ಆರೋಗ್ಯ

‘ಸೀತಾಫಲ’ದಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

581

ಸೀತಾಫಲ… ಈ ಕಾಲದಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಇದೂ ಒಂದು. ಇದರಲ್ಲಿ ವಿಟಮಿನ್ ಎ, ಮೆಗ್ನಿಷಿಯಮ್, ಪೊಟ್ಯಾಷಿಯಂ, ಫೈಬರ್, ವಿಟಮಿನ್ ಬಿ6, ಕ್ಯಾಲ್ಸಿಯಂ,ವಿಟಮಿನ್ ಸಿ, ಐರನ್‌ನಂತಹ ಅತ್ಯಂತ ಮುಖ್ಯವಾದ ಪೋಷಕಗಳು ಅದೆಷ್ಟೋ ಇವೆ. ಇದನ್ನು ನಿತ್ಯ ನಾವು ಆಹಾರದ ಭಾಗವಾಗಿ ತಿನ್ನುವುದರಿಂದ ನಮಗೆ ಅದೆಷ್ಟೋ ವಿಧದ ಅನಾರೋಗ್ಯಗಳು ದೂರವಾಗುತ್ತವೆ. ಸೀತಾಫಲವಷ್ಟೇ ಅಲ್ಲ ಇದರ ಎಲೆಗಳು, ತೊಗಟೆ, ಬೇರು… ಹೀಗೆ ಎಲ್ಲಾ ಭಾಗಗಳು ನಮಗೆ ಸಾಕಷ್ಟು ಉಪಯುಕ್ತ.

ಸೀತಾಫಲ  ಲಾಭಗಳ:-

  • ದೇಹದ ಮೇಲೆ ಬೆವರಿನ ಗುಳ್ಳೆಗಳಾದರೆ ಸೀತಾಫಲ ಎಲೆಗಳನ್ನು ತೆಗೆದುಕೊಂಡು, ಅರೆದು ಆ ಮಿಶ್ರಣವನ್ನು ಕಟ್ಟಬೇಕು. ಇದರಿಂದ ಬೆವರಿನ ಗುಳ್ಳೆಗಳ ಸಮಸ್ಯೆ ನಿವಾರಣೆಯಾಗುತ್ತದೆ.
  • ಸೀತಾಫಲದ ಎಲೆಗಳಿಂದ ತೆಗೆದ ರಸವನ್ನು ನಿತ್ಯ ಬೆಳಗ್ಗೆ ಒಂದು ಟೀಸ್ಫೂನ್ ಪ್ರಮಾಣದಲ್ಲಿ ಕುಡಿಯುತ್ತಿದ್ದರೆ ಮಹುಮೇಹ ನಿಯಂತ್ರಣಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ತೂಕ ಸಹ ಕಡಿಮೆಯಾಗುತ್ತಾರೆ.

  • ಸೀತಾಫಲದ ಗಿಡದಿಂದ ತೆಗೆದ ತೊಗಟೆಯನ್ನು ನೀರಿನಲ್ಲಿ ಹಾಕಿ ಅದರಿಂದ ಕಷಾಯ ಮಾಡಿಕೊಂಡು ಕುಡಿದರೆ ಡಯೇರಿಯಾದಂತಹ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
  • ಸೀತಾಫಲ ಎಲೆಗಳನ್ನು ನೀರಿನಲ್ಲಿ ಹಾಕಿ ಕಷಾಯ ಮಾಡಿಕೊಂಡು ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.ವಿಟಮಿನ್ ಎ ಹೆಚ್ಚಾಗಿ ಇರುವುದರಿಂದ ಕಣ್ಣಿನ ರೋಗಗಳು ನಿವಾರಣೆಯಾಗುತ್ತವೆ. ದೃಷ್ಟಿ ಸಮಸ್ಯೆಗಳು ದೂರವಾಗುತ್ತವೆ.

 

  • ಸೀತಾಫಲದಲ್ಲಿರುವ ಮೆಗ್ನಿಷಿಯಂ ಹೃದಯ ಕಾಯಿಲೆಗಳು ಬರದಂತೆ ತಡೆಯುತ್ತದೆ. ಇವುಗಳಲ್ಲಿ ಇರುವ ಪೋಷಕಗಳು ದೇಹದಲ್ಲಿ ಸೇರಿಕೊಂಡ ಕೊಬ್ಬನ್ನು ಕರಗಿಸುತ್ತದೆ.
  • ಸೀತಾಫಲವನ್ನು ನಿತ್ಯ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಹುಳುಗಳ ಸಾಯುತ್ತವೆ. ಅಲ್ಸರ್ ನಿವಾರಣೆಯಾಗುತ್ತದೆ. ಗ್ಯಾಸ್, ಅಸಿಡಿಟಿ, ಅಜೀರ್ಣ, ಮಲಬದ್ಧತೆಯಂತಹ ಜೀರ್ಣ ಸಂಬಂಧಿ ಸಮಸ್ಯೆಗಳು ಗುಣವಾಗುತ್ತವೆ.

  • ರಕ್ತ ಕಡಿಮೆ ಇರುವವರು ಸೀತಾಫಲ ತಿನ್ನುವುದು ಉತ್ತಮ. ಇದರಿಂದ ರಕ್ತ ಹೆಚ್ಚುತ್ತದೆ.
  • ದೇಹ ತುಂಬಾ ಬಿಸಿಯಾಗಿರುವವರು ಸೀತಾಫಲವನ್ನು ತಿಂದರೆ ಕೂಡಲೆ ಉಷ್ಣತೆಯಿಂದ ಉಪಶಮನ ಪಡೆಯಬಹುದು.
  • ಸೀತಾಫಲದ ತಿರುಳನ್ನು ತೆಗೆದುಕೊಂಡು ರಸದಂತೆ ಮಾಡಿ ಅದಕ್ಕೆ ಹಾಲು ಬೆರೆಸಿ ಮಕ್ಕಳಿಗೆ ಕುಡಿಸಬೇಕು. ಇದರಿಂದ ಅವರಿಗೆ ಶಕ್ತಿ ಲಭಿಸುತ್ತದೆ.
  • ಸೀತಾಫಲ ಎಲೆಗಳನ್ನು ನುಣ್ಣಗೆ ಅರೆದು ಹಚ್ಚಿಕೊಂಡರೆ ಗಾಯಗಳು, ಕಜ್ಜಿ, ಗಜಕರ್ಣದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.
  • ಇವುಗಳ ಎಲೆಗಳನ್ನು ನುಣ್ಣಗೆ ಅರೆದು ಬೋರಿಕ್ ಪೌಡರ್ ಬೆರೆಸಿ ಮಂಚ, ಕುರ್ಚಿಗಳ ಮೂಲೆಗಳಲ್ಲಿ ಇಟ್ಟರೆ ತಿಗಣೆ ಸಮಸ್ಯೆ ಇರಲ್ಲ.

  • ಸೀತಾಫಲವನ್ನು ಅತಿಯಾಗಿ ಒಮ್ಮೆಲೆ ತಿನ್ನಬಾರದು. ಇದರಿಂದ ಹೊಟ್ಟೆಯಲ್ಲಿ ಉರಿ, ಉಬ್ಬಸ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಬಿಸಿ ನೀರು ಕುಡಿದರು, ಅರ್ಧ ಸ್ಫೂನು ಓಂಕಾಳು ಅಥವಾ ಸ್ವಲ್ಪ ಉಪ್ಪು ಜಗಿದರೂ ಫಲಿತಾಂಶ ಇರುತ್ತದೆ. ಅದೇ ರೀತಿ ಮಧುಮೇಹ ಇರುವವರು, ಸ್ಥೂಲಕಾಯ ಸಮಸ್ಯೆ ಇರುವವರು ಈ ಹಣ್ಣನ್ನು ವೈದ್ಯರ ಸಲಹೆ ಮೇರೆಗೆ ತಿನ್ನಬೇಕು. ಇಲ್ಲದಿದ್ದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು

    ಈ ಬೀಜಗಳು ಅಧಿಕ ನಾರಿನಂಶವನ್ನು ಹೊಂದಿವೆ. ಈ ಬೀಜಗಳನ್ನು ನೆನೆಸಿದ ನೀರಿನ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಕರುಳುಗಳಲ್ಲಿ ಜೀರ್ಣಗೊಂಡ ಆಹಾರದ ಚಲನೆ ಸುಲಭಗೊಳ್ಳುತ್ತದೆ. ಈ ನೀರಿನ ಸೇವನೆಯ ಇತರ ಮಹತ್ವಗಳನ್ನು ನೋಡೋಣ. ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು: ತೂಕ ಇಳಿಕೆಗೆ ಅಪಾರ ನೆರವು ನೀಡುವ ಆರೋಗ್ಯಕರ ವಿಧವೆಂದರೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದು. ಇದಕ್ಕೆ ಉತ್ತಮ ಆಯ್ಕೆ ಚಿಯಾ ಬೀಜಗಳು. ಇವುಗಳಲ್ಲಿ ಕರಗದ ನಾರು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ರಂಜಕ…

  • ಕ್ರೀಡೆ

    ಭಾರತ ಅಂಡರ್ 19 ವಿಶ್ವಕಪ್ ಚಾಂಪಿಯನ್:ಬಗ್ಗುಬಡಿದ ದ್ರಾವಿಡ್ ಯುವ ಪಡೆ..!ತಿಳಿಯಲು ಈ ಲೇಖನ ಓದಿ..

    ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಟೀಮ್ ಇಂಡಿಯಾ ನಾಲ್ಕನೇ ಬಾರಿಗೆ ಕಿರಿಯರ ವಿಶ್ವಕಪ್ ಎತ್ತಿ ಹಿಡಿದಿದೆ.

  • ದೇಶ-ವಿದೇಶ

    ಇದು ಪ್ರಪಂಚದ ಮೊದಲ ಅರಣ್ಯ ನಗರ!ಎಲ್ಲಿದೆ ಗೊತ್ತಾ?ಈ ಲೇಖನಿ ಓದಿ …

    ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.

  • ರೆಸಿಪಿ

    ಚಳಿಗಾಲಕ್ಕೆ ಬಿಸಿ ಬಿಸಿ ಹಳ್ಳಿ ಶೈಲಿಯ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಮಾಡುವ ವಿಧಾನ ನೋಡಿ…

    ಈಗಂತೂ ಚಳಿಗಾಲ. ಏನಾದರೂ ಸ್ಪೈಸಿ ಸ್ಪೈಸಿ ತಿನ್ನಲೇ ಬೇಕು ಅನ್ನಿಸದೆ ಇರೋದಿಲ್ಲ. ಅದರಲ್ಲೂ ನಾನ್ವೆಜ್ ತಿನ್ನುವವರು ಚಿಕನ್ ನಲ್ಲಿ ವಿಧ ವಿಧವಾದ ಸ್ಪೈಸಿಯಾದ ಕಬಾಬ್, ಚಿಕನ್ ಫ್ರೈ ಮಾಡಿ ತಿನ್ನುತ್ತಾರೆ. ಆದರೆ ಇನ್ನೂ ಏನಾದರೂ ಸ್ಪೆಷಲ್ ಮಾಡಬೇಕು ಎನ್ನಿಸಿದರೆ ಈ ಚಳಿಗಾಲದಲ್ಲಿ ಅದೂ ಹಳ್ಳಿ ಶೈಲಿಯಲ್ಲಿ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಆದರೆ ಮಾಡೋದು ಹೇಗೆ ಗೊತ್ತಿಲ್ಲ ಎಂದರೆ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ… ಚಿಕನ್ ಚಾಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ –…

  • ಜ್ಯೋತಿಷ್ಯ

    ಅರ್ಧನಾರೀಶ್ವರನನ್ನು ನೆನೆಯುತ್ತ ನಿಮ್ಮ ಇಂದಿನ ಭವಿಷ್ಯದಲ್ಲಿ ಏನಿದೆ ಎಂದು ನೋಡಿರಿ

    ಮೇಷ ರಾಶಿ ಭವಿಷ್ಯ (Monday, December 13, 2021) ಇಂದು ನಿಮ್ಮನ್ನು ಆವರಿಸುವ ಭಾವನಾತ್ಮಕ ಮನಸ್ಥಿತಿಯಿಂದ ನೀವು ಹೊರಬರಲು ಬಯಸಿದರೆ ಹಿಂದಿನದ್ದೆಲ್ಲವನ್ನೂ ಮರೆತುಬಿಡಬೇಕು. ಆರ್ಥಿಕ ಜೀವನದ ಸ್ಥಿತಿ ಇಂದು ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ, ಇಂದು ನಿಮ್ಮನ್ನು ಉಳಿಸಲು ನಿಮಗೆ ಕಷ್ಟವಾಗಬಹುದು. ಒಂದು ಮಂಕು ಕವಿದ ಮತ್ತು ಒತ್ತಡದ ದಿನದಲ್ಲಿ ಸ್ನೇಹಿತರು ಮತ್ತು ಸಂಗಾತಿ ನಿಮಗೆ ಆರಾಮ ಮತ್ತು ಸಂತೋಷ ತರುತ್ತಾರೆ. ನೀವು ಇಂದು ಪ್ರೀತಿ ಮಾಡುವ ಅವಕಾಶವನ್ನು ಕಳೆದುಕೊಳ್ಳದಿದ್ದಲ್ಲಿ, ನಿಮ್ಮ ಇಡೀ ಜೀವನದಲ್ಲಿ ಈ ದಿನವನ್ನು ಎಂದಿಗೂ…