ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಾವುಗಳನ್ನು ಕಂಡ್ರೆ ಎಂತಹವರಿಗೂ ಎದೆ ಜಲ್ ಅನ್ನುವ ಅನುಭವ ಆಗ್ತದೆ. ಆಗಂತ ಹಾವಿಗೆ ಭಯ ಇಲ್ದೆ ಇರಲ್ಲ. ಆದ್ರೆ ಹಾವನ್ನು ಸಾಯಿಸಬೇಕಾದ್ರೆ ಅರ್ಧ ಪ್ರಾಣ ಹೋಗಿ ಅರ್ಧ ಪ್ರಾಣ ಉಳಿಯುವಂತೆ ಸಾಯಿಸಬೇಡಿ ಅಂತ ಹೇಳುವುದು ವಾಡಿಕೆ. ಯಾಕಂದ್ರೆ ಅಂತಹವರನ್ನು ಏಟು ತಿಂದ ಹಾವುಗಳು ಸುಮ್ಮನ್ನೇ ಬಿಡೋದಿಲ್ಲ ಅಂತ ಹೇಳ್ತಾರೆ.
ಅದಕ್ಕೆ ಒಂದು ಹಾಡನ್ನೇ ಬರೆದಿದ್ದಾರೆ. ಹಾವಿನ ದ್ವೇಷ ಹನ್ನೆರಡು ವರುಷ ಎಂದು. ಹಾಗಾದ್ರೆ ಹಾವು ದ್ವೇಷ ಸಾದಿಸುತ್ತದಯೇ. ಅದರಲ್ಲೂ ನಿಜಾನ ಸತ್ಯನಾ? ಮುಂದೆ ಓದಿ….
ಹಾವನ್ನು ಸಾಯಿಸುವ ಸಮಯದಲ್ಲಿ,ಹಾವು ಗಾಯಗೊಂಡು ತಪ್ಪಿಸಿಕೊಂಡು ಹೋದರೆ ಅದು ಹಗೆ ಸಾಧಿಸುತ್ತದೆಯೇ? ಹೊಡೆಯುವ ಸಮಯದಲ್ಲಿ ಆ ಹಾವು ಹೊಡೆದವನ ಚಹರೆಯನ್ನು ಜ್ಞಾಪಕವಿಟ್ಟುಕೊಂಡು ನಂತರ ಪ್ರತೀಕಾರ ತೀರಿಸಿಕೊಳ್ಳುತ್ತದೆಯೇ? ಎಂದು ಹಿರಿಯರನ್ನು ಕೇಳಿದರೆ,ಹೌದೆನ್ನುತ್ತಾರೆ. ಕೆಲವು ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ನಮಗೆ ಅಚ್ಚರಿಯ ಸಂಗತಿಗಳು ತಿಳಿಯುತ್ತವೆ.
ಹಾವಿಗೆ ಅಷ್ಟೊಂದು ಜ್ಞಾಪಕ ಶಕ್ತಿ ಇದಿಯೇ!
ಸತ್ಯ ಸಂಗತಿಯೆಂದರೆ, ಹಾವಿಗೆ ಜ್ಞಾಪಕ ಶಕ್ತಿಯೇ ಇರುವುದಿಲ್ಲವಂತೆ…ಹಾಗಿರುವಾಗ ಗಾಯಗೊಂಡ ಹಾವು ,ಹೊಡೆದವರನ್ನು ಜ್ಞಾಪಕವಿಟ್ಟುಕೊಂಡು ಹಗೆ ಸಾಧಿಸುವ ಸಂಭವವೇ ಇಲ್ಲವಂತೆ. ಇವೆಲ್ಲವೂ ಕೇವಲ ನಮ್ಮ ಹಿರಿಯರ ಕಲ್ಪಿತ ನಂಬಿಕೆಯಂತೆ ! ಆದರೆ, ಇದಕ್ಕೂ ಒಂದು ಕಾರಣವಿದೆಯೆಂದು ಬಹಳಷ್ಟು ಜನ ಹೇಳುತ್ತಾರೆ.
ಇದರ ಹಿಂದೆ ಇದೆ ಒಂದು ಸ್ಟೋರಿ…
ಒಂದು ಕಾಲದಲ್ಲಿ ಜನರ ಪ್ರಧಾನ ವೃತ್ತಿ ಬೇಸಾಯವಾಗಿತ್ತು. ತಾವು ಬೆಳೆದ ಬೆಳೆಗಳನ್ನು ಇಲಿಗಳು ನಾಶಮಾಡುತ್ತಿದ್ದವಂತೆ. ಹಾವುಗಳನ್ನು ಕಂಡ ಕಂಡಲ್ಲಿ ಸಾಯಿಸುತ್ತಿದ್ದರೆ ಹಾವುಗಳ ಸಂಖ್ಯೆ ಕಡಿಮೆಯಾಗಿ… ಇಲಿಗಳ ಸಂಖ್ಯೆ ಹೆಚ್ಚಾಗತೊಡಗಿ ಬೆಳೆ ಹಾನಿಯೂ ಹೆಚ್ಚಾಗತೊಡಗುತ್ತದೆಂದು, ಮುಂದಾಲೋಚನೆಯಿಂದ ಹಾವನ್ನು ಸಾಯಿಸಬೇಡಿ.
ಒಂದು ವೇಳೆ ಅದು ಸಾಯದೆ ತಪ್ಪಿಸಿಕೊಂಡು ಹೋದರೆ, ಗಾಯಗೊಂಡ ಹಾವು ಹಗೆ ಸಾಧಿಸುತ್ತದೆ ಎಂದು ಭಯಹುಟ್ಟಿಸಿದರಂತೆ. ನಮ್ಮ ಪೂರ್ವಜರು ಹಾವನ್ನು ದೇವರೆಂದು ಪೂಜಿಸುವುದು, ಪ್ರಕೃತಿಯ ಮೇಲೆ ಪ್ರೀತಿಯುಳ್ಳವರಾಗಿದ್ದುದೇ ಅಸಲು ಕಾರಣವಂತೆ.!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಣಿ ಪದ್ಮಿನಿ 13ನೇ ಶತಮಾನದ ರಾಜಸ್ಥಾನದ ಮೇವಾಡ್ ಸಂಸ್ಥಾನ (ಈಗಿನ ಚಿತ್ತೋಡಗಢ, ರಾಜಸ್ಥಾನ) ರಾಜ ರಾವಲ್ ರತನ ಸಿಂಗ್ ನ ರಾಣಿಯಾಗಿದ್ದಳು.ರಾಣಿ ಪದ್ಮಿನಿಯು ತುಂಬಾ ಸೌಂದರ್ಯವತಿಯಾಗಿದ್ದಳು ಕೂಡ. ಆಗ ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ದೊರೆಯಾಗಿ ದೆಹಲಿಯನ್ನಾಳುತ್ತಿದ್ದ, ಆತನೊಬ್ಬ ಹಿಂದೂ ವಿರೋಧಿ, ವಿಕೃತ ಕಾಮಿ & ಸಲಿಂಗಕಾಮಿಯೂ ಆಗಿದ್ದ.
ಇದು ಬಯಲುಸೀಮೆಯ ಗಡಿನಾಡು ಕೋಲಾರ ಜಿಲ್ಲೆಯ ಸ್ಥಿತಿ. ಒಂದು ಕಾಲದಲ್ಲಿ ಅತಿ ಹೆಚ್ಚು ಕೆರೆಗಳ ನಾಡು ಎಂದು ಪ್ರಸಿದ್ಧಿ ಪಡೆದು ಸದಾ ಹಸಿರಿನಿಂದ ಕೂಡಿದ್ದ ಜಿಲ್ಲೆಯಾಗಿತ್ತು ಕೋಲಾರ. ಕಾಲಾಂತರ ಮಳೆರಾಯನ ಮುನಿಸು ಜಿಲ್ಲೆಯ ಮೇಲೆ ಬಂದಿದ್ರಿಂದ ಇಲ್ಲಿನ ರೈತರು ಪರ್ಯಾಯ ಹಾಗೂ ಆಧುನಿಕ ಕೃಷಿಯತ್ತ ಮುಂದಾದ್ರು. ಇದ್ರಿಂದ ಹೆಚ್ಚು ಲಾಭ ಹಾಗೂ ಕಡಿಮೆ ಶ್ರಮವುಳ್ಳ ನೀಲಗಿರಿ ಸಸಿಗಳನ್ನು ನೆಡಲು ರೈತ್ರು ಮುಂದಾದ್ರು. ಇದ್ರಿಂದ ಭೂಮಿಯಲ್ಲಿ ಇರುವ ನೀರಿನ ಪ್ರಮಾಣವನ್ನು ಈ ಮರಗಳು ತೆಗೆದುಕೊಂಡು ನೆಲವನ್ನು ಬರಡುಗೊಳಿಸಿತು. ಇದರಿಂದ ಅಂತರ್ಜಲಮಟ್ಟ ತೀವ್ರ ಕುಸಿದಿದೆ.
ನಿತ್ಯ ವಾಹನಗಳನ್ನು ಬಳಸುವವರು ಯಾರಾದರೂ ಅದರ ಕೀಗಳನ್ನು ಭದ್ರವಾಗಿ ಇಟ್ಟುಕೊಳ್ಳಬೇಕು. ಒಂದು ವೇಳೆ ಅವನ್ನು ಕಳೆದುಕೊಂಡರೆ ಕಷ್ಟಗಳು ತಪ್ಪಿದ್ದಲ್ಲ.. ಆಗ ಅನುಭವಿಸುವ ಕಿರಿಕಿರಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಇನ್ನು ಮುಖ್ಯವಾಗಿ ಕಾರಿನ ಮಾಲೀಕರು ಒಮ್ಮೊಮ್ಮೆ ಕಾರಿನಲ್ಲೇ ಕೀ ಮರೆತುಬಿಡುತ್ತಾರೆ.
ಉಪ್ಪಿನ ಕಾಯಿ ಎಂದರೆ ಸಾಕು ಬಾಯಲ್ಲಿ ನೀರೂರಿ ಬಿಡುತ್ತೆ ,ಅದರಲ್ಲೂ ಉಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು , ಊಟಕ್ಕೆ ತಕ್ಕ ಉಪ್ಪಿನಕಾಯಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಯಾವುದೇ ಸಮಾರಂಭ ಔತಣಕೂಟದ ಎಲೆಯಲ್ಲಿ ಊಟಕ್ಕೆ ಉಪ್ಪಿನ ಕಾಯಿ ಇಲ್ಲ ಅಂದ್ರೆ ಅ ಭೋಜನ ಅಸಂಪೂರ್ಣ ಎನ್ನಿಸುತ್ತದೆ.
ರೈಲ್ವೆ ಹಳಿಯಲ್ಲಿ ನಿರ್ವಹಣೆ ಕೆಲಸ ಮಾಡುತ್ತಿದ್ದ ವೇಳೆ ಹೌರಾ- ಜಗದಾಲ್ಪುರ ಸಮಲೇಶ್ವರಿ ಎಕ್ಸ್ಪ್ರೆಸ್ ರೈಲು ಆಗಮಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ರೈಲ್ವೆ ಹಳಿ ನಿರ್ವಹಣೆ ಮಾಡುವ ನಿರ್ವಹಣಾ ಕಾರಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅದೇ ದಾರಿಯಲ್ಲಿ ಸಮಲೇಶ್ವರಿ ಎಕ್ಸ್ ಪ್ರೆಸ್ ಬಂದಿದೆ. ಈ ಘಟನೆಯಿಂದ ಸಮಲೇಶ್ವರಿ ಎಕ್ಸ್ಪ್ರೆಸ್ ರೈಲಿನ ಕೆಲವು ಬೋಗಿಗಳು ಹಳಿ ತಪ್ಪಿದ್ದು ಎಂಜಿನ್ ಗೆ ಹಾನಿಯಾಗಿದೆ. ಆದರೆ ರೈಲು ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ. ರೈಲ್ವೆ ಹಳಿ ನಿರ್ವಹಣೆ ನಡೆಯುವಾಗಲೇ ರೈಲು ಸಂಚಾರಕ್ಕೆ…
ತುಂಬಾ ಜನ ಸಿಳ್ಳೆ (ವಿಸಿಲ್) ಹೊಡೆಯೋಕೆ ತುಂಬಾ ಇಷ್ಟ ಪಡುತ್ತಾರೆ. ಆದ್ರೆ ಕೆಲವರಿಗೆ ವಿಸಿಲ್ ಹೊಡೆಯೋದು ಹೇಗೆ ಅಂತ ಗೊತ್ತಾಗದೆ ತುಂಬಾ ಕಷ್ಟ ಪಡುತ್ತಾರೆ. ನೀವೇನಾದ್ರೂ ವಿಸಿಲ್ ಹೊಡೆಯೋದು ಹೇಗೆ ಅಂತ ಕಲಿಬೇಕು ಅನ್ಕೊಂಡ್ರೆ ಕೆಳಗೆ ಕೊಟ್ಟಿರುವ ಸರಳ ಕ್ರಮಗಳನ್ನು ಅನುಸರಿಸಿ…