ದೇಶ-ವಿದೇಶ

ಸೇನೆಯ ಮೇಲೆ ಕಲ್ಲು ತೂರಾಟ, ನಡೆಸಿದ ಯುವಕನಿಗೆ 10 ಲಕ್ಷ ಪರಿಹಾರ..!

630

ಕಲ್ಲು ತೂರಾಟಗಾರರ ಹಣಿಯಲು, ಕಲ್ಲು ತೂರಾಟಗಾರರ ನಾಯಕನನ್ನು ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ, ಪ್ರಕರಣ ಸಂಭಂದ ಸಂತ್ರಸ್ತ ಯುವಕನಿಗೆ ಜಮ್ಮುಕಾಶ್ಮೀರ ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

 ಮೂಲ

ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಿದ  ಆಯೋಗದ ಸಮಿತಿ ಸದಸ್ಯರು, ಮನುಷ್ಯರಾಗಿ ಇಂತಹ ಹೀನ ಕೃತ್ಯಗಳನ್ನು ಸಹಿಸಲಸಾಧ್ಯ ಎಂದು ಆಯೋಗ ಸದಸ್ಯರು ಹೇಳಿದ್ದಾರೆ. ಸಂತ್ರಸ್ತ ಯುವಕ ಫಾರೂಖ್ ಅಹ್ಮದ್ ದಾರ್‍ಗೆ ಮುಂದಿನ 6 ವಾರದ ಒಳಗಡೆ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ದೇಶದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆಗೆ ಹಲವು ಕಾನೂನುಗಳಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇಂತಹ ಕೃತ್ಯಗಳಿಗೆ ಕಾನೂನು ನೆರವು ನಾಗರಿಕ  ಸಮಾಜದಲ್ಲಿ ಆರೋಪಿಯನ್ನು ಹೀಗೆ ಹೀನಾಯವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಮಾನವ ಹಕ್ಕು ಆಯೋಗ ಹೇಳಿದೆ.

ಈ ಪ್ರಕರಣದ ನಡೆದ ಬಳಿಕ ಭಾರತೀಯ ಸೇನೆ ಮಾನವ ಗುರಾಣಿಯಾಗಿ ಯುವಕನನ್ನು ಬಳಸಿದ್ದಕ್ಕೆ, ಲೀತುಲ್ ಗೊಗೋಯ್ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿತ್ತು. ಈ ಸುದ್ದಿ ಚರ್ಚೆಯಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾಗರಿಕರ ಜೀವ ರಕ್ಷಿಸಲು ನಾನು ಈ ಕೆಲಸ ಮಾಡಬೇಕಾಯಿತು ಎಂದು ಹೇಳಿದ್ದರು.

ಏನಿದು ಪ್ರಕರಣ?

ಕಳೆದ ಏಪ್ರಿಲ್’ನಲ್ಲಿ ಶ್ರೀನಗರ ಲೋಕಸಭೆಯ ಉಪಚುನಾವಣೆ ನಡೆದಿದ್ದು,ಈ ಚುನಾವಣೆಯನ್ನು ಕಾಶ್ಮೀರ ಪ್ರತ್ಯೇಕವಾದಿಗಳು ವಿರೋಧಿಸಿದ್ದರು. ಚುನಾವಣೆಗೆ ನಿಯೋಜನೆಗೊಂಡಿದ್ದ ಸೇನಾ ಸಿಬ್ಬಂದಿಯನ್ನು ಪ್ರತಿಭಟನಾಕಾರರು ಸುತ್ತುವರೆದು ದಾಳಿ ನಡೆಸುತ್ತಿದ್ದರು. ಆಗ  ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ವ್ಯಾಪಕ ಹಿಂಸಾಚಾರ ಮತ್ತು ಕಲ್ಲು ತೂರಾಟ ನಿಗ್ರಹಕ್ಕಾಗಿ ಸೇನಾ ಯೋಧ ಮೇಜರ್ ನಿತಿನ್ ಗಗೋಯ್ ಅವರು, ಕಲ್ಲು ತೂರಾಟಗಾರರ ನಾಯಕ ರೂಕ್ ಅಹ್ಮದ್ ದಾರ್ ನನ್ನು  ಸೇನಾವಾಹನಕ್ಕೆ ಕಟ್ಟಿ ಮಾನವ ಗುರಾಣಿಯಾಗಿ ಬಳಕೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಈ ಕುರಿತು ಸೇನೆ ತನಿಖೆಗೆ ಆದೇಶಿಸಿದ್ದು, ನಿತಿನ್ ಗಗೋಯ್ಅ ವರ ವಿರುದ್ಧ ಪೊಲೀಸರು ಎಫ್‍ಐಆರ್ ಸಹ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೇನಾ ಕೋರ್ಟ್ ಕ್ಲೀನ್ ಚಿಟ್ ನೀಡಿ ನಿತಿನ್ ಗಗೋಯ್ ಅವರನ್ನು ಶ್ಲಾಘಿಸಿತ್ತು.

ಇದರ ಬಗ್ಗೆ ಮಾತನಾಡಿದ್ದ ನಿತಿನ್ ಗಗೋಯ್’ರವರು, ಕಲ್ಲು ತೂರಾಟಗಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಮಕ್ಕಳು, ಮಹಿಳೆಯರೂ ಇದ್ದರು. ನಾನು ಧ್ವನಿವರ್ಧಕದಲ್ಲಿ ಎಚ್ಚರಿಕೆ ಕೊಟ್ಟಿದ್ದರೂ ಪ್ರತಿಭಟನೆಕಾರರು ಮಣಿಯಲಿಲ್ಲ. ಹೀಗಾಗಿ ಅಲ್ಲಿದ್ದ ಚುನಾವಣಾ ಅಧಿಕಾರಿಗಳನ್ನು, ಜನರನ್ನು, ಪೊಲೀಸರನ್ನು ರಕ್ಷಿಸಲು ನಾನು ಆತನನ್ನು ಸೇನಾ ಜೀಪಿಗೆ ಕಟ್ಟಿದ್ದೆ. ಒಂದು ವೇಳೆ ನಾವು ಗೋಲಿಬಾರ್ ನಡೆಸಲು ಆದೇಶಿಸಿದ್ದರೆ ಅಲ್ಲಿನ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ನಿತಿನ್ ಗಗೋಯ್’ರವರು ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವೀಡಿಯೊ ಗ್ಯಾಲರಿ

    ಈ ವಿಚಿತ್ರ ಜೀವಿಯನ್ನು ನೋಡಿದ್ದೀರಾ..?ನೋಡಲು ಈ ಚಿತ್ರದ ಮೇಲೆ ಕ್ಲಿಕ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ನಾವು ಜಗತ್ತಿನಲ್ಲಿ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ನೋಡಿರುತ್ತೇವೆ. ಆದ್ರೆ ಕೆಲವೊಮ್ಮೆ ನಾವು ನೋಡಿದ ಪ್ರಾಣಿಗಳನ್ನು ನಮ್ಮ ಕಣ್ಣುಗಳೇ ನಂಬುವುದಿಲ್ಲ, ಅಷ್ಟೊಂದು ವಿಚಿತ್ರವಾಗಿರುತ್ತವೆ..! ಇಂತಹದೆ ಜಲಚರ ಪ್ರಾಣಿಯೊಂದು ಪತ್ತೆಯಾಗಿದೆ. ಅದು ನೋಡಲು ಮತ್ಸ್ಯ ಕನ್ಯೆ ಅಂತಯೇ ಇದೆ. ಕೆಳಗಿರುವ ಚಿತ್ರಗಳು ಮತ್ತು ವಿಡಿಯೋವನ್ನು ವೀಕ್ಷಿಸಿ ಗೊತ್ತಾಗುತ್ತೆ… ಆ ವಿಚಿತ್ರ ಜೀವಿ ಹೇಗಿದೆ ಗೊತ್ತಾ.?ಈ ವಿಡಿಯೋ ನೋಡಿ..

  • ಉಪಯುಕ್ತ ಮಾಹಿತಿ

    ರಕ್ತಸಂಬಂಧಿಗಳೊಳಗೆ ಮದುವೆಯಾದರೆ ಏನಾಗುತ್ತೆ ಗೊತ್ತಾ..?ಈ ಲೇಖನ ಓದಿ ಮತ್ತೆ ಶೇರ್ ಮಾಡಿ…

    ರಕ್ತಸಂಬಂಧಿಗಳೊಳಗಿನ ವಿವಾಹದ ಕುರಿತು ಅಧ್ಯಯನ ನಡೆಸಿರುವ ಅಂತಾರಾಷ್ಟ್ರೀಯ ತಂಡ ಒಂದು, ಇಂತಹ ದಂಪತಿಗಳಿಗೆ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಅಪಾಯವು

  • ಕರ್ನಾಟಕ

    ನಿಮ್ಮ ಬೆರಳ ತುದಿಯಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳು ಲಭ್ಯ!ಹೇಗೆ ಅಂತೀರಾ?ಈ ಲೇಖನಿ ಓದಿ….

    ನಮ್ಮ ಗ್ರಾಮೀಣ ಜನರಿಗಾಗಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಸೇರಿದಂತೆ ನಾನಾ ಇಲಾಖೆಗಳ ಸುಮಾರು 100 ಕ್ಕಿಂತ ಹೆಚ್ಚು ಸೇವೆಗಳು ‘ಪಂಚಾಯತಿ-100 ಬಾಪೂಜಿ ಸೇವಾ ಕೇಂದ್ರ’ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲೇ ಸಿಗಲಿವೆ.

  • ಉಪಯುಕ್ತ ಮಾಹಿತಿ

    ಕೊಲೆಸ್ಟ್ರಾಲ್ ನಿಯಂತ್ರಿಸವುದು, ಇದರಿಂದ ತುಂಬಾ ಸುಲಭ..!ತಿಳಿಯಲು ಈ ಲೇಖನ ಓದಿ…

    ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ.

  • ರೆಸಿಪಿ

    ಈ ಸುಡುವ ಬೇಸಿಗೆಯಲ್ಲಿ ಉಷ್ಣತೆ ಕಡಿಮೆಮಾಡಲು, ಈ ಪಾನೀಯಗಳನ್ನು ಸೇವಿಸಿ.

    ದಿನಗಳು ಕಳೆದಂತೆ ಬಿಸಿಲು ಜಾಸ್ತಿ ಆಗುತ್ತಾ ಹೋಗುತ್ತಿದೆ. ಇದರಿಂದ ಕೆಲವರಿಗೆ ದೇಹ ತುಂಬಾ ಹಿಟ್ ಆಗುತ್ತದೆ. ಈ ಸಮಯದಲ್ಲಿ ಖಾರದ ಪದಾರ್ಥಗಳು ಸೇವಿಸಿದರೆ ಹಾಗೂ ಉಷ್ಣತೆಯನ್ನು ಹೆಚ್ಚಿಸುವ ಪದಾರ್ಥಗಳನ್ನು ತಿಂದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ ಅಲ್ಲದೆ ಇದರಿಂದ ನಮ್ಮ ದೇಹ ಅನಾರೋಗ್ಯ ಸ್ಥಿತಿಗೆ ಕೊಂಡೈಯುತ್ತದೆ ಉರಿಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊಬ್ಬೆ ಏಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದನ್ನು ಕಾಪಾಡಿಕೊಳ್ಳಲು ಸುಲಭ ಉಪಾಯ ಏನೆಂದರೆ ನಾವು ದೇಹದ…

  • ಜ್ಯೋತಿಷ್ಯ

    ಶುಭ ಶುಕ್ರವಾರದ ಈ ದಿನ ನಿಮ್ಮ ರಾಶಿ ಫಲಗಳು ಹೇಗಿವೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(1 ಮಾರ್ಚ್, 2019) ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಬಾಕಿಯಿರುವ ಮನೆಕೆಲಸಗಳು ನಿಮ್ಮ ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ….