ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದಕ್ಕೂ ಮೊದಲು ಹೃದಯಾಘಾತ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ 25 ವರ್ಷ ವಯಸ್ಸಿರುವ ಯುವಕರಿಗೂ ಬಹಳಷ್ಟು ಮಂದಿಗೆ ಹೃದಯಾಘಾತ ಬರುತ್ತಿದೆ. ಬದಲಾದ ಜೀವನ ಶೈಲಿ ಕಾರಣ ಯುಕ್ತ ವಯಸ್ಸಿನಲ್ಲೇ ಬಹಳಷ್ಟು ಮಂದಿ ಹೃದಯಾಘಾತದಿಂದ ಮರಣಿಸುತ್ತಿದ್ದಾರೆ.
ಹೃದಯಾಘಾತ ಬಂದವರಿಗೆ ಎಷ್ಟು ಬೇಗ ಚಿಕಿತ್ಸೆ ನೀಡಿದರೆ ಅಷ್ಟು ಬೇಗ ಬದುಕುವ ಸಾಧ್ಯತೆಗಳು ಇರುತ್ತವೆ.. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿದರೂ ಆ ಮನುಷ್ಯನ ಪ್ರಾಣಕ್ಕೆ ಅಪಾಯ. ಆದರೆ ಆ ಹೃದಯಾಘಾತ ಯಾವ ಸಮಯದಲ್ಲಿ.. ಎಂತಹ ಪರಿಸ್ಥಿತಿಯಲ್ಲಿ ಬರುತ್ತದೋ ಯಾರೂ ಊಹಿಸಲು ಸಾಧ್ಯವಿಲ್ಲ.. ಆದರೆ ಈ ಮಹಾಮಾರಿಯನ್ನು ತಾನು ಕಂಡುಹಿಡಿದ ಸಲಕರಣೆ ಮೂಲಕ ಆರು ಗಂಟೆ ಮೊದಲೇ ಗ್ರಹಿಸಬಹದು ಎನ್ನುತ್ತಿದ್ದಾರೆ 16 ವರ್ಷದ ಬಾಲಕ ಆಕಾಶ್ ಮನೋಜ್.
ತಮಿಳುನಾಡಿನ ಆಕಾಶ್ ಹತ್ತನೇ ತರಗತಿ ಓದುತ್ತಿದ್ದಾನೆ. ಹೃದಯಾಘಾತ ಬರುವ ಸೂಚನೆಯನ್ನು ತಾನು ಕಂಡುಹಿಡಿದ ಹೊಸ ಟೆಕ್ನಿಕ್ ಮೂಲಕ ತಿಳಿದುಕೊಳ್ಳಬಹುದು ಎನ್ನುತ್ತಿದ್ದಾನೆ. ಈ ಸಲಕರಣೆಯನ್ನು ಕಂಡುಹಿಡಿದ ಆಕಾಶ್ ’ಇನ್ನೋವೇಷನ್ ಸ್ಕಾಲರ್ಸ್ ಇನ್ ರೆಸಿಡೆನ್ಸ್ ಪ್ರೋಗ್ರಾಂ’ ನಡಿ ರಾಷ್ಟ್ರಪತಿ ಕೈಲಿ ಚಿನ್ನದ ಪದಕವನ್ನು ಪಡೆದಿದ್ದಾನೆ.
ಈ ಸಂದರ್ಭದಲ್ಲಿ ಆಕಾಶ್ ಮಾತನಾಡುತ್ತಾ.. “ನಿಶ್ವಬ್ದವಾಗಿ ಬರುವ ಹೃದಯಾಘಾತ ಈ ನಡುವೆ ಹೆಚ್ಚಾಗುತ್ತಿದೆ. ಬಹಳಷ್ಟು ಮಂದಿ ಮೇಲ್ಮೋಟಕ್ಕೆ ಆರೋಗ್ಯವಾಗಿ ಕಾಣಿಸುತ್ತಾರೆ. ಹೃದಯಾಘಾತಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಲಕ್ಷಣಗಳೂ ಅವರಲ್ಲಿ ಕಾಣಿಸಲ್ಲ. ನಮ್ಮ ತಾತ ಆರೋಗ್ಯವಾಗಿ ಕಾಣಿಸುತ್ತಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದರು. ತಾತನ ಸಾವು ನನ್ನಲ್ಲಿ ತುಂಬಾ ನೋವುಂಟು ಮಾಡಿತು. ಹೃದಯಾಘಾತವನ್ನು ಮೊದಲೇ ಕಂಡುಹಿಡಿಯುವ ಸಲಕರಣೆ ಯಾವುದಾದರೂ ತಯಾರಿಸಬೇಕು ಎಂದುಕೊಂಡೆ. ಹಾಗಾಗಿ ಈ ಸಲಕರಣೆ ಕಂಡುಹಿಡಿದೆ. ಆದರೆ ಇದನ್ನು ಇನ್ನೂ ಅಭಿವೃದ್ಧಿ ಪಡಿಸಬೇಕಾಗಿದೆ. ದೇಹದ ಮೇಲೆ ಯಾವುದೇ ಗಾಯ ಮಾಡದಂತೆ ಇದನ್ನು ಉಪಯೋಗಿಸಬಹುದು” ಎಂದು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ಸಂದರ್ಭದಲ್ಲಿ ತಿಳಿಸಿದ್ದಾರೆ.
ಆಗಲಿದೆ ಎಂದು
’ರಕ್ತದಲ್ಲಿರುವ ಎಫ್ಎಬಿಪಿ3 ಎಂಬ ಸಣ್ಣ ಪ್ರೋಟೀನ್ ಬಳಸಿಕೊಂಡು ಹೃದಯಾಘಾತದ ಅಪಾಯವನ್ನು ತಿಳಿದುಕೊಳ್ಳಬಹುದು’ ಎಂದು ಆಕಾಶ್ ತಿಳಿಸಿದ್ದಾನೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇರುವವರಿಗೆ ಈ ಸಲಕರಣೆ ಅದೆಷ್ಟೋ ಉಪಯುಕ್ತವಾಗಿರುತ್ತದೆ. ಹೃದಯಾಘಾತದ ಅಪಾಯವನ್ನು ಮೊದಲೇ ಗ್ರಹಿಸಿ ವೈದ್ಯರನ್ನು ಸಂಪರ್ಕಿಸುವ ಮೂಲಕ ಸೂಕ್ತ ಚಿಕಿತ್ಸೆ ಪಡೆಯಬಹುದೆಂದು ತಿಳಿಸಿದ್ದಾನೆ ಆ ಬಾಲಕ. ಈ ಸಲಕರಣೆಯನ್ನು ತಜ್ಞರ ಸಹಾಯದಿಂದ ಅಭಿವೃದ್ಧಿ ಪಡಿಸಿ ಜನರಿಗೆ ಸಿಗುವಂತೆ ಮಾಡಿದರೆ ಅದೆಷ್ಟೋ ಜೀವಗಳನ್ನು ಉಳಿಸಬಹುದು..!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೌತೆಕಾಯಿಗಳು 95% ನೀರನ್ನು ಒಳಗೊಂಡಿರುತ್ತವೆ ಮತ್ತು ಇದು ಅವರಿಗೆ ಸೂಕ್ತವಾದ ಹೈಡ್ರೇಟಿಂಗ್ ಮತ್ತು ತಂಪಾಗಿಸುವ ಆಹಾರವಾಗಿಸುತ್ತದೆ. ಸೌತೆಕಾಯಿಗಳು ಫಿಸೆಟಿನ್ ಎಂಬ ಉರಿಯೂತದ ಫ್ಲೇವನಾಲ್ ಅನ್ನು ಹೊಂದಿರುತ್ತವೆ, ಇದು ನಿಮ್ಮ ಮೆದುಳಿನ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸೌತೆಕಾಯಿಗಳಲ್ಲಿ ಲಿಗ್ನಾನ್ಸ್ ಎಂಬ ಪಾಲಿಫಿನಾಲ್ಗಳಿವೆ, ಇದು ಸ್ತನ, ಗರ್ಭಾಶಯ, ಅಂಡಾಶಯ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೌತೆಕಾಯಿ ಸಾರವು ಅನಗತ್ಯ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತದ ಪರ ಕಿಣ್ವಗಳ ಚಟುವಟಿಕೆಯನ್ನು ತಡೆಯುವ…
ತನ್ನ ಯೋಧ ಪತಿಗಾಗಿ ಪತ್ನಿಯೊಬ್ಬರು ಬರೋಬ್ಬರಿ 19 ವರ್ಷದಿಂದ ಶಬರಿಯಾಗಿ ಕಾಯುತ್ತಿರುವ ಮನಕಲಕುವ ದೃಶ್ಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಸಾಕ್ಷಿ ಆಗಿದೆ.ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ಅವರ ಕರುಣಾಜನಕ ಕಥೆ ಇದಾಗಿದ್ದು, ಇವರು ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಶಬರಿಯಂತೆ ಕಾಯುತ್ತಿದ್ದಾರೆ. 1985ರಲ್ಲಿ ಸೇನೆಗೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ವಾಪಾಸ್ ಹೋದವರು ಇಂದಿಗೂ ಹಿಂದಿರುಗಿ ಬಂದೇ ಇಲ್ಲ. ಹಾಗಂತ ಸೇನೆಯಲ್ಲೂ ಇಲ್ಲ, ಎಲ್ಲಿದ್ದಾರೆ ಅನ್ನೋದು…
ಹೊಸತಾಗಿ ಮಾರುಕಟ್ಟೆಗೆ ಬರುವ ಎಲ್ಲ ಮಾದರಿಯ ಕಾರುಗಳಲ್ಲೂ ಏರ್ಬ್ಯಾಗ್, ಸೀಟ್ಬೆಲ್ಟ್ ರಿಮೈಂಡರ್, ಕಾರು 80 ಕಿ.ಮೀ. ವೇಗದ ಮಿತಿ ದಾಟಿದರೆ ಅಲರಾಂ ವ್ಯವಸ್ಥೆ ಕಡ್ಡಾಯ. ರಿವರ್ಸ್ ಪಾರ್ಕಿಂಗ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಕೂಡ ಇರಲೇಬೇಕು.
ಪ್ರಸ್ತುತ ದಿನಗಳಲ್ಲಿ ಮತದಾನ ಮಾಡಲು ಹಿಂದೆ ಮುಂದೆ ನೋಡುವ ಜನರ ಮುಂದೆ ಇವರು ಎಲ್ಲರಿಗಿಂತ ಮೊದಲೇ ಮತ ಹಾಕಲು ಬಯಸುತ್ತಾರೆ.ಆದರೆ ಶಿಮ್ಲಾದ ಶ್ಯಾಮ್ ಶರಣ್ ನೇಗಿ ಯವರು ಸ್ವತಂತ್ರ ಭಾರತದ ಮೊದಲ ಮತದಾರ ಎಂದು ಪ್ರಸಿದ್ಧರಾಗಿದ್ದಾರೆ.
ಪ್ರತಿದಿನ ಬೆಳಿಗ್ಗೆದ್ದಾಗ ಅದು ದೇವರು ನಮಗೆ ನೀಡಿದ ಜೀವನದ ಇನ್ನೊಂದು ಅವಕಾಶವಂತೆ. ರಾತ್ರಿಯ ಅನೈಚ್ಛಿಕ ಚಟುವಟಿಕೆಗಳಿಂದ ನಮ್ಮ ಬಾಯಿಯಲ್ಲಿಯೂ ಕೆಲವಾರು ಬದಲಾವಣೆಗಳು ಕಂಡುಬರುತ್ತದೆ. ವಿಶೇಷವಾಗಿ ಆಹಾರ ಕೊಳೆತು ಬಾಯಿಯಿಂದ ಹೊರಡುವ ದುರ್ವಾಸನೆ. ಆದ್ದರಿಂದ ಬೆಳಿಗ್ಗೆದ್ದ ತಕ್ಷಣ ಹಲ್ಲುಜ್ಜಿಕೊಳ್ಳುವುದನ್ನು ಪ್ರಥಮ ಕಾರ್ಯವಾಗಿಸುವುದು ಅಗತ್ಯ. ಒಂದು ವೇಳೆ ಈ ನಿತ್ಯಕರ್ಮದಲ್ಲಿ ನಮ್ಮ ಹಲ್ಲುಜ್ಜುವ ಬ್ರಶ್ ನಲ್ಲಿ ರಕ್ತ ಕಂಡುಬಂದರೆ? ರಕ್ತ ನೋಡಿದಾಕ್ಷಣ ನಮಗೆ ತಲೆ ತಿರುಗಬಹುದು.
ತನ್ನ ಜೀವನದಲ್ಲಿ ಎದುರಾಗುತ್ತಿದ್ದ ಅಪಾಯಾಕಾರಿ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಿ ಜೀವ ಉಳಿಸಿದ ತನ್ನ ನಾಯಿಗಳಿಗೆ ಜೀವನವನ್ನೇ ಮುಡಿಪಾಗಿಟ್ಟಿರುವುದಾಗಿ ವೇಲ್ಸ್ ಮೂಲದ ಶ್ವಾನ ಪ್ರೇಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವೇಲ್ಸ್ನ ಬಾರ್ಗೋಡ್ ನಿವಾಸಿಯಾಗಿರುವ ಲಿಂಡಾ ಮುಂಕ್ಲೆ(65) ವೇಲ್ಸ್ ಆನ್ಲೈನ್ ಪತ್ರಿಕೆಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಬಳಿ ಐದು ವರ್ಷದ ಬಿಯಾ ಮತ್ತು ಅದರ ಮೂರು ವರ್ಷದ ಹೆಣ್ಣುನಾಯಿ ಎನ್ಯಾ ಸೇರಿದಂತೆ ಒಟ್ಟು ನಾಲ್ಕು ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಎರಡು ನಾಯಿ ತನ್ನ ಬಳಿ…