ವ್ಯಕ್ತಿ ವಿಶೇಷಣ

10ನೇ ತರಗತಿ ಬಾಲಕನ, ಈ ಸಾಧನೆ ಬಗ್ಗೆ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ! ತಿಳಿಯಲು ಈ ಲೇಖನಿ ಓದಿ…

415

ಹಾರ್ಟ್ ಅಟ್ಯಾಕ್ ಇದು ಮನುಷ್ಯನಿಗೆ ದೊಡ್ಡ ಸವಾಲಾಗಿರುವ ಕಾಯಿಲೆ.ಯಾಕೆಂದ್ರೆ ಇದು ಬರುವ ಮುನ್ಸೂಚನೆ ಯಾರಿಗೂ ಗೊತ್ತಾಗೊದಿಲ್ಲಾ. ಹಾರ್ಟ್ ಅಟ್ಯಾಕ್ ಯಾವಾಗ ಇಲ್ಲಿ ಆಗುತ್ತೆ ಅಂತ ಹೇಳೋದಕ್ಕೆ ಬರೋದಿಲ್ಲ. ಆದ್ರೆ ಈ ಹಾರ್ಟ್ ಅಟ್ಯಾಕ್ ಬರೋ ಮುನ್ಸೂಚನೆ  ಮೊದ್ಲೇ ನಮ್ಗೆ ಗೊತ್ತಾದ್ರೆ ಹೇಗಿರುತ್ತೆ ಗೊತ್ತಾ? ಶಾಕ್ ಆಗ್ಬೇಡಿ ಮುಂದೆ ಓದಿ…

ಹೌದು, ಹೀಗೆ ಒಂದು ವೇಳೆ ಹಾರ್ಟ್ ಅಟ್ಯಾಕ್ ಬರೋದು ಮೊದ್ಲೇ ಗೊತ್ತಾದ್ರೆ ಎಷ್ಟು ಜೀವಗಳ ಪ್ರಾಣ ಉಳಿಯುತ್ತೆ! ಇದು ತುಂಬ ಗಂಭೀರವಾದ ವಿಚಾರವಾಗಿದೆ ಇಂತಹ ತಂತ್ರಜ್ಞಾನವನ್ನು ತಮಿಳುನಾಡಿನ 10ನೇ ತರಗತಿ ಬಾಲಕನೊಬ್ಬ ಅಭಿವೃದ್ಧಿ ಪಡಿಸಿದ್ದಾನೆ. ಯಾವುದೇ ಮುನ್ಸೂಚನೆ ನೀಡದೇ ಇತ್ತೀಚೆಗೆ ಹಲವಾರು ಹೃದಯಾಘಾತಗಳು ಸಂಭವಿಸಿ ಎಷ್ಟೋ ಜನ ಆರೋಗ್ಯವಂತರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ.

ಹೃದಯಾಘಾತದ ಸಮಯದಲ್ಲಿ ಎದೆನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ರೆ “ಸೈಲೆಂಟ್ ಹಾರ್ಟ್ ಅಟ್ಯಾಕ್” ಸಮಯದಲ್ಲಿ ಎದೆನೋವಾಗಲಿ ಅಥವಾ ಉಸಿರಾಟದ ತೊಂದರೆಯಾಗಲಿ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ “ಸೈಲೆಂಟ್ ಹಾರ್ಟ್ ಅಟ್ಯಾಕ್” ಅನ್ನು ಫ್ಲೂ ಜ್ವರ ಮತ್ತು ದೇಹದಲ್ಲಿನ ಏರುಪೇರು ಅಂತ ಅಂದುಕೊಂಡು ಸುಮ್ಮನಾಗುತ್ತೇವೆ.

ಪದೇ ಪದೇ ಹೀಗಾದಾಗ ಜನರು ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಅಂತ ಅಂದುಕೊಂಡು ಸುಮ್ಮನಾಗುತ್ತಾರೆ. ಆಕಾಶ್ ಅಜ್ಜ ಕೂಡ ಸೈಲೆಂಟ್ ಹಾರ್ಟ್ ಅಟ್ಯಾಕ್ನಿಂದ ಪದೇ ಪದೇ ಬಳಲುತ್ತಿದ್ದರು. ಇದು ಆಕಾಶ್ಗೆ ಹೊಸ ಡಿವೈಸ್ ಒಂದನ್ನು ಅಭಿವೃದ್ಧಿ ಪಡಿಸಲು ಪ್ರೇರಣೆಯಾಯಿತು.

ಸದ್ಯ ಈ ಪ್ರತಿಭಾನ್ವಿತ ಬಾಲಕ ಆಕಾಶ್ ಮನೋಜ್ ‘ಇನ್ನೊವೇಶನ್ ಸ್ಕಾಲರ್ಸ್‌ ಇನ್-ರೆಸಿಡೆನ್ಸ್’ ಕಾರ್ಯಕ್ರಮದನ್ವಯ ಪ್ರಣಬ್ ಮುಖರ್ಜಿಯವರ ರಾಷ್ಟ್ರಪತಿ ಆಗಿದ್ದಾಗ ಅತಿಥಿಯಾಗಿ ರಾಷ್ಟ್ರಪತಿ ಭವನದಲ್ಲಿ ವಾಸಿಸುತ್ತಿದ್ದಾನೆ. ಆತನ ಆವಿಷ್ಕಾರ ನಾನ್-ಇನ್ವೇಸಿವ್ ಸೆಲ್ಫ್ ಡಯಾಗ್ನೋಸಿಸ್ ಆಫ್ ಸೈಲೆಂಟ್ ಹಾರ್ಟ್ ಅಟ್ಯಾಕ್’ ಗುರುತಿಸಿ ಆತನಿಗೆ ರಾಷ್ಟ್ರಪತಿಗಳೊಂದಿಗೆ ಉಳಿದುಕೊಳ್ಳುವ ಭಾಗ್ಯ ದೊರೆತಿದೆ.

ಮನೋಜ್ ಅಭಿವೃದ್ಧಿ ಪಡಿಸಿರುವ ಸಾಧನದಲ್ಲಿ ಅತಿನೇರಳೆ ವಿಕಿರಣಗಳನ್ನು ಎಫ್‌ಎಬಿಪಿ3 ಸಂಗ್ರಹವಾಗಿರುವ ಚರ್ಮದ ಮೂಲಕ ಹಾಯಿಸಿದಾಗ ಅಲ್ಲಿರುವ ಪ್ರೊಟೀನ್ ಪ್ರಮಾಣವನ್ನು ಸೆನ್ಸರ್ ಗುರುತಿಸುತ್ತದೆ. ಮನೋಜ್ ಗೆ ಮುಂದೆ ಹೃದ್ರೋಗ ತಜ್ಞನಾಗುವ ಗುರಿಯಿದ್ದು ತಾನು ಅಭಿವೃದ್ಧಿಪಡಿಸಿದ ಸಾಧನದ ಪ್ರಯೋಜನವನ್ನು ಪ್ರತಿಯೊಬ್ಬ ಜನಸಾಮಾನ್ಯನಿಗೂ ತಲುಪಬೇಕು ಅನ್ನೋದು ಈ ಹುಡುಗನ ಗುರಿಯಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ