ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ದುಡ್ಡಿನ ಅಗತ್ಯ ಯಾವಾಗ ಹೇಗೆ ಬೀಳುತ್ತದೆ ಎಂದು ಹೇಳಲು ಅಸಾಧ್ಯ. ಬದುಕಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ದುಡ್ಡಿನ ಅನಿವಾರ್ಯತೆ ಎದುರಾಗಬಹುದು. ಅದನ್ನು ಇಷ್ಟೇ ಅಂತ ಹೇಳಲು ಬರುವುದಿಲ್ಲ. ಹೀಗಾಗಿ ಎಲ್ಲಾ ಉಳಿಕೆ, ಹೂಡಿಕೆಗಳ ಬಳಿಕವೂ ತುರ್ತು ಸಂದರ್ಭದಲ್ಲಿ ಅನುಕೂಲವಾಗಲು ನಿಮ್ಮಲ್ಲಿ ಹಣ ಇರಲೇ ಬೇಕಾಗುತ್ತದೆ. ಆರೋಗ್ಯ ವಿಮೆ, ವಾಹನ ವಿಮೆಗಳನ್ನೆಲ್ಲಾ ಅಂದುಕೊಂಡ ಕಾಲಕ್ಕೆ ಪಾವತಿಯಾಗುವುದಿಲ್ಲವಾದದ್ದರಿಂದ ಟರ್ನ್ ಓರ್ವ ಮಾಡಲು ಸಾಧ್ಯವಾಗುವಂತಹ ಪ್ಲಾನ್ ಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಉಳಿಕೆಯನ್ನು ನಿರ್ದಿಷ್ಟವಾಗಿ ಇಷ್ಟೇ ಎಂದು ಹೇಳಲು ಬಾರದು. ಆದರೂ ಒಬ್ಬ ವ್ಯಕ್ತಿ ತನ್ನ 3ರಿಂದ 6 ತಿಂಗಳ ದಿನವಹಿ ಖರ್ಚಿಗಾಗುವಷ್ಟು ದುಡ್ಡನ್ನು ಸುರಕ್ಷಿತವಾಗಿಡುವುದು ಮುಖ್ಯ. ಏನಿಲ್ಲವೆಂದರೂ ಉದ್ಯೋಗ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾದಾಗ ಇನ್ನೊಂದು ಕೆಲಸ ಹುಡುಕಿಕೊಳ್ಳುವವರೆಗೆ ಇದು ಉಪಯೋಗಕ್ಕೆ ಬರುತ್ತದೆ.
ನಿವೃತ್ತ ಬದುಕಿಗೆಷ್ಟು?: ದುಡಿಯುವುದು ಮತ್ತು ಖರ್ಚು ಮಾಡುವ ನೀತಿಯನ್ನು ಜೀವನಪೂರ್ತಿ ಮಾಡುತ್ತಾ ಕೂರಲಾಗುವುದಿಲ್ಲ. ಉದ್ಯೋಗದಿಂದ ನಿವೃತ್ತಿಯಾದ ಮೇಲೆ ಖರ್ಚು ಮಾಡುವುದಷ್ಟೇ ಪಾಲಿಗೆ ಉಳಿಯುವುದರಿಂದ ಆಗಿನ ಬದುಕಿಗೂ ಕೊಂಚ ಉಳಿಸಿಡುವುದು ಅಗತ್ಯ. ಸ್ವಯಂ ಉದ್ಯೋಗಿಗಳಾದವರು ತಮಗೆ ತಾವೇ ನಿವೃತ್ತಿಯ ವಯಸ್ಸನ್ನು ನಿರ್ಧರಿಸಿಕೊಂಡುಬಿಡಬೇಕು. ವ್ಯಕ್ತಿಯೊಬ್ಬ ತನ್ನ ವಾರ್ಷಿಕ ಆದಾಯದ 20 ಪಟ್ಟು ದುಡ್ಡನ್ನು ನಿವೃತ್ತ ಬದುಕಿಗೆ ಎತ್ತಿಡುವ ಗುರಿ ಹೊಂದಿರಬೇಕು.

ಮನೆಸಾಲದ ಸರಿದೂಗಿಸುವಿಕೆ: ಬದುಕಿನಲ್ಲಿ ಮನೆ ಕಟ್ಟುವುದು ಪ್ರತಿಯೊಬ್ಬನ ಕನಸು. ಆ ಕನಸು ನನಸಾಗಿಸುವ ಹಾದಿಯಲ್ಲಿ ಎಡವಬಾರದು. ಮನೆ ಕೊಳ್ಳುವಾಗ ಶೇ.20ರಷ್ಟು ಡೌನ್ ಪೇಮೆಂಟ್ ಕಟ್ಟಬೇಕಾಗುತ್ತದೆ. ಉಳಿದ ಮನೆ ಸಾಲವನ್ನು ಕಂತಿನ ರೂಪದಲ್ಲಿ ಕಟ್ಟಬೇಕಾಗುತ್ತದೆ. ಆ ಸಂದರ್ಭದಲ್ಲಿ ಕೈಕಟ್ಟಬಾರದು ಎಂದರೆ ಈ ಮೂರು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೈಗೆ ಬರುವ ಪಗಾರ, ಡೌನ್ ಪೇಮೆಂಟ್ ಮತ್ತು ಮನೆ ಸಾಲದ ಬಡ್ಡಿದರ. ರಿಯಲ್ ಎಸ್ಟೇಟ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಇಂದಿನ ದಿನಗಳಲ್ಲಿ ನೀವು ಸಾಧ್ಯವಾದಷ್ಟು ಬೇಗನೇ ಮನೆ ಬಗ್ಗೆ ಯೋಚಿಸುವುದು ಒಳಿತು. ಈಗ ಮನೆಸಾಲದ ಕಂತು ಹೆಚ್ಚು ಅನ್ನಿಸಿದರೂ ನಿಮ್ಮ ಆದಾಯ ಹೆಚ್ಚಾದ ಸಂದರ್ಭದಲ್ಲೂ ಕಂತಿನ ಹಣ ಅಷ್ಚೇ ಇರುವುದುರಿಂದ ಹೊರೆಯಾಗಲಾರದು. ಗೃಹ ಸಾಲದ ಇಎಂಐ ತಿಂಗಳ ಆದಾಯದ ಶೇ.30ಕ್ಕಿಂತ ಕಡಿಮೆ ಇದ್ದರೆ ಒಳಿತು. ಉಳಿದೆಲ್ಲಾ ಸಾಲದ ಕಂತುಗಳೂ ಸೇರಿ ತಿಂಗಳ ಆದಾಯದ ಶೇ.50 ದಾಟಬಾರದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅರಿಶಿನ ಹಾಲು (ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು) ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ಅದರ ಬಣ್ಣ ನೋಡಿ ಮಾತ್ರವಲ್ಲ, ಪ್ರಯೋಜನಗಳನ್ನು ನೋಡಿ. ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರ ವಾಗುವುದಲ್ಲದೆ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಅರಿಶಿನ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಇಲ್ಲಿವೆ ನೋಡಿ ರಕ್ತವನ್ನು ಶುದ್ಧೀಕರಿಸುತ್ತದೆ : ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ….
ದುಬಾರಿ ಟ್ರಾಫಿಕ್ ದಂಡದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ದಂಡ ಕಟ್ಟೋ ಬದಲು ಟ್ರಾಫಿಕ್ ರೂಲ್ಸನ್ನ ಫಾಲೋ ಮಾಡಿಬಿಡೋಣ ಎಂದು ಜನರು ನಿರ್ಧರಿಸಿದಂತಿದೆ ಎನ್ನುತ್ತಿದೆ ಇತ್ತೀಚೆಗೆ ಬಂದ ಮಾಹಿತಿ. ನೂತನ ಟ್ರಾಫಿಕ್ ನಿಯಮದಿಂದ ವಾಹನ ಸವಾರರು ಎಚ್ಚೆತ್ತಿದ್ದು, ದಂಡದಿಂದ ತಪ್ಪಿಸಿಕೊಳ್ಳಲು ಟ್ರಾಫಿಕ್ ನಿಯಮ ಪಾಲಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಲ್ಲದೇ, ಡ್ರಿಂಕ್ ಆ್ಯಂಡ್ ಡ್ರೈವ್ ಹಾಗೂ ಅಪಘಾತ ಪ್ರಕರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ನೂತನ ಟ್ರಾಫಿಕ್ ದಂಡ ಸಂಹಿತೆ ಜಾರಿಯಾಗಿ ಇಂದಿಗೆ ಒಂದು ತಿಂಗಳಾಗಿದ್ದು, ಸಂಗ್ರಹಿಸಿದ ದಂಡದ ಮೊತ್ತ…
ಹೊಸ ವರ್ಷದ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿಗೆ ಒಂದು ದಿನ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಮುತ್ತತ್ತಿಯು ಒಂದು ಪ್ರೇಕ್ಷಣಿಯ ಸ್ಥಳ. ಇಲ್ಲಿ ಸುತ್ತಮುತ್ತಲು ಕಾವೇರಿ ನದಿ ಹರಿಯುವುದರಿಂದ ಬೆಂಗಳೂರು, ಕನಕಪುರ, ಮಳವಳ್ಳಿ ಸೇರಿದಂತೆ ಹಲವೆಡೆಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಪ್ರವಾಸಿಗರು ಬಂದು ಆಚರಣೆ ಮಾಡುತ್ತಾರೆ. ನಿಸರ್ಗದ ಮಡಿಲಲ್ಲಿ ಮೋಜು ಮಸ್ತಿ ಮಾಡಿ ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸುತ್ತಾರೆ. ಹೀಗೆ ಸಂಭ್ರಮಿಸುವ ವೇಳೆ…
ಈ ಸುದ್ದಿಯ ಶೀರ್ಷಿಕೆ ಓದುವಾಗಲೇ ಓದುಗರಿಗೆ ಗೊಂದಲವಾಗಿರಬಹುದು. ಹೌದು ಇಂತಹದ್ದೊಂದು ಘಟನೆಯು ಉತ್ತರಪ್ರದೇಶ ರಾಜ್ಯದ ಬದೌನ್ ಎಂಬ ನಗರದಲ್ಲಿ ನಡೆದಿದೆ. ಆದರೆ ನೆರೆಮನೆಯ ವ್ಯಕ್ತಿಗಳು ಜಗಳವಾಡಿದರೆ ನಾಯಿ ಹೇಗೆ ಜೈಲು ಸೇರುತ್ತದೆ ಎಂಬುವುದರ ಕುರಿತು ಕುತೂಹಲವಿರಬಹುದು.
ಸಾಮಾನ್ಯವಾಗಿ ನಮ್ಮಲ್ಲಿ ಒಂದು ವಾಡಿಕೆಯಿದೆ, ಅದೇನಂದ್ರೆ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ನೀನು ಸತ್ತಾಗ ನರಕ್ಕೆ ಹೋಗೋದು ಅಂತ ಶಾಪ ಹಾಕ್ತಾರೆ. ಹಿಂದೂ ಧರ್ಮದ ಪ್ರಕಾರ ಮನುಷ್ಯರು ಮಾಡಿದ ಪಾಪ ಅಥವಾ ಪುಣ್ಯಗಳನ್ನು ಅನುಸರಿಸಿ ,ಅವರು ಸತ್ತನಂತರ ಅವರ ಆತ್ಮಗಳು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತವೆಂದು ಎಲ್ಲರ ವಿಶ್ವಾಸ.
ಸಾಮಾನ್ಯವಾಗಿ ಹಸುವಿನ ಹೊಟ್ಟೆ ಮೇಲೆ ಕಪ್ಪು-ಬಿಳುಪು ಬಣ್ಣವಿರುವ ನಾನಾ ರೀತಿಯ ಚಿತ್ರಗಳು ಕಾಣಸಿಗುತ್ತವೆ. ಇದೀಗ ಇಂತದ್ದೇ ಹಸುವಿನ ಹೊಟ್ಟೆ ಮೇಲೆ ತಾಯಿಯ ಮಡಿಲಿನಲ್ಲಿ ಮಗುವಿನ ಆರೈಕೆಯ ಚಿತ್ರವೊಂದು ಮೂಡಿ ಎಲ್ಲರ ಗಮನ ಸೆಳೆದಿದೆ. ಮೂಲತಃ ಕೃಷಿ ಜೊತೆಗೆ ಹೈನುಗಾರಿಕೆ ಮಾಡುವ ಜಾಧವ್ ಕುಟುಂಬ ನಾಲ್ಕು ವರ್ಷಗಳ ಹಿಂದೆ ಮಹಾರಾಷ್ಟ್ರದ ಮೀರಜ್ ಜಾನುವಾರು ಮಾರುಕಟ್ಟೆಯಿಂದ ಬಿಳಿ – ಕಪ್ಪು ಬಣ್ಣದ ಜರ್ಸಿ ಪ್ರಬೇಧದ ಹಸುವನ್ನು ತಂದಿದ್ದರು. ಕಳೆದ ಮೂರು ವರ್ಷಗಳಿಂದ ಹೊಟ್ಟೆಯ ಮೇಲೆ ಈ ರೀತಿ ಹಚ್ಚೆ ಮೂಡಲು ಆರಂಭವಾಗಿ…