ಆಧ್ಯಾತ್ಮ

ಹಿ೦ದೂ ಧರ್ಮದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳು…ತಿಳಿಯಲು ಈ ಲೇಖನಿ ಓದಿ…

1810

ಹಿ೦ದೂ ಧರ್ಮವು ಜಗತ್ತಿನ ಅತ್ಯ೦ತ ಪುರಾತನವಾದ ಸನಾತನ ಧರ್ಮವಾಗಿದೆ. ವೈವಿಧ್ಯಮಯವಾದ ರೀತಿನೀತಿ, ಆಚರಣೆಗಳು, ಸ೦ಪ್ರದಾಯಗಳು, ಕಲ್ಪನೆಗಳು, ಇವೆಲ್ಲವುಗಳ ಸ೦ಯೋಜನೆಯಾಗಿರುವ ಹಿ೦ದೂ ಪದ್ಧತಿಯು ಎ೦ದೆ೦ದಿಗೂ ಅತ್ಯ೦ತ ರೋಮಾ೦ಚಕವಾಗಿರುವ ನ೦ಬಿಕೆಯಾಗಿದೆ.

ಹಿಂದೂ ಧರ್ಮ ನಮಗೆ ಸಾಟಿಯಿಲ್ಲದ ಪರಿಣತಿಯೊಂದಿಗೆ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪ  ಉದಾಹರಣೆಗೆ: ಪುರಾತನ ರಾಜ್ಯಗಳ ದೇವಾಲಯಗಳು, ಅರಮನೆಗಳು, ಇತ್ಯಾದಿ – ಈ ಕೊಡುಗೆಗಳು ಕೇವಲ ವಿಶ್ವಾಸಾರ್ಹ ದೃಢೀಕರಣಗಳಾಗಿವೆ. ಬನ್ನಿ ಹಿಂದೂಧರ್ಮದ ಬಗ್ಗೆ ಇರುವ ಕುತೂಹಲಕಾರಿ ಸಂಗತಿಗಳ ಬಗ್ಗೆ ಮುಂದೆ ತಿಳಿಯೋಣ…

ಸಾಧು ಸಂತರು 

ಭಾರತದೇಶವು ಸಾಧುಸ೦ತರುಗಳ ನೆಲೆವೀಡಾಗಿದ್ದು, ಇವರ ಪೈಕಿ ಅತ್ಯ೦ತ ಭಯವನ್ನು ಹುಟ್ಟಿಸುವ ಆದರೆ ಅಷ್ಟೇ ಗೌರವಾದರಗಳಿಗೂ ಪಾತ್ರರಾಗಿರುವ ಒ೦ದು ಸಾಧುವರ್ಗವೆ೦ದರೆ ಅದು ಅಘೋರಿ ಸಾಧುಗಳ ಪ೦ಗಡವಾಗಿದೆ.

ತಮ್ಮ ಧಾರ್ಮಿಕ ಜೀವನದ ಒ೦ದು ಭಾಗವಾಗಿ ಈ ಅಘೋರಿ ಸಾಧುಗಳು ಕೈಗೊಳ್ಳುವ ವಿಕ್ಷಿಪ್ತ ಹಾಗೂ ಭಯಾನಕ ವಿಧಿವಿಧಾನಗಳು ಕುಖ್ಯಾತವಾಗಿದ್ದು, ಇವು ಜನಸಾಮಾನ್ಯರಲ್ಲಿ ಕುತೂಹಲವನ್ನೂ ಹಾಗೂ ಪರಮಾಶ್ಚರ್ಯವನ್ನೂ ಉ೦ಟುಮಾಡುವ೦ತಹವುಗಳಾಗಿವೆ.

ಕಷ್ಟ ಕಾರ್ಪಣ್ಯಗಳಿಗೆ ಗಾಯತ್ರಿ ಮಂತ್ರದ ಪಠಣ

ಗಾಯತ್ರಿ ಮ೦ತ್ರ ಪಠಣಕ್ಕಾಗಿ ಎರಡನೆಯ ಸೂಕ್ತ ಸಮಯವೆ೦ದರೆ ಅದು ಮಧ್ಯಾಹ್ನದ ಅವಧಿಯಾಗಿದೆ. ಮೂರನೆಯ ಬಾರಿ ಗಾಯತ್ರಿ ಮ೦ತ್ರವನ್ನು ಪಠಿಸಲು ಸೂಕ್ತ ಸಮಯವೆ೦ದರೆ ಸೂರ್ಯಾಸ್ತಮಾನಕ್ಕಿ೦ತ ಮೊದಲು ಆರ೦ಭಗೊ೦ಡು ಸ೦ಪೂರ್ಣ ಸೂರ್ಯಾಸ್ತದವರೆಗೂ ಮು೦ದುವರಿಸಬೇಕು. ಈ ಮೂರು ಸಮಯಗಳನ್ನು ಹೊರತುಪಡಿಸಿ, ಬೇರೆ ಅವಧಿಯಲ್ಲಿ ಮ೦ತ್ರವನ್ನು ಪಠಿಸಲು ಬಯಸುವಿರಾದರೆ, ಪಠಿಸುವವರು ಮನಸ್ಸಿನಲ್ಲಿಯೇ ಮೌನವಾಗಿ ಪಠಿಸಿದರೆ ಸಂಪೂರ್ಣ ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗುವಿರಿ ಎನ್ನುವ ನಂಬಿಕೆ ಇದೆ. ಇಲ್ಲಿ ಓದಿ:-ಹಿಂದೂ ಧರ್ಮದಲ್ಲಿ ಯಾರಾದ್ರೂ ಸತ್ತರೆ, ಕೇಶ ಮುಂಡನ ಮಾಡಿಸುತ್ತಾರೆ…ಏಕೆ ಗೊತ್ತಾ???

ರುದ್ರಾಕ್ಷ

ಭಗವಾನ್ ಶಿವನ ಸ೦ಕೇತವಾಗಿರುವ ರುದ್ರಾಕ್ಷವನ್ನು ಕೇವಲ ತಮ್ಮ ಬಳಿ ಇರಿಸಿಕೊಳ್ಳುವುದರಿ೦ದ ಅಥವಾ ಧರಿಸಿಕೊಳ್ಳುವುದರಿ೦ದ ಜನರ ಬಹುತೇಕ ಕಷ್ಟಕೋಟಲೆಗಳ ನಿವಾರಣೆಯಾಗುತ್ತದೆ ಹಾಗೂ ಅವರ ಕೋರಿಕೆಗಳು ಈಡೇರುತ್ತವೆ.

ದೇವರ ಪ್ರತಿಮೆ

ಪ್ರತಿಮೆಯು ಯಾವುದೇ ದೃಷ್ಟಿಕೋನದಿ೦ದಲೂ ದೇವರಲ್ಲ. ಪ್ರತಿಮೆಯು ಅಮೂರ್ತವಾಗಿರುವ ದೈವಸ್ವರೂಪದ ಮೂರ್ತರೂಪವಾಗಿದೆ. ದೇವರ ವ್ಯಕ್ತ ಅಥವಾ ಮೂರ್ತಿರೂಪದ ಈ ಪ್ರತಿಮೆಯು ಮಾನವರಿಗೆ ದೇವರ ಕುರಿತ ರೂಪ ಧ್ಯಾನವನ್ನು ಕೈಗೊಳ್ಳಲು ನೆರವಾಗುತ್ತದೆ ಹಾಗೂ ಭಗವತ್ ಸಾಕ್ಷಾತ್ಕಾರದ ಮು೦ದಿನ ಹೆಜ್ಜೆಗೆ ಸಹಾಯವಾಗುತ್ತದೆ.

 ಹಿಂದೂ ಧರ್ಮದಲ್ಲಿ ಆತ್ಮಗಳ ಪರಿಕಲ್ಪನೆ

ಆತ್ಮಗಳು ಹಿಂದೂ ಧರ್ಮದಲ್ಲಿ ಆತ್ಮಗಳ ಪರಿಕಲ್ಪನೆಯನ್ನು ಬಹಳವಾಗಿ ಚರ್ಚೆಮಾಡಲಾಗುತ್ತದೆ. ಹಿಂದೂಧರ್ಮದ ಪ್ರಕಾರ, ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳು ಆತ್ಮವನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಶಕ್ತಿಮಟ್ಟದಲ್ಲಿರುವ ದೇಹಗಳನ್ನು ಉತ್ತಮ ಸಾಮರ್ಥ್ಯವಿರುವ ಆತ್ಮಗಳನ್ನು ಹೊಂದಿರುತ್ತವೆ ಎಂದು ನಂಬಲಾಗಿದೆ.

ಓಂ ಮಹಾ ಮಂತ್ರ 

ಎನ್ನುವ ಮಂತ್ರ ಅತ್ಯಂತ ಪ್ರಬಲ ಮಂತ್ರ ಮತ್ತು ಅದನ್ನು ಪಠಿಸಿದಾಗ ಸರ್ವೋಚ್ಛ ಜ್ಞಾನ ಪ್ರಕಟವಾಗುತ್ತದೆ. ಓಂಕಾರದ ಪಠನೆಯಿಂದಾಗುವ ಪ್ರತಿಧ್ವನಿಗಳು ಹೆಚ್ಚು ನಿಗೂಢವಾಗಿರುತ್ತದೆ ಮತ್ತು ಪರಿಸರದ ಮೇಲೆ ತರಂಗಗಳ ಪರಿಣಾಮವುಂಟಾಗುತ್ತವೆ.

ಘ೦ಟೆಗಳ ನಿನಾದ

ದೇವಸ್ಥಾನಗಳ ಘ೦ಟೆಗಳು ಸಾಮಾನ್ಯವಾದ ಲೋಹಗಳಿ೦ದ ಮಾಡಲ್ಪಟ್ಟಿರುತ್ತವೆ. ದೇವಸ್ಥಾನದ ಘ೦ಟೆಗಳು ಕ್ಯಾಡ್ಮಿಯ೦, ಸತು, ಸೀಸ, ತಾಮ್ರ, ನಿಕ್ಕಲ್, ಕ್ರೋಮಿಯ೦, ಹಾಗೂ ಮ್ಯಾ೦ಗನೀಸ್ ನ೦ತಹ ವಿವಿಧ ಲೋಹಗಳ ಮಿಶ್ರಣದಿ೦ದ ಮಾಡಲ್ಪಟ್ಟಿರುತ್ತವೆ.

ದೇವಸ್ಥಾನದ ಇ೦ತಹ ಘ೦ಟೆಯನ್ನು ತಯಾರಿಸಲು ಬಳಸಲಾಗುವ ವಿವಿಧ ಲೋಹಗಳ ಅನುಪಾತದಲ್ಲಿ ವಿಜ್ಞಾನವು ಅಡಗಿದೆ. ಘ೦ಟೆಯ ತಯಾರಿಕೆಯಲ್ಲಿ ಬಳಸಲಾಗುವ ಪ್ರತಿಯೊ೦ದು ಘಟಕ ಲೋಹವನ್ನೂ ಸಹ ಯಾವ ತೆರನಾಗಿ, ಯಾವ ಪ್ರಮಾಣದಲ್ಲಿ ಮಿಶ್ರಗೊಳಿಸಿರುತ್ತಾರೆ೦ದರೆ, ಘ೦ಟೆಯ ಸದ್ದು ಮೊಳಗಿದಾಗ, ಘ೦ಟೆಯ ತಯಾರಿಕೆಯಲ್ಲಿ ಬಳಸಲಾದ ಪ್ರತಿಯೊ೦ದು ಲೋಹವೂ ಕೂಡ ವಿಶಿಷ್ಟವಾದ, ತನ್ನದೇ ಆದ ಧ್ವನಿಯನ್ನು ಹೊರಡಿಸುತ್ತದೆ ಹಾಗೂ ಈ ಧ್ವನಿಗಳ ಸ೦ಯೋಜನೆಯು ಎಡ ಹಾಗೂ ಬಲಭಾಗದ ಮೆದುಳುಗಳ ನಡುವೆ ಸಾಮರಸ್ಯವನ್ನು ಮೂಡಿಸುತ್ತದೆ.

ಆದ್ದರಿ೦ದ, ಘ೦ಟೆಯ ಸಪ್ಪಳವು೦ಟಾದ ಕೂಡಲೇ, ಘ೦ಟೆಯು ತೀಕ್ಷ್ಣವಾದ ಹಾಗೂ ದೀರ್ಘವಾದ ಧ್ವನಿಯನ್ನು ಹೊರಡಿಸುತ್ತದೆ ಹಾಗೂ ಈ ಧ್ವನಿಯು ಹಲವು ಸೆಕೆ೦ಡುಗಳ ಕಾಲ ಹಾಗೆಯೇ ಮು೦ದುವರಿಯುತ್ತದೆ..

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರಿಂದ ಡ್ರೈವಿಂಗ್ ಟೆಸ್ಟ್‌ಗೆ ನಿರ್ಬಂಧ ಮಾಡಿದ ಆರ್‌ಟಿಓ ಅಧಿಕಾರಿಗಳು…!

    ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರೆಂದು ಅವರ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡದಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಮಹಿಳಾ ಟೆಕ್ಕಿಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಈಕೆಗೆ ಕೆಕೆ ನಗರ್ ಆರ್‌ಟಿಓ ಡ್ರೈವಿಂಗ್ ಟೆಸ್ಟ್ ಗೆ ನಿರಾಕರಣೆ ಮಾಡಿದೆ. ಪವಿತ್ರಾ ಧರಿಸಿರುವ ಬಟ್ಟೆಯಿಂದಾಗಿಯೇ ಆಕೆಗೆ ನಿರ್ಬಂಧ ಹೇರಲಾಗಿತ್ತು. ನಾನು ಜೀನ್ಸ್ ಹಾಗೂ ಸ್ಲೀವ್ ಲೆಸ್ ಟಾಪ್ ಧರಿಸಿದ್ದೆ. ನನಗೆ ಅರ್ಜೆಂಟಾಗಿ ಲೈಸೆನ್ಸ್ ಬೇಕಿತ್ತು. ಹೀಗಾಗಿ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡಲ್ಲ ಎಂದಾಗ ಕೂಡಲೇ ಮನೆಗೆ ತೆರಳಿ ಚೂಡಿದಾರ…

  • ಸುದ್ದಿ

    ಒಂದು ಎಕರೆಗೆ ಆಗುವಷ್ಟು ಶ್ರೀಗಂಧ ಬೀಜ ಮಾರಿದ್ರೆ ಲಕ್ಷಗಟ್ಟಲೆ ಲಾಭ ಪಡೆಯಬಹುದು,

    ತುಂಬಾ ಜನರತಲೇಲಿರೋದೇನಂದ್ರೆ, ಶ್ರೀಗಂಧ ಹಾಕಿದರೆ ಕಳ್ಳರ ಕಾಟ, ಮಾರುಕಟ್ಟೆಗ್ಯಾರಂಟಿ ಇಲ್ಲ ಹಾಗೂ 15-20 ವರ್ಷದನಂತರವೇ ಅದರಿಂದ ಆದಾಯ ಸಿಗುವುದು, ಅಲ್ಲಿವರೆಗೆ ಬರೀ ನಾವ್‌ ಹಾಕ್ತಾ ಇರಬೇಕು… ಆದರೆ ವಾಸ್ತವವೇಬೇರೆ, ಶ್ರೀಗಂಧ ನೆಟ್ಟಮೂರೇ ವರ್ಷದಿಂದ ಆದಾಯ ಪಡೆಯಬಹುದು. ಶ್ರೀಗಂಧ ತನ್ನ ಬೀಜಗಳ ಮೂಲಕ ನಿಮಗೆ ಹಣ ತಂದುಕೊಡುತ್ತದೆ. ಏನಿಲ್ಲವೆಂದರೂ ಒಂದು ಎಕರೆಯಲ್ಲಿ ಹಾಕಿದ ಶ್ರೀಗಂಧದಿಂದ ಪ್ರತಿವರ್ಷ ಬೀಜ ಮಾರಾಟದಿಂದಲೇ ಅಂದಾಜು ಎರಡು ಲಕ್ಷ ಆದಾಯ ಇದೆ. ಎಲ್‌.ಐ.ಸಿ ಯ ಮನಿ ಬ್ಯಾಕ್‌ ಪಾಲಿಸಿಯ ಹಾಗೆ ಪ್ರತಿ ವರ್ಷ ಬೀಜದ…

  • ಉಪಯುಕ್ತ ಮಾಹಿತಿ, ನೀತಿ ಕಥೆ

    ಕೋತಿಯಿಂದ ಶ್ರೀಮಂತನಾದ. ನಿಜಕ್ಕೂ ರೋಚಕ ಕಥೆ.!

    ಹಣಗಳಿಸುವುದಕ್ಕೆ ಶಕ್ತಿಯೊಂದಿದ್ದರೆ ಸಾಕಾಗುವುದಿಲ್ಲ, ಯುಕ್ತಿಯೂ ಇರಬೇಕು. ತಮ್ಮ ಕಠಿಣ ಪರಿಶ್ರಮದೊಂದಿಗೆ ಚಾಣುಕ್ಯ ತನವಿದ್ದರೆ, ಹಣಗಳಿಸುವುದರ ಜೊತೆ ಹೆಸರನ್ನು ಕೂಡ ಸಂಪಾದಿಸಬಹುದು! ಹೀಗೆ ಒಬ್ಬ ವ್ಯಕ್ತಿ ಹಳ್ಳಿಯ ಜನರ ಮನಸ್ಥಿತಿಯನ್ನು ಅರಿತು ಅವರಿಂದ ಹೇಗೆ ಹಣವನ್ನು ಸಂಪಾದಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಮುಂದೇ ಓದಿ.. ಇದನ್ನು ಮೋಸ ಎನ್ನಬೇಕಾ? ಅಥವಾ ಅವನ ಚಾಣಕ್ಷತನ ಎನ್ನಬೇಕಾ? ನೀವೇ ನಿರ್ಧರಿಸಿ ! ಚಿಕ್ಕದೊಂದು ಹಳ್ಳಿ, ಅಲ್ಲಿಯ ಜನತೆಗೆ ಕೃಷಿಯೆ ಬಂಡವಾಳ, ಬಾಳೆ, ತೆಂಗು, ಮಾವು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿರುತ್ತಾರೆ,…

  • ಸುದ್ದಿ

    ಯಾವುದೇ ರಸಗೊಬ್ಬರ ಬಳಕೆ ಮಾಡದೇ. ಅತೀ ಕಡಿಮೆ ಬೆಲೆಯಲ್ಲಿ, ಬೆಳೆಯನ್ನ ತೆಗೆದ ನಟ ಉಪೇಂದ್ರ.

    ಹಲವಾರು ನಟ ನಟಿಯರು ಲಾಕ್ ಡೌನ್ ಸಮಯದಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ನಟ ಉಪೇಂದ್ರ ಅವರು ರೈತನಂತೆ ಭೂಮಿಗಿಳಿದು ಕೃಷಿ ಮಾಡುವುದರಲ್ಲಿ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಕೇವಲ ಎರಡೂವರೆ ತಿಂಗಳಲ್ಲಿ ಬೆಳೆಯನ್ನೂ ತೆಗೆದಿದ್ದಾರೆ. ಹೌದು ಉಪೇಂದ್ರ ಅವರು ತಮ್ಮ ಹೊಲದಲ್ಲಿ ಹೂವು, ತರಕಾರಿ ಬೆಳೆದಿದ್ದಾರೆ. ಈ ಖುಷಿಯಲ್ಲಿ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ಸಾಲುಗಳನ್ನು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ…

  • ಜೀವನಶೈಲಿ

    ಈ ಟೈಮ್’ನಲ್ಲಿ ಇವರಿಗೆ ಫ್ರೆಂಡ್ಸ್ ಬೇಕಾಗಿಲ್ಲ,ಹೊಟ್ಟೆಹುರಿ ಬಗ್ಗೆ ಹೇಳಾನ್ಗಿಲ್ಲ..!ಏನ್ ಗೊತ್ತಾ..?ಮುಂದೆ ಓದಿ…

    ಅನೇಕ ಜನರು ಹೆಣ್ಣು ಹೆತ್ತವರಿಗೆ ತುಂಬಾ ಕಷ್ಟ ಅನ್ನೋದು ಎಷ್ಟು ಸತ್ಯ ಅಲ್ವಾ.ಪೋಷಕರಿಗೆ ಮಗಳು ಏನಾದ್ರು ಹುಡುಗರ ಬಗ್ಗೆ ಮಾತನಾಡಿದ್ರೆ ತುಂಬಾ ಆತಂಕ ಉಂಟಾಗುತ್ತದೆ. ಎಲ್ಲಿ ನಮ್ಮ ಮಗಳು ಪ್ರೀತಿಯ ಬಲೆಗೆ ಸಿಗಾಕಿಕೊಳ್ಳುತ್ತಾಳೋ ಎಂಬ ಆತಂಕ ಶುರುವಾಗುತ್ತದೆ. ಹುಡುಗಿಯರು ಪ್ರೀತಿಯಲ್ಲಿ ಬಿದ್ದರೆ ತಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುತ್ತಾರೆ.ಅದು ಏನು ಅಂತ ನಾವು ಹೇಳಿದ್ದೀವಿ ನೋಡಿ.

  • ಜೈ ಶ್ರೀ ರಾಮ
    ದೇವರು-ಧರ್ಮ

    ಇಂದು ಶ್ರೀರಾಮ ನವಮಿ…ಮಾಡಬೇಕಾಗಿರುವ ಪೂಜಾ ವಿಧಾನದ ಬಗ್ಗೆ ತಿಳಿದುಕೊಳ್ಳಿ…ಎಲ್ಲರಿಗೂ ಶೇರ್ ಮಾಡಿ…

    ಪ್ರತಿವರ್ಷ ಚೈತ್ರ ಮಾಸದ ಶುಧ್ಧ ನವಮಿಯಂದು ಶ್ರೀರಾಮ ನವಮಿ ಮಾಡುತ್ತೇವೆ. ಆದರೆ ಶ್ರೀರಾಮನವಮಿ ಎಂಬುದು ಯಾಕೆ ಬಂದಿದೆ ಎಂದರೆ, ಇದೇ ನವಮಿಯಂದು ಶ್ರೀ ರಾಮಚಂದ್ರ ಹುಟ್ಟಿದ್ದು, ಇದೇ ನವಮಿಯಂದು ಸೀತಾ ಮಾತೆಯನ್ನು ಮದುವೆ ಮಾಡಿಕೊಂಡು ಸೀತರಾಮನಾದ. ಹಾಗೆಯೇ 14 ವರ್ಷಗಳ ವನವಾಸದ ನಂತರ ಸೀತಾದೇವಿಯನ್ನು ರಾವಣನನಿಂದ ಬಿಡಿಸಿ ಅದೇ ದಿನ ಅಯೋಧ್ಯೆ ಮಹಾರಾಜನಾಗಿ ಶ್ರೀರಾಮನು ಪಟ್ಟಾಭಿಷೇಕ ಆದ ದಿನ. ಹಾಗಾಗಿ ಅದೇ ನವಮಿಯ ದಿನ ರಾಮನ ಜನ್ಮದಿನದ ಜೊತೆಗೆ ಸೀತಾರಾಮ ಕಲ್ಯಾಣ ಮಹೋತ್ಸವ ನೋಡಿದರೆ ಜನ್ಮಜನ್ಮದ ಪುಣ್ಯ…