ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಖ್ಯಾತ ನಟ ಯಶ್ ಅವರಿಗೆ, ಮನೆ ಖಾಲಿ ಮಾಡುವಂತೆ 42ನೇ ಸಿಟಿ ಸಿವಿಲ್ ಕೋರ್ಟ್ ಆದೇಶಸಿದೆ.
ಹೌದು, ನಟ ಯಶ್ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ, ಕೋರ್ಟ್ 3 ತಿಂಗಳೊಳಗೆ ಮನೆ ಖಾಲಿ ಮಾಡಲು ಸೂಚನೆ ನೀಡಿದೆ.
ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸ ವಾಸವಿರುವ ಯಶ್ ಮತ್ತು ಅವರ ಕುಟುಂಬ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
3 ವರ್ಷಗಳಿಂದ ಬಾಡಿಗೆ ಮನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದು, ಬೆಂಗಳೂರಿನ 42 ನೇ ಸಿಟಿ ಸಿವಿಲ್ ಕೋರ್ಟ್ ಮನೆ ಖಾಲಿ ಮಾಡುವಂತೆ ಯಶ್ ಅವರ ತಾಯಿ ಪುಷ್ಪಾ ಅವರಿಗೆ ಸೂಚಿಸಿದೆ.
9.60 ಲಕ್ಷ ರೂ. ಪಾವತಿಯೊಂದಿಗೆ 3 ತಿಂಗಳಲ್ಲಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಮನೆ ಖಾಲಿ ಮಾಡುವಂತೆ ಯಶ್ ತಾಯಿ ಪುಷ್ಪಾ ಅವರಿಗೆ ಸೂಚಿಸಲಾಗಿದೆ. ಇದರೊಂದಿಗೆ ಮನೆ ಅಡ್ವಾನ್ಸ್ 4 ಲಕ್ಷ ರೂ. ವಾಪಸ್ ಕೊಡುವಂತೆ ಕತ್ರಿಗುಪ್ಪೆ ನಿವಾಸಿ ಮನೆ ಮಾಲೀಕ ಮುನಿಪ್ರಸಾದ್ ಅವರಿಗೆ ಸೂಚಿಸಲಾಗಿದೆ.
ಯಶ್ ತಾಯಿಯಿಂದ ನಮಗೆ 21.37 ಲಕ್ಷ ರು ಬಾಡಿಗೆ ಹಣ ಬರಬೇಕಿದೆ ಎಂದು ಮನೆ ಮಾಲೀಕರು ತಮ್ಮ ದೂರಿನಲ್ಲಿ ತಿಳಿಸಿದ್ದರು.
ಯಶ್ ಅವರ ಕುಟುಂಬ ಬಾಡಿಗೆ ನೀಡಿಲ್ಲ. ಅಲ್ಲದೇ ಅವರು ಬೇರೆ ಮನೆಯಲ್ಲಿ ವಾಸವಾಗಿದ್ದರೂ, ಬೀಗವನ್ನು ಹಾಕಿ ಬಾಡಿಗೆ ಮನೆಯನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡಿದ್ದಾರೆ. ಮನೆ ಖಾಲಿ ಮಾಡಿಸಲು ಮನೆ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು.
ಹೀಗಾಗಿ ವಾದ ವಿವಾದಗಳನ್ನು ಆಲಿಸಿದ ಕೋರ್ಟ್ ಮೂರೂ ತಿಂಗಳೊಳಗೆ ಮನೆ ಖಾಲಿ ಮಾಡುವುದರ ಜೊತೆಗೆ, ಬಾಡಿಗೆ ಕೊಡದೆ ಉಳಿಸಿಕೊಂಡಿರುವ ಹಣವನ್ನು ಮನೆ ಮಾಲೀಕರಿಗೆ ಕೊಡಬೇಕೆಂದು ಯಶ್ ತಾಯಿ ಪುಷ್ಪ ಅವರಿಗೆ ಕೋರ್ಟ್ ಆದೇಶ ಮಾಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ವರ್ಷ ಹೊಸ ಕಾರು ಖರೀದಿಸಲು ಯೋಜನೆ ರೂಪಿಸಿರುವಿರಾ ? ಹಾಗಾದ್ರೆ, ಟಾಟಾ ಮೋಟಾರ್ಸ್ ಕಂಪನಿಯು ಭಾರತದ ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ನೀಡಲು ಮುಂದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ತನ್ನ ‘ಮೆಗಾ ಆಫರ್ ಮ್ಯಾಕ್ಸ್ ಸೆಲೆಬ್ರೇಷನ್ ಕ್ಯಾಂಪೇನ್’ ಅಡಿಯಲ್ಲಿ, ಖರೀದಿದಾರರು ಕೇವಲ ರೂ.1 ನೀಡುವ ಮೂಲಕ ಟಾಟಾ ಕಾರನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ. ಹೌದು, ಕೇವಲ ಒಂದು ರೂಪಾಯಿ ಡೌನ್ಪೇಮೆಂಟ್ ಮಾಡುವ ಮೂಲಕ ಟಾಟಾ ಕಾರಿನ ಮೇಲೆ ರೂ.1 ಲಕ್ಷ ಉಳಿತಾಯ…
ಕ್ರಿಕೆಟ್ ನಮ್ಮ ಭಾರತೀಯ ಆಟವಲ್ಲದಿದ್ದರು, ಇಡೀ ಭಾರತೀಯರ ಮನ ಮನದಲ್ಲೂ ಮನೆ ಮಾಡಿದೆ. ಅದರಲ್ಲೂ ಭಾರತ ಪಾಕಿಸ್ತಾನದ ನಡುವೆ ನಡೆಯುವ ಮ್ಯಾಚ್ ವೇಳೆ ಹೆಚ್ಚೂ ಕಡಿಮೆ ಇಡಿಯ ಭಾರತವೇ
ಇಲ್ಲಿನ ವಿದ್ಯಾರಣ್ಯ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬರ್ತ್ಡೇ ಪಾರ್ಟಿ ಆಚರಿಸಿದ್ದಾರೆ. ತಾನು ಪೊಲೀಸ್ ಎಂದು ಯಾಮಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದ ವಿದ್ಯಾರಣ್ಯಪುರ ಪೊಲೀಸರು, ಠಾಣೆಯಲ್ಲಿ ಕೇಕ್ ಕತ್ತರಿಸಿ, ಆತನ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಷೇಕ್ (25) ಬಂಧಿತ ಆರೋಪಿಯಾಗಿದ್ದು, ಪದವಿಧರನಾಗಿದ್ದಾನೆ. ಈತ ತಾನು ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದು ಹೇಳಿಕೊಂಡಿದ್ದ. ಎನಕೌಂಟರ್ಗೆ ಹುಬ್ಬಳ್ಳಿ ಮತ್ತು ಗೋವಾಗೆ ಹೋಗ್ಬೇಕು ಗಾಡಿಲಿ ಎಸಿ ಇಲ್ಲ ಎಂದು ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ. ಈತನ ಮಾತು…
ತನ್ನ ಹೆಂಡತಿಗಾಗಿ ರಸ್ತೆಯನ್ನೇ ನಿರ್ಮಿಸಿದ್ದ ಮಾಂಜಿಯ ಕಥೆ ನಮಗೆಲ್ಲಾ ಗೊತ್ತಿದೆ. ಇದೀಗ ಕೀನ್ಯಾದಲ್ಲೂ ಒಬ್ಬ ಮಾಂಜಿ ಇದ್ದಾರೆ. ಆದ್ರೆ, ಈತ ತನ್ನ ಹೆಂಡತಿಗಾಗಿ ಅಲ್ಲ, ಇಡೀ ಊರಿನ ಜನರಿಗೆ ನೆರವಾಗಲಿ ಅಂತ ತಾನೇ ರಸ್ತೆ ನಿರ್ಮಿಸಿ ಈಗ ಎಲ್ಲರ ದೃಷ್ಟಿಯಲ್ಲೂ ಹೀರೋ ಆಗಿದ್ದಾರೆ. ಕೀನ್ಯಾದ ಕಗಂಡಾ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶವಿದೆ. ಅದರ ಬಳಿ ವಾಸಿಸುವ ಜನರಿಗೆ ಊರಿನ ಸಂಪರ್ಕ ಮಾಡೋಕೆ ಸರಿಯಾದ ರಸ್ತೆಯೇ ಇರಲಿಲ್ಲ. ಈ ಬಗ್ಗೆ ಗ್ರಾಮದ ನಿಕೋಲಸ್ ಮುಚಾಮಿ ಹಲವು ಬಾರಿ…
ಮೆಲ್ಬೋರ್ನ್: ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ! ಹೀಗೆಂದು ಮಾನವ ವರ್ತನೆಗಳಲ್ಲಿ ಕಂಪ್ಯೂಟರ್ ಗಳು (Computers in Human Behavior) ಎಂಬ ನಿಯತಕಾಲಿಕೆಯ ಸಂಶೋಧನಾ ವರದಿ ಹೇಳುತ್ತಿದೆ. ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್ಫೋನ್ ನ ನಿರಂತರ ಬಳಕೆ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮಾನಸಿಕ ಆರೋಗ್ಯದ ಮಟ್ಟ ಅತ್ಯುತ್ತಮವಾಗಿಲ್ಲದವರು, ನಕಾರಾತ್ಮಕ ಭಾವನೆಯುಳ್ಳವರು,…
ಹಳ್ಳಿಗಳು ಅಂದ್ರೆ ನಮ್ಮಲ್ಲಿ ಬಡತನ, ಅನಕ್ಷರತೆ, ಬಂಡವಾಳದ ಕೊರತೆ, ಹಣದ ಅಭಾವ ಎನ್ನುವ ಮಾತುಗಳು ನಮ್ಮ ಕಾಣಿಸುತ್ತವೆ.ಆದರೆ ನಮ್ಮ ಭಾರತದಲ್ಲಿರುವ ಈ ಹಳ್ಳಿ, ಏಷ್ಯಾದ ಶ್ರೀಮಂತ ಹಳ್ಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.