ಸಿನಿಮಾ

ಹುಚ್ಚ ವೆಂಕಟ್ ಸ್ವಂತ ಹೊಸ ಪಕ್ಷ ಶುರು ಮಾಡ್ತಾರಂತೆ ,ನನ್ಮಗಂದ್ ಪ್ರಧಾನಿ ಆಗ್ತಾರಂತೆ..!ತಿಳಿಯಲು ಈ ಲೇಖನ ಓದಿ..

439

ಚಿತ್ರ ನಟ ಹುಚ್ಚ ವೆಂಕಟ್ ತಮ್ಮ ಗುರಿಯನ್ನು ಬಹಿರಂಗ ಮಾಡಿದ್ದಾರೆ. “ನಾನೇ ರಾಜಕೀಯ ಪಕ್ಷವೊಂದನ್ನು ಆರಂಭಿಸುತ್ತೇನೆ. ಈ ದೇಶದ ಪ್ರಧಾನ ಮಂತ್ರಿ ಆಗ್ತೀನಿ” ಎಂದು ಹೇಳಿದ್ದಾರೆ ವೆಂಕಟ್.

ಇಲ್ಲಿ ತಮ್ಮ ಹೊಸ ಚಿತ್ರ ಡಿಕ್ಟೇಟರ್ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ರಾಜಕೀಯಕ್ಕೆ ಪ್ರವೇಶ ಕೊಡಬೇಕೆಂದು ಆಸೆ ಇದೆ. ಆದರೆ ತಂದೆಯವರು ಈ ಬಗ್ಗೆ ಒಪ್ಪಿಗೆ ನೀಡಿಲ್ಲ ಎಂದು ಅವರು ಹೆಳಿದರು.

ಡಿಕ್ಟೇಟರ್ ಚಿತ್ರದಲ್ಲಿ ನಾನು ಪತ್ರಕರ್ತನಾಗಿ ನಟಿಸುತ್ತಿದ್ದೇನೆ. ಪತ್ರಕರ್ತರ ಕಷ್ಟ ಸುಖಗಳನ್ನು ತೆರೆಯ ಮೇಲಿಡಲಾಗುವುದು. ಚಿತ್ರಕಥೆ ನಿರ್ದೇಶನ, ನಟನೆಯ ಜೊತೆಗೆ ಚಿತ್ರದಲ್ಲಿ ಐದಾರು ಹಾಡುಗಳನ್ನು ನಾನೇ ಹಾಡಿದ್ದೇನೆ ಎಂದು ಅವರು ಹೇಳಿದರು .

ಈ ಹಿನ್ನೆಲೆಯಲ್ಲಿ 5 ವರ್ಷಗಳ ಬಳಿಕ ತಂದೆಯನ್ನು ಒಪ್ಪಿಸಿ, ರಾಜಕೀಯ ಪ್ರವೇಶ ಮಾಡಲಿದ್ದೇನೆ. ನನಗೆ 60 ವರ್ಷ ಆಗುವ ವೇಳೆಗೆ ಪ್ರಧಾನಿ ಆಗಿಯೇ ಆಗುತ್ತೇನೆ ಎಂದು ಹುಚ್ಚ ವೆಂಕಟ್ ಹೇಳಿದರು.

ಚುನಾವಣೆಯಲ್ಲಿ ನಕಲಿ ಮತ ಹಾಕದಂತೆ ಜನತೆಗೆ ಮನವಿ ಮಾಡಿದರು ಹುಚ್ಚ ವೆಂಕಟ್. ಹಣ, ಸೀರೆ, ಹೆಂಡಕ್ಕಾಗಿ ಮತಗಳನ್ನು ಮಾರಿಕೊಳ್ಳಬಾರದು ಎಂದು ಮನವಿ ಮಾಡಿದರು. ಮಂಗಳೂರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ನನಗೆ ತುಂಬಾ ನೋವಾಗಿದೆ. ನಾವೆಲ್ಲರೂ ಪ್ರೀತಿಯಿಂದ ಇರಬೇಕು. ಹಿಂಸಾಚಾರ ಬೇಡ ಎಂದು ಅವರು ಹೇಳಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ ದರ್ಶನ್ ಈಗ ಮಾಲಿವುಡ್​ನಲ್ಲಿ ತೆರೆಕಾಣಲಿದ್ದಾರೆ,…

    ಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಅಂದರೆ ಯಾರಿಗೆ  ತಾನೇ ಇಷ್ಟ ಇರಲ್ಲ ಹೇಳಿ, ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದವರು. ಈಗ ಅವರು ಮಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಹಾಗಂತ ಅವರು ಯಾವುದೇ ಮಲಯಾಳಂ ಸಿನಿಮಾ ಮಾಡುತ್ತಿದ್ದಾರೆ ಅಂತ ಅಲ್ಲ , ಅವರು ಯಾವ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲ . ಅಸಲಿ ವಿಚಾರ ಏನೆಂದರೆ, ‘ಕುರಕ್ಷೇತ್ರ’ ಸಿನಿಮಾ ಮಲಯಾಳಂನಲ್ಲಿ ನಾಳೆ ತೆರೆಕಾಣುತ್ತಿರುವ  ಕಾರಣಕ್ಕಾಗಿ ಈ ಸಮಾಚಾರ ಹುಟ್ಟುಹಾಕಿದೆ. ದರ್ಶನ್​, ಹಿರಿಯ ನಟ ಅಂಬರೀಶ್​, ನಟ ನಿಖಿಲ್​ ಕುಮಾರಸ್ವಾಮಿ, ರವಿಚಂದ್ರನ್​ ಸೇರಿ ಅನೇಕರು ಈ…

  • ಸುದ್ದಿ

    ಕಾಲೇಜುಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಓಡಾಡುತ್ತಿದ್ದೀರಾ ಹಾಗಾದರೆ ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,..!!

    ಇಸ್ಲಾಮಾಬಾದ್,  ಇನ್ನುಮುಂದೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಓಡಾಡುವಂತಿಲ್ಲ ಎಂದು ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ಸುತ್ತೋಲೆ ಹೊರಡಿಸಿದೆ. ಸದಾ ಹೊಸ ಹೊಸ ಕಾನೂನು ಕಟ್ಟಳೆಗಳಿಂದ ಸುದ್ದಿಯಲ್ಲಿರುವ ಪಾಕಿಸ್ತಾನ ಈಗ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳಿಗೆ ತಲೆನೋವಾಗಿದೆ. ಆದರೆ ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರದೇಶದ ಚಾರ್ಸಡ್ಡದಲ್ಲಿರುವ ವಿಶ್ವವಿದ್ಯಾಲಯವೊಂದು ವಿಚಿತ್ರ ಸುತ್ತೋಲೆ ಹೊರಡಿಸುವ ಮೂಲಕ ಅಚ್ಚರಿ ಮೂಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹುಡುಗ-ಹುಡುಗಿ ಒಟ್ಟಿಗೆ ಓಡಾಡುವುದು ಇಸ್ಲಾಮಿಕ್ ಸಂಸ್ಕೃತಿಯಲ್ಲ ಹೀಗಾಗಿವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಿಂದ ದೂರ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾಲೇಜ್ಕ್ಯಾಂಪಸ್‍ನಲ್ಲಿ…

  • ಉಪಯುಕ್ತ ಮಾಹಿತಿ

    ಹಿಮ್ಮಡಿಗಳ ಬಿರುಕಿನ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.

  • ಉಪಯುಕ್ತ ಮಾಹಿತಿ

    ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಅಗಲಿ ಅಡ್ರೆಸ್ ಚೇಂಜ್ ಆಗಲಿ ಈಗ ತುಂಬಾ ಸುಲಭ!ತಿಳಿಯಲು ಈ ಮಾಹಿತಿ ನೋಡಿ..

    ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ….

  • ಉಪಯುಕ್ತ ಮಾಹಿತಿ

    ವೀಳ್ಯದೆಲೆಯಾ ಬಗ್ಗೆ ನಿಮ್ಗೆ ಗೊತ್ತಿಲ್ಲದಿರೋ ಮಾಹಿತಿ…ತಿಳಿಯಲು ಈ ಲೇಖನ ಓದಿ ಮತ್ತು ಮರೆಯದೇ ಶೇರ್ ಮಾಡಿ..

    ವೀಳ್ಯದೆಲೆ ಎಂದರೆ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚು ಬಳಸುವ ಎಲೆ.ತಾಂಬೂಲದಲ್ಲಿ ಪ್ರಮುಖ ಸ್ಥಾನ ಹೊಂದಿರುವ ವೀಳ್ಯದೆಲೆಗೆ ಸದಾ ಬೇಡಿಕೆ ಇದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.ಆದರೆ ಸಾಂಪ್ರದಾಯಕವಾಗಷ್ಟೆ ಅಲ್ಲ, ಇದರ ಔಷಧೀಯ ಗುಣಗಳು ಕೂಡ ಹಲವು. ಆದರೆ ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಹಾಗೂ ತಿವಿದ ಗಾಯವಾಗಿದ್ದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ…

  • ಕಾನೂನು

    ತ್ರಿವಳಿ ತಲಾಖ್‌ ರದ್ದು! ಸುಪ್ರಿಂ ಕೋರ್ಟ್‌ನ ಐತಿಹಾಸಿಕ ತೀರ್ಪು…

    ತ್ರಿವಳಿ ತಲಾಖ್‌ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್‌ ಅನ್ನು ರದ್ದು ಪಡಿಸಿದೆ.