ಜ್ಯೋತಿಷ್ಯ

ಈ ದಿನದ ಭವಿಷ್ಯ ಹೇಗಿದೆ ಇಲ್ಲಿ ನೋಡಿ ತಿಳಿಯಿರಿ…

490

ಬುಧವಾರ, 28/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:–

ಅರಣ್ಯ ಇಲಾಖೆ ಸಿಬ್ಬಂದಿಗೆ ಮನ್ನಣೆ ಸಿಗುವುದು. ಎಲ್ಲಾ ವಿಚಾರಗಳಲ್ಲಿ ಗೆಲುವು ನಿಮ್ಮದೆ ಆಗುವುದು. ಆದರೆ ಅದಕ್ಕೆ ಕ್ರಮಬದ್ಧ ಯೋಚನೆಯನ್ನು ರೂಪಿಸಿಕೊಳ್ಳಬೇಕಾಗುವುದು. ನಿಮ್ಮ ಆಶಾವಾದವು ನಿಮ್ಮ ಕಾರ್ಯಯೋಜನೆಗೆ ಸಹಕಾರಿಯಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದೆ.  ಸತ್ಕಾರ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ವಾಹನ ಮತ್ತು ಯಂತ್ರಗಳ ಬಿಡಿಭಾಗಗಳ ವ್ಯಾಪಾರದಿಂದಾಗಿ ವಿಶೇಷ ಲಾಭ ಹೊಂದುವಿರಿ.

ವೃಷಭ:-

ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯದ ಅರಿವು ಇದ್ದರೂ ಎಲ್ಲರನ್ನು ನಂಬಿ ಎಲ್ಲರೂ ವಿಶ್ವಾಸಿಗರು ಎಂದು ಭ್ರಮೆಗೆ ಒಳಗಾಗುವಿರಿ. ಇದರಿಂದ ನಿಮ್ಮ ಮನಸ್ಸಿಗೆ ಘಾತವಾಗುವುದು. ಆದಾಯ – ಖರ್ಚುಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವಿರಿ. ಮಿತವಾದ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಸುಧಾರಣೆ. ಸಂಸಾರದಲ್ಲಿ ನೆಮ್ಮದಿ. ವಿಶೇಷ ವ್ಯಕ್ತಿಗಳ ಆಗಮನ ಸಾಧ್ಯತೆ. ಮಾತಾ ದುರ್ಗಾದೇವಿಯನ್ನು ಸ್ಮರಿಸಿ.

ಮಿಥುನ:–

ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಗಳೊಂದಿಗೆ ಚರ್ಚೆ, ಮಹತ್ತರ ನಿರ್ಣಯ ಕೈಗೊಳ್ಳುವ ಸಾಧ್ಯತೆ. ಎಲ್ಲಾ ದಿಕ್ಕುಗಳಲ್ಲಿಯೂ ನೀವು ಹಲವು ಒತ್ತಡಗಳನ್ನು ಎದುರಿಸಬೇಕಾಗುವುದು. ಗುರುವಿನ ಅನುಗ್ರಹವಿರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವರು. ವಸ್ತ್ರಾಭರಣ ಖರೀದಿ ಮಾಡಲು ಸುಸಮಯ. ಅನಿರೀಕ್ಷಿತ ಧನಾಗಮನ.

 

ಕಟಕ :-

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎನ್ನುವಂತೆ ಆಗಬಾರದು ಎಂದರೆ ಮೈಯೆಲ್ಲಾ ಕಣ್ಣಾಗಿ ಆಗುವ ಕೆಲಸಗಳತ್ತ ಗಮನ ಹರಿಸಬೇಕು. ಇಲ್ಲದೆ ಇದ್ದಲ್ಲಿ ಬಂದ ಮಹತ್ತರ ಅವಕಾಶ ತಪ್ಪಿಹೋಗುವ ಸಾಧ್ಯತೆ ಇರುತ್ತದೆ. ಸಹಕಾರ ಸಂಘ ಮುಂತಾದ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಹುದ್ದೆ ಹೊಂದುವ ಅವಕಾಶ. ಬಂಧುಗಳ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ. ಕಾರ್ಯ ಸಾಧನೆಗಾಗಿ ಗಣೇಶ ಆರಾಧನೆ ಮಾಡಿ.

 

 ಸಿಂಹ:–

ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ಗೌರವಾದರ ಲಭಿಸಲಿದೆ. ಹೊಸ, ಹೊಸ ಯೋಜನೆಗಳು ನಿಮ್ಮ ತಲೆಯಲ್ಲಿ ಸುಳಿದು ಮಾಯವಾಗುವವು. ಆದರೆ ಅವುಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಶಿಸ್ತುಬದ್ಧತೆಯನ್ನು ಪ್ರದರ್ಶಿಸಬೇಕಾಗುವುದು. ಸಾಮಾಜಿಕವಾಗಿ ಎಲ್ಲರಿಂದ ಗುರುತಿಸಿಕೊಳ್ಳುವಿರಿ.  ಬರಹಗಾರರಿಗೆ ಕವಿಗಳಿಗೆ, ಕಲಾವಿದರಿಗೆ ಉತ್ತಮ ಅವಕಾಶ, ಪ್ರಶಸ್ತಿಗಳಿಗೆ ಭಾಜನರಾಗುವ ಸಾಧ್ಯತೆ. ಮಗಳಿಗೆ ಉತ್ತಮ ಸಂಬಂಧ ಕೂಡಿಬರಲಿದೆ.

ಕನ್ಯಾ :-

ನಿಮ್ಮ ಕಾರ್ಯಯೋಜನೆಗಳು ಸಫಲವಾಗುವುದನ್ನು ತಪ್ಪಿಸಲು ಹಲವರು ಹೊಂಚುಹಾಕಿ ಕಾಯುತ್ತಿರುವರು. ಆದರೆ ದೈವಬಲವಿರುವವರಿಗೆ ಯಾರ ಹಂಗೇನು? ನಿಮ್ಮ ಕಾರ್ಯಯೋಜನೆಗಳು ಭಗವಂತನ ದಯೆಯಿಂದ ಸಫಲಗೊಳ್ಳುವವು. ಚಿತ್ರ ಕಲಾವಿದರು, ಕವಿಗಳಿಗೆ ಮನ್ನಣೆ ದೊರಕಲಿದೆ. ರಾಜಕಾರಣಿಗಳ ಮಾತಿಗೆ ಮರುಳಾಗುವ ಸಾಧ್ಯತೆ. ಹಿತ ಶತ್ರುಗಳ ಭರವಸೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ

ತುಲಾ:–

ಪೂರ್ವಾಪರ ಯೋಚನೆಯನ್ನು ಮಾಡದೆ ದಿಢೀರನೆ ಮಾಡುತ್ತಿರುವ ಉದ್ಯೋಗಕ್ಕೆ ರಾಜೀನಾಮೆ ನೀಡದಿರಿ. ಒಂದು ವೇಳೆ ರಾಜೀನಾಮೆ ನೀಡಿದಲ್ಲಿ ಕಷ್ಟ ಪರಂಪರೆಯನ್ನು ಎದುರಿಸಬೇಕಾಗುವುದು. ಸಂಶೋಧನಾ ಕಾರ್ಯಗಳಲ್ಲಿ ತೊಡಗಿದವರಿಗೆ ಹೊಸ ಸಂಶೋಧನೆಗೆ ಆರ್ಥಿಕ ಸಹಕಾರ. ಆರಕ್ಷಕ, ರಕ್ಷಣಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಬಿಡುವಿಲ್ಲದ ಕೆಲಸ ಮತ್ತು ಜವಾಬ್ದಾರಿ ಹೆಚ್ಚಲಿದೆ. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.

ವೃಶ್ಚಿಕ :-

ಕಟ್ಟಡ, ವಸ್ತ್ರವಿನ್ಯಾಸಕಾರರಿಗೆ ಬೇಡಿಕೆಯೊಂದಿಗೆ ಉದ್ಯೋಗಾವಕಾಶ. ಹಲವು ದಿನಗಳಿಂದ ಕಂಡ ಕನಸು ನನಸಾಗುವ ಸಾಧ್ಯತೆ ಇರುತ್ತದೆ. ಎಲ್ಲಾ ಮೂಲಗಳಿಂದ ಶುಭವಾರ್ತೆಯನ್ನು ಕೇಳುವಿರಿ. ಮನೆಯ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು.  ಉದ್ಯೋಗದಲ್ಲಿರುವವರಿಗೆ ಸ್ಥಾನ ಬದಲಾವಣೆ ಅಥವಾ ಬಡ್ತಿಯಿಂದಾಗಿ ಉತ್ತಮ ಆದಾಯ. ಉತ್ತಮ ಆರೋಗ್ಯ.

 

ಧನಸ್ಸು:–

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ವಿದೇಶದಿಂದ ಬರುವ ಉದ್ಯೋಗದ ವಿಚಾರವಾಗಿ ತೀರ್ಮಾನ ಕೈಗೊಳ್ಳುವಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ. ಈ ದಿನಗಳಲ್ಲಿ ವಿದೇಶ ಪ್ರಯಾಣ ನಿಮಗೆ ಲಾಭಕಾರಿಯಾಗುವುದಿಲ್ಲ. ಕಲಾವಿದರು, ನಟರು, ಸಂಗೀತಗಾರರಿಗೆ ಉತ್ತಮ ದಿನ. ವಾಹನ ಖರೀದಿ ಅಥವಾ ವಿಕ್ರಿಯಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಹೊಸ ಆದಾಯ ಮೂಲಕ್ಕಾಗಿ ಹುಡುಕಾಟ ನಡೆಸುವಿರಿ.

 

ಮಕರ :-

ಹೊಸ ಪುಸ್ತಕ ಅಥವಾ ಗ್ರಂಥ ಸಂಪಾದನೆಯಾಗಲಿದೆ. ವಿವಾಹದ ವಿಷಯದಲ್ಲಿ ನೇರ ಮಾತುಕತೆಯಿಂದ ಯಶಸ್ವಿಯಾಗುವಿರಿ. ಸಜ್ಜನರೊಂದಿಗಿನ ಮಾತುಕತೆಯಿಂದಾಗಿ ಮಾನಸಿಕ ಉಲ್ಲಾಸ. ವೈದ್ಯರಿಗೆ ಹೆಚ್ಚಿನ ಆದಾಯ. ಸಂಸಾರ ಗುಟ್ಟು ವ್ಯಾದಿ ರಟ್ಟು ಎನ್ನುವಂತೆ ಸಾಂಸಾರಿಕ ಜೀವನದ ಒಳ ತುಮುಲಗಳನ್ನು ಹೊರಗೆ ಹಾಕುವುದು ಸೂಕ್ತವಲ್ಲ. ಮನೆಯೊಳಗಿನ ವಿಚಾರವನ್ನು 4 ಗೋಡೆಗಳ ಮಧ್ಯದಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಿ.

ಕುಂಭ:-

ಲೆಕ್ಕಪರಿಶೋಧನಾ ಅಥವಾ ಲೆಕ್ಕಪತ್ರಗಳನ್ನು ನೋಡಿಕೊಳ್ಳುವವರಿಗೆ ಬಿಡುವಿಲ್ಲದ ಕೆಲಸ. ದೂರದ ಊರಿನ ಪ್ರಯಾಣವು ದಿಢೀರನೆ ನಿರ್ಣಯವಾಗುವುದು. ಇದರಿಂದ ದಿನನಿತ್ಯದ ಕಾರ್ಯಗಳಿಗೆ ಹಿಂಚಲನೆ ಉಂಟಾಗುವುದು. ಆದಾಗ್ಯೂ ಗುರು, ಹಿರಿಯರ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ.  ಸಂಪಾದನೆಯಲ್ಲಿ ಏರುಮುಖವನ್ನು ಕಾಣುವಿರಿ. ವಾದವಿವಾದಗಳು ಬಗೆಹರಿದು ನಿರಾಳತೆ ನೆಲೆಸುವುದು.

ಮೀನ:-

ಮಹತ್ತರ ಕಾರ್ಯವನ್ನು ಹಮ್ಮಿಕೊಳ್ಳಲು ಯೋಚಿಸಿರುವಿರಿ. ಆದರೆ ಅದನ್ನು ಆರಂಭಿಸಲು ಸೂಕ್ತಕಾಲವಲ್ಲ. ಸ್ವತಂತ್ರವಾಗಿ ನಿರ್ಧಾರ ತಳೆಯದೇ ಬಂಧುಮಿತ್ರರ ಸಲಹೆಯನ್ನು ಸ್ವೀಕರಿಸಿ. ಹಾಸ್ಯ ಕಲಾವಿದರಿಗೆ ವಿಶೇಷ ಗೌರವ ಮನ್ನಣೆ. ಮಾತುಗಳಿಗೆ ಮನ್ನಣೆ ಹೊಂದುವಿರಿ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರದಿಂದಾಗಿ ಕಾರ್ಯಬಾಹುಳ್ಯದ ನಡುವೆಯೂ ನೆಮ್ಮದಿ. ಉದ್ವೇಗಗೊಳ್ಳದಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಕುಡಿತವನ್ನು ಬಿಡಿಸೋಕೆ ಈ ಮನೆ ಮದ್ದುಗಳು. ತಪ್ಪದೆ ನೋಡಿ ಚಮತ್ಕಾರಿ ಮನೆಮದ್ದುಗಳು ಇದು.

    ಈಗ 100ರಲ್ಲಿ 90 ಜನರು ಮದ್ಯಪಾನ ಮಾಡುತ್ತಾರೆ. ಒಂದು ಸಲ ಒಬ್ಬ ವ್ಯಕ್ತಿ ಕುಡಿತಕ್ಕೆ ಅಡಿಕ್ಟ್ ಆದರೆ ಅದನ್ನು ಬಿಡಲು ತುಂಬಾ ಕಷ್ಟಪಡುತ್ತಾರೆ. ಕುಡಿಯುವವರೆಲ್ಲಾ ಕೆಟ್ಟವರಲ್ಲ. ಆದರೆ ಕುಡಿತ ಮಾತ್ರ ತುಂಬಾ ಕೆಟ್ಟದು. ಅದು ನಮ್ಮ ಆರೋಗ್ಯದ ಜೊತೆಗೆ ನಮ್ಮ ಸಂಸಾರವನ್ನು ಹಾಳುಮಾಡುತ್ತದೆ. ಕುಡಿತದಿಂದ ಲಿವರ್ ಹಾಳಾಗುತ್ತೆ, ಉಸಿರಾಟದ ತೊಂದರೆ ಉಂಟಾಗುತ್ತೆ, ಹೊಟ್ಟೆಯಲ್ಲಿ ಹುಣ್ಣಾಗುತ್ತೆ, ಕಿಡ್ನಿ ಹಾಳಾಗುತ್ತೆ ಹೀಗೆ ಹಲವು ಸಮಸ್ಯೆಗಳು ಕುಡಿತದಿಂದ ಬರುತ್ತದೆ. ಕೆಲವರು ಎಷ್ಟೇ ಪ್ರಯತ್ನಿಸಿದರೂ ಕುಡಿತವನ್ನು ಬಿಡಲು ಆಗದಿದ್ದಾಗ ಈ ಮನೆಮದ್ದಗಳನ್ನು ಬಳಸಿ….

  • ಜ್ಯೋತಿಷ್ಯ

    ಶ್ರೀ ಆಂಜಿನೇಯ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನ ಒಂದು ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು ಕಷ್ಟ. ದೇಹ ಫಿಟ್ ಆಗಿರಲು ಅನೇಕರು ಹಣ್ಣುಗಳನ್ನು ತಿನ್ನುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗುವುದಿಲ್ಲ. ಕೆಲಸ, ಮಕ್ಕಳು, ಅಡುಗೆಯಲ್ಲಿ ಬ್ಯುಸಿಯಾಗಿರುವ ಅವರು ಆರೋಗ್ಯದ ಬಗ್ಗೆ ಲಕ್ಷ್ಯ ನೀಡುವುದಿಲ್ಲ. ಇಂತ ಮಹಿಳೆಯರು ದಿನಕ್ಕೊಂದರಂತೆ ಬಾಳೆ ಹಣ್ಣು ತಿಂದರೆ…

  • ಸುದ್ದಿ

    ಸರ್ಕಾರಿ ಬಸ್‌ಗಳಲ್ಲಿ ಇಂದಿನಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಸ್ಟಾರ್ಟ್ …!

    ‘ಭಾಯ್ ದೂಜ್’ ಹಬ್ಬದ ಪ್ರಯುಕ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಮಹಿಳೆಯರಿಗೆ ಉಡುಗೊರೆ ನೀಡಿದ್ದಾರೆ. ಇಂದಿನಿಂದ ದೆಹಲಿಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ದೆಹಲಿಯಲ್ಲಿ ಸಂಚರಿಸುವ 55 ಸಾವಿರ ಸರ್ಕಾರಿ ಬಸ್‌(ಡಿಟಿಸಿ)ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಅವರಿಗೆ ಪಿಂಕ್ ಟಿಕೆಟ್ ನೀಡಲಾಗುತ್ತಿದೆ. ಅದರಲ್ಲಿ ಭಾಯ್ ದೂಜ್ ಪ್ರಯುಕ್ತ ನನ್ನ ಸಹೋದರಿಯರಿಗೆ ಈ ಅಣ್ಣನಿಂದ ಪ್ರೀತಿಯ ಉಡುಗೊರೆ ಎಂದು ಬರೆಯಲಾಗಿದೆ.ಮಹಿಳೆ ಬಸ್ಸಿನಲ್ಲಿ ಪಿಂಕ್ ಟಿಕಟ್ ಹಿಡಿದು ಕುಳಿತಿರುವ ಫೋಟೊವನ್ನು ದೆಹಲಿ ಸಾರಿಗೆ ಸಚಿವ ಕೈಲಾಶ್…

  • ಸುದ್ದಿ

    ಪತಿಯನ್ನ ಆಸ್ಪತ್ರೆಗೆ ಕಳುಹಿಸಿ, ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ – ಸೆಲ್ಫಿ ವಿಡಿಯೋ ಮಾಡಿ ಮಹಿಳೆ ನೇಣಿಗೆ ಶರಣು…!

    ಚಿಕ್ಕಬಳ್ಳಾಪುರ/ಬೆಂಗಳೂರು: ಮನೆ ಮಾಲೀಕರು ಮತ್ತು ಪೊಲೀಸರ ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮೊದಲು ಮಂಜುಳಾ ಮೊಬೈಲ್‍ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಬಾಡಿಗೆ ಮನೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಜಗಳ ನಡೆದಿತ್ತು. ಜಗಳದ ಹಿನ್ನೆಲೆಯಲ್ಲಿ ಮಾಲೀಕರು ಮತ್ತು ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟೆಲೇರಿದ್ದರು….