ವಿಸ್ಮಯ ಜಗತ್ತು

132 ವರ್ಷದ ನಂತರ ಸಿಕ್ತು ಬಿಡುಗಡೆ ಭಾಗ್ಯ !!!

1142

ಏಡಿಗಳು ಹೆಚ್ಚು ಕಾಲ ಬಾಳುವುದು ತೀರ ಅಪರೂಪ ವಿಚಾರ. ಆದರೆ ನ್ಯೂಯಾರ್ಕ್ ನಲ್ಲಿ ಏಡಿಯೊಂದು ಬರೋಬ್ಬರಿ 132 ವರ್ಷ ಬದುಕಿದೆ.

ಕ್ಲಾಮ್ ಬಾರ್ ವೊಂದರಲ್ಲಿ ಕಳೆದ 20 ವರ್ಷಗಳಿಂದ ಆಕ್ವೇರಿಯಂನಲ್ಲಿದ್ದ ಈ ಏಡಿಯನ್ನು ಈಗ ಬಿಡುಗಡೆಗೊಳಿಸಲಾಗಿದೆ. ಆ್ಯಂಥೋನಿ ಎಂಬುವವರು 20 ವರ್ಷಗಳ ಹಿಂದೆ ಕ್ಲಾಮ್ ಬಾರ್ ಆರಂಭಿಸಿದ್ದರು.

ಈ ವೇಳೆ ಹಣ ನೀಡಿ ಲೂಯಿ ಹೆಸರಿನ ಏಡಿ ತಂದಿದ್ದರು. ಬಾರ್ ನಲ್ಲಿಯೇ ಆಕ್ವೇರಿಯಂ ಸಿದ್ದಪಡಿಸಿ, ಅದರಲ್ಲಿ ಏಡಿ ಸಾಕಿದ್ದರು. ಏಡಿಗೆ ಈಗ 132 ವರ್ಷಆಗಿರಬಹುದು ಎಂದು ಅಂದಾಜಿಸಲಾಗಿದೆ. ಲೂಯಿ ತೂಕ ಬರೋಬ್ಬರಿ 10 ಕೆ.ಜಿ. ಇದೆ ಎನ್ನುತ್ತಾರೆ ಆ್ಯಂಥೋನಿ.

ಕಳೆದ ವಾರ ಇಲ್ಲಿಗೆ ಆಗಮಿಸಿದ ಕೆಲವರು ಇದನ್ನು ತಮಗೆ ಮಾರುವಂತೆ ಕೋರಿದ್ದರು. ಈ ಮೊದಲು ಕೂಡ ಹಲವಾರು ಇದೇ ಬೇಡಿಕೆ ಇಟ್ಟಿದ್ದರು. ಆದರೆ ನನಗೆ ಆತನನ್ನು ಮಾರುವ ಇಚ್ಛೆ ಇರಲಿಲ್ಲ. ಈತ ನಮ್ಮ ಮನೆಯ ಸದಸ್ಯರಲ್ಲೊಬ್ಬನಾಗಿದ್ದ. ಆತನಿಗೆ ಸ್ವಾತಂತ್ರ್ಯ ನೀಡಲು ನಾವು ಇಚ್ಛಿಸಿದ್ದೆವು. ಹೀಗಾಗಿ ಲುಯಿಯನ್ನು ಸಮುದ್ರದಲ್ಲಿ ಬಿಟ್ಟು ಬಂದಿದ್ದೇವೆ ಎಂದು ಆ್ಯಂಥೋನಿ ತಿಳಿಸಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀದಿನ ಊಟದ ಜೊತೆಗೆ ತುಪ್ಪ ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ ಉಳಿಯುತ್ತಿದ್ದಾರೆ. ಅವರ ಪ್ರಕಾರ ತುಪ್ಪ ಹಾಗೂ ಎಣ್ಣೆಯಿಂದ ಮಾಡಿದ ಪ್ರತಿಯೊಂದು ಆಹಾರವೂ ಹಾನಿಕಾರ. ನೀವು ಹೀಗೆ ಯೋಚನೆ ಮಾಡುವವರಾಗಿದ್ದರೆ ನಿಮ್ಮ ಕಲ್ಪನೆ ತಪ್ಪು. ಸ್ವಲ್ಪ ಪ್ರಮಾಣದ ತುಪ್ಪ ದೇಹಕ್ಕೆ ಬೇಕು. ಹಾಗಂತ ಅತಿಯಾಗಿ ಸೇವನೆ ಮಾಡಬಾರದು. ಅಧ್ಯಯನವೊಂದರ ಪ್ರಕಾರ ಹಾಲಿನಿಂದ ಮಾಡಿದ ಪದಾರ್ಥದಲ್ಲಿ ಸ್ಯಾಚ್ಯುರೇಟೆಡ್ ಕೊಬ್ಬಿರುತ್ತದೆ. ಇದು…

  • ಸುದ್ದಿ

    ಸಾಧನೆಗೆ ವೈಖಲ್ಯಗಳು ಅಡ್ಡಿಯಲ್ಲ. ಸಾಧಿಸುವ ಛಲವೊಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೆ ಸಾಕ್ಷಿ ನೀರಜ್ ಜಾರ್ಜ್‌ ಬೇಬಿ….

    ನೀರಜ್ ಜಾರ್ಜ್‌ ಬೇಬಿ. ಊರುಗೋಲಿನ ಸಹಾಯದಿಂದ ಅತ್ತಿಂದಿತ್ತ ಓಡಾಡುವ ಯುವಕ. ಸದ್ಯ ಇದೇ ಯುವಕ ವಿಶ್ವದ ಗಮನ ಸೆಳೆದಿದ್ದಾರೆ. ಅದು ತಮ್ಮ ಸಾಧನೆಯ ಮೂಲಕ ಕೇರಳದ ಅಲುವಾ ಮೂಲದ 32 ವರ್ಷದ ನೀರಜ್ ಜಾರ್ಜ್ ಸಂಪೂರ್ಣ ಹಿಮದಿಂದ ಆವೃತವಾದ ಆಫ್ರಿಕಾದ ಅತೀ ಎತ್ತರದ ಕಿಲಿಮಂಜಾರೋ ಪರ್ವತವನ್ನೇರಿದ್ದಾರೆ. ಈ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ಇದು ನನ್ನ ಬದುಕಿನ ಅತ್ಯಂತ ಅಪೂರ್ವ ಕ್ಷಣ. ಈ ಕನಸಿನ ಈಡೇರಿಕೆಗೆ ಅತ್ಯಂತ ನೋವಿನಿಂದ ನಾನು ಐದು ವರ್ಷದಿಂದ ಕಾಯುತ್ತಿದ್ದೇನೆ’ ಎಂದು ನೀರಜ್…

  • ದೇಶ-ವಿದೇಶ

    ಭಾರತದಲ್ಲಿ ಪತ್ನಿಯನ್ನು ಬಿಟ್ಟು ವಿದೇಶಗಳಿಗೆ ಹೋಗುವ ಪತಿಯರಿಗೆ ದೊಡ್ಡ ಶಾಕ್..!ತಿಳಿಯಲು ಈ ಲೇಖನ ಓದಿ…

    ವಿದೇಶಗಳಲ್ಲಿ ಉದ್ಯೋಗ ಮಾಡುತ್ತಾ.. ಕೋಟ್ಯಂತರ ಆಸ್ತಿ ಸಂಪಾದಿಸಿದ್ದೇವೆ… ಎಂದು ಬಹಳಷ್ಟು ಮಂದಿ ಎನ್‌ಆರ್‌ಐಗಳು ನಮ್ಮ ದೇಶದ ಯುವತಿಯನ್ನು ಮದುವೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿಯರ ತಂದೆತಾಯಿ ಸಹ ಆ ಯುವಕ ಎಂತಹವನು ಎಂದು ಆಲೋಚಿಸದೆ, ಹಿಂದೆ ಮುಂದೆ ನೋಡದೆ ಲಕ್ಷಾಂತರ ವರದಕ್ಷಿಣೆ ಸುರಿದು ತಮ್ಮ ಹೆಣ್ಣುಮಕ್ಕಳ ಮದುವೆ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಚೆನ್ನಾಗಿದೆ. ಆದರೆ ಆ ಎನ್‌ಆರ್‌ಐ ಅಳಿಯ, ತಮ್ಮ ಮಗಳನ್ನು ಗರ್ಭಿಣಿ ಮಾಡಿ, ಅಥವಾ ಇನ್ಯಾವುದೋ ಕಾರಣಗಳಿಂದ ಆಕೆಯನ್ನು ಬಿಟ್ಟುಬಿಟ್ಟು ವಿದೇಶಗಳಿಗೆ ಹೋಗುತ್ತಿದ್ದಾನೆ. ಅಂತಹ ಸಮಯದಲ್ಲಾಗುತ್ತದೆ ಅವಸ್ಥೆ. ಇಂದಿನ ಬಹಳಷ್ಟು ಹೆಣ್ಣುಮಕ್ಕಳು ಇಂತಹ ತೊಂದರೆ ಅನುಭವಿಸುತ್ತಿದ್ದಾರೆ.

  • ಕಾನೂನು

    ಭಾರತದಲ್ಲಿ ಇದೇ ಮೊದಲ ಬಾರಿಗೆ,ಕೋತಿಯನ್ನು ಹಿಂಸಿಸಿ ಕೊಂದ ಆರೋಪಿಗೆ ಬೇಲ್ ನಿರಾಕರಿಸಿದ ಕೋರ್ಟ್,ಆತನಿಗೆ ವಿಧಿಸಿದ ಶಿಕ್ಷೆ ಏನು ಗೊತ್ತಾ..?

    ಮನುಷ್ಯತ್ವ ಮರೆತು ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದು ಅಮಾನುಷವಾಗಿ ಹಲ್ಲೆ ಮಾಡಿ ಕೊಂದಿದ್ದ ಆರೋಪಿ ಪವನ್ ಬಂಗಾರ್ ಗೆ ಕೋರ್ಟ್ ಎರಡು ಬಾರಿ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ಉಪಯುಕ್ತ ಮಾಹಿತಿ

    ಕೆಟ್ಟ ದೃಷ್ಟಿ ಇದ್ದರೆ ತಪ್ಪದೆ ವಿಳ್ಳೆದೆಲೆಯಿಂದ ಹೀಗೆ ಮಾಡಿ ಸಾಕು.

    ಮಕ್ಕಳು ಎಂದರೆ ಎಲ್ಲರಿಗೂ ಕೂಡ ಬಹಳನೇ ಪ್ರೀತಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಸಣ್ಣ ಪುಟ್ಟ ಮಕ್ಕಳು ಇರುತ್ತಾರೆ ನಾವು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ಸಂಜೆವರೆಗೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿ ಆಯಾಸ ಬೇಜಾರು ಬೇಸರ ಇದರಲ್ಲಿ ಮುಳುಗಿ ಹೋಗಿರುತ್ತದೆ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಪುಟ್ಟ ಮಕ್ಕಳು ಜೊತೆ ಒಂದಷ್ಟು ಸಮಯ ಕಳೆದರೆ ಆಯಾಸ ಹೋಗುತ್ತದೆ ಮನೆಯಲ್ಲಿರುವ ಮಕ್ಕಳು ದೇವರಿಗೆ ಸಮಾನ ಅವು ಯಾವಾಗಲೂ ನಗುನಗುತ್ತಾ ಖುಷಿಯಿಂದ ಇರಬೇಕು. ಆದರೆ ಸಾಮಾನ್ಯವಾಗಿ ಪುಟ್ಟಮಕ್ಕಳು ರಾತ್ರಿಯ ವೇಳೆ ಚಿಕ್ಕ ಪುಟ್ಟ…

  • ಸುದ್ದಿ

    ಯಾವುದೇ ರಸಗೊಬ್ಬರ ಬಳಕೆ ಮಾಡದೇ. ಅತೀ ಕಡಿಮೆ ಬೆಲೆಯಲ್ಲಿ, ಬೆಳೆಯನ್ನ ತೆಗೆದ ನಟ ಉಪೇಂದ್ರ.

    ಹಲವಾರು ನಟ ನಟಿಯರು ಲಾಕ್ ಡೌನ್ ಸಮಯದಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ನಟ ಉಪೇಂದ್ರ ಅವರು ರೈತನಂತೆ ಭೂಮಿಗಿಳಿದು ಕೃಷಿ ಮಾಡುವುದರಲ್ಲಿ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಕೇವಲ ಎರಡೂವರೆ ತಿಂಗಳಲ್ಲಿ ಬೆಳೆಯನ್ನೂ ತೆಗೆದಿದ್ದಾರೆ. ಹೌದು ಉಪೇಂದ್ರ ಅವರು ತಮ್ಮ ಹೊಲದಲ್ಲಿ ಹೂವು, ತರಕಾರಿ ಬೆಳೆದಿದ್ದಾರೆ. ಈ ಖುಷಿಯಲ್ಲಿ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ಸಾಲುಗಳನ್ನು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ…