ಸುದ್ದಿ, ಸ್ಪೂರ್ತಿ

ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ 19ರ ಯುವಕ ಟ್ರಂಪ್ ಆಹ್ವಾನಿಸಿದರೂ ಅಮೆರಿಕಕ್ಕೆ ತೆರಳಲಿಲ್ಲ, ಭಾರತದಲ್ಲೇ ರಿಸರ್ಚ್ ಮಾಡ್ತೇನೆ ಎಂದ ಗೋಪಾಲ್.

74

ಬಿಹಾರದ ಬಾಗಲ್‍ಪುರದ ಧ್ರುವಗಂಜ್ ಗ್ರಾಮದ 19 ವರ್ಷದ ಯುವಕ ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ್ದಾರೆ. ಅಲ್ಲದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಹ್ವಾನಿಸಿದರೂ ಭಾರತದಲ್ಲೇ ರಿಸರ್ಚ್ ಮಾಡುತ್ತೇನೆ ಎಂದು ಹೇಳುವ ಮೂಲಕ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.

19 ವರ್ಷದ ಯುವಕ ಗೋಪಾಲ್ ಪ್ರತಿ ವರ್ಷ ದೇಶದ 100 ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. 2019ರಲ್ಲಿ ಗೋಪಾಲ್ ಈ ಕೆಲಸ ಶುರು ಮಾಡಿದ್ದು, ಈಗ 8 ಮಕ್ಕಳ ಆವಿಷ್ಕಾರಕ್ಕಾಗಿ ತಾತ್ಕಾಲಿಕ ಪೇಟೆಂಟ್ ಕೂಡ ಪಡೆದಿದ್ದಾರೆ. ಸದ್ಯ ಗೋಪಾಲ್ ಈ ಡೆಹ್ರಾಡೂನ್ ಸರ್ಕಾರಿ ಗ್ರಾಫಿಕ್ ಏರಾ ಇನ್‍ಸ್ಟಿಟ್ಯೂಟ್‍ನ ಲ್ಯಾಬ್‍ನಲ್ಲಿ ಟೆಸ್ಟಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಜಾರ್ಖಂಡ್‍ನಲ್ಲಿ ಲ್ಯಾಬ್ ತೆರೆದು ಅಲ್ಲಿ ರಿಸರ್ಚ್ ಮಾಡಲಿದ್ದಾರೆ.

ಗೋಪಾಲ್ ತುಳಸಿಪುರದ ಮಾಡೆಲ್ ಹೈಸ್ಕೂಲ್‍ನಲ್ಲಿ 12ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. 2013-14ರಲ್ಲಿ ಬಯೋಸೆಲ್ ಆವಿಷ್ಕಾರಕ್ಕಾಗಿ ಗೋಪಾಲ್ ಅವರು ಇನ್‍ಸ್ಪೈಯರ್ಡ್ ಅವಾರ್ಡ್ ಕೂಡ ಪಡೆದಿದ್ದಾರೆ. ಪ್ರಶಸ್ತಿ ಪಡೆಯುವಾಗ ಅವರು ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. 2008ರಲ್ಲಿ ಗೋಪಾಲ್ ಅವರ ಗ್ರಾಮದಲ್ಲಿ ಪ್ರವಾಹ ಬಂದಿದ್ದು, ಈ ವೇಳೆ ಸಾಕಷ್ಟು ಹಾನಿಯಾಗಿತ್ತು.

ಪ್ರವಾಹ ಬಂದ ಸಂದರ್ಭದಲ್ಲಿ ಗೋಪಾಲ್ ಅವರ ತಂದೆ ಪ್ರೇಮ್‍ರಂಜನ್ ಕುಮಾರ್ ಅವರು ತಮ್ಮ ಮಗನಿಗೆ 10ನೇ ತರಗತಿ ನಂತರ ಮುಂದೆ ಓದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಗೋಪಾಲ್ ತಮ್ಮ ಛಲವನ್ನು ಬಿಟ್ಟು ಕೊಡಲಿಲ್ಲ. ಸ್ಕಾಲರ್‍ಶಿಪ್ ಪಡೆಯಲು ಏನಾದರೂ ಮಾಡಬೇಕು ಎಂದು ಗೋಪಾಲ್ ಯೋಚಿಸುತ್ತಿದ್ದರು.

2017, ಅಗಸ್ಟ್ 31ರಂದು ಗೋಪಾಲ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆಗ ಮೋದಿ ಅವರು ಗೋಪಾಲ್‍ರನ್ನು ಅಹಮದಾಬಾದ್‍ನ ಎನ್‍ಐಎಫ್‍ಗೆ ಕಳುಹಿಸಿಕೊಟ್ಟರು. ಈ ವೇಳೆ ಗೋಪಾಲ್ 6 ಆವಿಷ್ಕಾರವನ್ನು ಮಾಡಿದ್ದರು. ಈಗ ಗೋಪಾಲ್ ಅವರ ಹೆಸರು ವಿಶ್ವದ 30 ಸ್ಟಾರ್ಟಪ್ ವಿಜ್ಞಾನಿಗಳ ಪಟ್ಟಿಯಲ್ಲಿದೆ. ಏಪ್ರಿಲ್‍ನಲ್ಲಿ ಅಬುಧಾಬಿಯಲ್ಲಿ ನಡೆಯುವ ವಿಶ್ವದ ಅತಿ ದೊಡ್ಡ ಸೈನ್ಸ್ ಫೇರ್ ನಡೆಯಲಿದೆ. ಇದರಲ್ಲಿ 6 ಸಾವಿರ ವಿಜ್ಞಾನಿಗಳು ಭಾಗವಹಿಸುತ್ತಿದ್ದು, ಗೋಪಾಲ್ ಚೀಫ್ ಸ್ಪೀಕರ್ ಆಗಿ ಭಾಗವಹಿಸಲಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಷ್ಯಾ ಅಭಿಮಾನಿಯ ವಿಡಿಯೋ ನೋಡಿ ಬೆರಗಾದ ಕಿಚ್ಚ ಸುದೀಪ್,.!

    ಅಭಿಮಾನಿ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ರಷ್ಯಾದ ಅಭಿಮಾನಿಯೊಬ್ಬರು ವಿಡಿಯೋ ಮಾಡಿ ಅವರ  ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ಕಿಚ್ಚ ಸುದೀಪ್ ಅವರು ರಷ್ಯಾದ ಅಭಿಮಾನಿಗೆ ಬೆರಗಾಗಿದ್ದಾರೆ  ಮರೀನಾ ಕಾರ್ಟಿಂಕಾ ಎಂಬವರು ಈ ವಿಡಿಯೋದಲ್ಲಿ ಸುದೀಪ್ ಅವರ ನಟನೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಮರೀನಾ ವಿಡಿಯೋದಲ್ಲಿ ತಿಳಿಸಿದ್ದಾರೆ . ವಿಡಿಯೋದಲ್ಲಿ ಏನಿದೆ? :ನಾನು ನಿಮ್ಮ ಬಹುದೊಡ್ಡ ಅಭಿಮಾನಿ. ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲು…

  • ಉಪಯುಕ್ತ ಮಾಹಿತಿ

    ಕಾರಿನ ಹಿಂಭಾಗದಲ್ಲಿ ಈ ರೀತಿ ಶೇಪ್ ಯಾಕೆ ಇರುತ್ತದೆ ಗೊತ್ತಾ?

    ಕಾರು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಜೀವನದಲ್ಲಿ ನಾವು ಒಂದು ಒಳ್ಳೆಯ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ ಮತ್ತು ಕೆಲವರಿಂದ ಅದೂ ಸಾದ್ಯವಾದರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಇನ್ನು ಕಾರ್ ಗಳನ್ನ ಖರೀದಿ ಮಾಡದೆ ಇದ್ದರೆ ಏನು ಕಾರನ್ನ ಪ್ರತಿಯೊಬ್ಬರೂ ನೋಡಿರುತ್ತಾರೆ, ಇನ್ನು ಕಾರಿನ ಹಿಂಭಾಗದಲ್ಲಿ ಸ್ಪೋಲೈರ್ ಅನ್ನುವ ಒಂದು ಭಾಗ ಇರುತ್ತದೆ, ಹಾಗಾದರೆ ಸ್ಪೋಲೈರ್ ಎಲ್ಲಾ ಕಾರುಗಳಲ್ಲಿ ಯಾಕೆ ಇರುತ್ತದೆ ಮತ್ತು ಅದರಿಂದ ಆಗುವ…

  • ಸುದ್ದಿ

    ನಿಮ್ಮ ಮಗುವಿನ ನಿದ್ದೆಯನ್ನು ಇನ್ನೂ ಉತ್ತಮವಾಗಿಸಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ….!

    ಪಾಲಕರಾದ ಬಳಿಕ ಮಗುವಿನ ಲಾಲನೆ ಪಾಲನೆಯ ಕರ್ತವ್ಯಗಳಲ್ಲಿ ಮಗುವನ್ನು ಮಲಗಿಸುವುದೇ ಬಹಳ ಕಷ್ಟಕರವಾದ ಕೆಲಸವಾಗಿದೆ. ಈ ಬಗ್ಗೆ ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸಿಲ್ಲದ ಮಕ್ಕಳಿಗೆ ದಿನಕ್ಕೆ ಹತ್ತರಿಂದ ಹದಿಮೂರು ಘಂಟೆ ನಿದ್ದೆಯ ಅಗತ್ಯವಿದೆ. ಮಕ್ಕಳು ಬೆಳೆಯುತ್ತಾ ಹೋದಂತೆಯೇ ಈ ಅವಧಿಯೂ ಕಡಿಮೆಯಾಗುತ್ತಾ ಬರುತ್ತದೆ. 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು ಒಂಭತ್ತು ಘಂಟೆ ನಿದ್ದೆ ಅವಶ್ಯವಾಗಿದೆ. ನೈಸರ್ಗಿಕ ಬೆಳಕಿಗೆ ಒಡ್ಡುವಂತೆ ಮಾಡುವುದು ನಿಮ್ಮ ಮಕ್ಕಳನ್ನು ಆದಷ್ಟೂ ಹಗಲಿನ ವೇಳೆಯಲ್ಲಿ…

  • ಆರೋಗ್ಯ

    ಅರಿಶಿನದಲ್ಲಿದೆ ಆ್ಯಂಟಿಬಯೋಟಿಕ್ ನಿಮಗೆಗೊತ್ತಾ..?ತಿಳಿಯಲು ಓದಿ…

    ಪ್ರತಿದಿನ ಅರಿಶಿನ ಬೆರೆಸಿದ ಒಂದು ಲೋಟ ಹಾಲು ಕುಡಿದ್ರೆ ನೀವು ಆರೋಗ್ಯವಾಗಿರಬಹುದು. ಹಾಲು ಮತ್ತು ಅರಿಶಿನ ಎರಡೂ ನೈಸರ್ಗಿಕ ಆ್ಯಂಟಿಬಯೋಟಿಕ್ ಇದ್ದಂತೆ. ಹಲವು ಅಂಟುರೋಗಗಳು ಬರದಂತೆ ಇದು ತಡೆಯುತ್ತದೆ.

  • ವಿಜ್ಞಾನ

    ಕೊನೆಗೂ ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್, ರೋಚಕ ಮಾಹಿತಿ ಬಹಿರಂಗ,.!

    ಭಾರತದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ISRO ವಿಜ್ಞಾನಿಗಳು ಆಹೋರಾತ್ರಿ ಪ್ರಯತ್ನಪಡುತ್ತಿದ್ದಾರೆ. ಕಳೆದ ಸೆ.7ರಂದುಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಈಗಚಂದ್ರನ ಮೇಲೆ ಲ್ಯಾಂಡ್ ಆಗಿದೆ.ವಿಕ್ರಮ್ ಲ್ಯಾಂಡರ್ ವಾಲಿದ ಸ್ಥಿತಿಯಲ್ಲಿದೆ ಎಂದುತಿಳಿದುಬಂದಿದೆ. ಆದರೆ ಸಂಪರ್ಕ ಇನ್ನೂಸಾಧ್ಯವಾಗಿಲ್ಲ. ನಾವಿನ್ನೂ ಭರವಸೆ ಕಳೆದುಕೊಂಡಿಲ್ಲ ಎಂದುವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯ ಜತೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಅಪ್ಪಳಿಸಿರುವ ಚಂದ್ರಯಾನ-2 ನೌಕೆಯ ‘ಲ್ಯಾಂಡರ್‌’ ಛಿದ್ರವಾಗಿಲ್ಲ. ಆದರೆ ವಾಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಡರ್‌ ಜತೆ ಸಂಪರ್ಕವನ್ನು ಮರುಸ್ಥಾಪಿಸಲು ಭಾರತೀಯ ಬಾಹ್ಯಾಕಾಶ…

  • ತಂತ್ರಜ್ಞಾನ

    ಶೌಚಾಲಯಗಳ ಸ್ವಚ್ಛತೆಗೆ ರೈಲ್ವೆ ಇಲಾಖೆ 42 ಕೋಟಿ ಮೌಲ್ಯದ ಹಸುವಿನ ಬೆರಣಿ ಖರೀದಿಸ್ತಿ ಏಕೆ..?ತಿಳಿಯಲು ಇದನ್ನು ಓದಿ..

    ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.