ವಿಚಿತ್ರ ಆದರೂ ಸತ್ಯ

27 ವರ್ಷದ ಈ ಯುವಕ ಐಶ್ವರ್ಯಾ ರೈ ಮಗನಂತೆ..!ತಿಳಿಯಲು ಇದನ್ನು ಓದಿ..

767

ನಾನು ವಿಶ್ವ ಸುಂದರಿ , ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ಮಗ ಪ್ಲೀಸ್ ಇದನ್ನು ನಂಬಿ ಎಂದು ಹೇಳಿಕೊಂಡು ಯುವಕನೋರ್ವ ಸಂಚಲನ ಮೂಡಿಸಿದ್ದಾನೆ .27 ವರ್ಷದ ಯುವಕನೊಬ್ಬ ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಮಗನೆಂದು ಹೇಳಿಕೊಂಡು ಮಂಗಳೂರಿನಲ್ಲಿ ಪ್ರತ್ಯಕ್ಷನಾಗಿದ್ದಾನೆ.

ಸಂಗೀತ್ ಕುಮಾರ್ ರೈ ಹೆಸರಿನ ಈ ಯುವಕ ಮಂಗಳೂರಿಗೆ ಬಂದು ಮಾಧ್ಯಮಗಳ ಎದುರು ಈ ಹೇಳಿಕೆ ನೀಡಿದ್ದಾನೆ. ಈತ ಹೇಳುವ ಪ್ರಕಾರ 1988ರಲ್ಲಿ ಈತನ ಜನನವಾಗಿದ್ದು, ಐಶ್ವರ್ಯ‌ ಕೃಷ್ಣರಾಜ ರೈ ತನ್ನ ತಾಯಿ ಎಂದು ಹೇಳುತ್ತಿದ್ದಾನೆ.ಐಶ್ವರ್ಯ ರೈಯ ಇಡೀ ಕುಟುಂಬ ಬಗ್ಗೆ ಹಾಗೂ ಐಶ್ವರ್ಯ ರೈ ಯಾವ ವರ್ಷದಲ್ಲಿ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟರು ಮತ್ತು ಆಕೆ ನಟಿಸಿದ ಚಿತ್ರಗಳ ಬಗ್ಗೆಯೂ ಈತ ಮಾಹಿತಿ ಹೊಂದಿದ್ದಾನೆ.

ತನ್ನ ತಂದೆ ವಿಶಾಖಪಟ್ಟಣ ಮೂಲದ ಮವುಲು ಆದಿರೆಡ್ಡಿಯಾಗಿದ್ದು ಐಶ್ವರ್ಯಾ ರೈ ನೆರವಿನಿಂದ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು. ಆರಂಭದ ಎರಡು ವರ್ಷ ಲಂಡನ್ ನಲ್ಲಿ ಐಶ್ವರ್ಯಾ ಕುಟುಂಬದ ಜೊತೆಗೆ ವಾಸಿಸುತ್ತಿದ್ದೆ. ಅನಂತರ ನನ್ನ ತಂದೆ ತನ್ನನ್ನು ಆಂಧ್ರಪ್ರದೇಶಕ್ಕೆ ತಂದು ಸಾಕಿದ್ದಾರೆ ಅಂತ ಹೇಳಿಕೊಂಡಿದ್ದಾನೆ.

ಸಂಗೀತ್ ಕುಮಾರ್ ಬಳಿ ತಾನೂ ಐಶ್ವರ್ಯ ಪುತ್ರನೆಂದು ಹೇಳಿಕೊಳ್ಳಲು ಯಾವುದೇ ದಾಖಲೆಗಳಿಲ್ಲ. ಐಶ್ವರ್ಯಾ ಕುಟುಂಬಸ್ಥರು ನನ್ನನ್ನು ನೋಡಿದರೆ ಒಪ್ಪಿಕೊಳ್ಳುತ್ತಾರೆ. ತಾನು ಐಶ್ವರ್ಯಾ ಬಳಿ ಹೋಗಬೇಕು. ತುಳು ಚಿತ್ರವೊಂದರ ಶೂಟಿಂಗ್ ಕಾರ್ಯಕ್ಕೆಂದು ಮಂಗಳೂರಿಗೆ ಬಂದಿದ್ದೇನೆ.

ಚೆನ್ನೈ ಯಲ್ಲಿ ಸೌಂಡ್ ಇಂಜಿನಿಯರ್ ಆಗಿದ್ದೇನೆ ಅಂತಾ ಹೇಳಿಕೊಂಡಿರುವ ಈತ ತನಗೆ ಬಚ್ಚನ್ ಕುಟುಂಬ ಇಷ್ಟವಿಲ್ಲ. ಅಭಿಷೇಕ್ ಬಚ್ಚನ್ ತನ್ನ ತಾಯಿಯ ಜತೆ ಇರೋದು ಇಷ್ಟವಿಲ್ಲ.

ತಾನು ತಾಯಿ ಬಳಿ ಹೋಗಬೇಕಿದ್ದು, ತಾಯಿ ಐಶ್ವರ್ಯ ರೈ ಜತೆಯೇ ಇರಬೇಕೆಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ