರವರಿ 18ಕ್ಕೆ ಆಕೆ 34ನೇ ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದಾಳೆ. ಆದರೆ ಇದಕ್ಕೆ ವೈದ್ಯರು ಹೇಳುವುದೇ ಬೇರೆ. ಹಲವು ಬಾರಿ ವಿಷವಿಲ್ಲದ ಹಾವುಗಳು ಆಕೆಗೆ ಕಚ್ಚಿವೆ.
ಕೆಲವೊಮ್ಮೆ ವಿಷ ಕಡಿಮೆ ಇರುವ ಹಾವುಗಳು ಕಚ್ಚಿದ್ದರಿಂದ ಇವಳಿಗೆ ಏನೂ ಆಗಿಲ್ಲ ಎನ್ನುತ್ತಾರೆ. ಒಟ್ಟಾರೆ ಯುವತಿ ಮಾತ್ರ ಇನ್ನೂ ಬದುಕಿದ್ದಾಳೆ.
ವೈದ್ಯಕೀಯ ದಾಖಲೆಗಳ ಪ್ರಕಾರ ಆಕೆಗೆ 34 ಬಾರಿ ಹಾವು ಕಚ್ಚಿದ್ದಂತೂ ನೂರಕ್ಕೆ ನೂರು ಸತ್ಯ. ಇನ್ನು ಕೆಲವರು ನಿರಂತರವಾಗಿ ಹಾವು ಕಚ್ಚುತ್ತಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಉತ್ಪತ್ತಿಯಾಗಿ ಮುಂದಿನ ಬಾರಿ ಕಚ್ಚಿದಾಗ ಏನೂ ಆಗದಂತೆ ತಡೆಯುತ್ತದೆ. ಇದರಿಂದ ಆಕೆಗೆ ಏನೂ ಆಗುತ್ತಿಲ್ಲ ಎನ್ನುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ನೀರು ಕುಡಿದರೆ ಆಗುವ ಪ್ರಯೋಜನ ಇನ್ನೂ ಜಾಸ್ತಿ. ಹಲ್ಲು ಕೊಳೆಯಾಗಲ್ಲ :-ಕಡು ಬಣ್ಣದ ಕಾಫಿ, ಟೀ ಕುಡಿಯುವುದರಿಂದ ಬಿಳಿ ಹಲ್ಲು ಹಳದಿಗಟ್ಟುವ ಸಾಧ್ಯತೆಯಿದೆ. ಹೀಗಾಗಿ ಮೊದಲು ನೀರು ಕುಡಿದು ಬಳಿಕ ಕಾಫಿ-ಟೀ ಕುಡಿದರೆ ಈ ಸಮಸ್ಯೆಯಿರದು. ಅಸಿಡಿಟಿ:-ಏನೇ ಸೇವಿಸುವ ಮೊದಲು ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಬರದು. ಕಾಫಿ ಅಥವಾ ಟೀ ಸೇವನೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತರಬಹುದು. ಇಂತಹ…
ಬಾರ್ಬಿ ಡಾಲ್ ಅನ್ನು ಎಲ್ರೂ ಇಷ್ಟಪಡ್ತಾರೆ. ಕೆಲವು ಯುವತಿಯರು ಬಾರ್ಬಿಯಂತೆ ಸ್ಲಿಮ್ & ಬ್ಯೂಟಿಫುಲ್ ಆಗಿ ಕಾಣಲು ಸರ್ಕಸ್ ಮಾಡ್ತಾರೆ. ಇದಕ್ಕಾಗಿ ಚಿತ್ರ ವಿಚಿತ್ರ ಕಾಸ್ಮೆಟಿಕ್ ಚಿಕಿತ್ಸೆ ತೆಗೆದುಕೊಳ್ತಾರೆ.ಜೆಕ್ ರಿಪಬ್ಲಿಕ್ ದೇಶದ ಯುವತಿಯೊಬ್ಬಳು ಬಾರ್ಬಿಯಂತೆ ಕಾಣಲು ತಿಂಗಳಿಗೆ ಬರೋಬ್ಬರಿ ಸಾವಿರ ಪೌಂಡ್(90 ಸಾವಿರ ರೂ.) ಖರ್ಚು ಮಾಡಿ ಸುದ್ದಿಯಾಗಿದ್ದಾಳೆ.
ಮೊಟ್ಟೆ ಮೊದಲೋ ಕೋಳಿ ಮೊದಲೋ ಅಥವ ಮೊಟ್ಟೆ ಶಾಖಾಹಾರವೊ ಮಾಂಸಾಹಾರವೊ’ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಚರ್ಚೆಯ ಆಚೆಗೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.
ಟ್ರಾಫ್ರಿಕ್ ನಿಯಮ ಉಲ್ಲಂಘಿಸಿ, ದುಬಾರಿ ದಂಡ ಕಟ್ಟಲು ಸಾಧ್ಯವಾಗದೇ ಗೋಗೆರೆದ, ಮನವಿ ಮಾಡಿದ, ಪೊಲೀಸರಿಂದ ತಪ್ಪಿಸಿಕೊಂಡು ಹೋದ ಘಟನೆಗಳು ವರಿದಿಯಾಗಿದೆ. ಆದರೆ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ. ಹೆಲ್ಮೆಟ್ ಹಾಕದೆ, ಸಿಗ್ನಲ್ ನೋಡದೆ, ಒನ್ ವೇ, ಪಾರ್ಕಿಂಗ್ ಗಮನಿಸದೆ, ನಾವು ನಡೆದಿದ್ದೇ ದಾರಿ ಎಂದು ಸವಾರಿ ಮಾಡುತ್ತಿದ್ದ ವಾಹನ ಸವಾರರು ಇದೀಗ ಟ್ರಾಫಿಕ್ ನಿಯಮ ಪಾಲಿಸುವಂತಾಗಿದೆ. ಒಂದೆರಡು ಸಿಗ್ನಲ್ ಜಂಪ್ ಮಾಡಿದರೆ ಸಾಕು ದಂಡ 20,000 ರೂಪಾಯಿ ದಾಟಿರುತ್ತೆ. ಹೀಗೆ ನಿಯಮ…
ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು.ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ಮಾತ್ರವಲ್ಲ, ತಮಿಳುನಾಡಿನಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಿದ್ದರು. ತಮಿಳ್ನಾಡಿನಲ್ಲಿ ‘ಸೇವ್ ಅವರ್ ರೈಸ್’ ಅಭಿಯಾನದ ಸಾರಥಿಯಾಗಿದ್ದ ಜಯರಾಮನ್, ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.ಬೀಜಗಳ ಸಂರಕ್ಷಣೆ,…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ಅವರು, 17 ರಾಜ್ಯಗಳಲ್ಲಿ ಪ್ರತಿ ಶನಿವಾರ ರಜೆ ಜಾರಿಯಲ್ಲಿದೆ. 4 ರಾಜ್ಯಗಳಲ್ಲಿ ತಿಂಗಳಲ್ಲಿ ಎರಡು ಶನಿವಾರ ರಜೆ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ರಜೆಗೆ ಒತ್ತಾಯ ಇತ್ತು. ಜಯಂತಿಗಳು, ಹಬ್ಬಗಳನ್ನು ಕಡಿತ ಮಾಡಬೇಕಾ…