ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸ ತಲೆಮಾರಿನ ಸಂಗೀತ ಸಂಯೋಜಕ ಗಾಯಕರಲ್ಲಿ ರಘು ದೀಕ್ಷಿತ್ ಅವರದು ಒಂದು ವಿಶಿಷ್ಟ ಸ್ಥಾನ. ಕನ್ನಡದ ಇಂಟರ್ ನ್ಯಾಷನಲ್ ರಾಕ್ ಸ್ಟಾರ್’ ಆಗುವ ಮೂಲಕ ವಿಶ್ವದಾದ್ಯಂತ ಕನ್ನಡ ಕೀರ್ತಿ ಪತಾಕೆ ಹಾರಿಸಿದ್ದಾರೆ.ಇವರು ನಮ್ಮ ಕನ್ನಡದ ಹೆಮ್ಮೆ ಅಂತ ಹೇಳಿದ್ರೆ ತಪ್ಪಾಗಲಾರದು.ಇಂತಹ ಮಹಾನ್ ಸಾಧಕ ಬೆಳೆದು ಬಂದದ್ದೆ ಒಂದು ರೋಚಕ…
ನವೆಂಬರ್ 11, 1974ರಂದು, ಮಹಾರಾಷ್ಟ್ರದ ನಾಸಿಕ್’ನಲ್ಲಿ, ರಘು ದೀಕ್ಷಿತ್’ರವರ ಜನನವಾಯಿತು.ಇವರ ಪೂರ್ತಿ ಹೆಸರು ರಘುಪತಿ ದ್ವಾರಕನಾಥ್ ದೀಕ್ಷಿತ್ ಎಂದು. ತಂದೆ ದಿವಂಗತ ಕೆ.ವಿ.ದ್ವಾರಕನಾಥ್ ಮತ್ತು ತಾಯಿ ಮಾಲಿನಿಯವರ ಪುತ್ರ.ಇವರ ಸಹೋದರ ವಾಸು ದೀಕ್ಷಿತ್.ಇವರ ಪತ್ನಿ ಕನ್ನಡದ ಮಯೂರಿ ಉಪಾಧ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ನೃತ್ಯ ಸಂಯೋಜಕಿ.
ರಘು, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜೈವರಸಾಯನಿಕಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯಲ್ಲೂ ತೇರ್ಗಡೆಯಾದರು. ಸ್ವಲ್ಪ ಸಮಯ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ದುಡಿದರು. ಮುಂದೆ ಅದೆಲ್ಲವನ್ನು ಬಿಟ್ಟು ಈಗ ಸಂಗೀತಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ… ತಮ್ಮ ಅನುಪಮ ಸಾಧನೆಯಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ಭರವಸೆಯ ಹೊಸ ಸಂಗೀತಗಾರ ಎಂದು ಗುರುತಿಸಲ್ಪಟ್ಟಿದ್ದಾರೆ.
ರಘು ದೀಕ್ಷಿತ್ ಪ್ರಾರಂಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಹಾಡುಗಳನ್ನು ನುಡಿಸುತ್ತಿದ್ದರು. ಒಮ್ಮೆ ವಿದೇಶಿಯರೊಬ್ಬರು ಇಂಗ್ಲೀಷಿನಲ್ಲಿ ಬರೆಯುವ ಬದಲು ಮಾತೃಭಾಷೆಯಲ್ಲಿ ಬರೆಯಲು ಸಲಹೆ ಕೊಟ್ಟಮೇಲೆ ರಘು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ಹಾಗೆಯೇ ಮುಂದುವರೆದು ಹಿಂದಿಯನ್ನೂ ಸೇರಿಸಿಕೊಂಡರು.
ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಅಲ್ಲಿನ ಸಭಿಕರಿಗೆ ಪ್ರಸ್ತುತಪಡಿಸಿದ ಖ್ಯಾತಿ ರಘು ದೀಕ್ಷಿತ್‍ರಿಗೆ ಸೇರಬೇಕು. ವಿದೇಶಗಳನ್ನು ಬೆಟ್ಟಿಯಾದಾಗ ಅಲ್ಲಿ ಕನ್ನಡ ಭಾಷೆಯ ಹಾಡನ್ನು ಪ್ರಸ್ತುತಪಡಿಸುತ್ತಿದ್ದರು. ಇಂದಿನ ಯುವ ಪೀಳಿಗೆಯವರಿಗೆ ತುಂಬ ಅಚ್ಚುಮೆಚ್ಚಿನ ಗಾಯಕ ರಘು ದೀಕ್ಷಿತ್.
ಸೈಕೋ ಚಿತ್ರದಲ್ಲಿ ಅವರು ಸಂಗೀತ ನೀಡಿ ಹಾಡಿದ “ನಿನ್ನ ಪೂಜೆಗೆ ಬಂದೆ” ಹಾಡು ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡಿಗರು ತೊಡುವ ಲುಂಗಿಯನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಶ್ರೇಯಸ್ಸು ಅವರದು. ಟ್ವಿಟ್ಟರ್ ಜಾಲತಾಣದಲ್ಲಿ ತುಂಬ ಚಟುವಟಿಕೆಯಿಂದಿರುತ್ತಾರೆ.
ಎಷ್ಟೋ ಜನರಿಗೆ ಗೊತ್ತಿಲ್ಲದ ವಿಷಯ ಅಂದ್ರೆ, ಗಾಯಕರಾಗುವ ಮುನ್ನ ರಘು ದೀಕ್ಷಿತ್ ಡ್ಯಾನ್ಸರ್ ಆಗಿದ್ದರು. ಭರತನಾಟ್ಯದಲ್ಲಿ ವಿದ್ವತ್ ಪಡೆದಿರುವ ಪ್ರತಿಭಾವಂತ ಕಲಾವಿದ ರಘು ದೀಕ್ಷಿತ್.ನಂದಿನೀಶ್ವರ್ ಅವರ ನೃತ್ಯ ಗುರು.
ರಘು, ಒಮ್ಮೆ, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಎರಡನೆ ವರ್ಷ ಬಿಎಸ್‌ಸಿ ಓದುತ್ತಿರುವಾಗ, ಭರತನಾಟ್ಯ ಕಾರ್ಯಕ್ರಮ ನೀಡಿ, ವೇಷ ಕಳಚುತ್ತಿರುವಾಗ, ಆಧುನಿಕ ಶೈಲಿಯ ಒಬ್ಬ ಗಾಯಕ ಅವರನ್ನು ಗೇಲಿ ಮಾಡಿದ. ಸಂಗೀತ ಪ್ರಿಯರನ್ನು ಆಕರ್ಶಿಸುವ ಬಗ್ಗೆ ಒಂದು ಚಿಕ್ಕ ಉಪನ್ಯಾಸ ಕೊಟ್ಟ. ಈ ಪಾಠದಿಂದ ರಘು ದೀಕ್ಷಿತ್, ವಿಚಲಿತರಾಗಲಿಲ್ಲ.
ಶಾಸ್ತ್ರೀಯ ನಾಟ್ಯ ಬಗ್ಗೆ ಅಪಾರ ಅಭಿಮಾನವಿದ್ದ ರಘು ಗಿಟಾರ್ ಸಂಗೀತ ಕಲಿತು ಮೇಟಿಯಾಗಿ ಹೊಸಸವಾಲನ್ನು ಎದುರಿಸುವುದಾಗಿ ಶಪಥಮಾಡಿದರು. ಈ ಪ್ರಸಂಗನ್ನು ಸೀರಿಯಸ್ ಆಗಿ ತೆಗೆದುಕೊಂಡು ಗಿಟಾರ್ ಕಲಿತರು. ಗಿಟಾರ್ ನುಡಿಸುತ್ತ, ಅವರು ಕಂಡುಕೊಂಡ ಸತ್ಯವೆಂದರೆ, ಅದರಲ್ಲಿರುವ ಸ್ವಾತಂತ್ರ್ಯ ಶಾಸ್ತ್ರೀಯದಲ್ಲಿ ಇಲ್ಲವೆನ್ನಿಸಿತು. ಇಲ್ಲಿ ಹೇಗೆ ಬೇಕಾದರೂ, ಏನು ಬೇಕಾದರೂ ಹಾಡಬಹುದು; ಇಷ್ಟ ಬಂದ ಸಾಹಿತ್ಯವನ್ನು ನಾವೇ ಬರೆದುಕೊಂಡು ನಮಗಿಷ್ಟ ಬಂದಂತೆ ಹಾಡಬಹುದು. ಹೀಗಾಗಿ ಸುಮಾರು ವರ್ಷಗಳ ಅವರೇ ಇಂಗ್ಲೀಷಿನಲ್ಲಿ ಸಾಹಿತ್ಯ ಬರೆಯುವುದರ ಜೊತೆಗೆ ಹಾಡುತ್ತಲಿದ್ದರು. ಗಿಟಾರ್ ನಲ್ಲಿ ಆ ಹಾಡುಗಳನ್ನು ನುಡಿಸುತ್ತಿದ್ದರು.
ಬೆಲ್ಜಿಯಂನಲ್ಲಿ ಫಾರ್ಮಸ್ಯೂಟಿಕಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಇದ್ದಾಗ ಒಂದು ಕಡೆ ಪೇಯಿಂಗ್ ಗೆಸ್ಟ್ ಆಗಿದ್ದಾಗ ಆ ಮನೆಯ ಯಜಮಾನ ರಘುರವರ ಹಾಡುವುದನ್ನು ಮೆಚ್ಚಿಕೊಂಡು ಅಲ್ಲಿಯ ಒಂದು ರೇಡಿಯೋ ಕೇಂದ್ರದಲ್ಲಿ ಹಾಡಲು ಅವಕಾಶ ಮಾಡಿಸಿಕೊಟ್ಟರು. ಅಲ್ಲಿನ ಜನ ಅದನ್ನು ತುಂಬ ಮೆಚ್ಚಿಕೊಂಡರು. ಯಾವುದೋ ಒಂದು ದೇಶದಲ್ಲಿ, ನಮ್ಮ ಭಾಷೆಯೇ ಅರ್ಥವಾಗದಿದ್ದರೂ ಜನ ನನ್ನ ಹಾಡನ್ನು ಮೆಚ್ಚಿಕೊಳ್ಳಬೇಕಾದರೆ, ನಮ್ಮ ದೇಶದಲ್ಲಿ ನಮ್ಮ ಭಾಷೆಯಲ್ಲಿ ಏಕೆ ಹಾಡಬಾರದೆನ್ನುವ ಆಲೋಚನೆ ಅವರ ತಲೆಯಲ್ಲಿ ಸುಳಿಯಿತು. ಆದರೆ ಜನಪ್ರಿಯತೆ ಪಡೆಯಲು ಅವರು ಸುಮಾರು 6 ವರ್ಷಗಳ ಕಾಲ ಕಷ್ಟಪಡಬೇಕಾಯಿತು.ಅನಂತರ ನಡೆದದ್ದೇ ಇತಿಹಾಸ.
ರಘು ದೀಕ್ಷಿತ್’ರವರು “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ತಮ್ಮದೇ ಆದ ಒಂದು ಸಂಸ್ಥೆಯನ್ನು ಹುಟ್ಟುಹಾಕಿ, ಸಂಗೀತವನ್ನು ಪ್ರಪಂಚಾದ್ಯಂತ, ಹಲವಾರು ದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ.ಇವರು ಹಾಡು ಹಾಡಬೇಕಾದ್ರೆ ಲುಂಗಿ ಮೇಲೆ ಟೀ ಶರ್ಟ್ ಧರಿಸುತ್ತಾರೆ.
2007ರಲ್ಲಿ ಮೊದಲ ಆಲ್ಬಂ ಬಂದರೂ ಜನಕ್ಕೆಲ್ಲ ಗೊತ್ತಾಗಿದ್ದು ಎರಡು ವರ್ಷಗಳ ಬಳಿಕ. ಸಿನಿಮಾದಲ್ಲಿ ಹಾಡಿದ ಮೇಲೆಯೇ ಜನರನ್ನು ತಲುಪಲು ಸಾಧ್ಯವಾಗಿದ್ದು. ಸಾಂಗ್‌ಲೈನ್ಸ್ ಪ್ರಶಸ್ತಿ ಬಂದರೂ ಸಿನಿಮಾದ ಮೂಲಕವೇ ಹೆಚ್ಚು ಬೆಳಕಿಗೆ ಬಂದಿದ್ದು. ಕನ್ನಡಿಗರು ಯಾರೂ ಗಮನಿಸಲೂ ಇಲ್ಲ ಎನ್ನುವ ಒಂದು ಕೊರತೆ ಹಯವದನಕ್ಕೆ, ಸಂಗೀತ ನೀಡಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ದಶಕಗಳಿಂದಲೂ ನೀರಿನಲ್ಲಿ ಓಡುವ ಬೈಕ್ ಗಳ ಕತೆಗಳ ಬಗ್ಗೆ ಓದಿರುತ್ತೇವೆ. ಅದೇ ರೀತಿ ಬ್ರೆಜಿಲ್ ಒಬ್ಬರು ನೀರಿನಲ್ಲಿ ಓಡುವ ಬೈಕ್’ನ್ನು ಕಂಡುಹಿಡಿದಿದ್ದಾರೆ.
ಸರ್ಕಾರವು ಈಗಾಗಲೇ ಆರೋಗ್ಯ ಭಾಗ್ಯ,ಶಾದಿ ಭಾಗ್ಯ,ಜ್ಯೋತಿ ಭಾಗ್ಯ ಅನ್ನ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ಕೊಟ್ಟಿದೆ.ಈಗ ಇದಕ್ಕೆ ಮತ್ತೊಂದು ಭಾಗ್ಯ ಸೇರ್ಪಡೆಯಾಗಿದೆ.
ಬಡವರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಆನ್ಲೈಸನ್ ಮೂಲಕ 1 ಲಕ್ಷ ಮನೆ ಹಂಚುವ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆನ್ಲೈನ್ನಲ್ಲಿ ಅರ್ಜಿ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…
ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ ಮತ್ತೆ ಕೆಲವರು ಪ್ರಾಣಿಗಳಿಗೆ ನೀಡುತ್ತಾರೆ. ಆದ್ರೆ ಇನ್ನು ಮುಂದೆ ಮಿಕ್ಕ ಅನ್ನವನ್ನು ಕಸಕ್ಕೆ ಹಾಕಬೇಡಿ. ಅದು ಆರೋಗ್ಯದ ಸಂಪತ್ತು ಎಂಬುದನ್ನು ನೆನಪಿಡಿ. ರಾತ್ರಿ ಅನ್ನ ಮಿಕ್ಕಿದ್ದರೆ, ಅದನ್ನು ಒಂದು ಮಡಿಕೆಯಲ್ಲಿ ಹಾಗೆ ಇಡಿ. ಬೆಳಿಗ್ಗೆ ಅದಕ್ಕೆ ಈರುಳ್ಳಿ ಸೇರಿಸಿ ತಿನ್ನಿರಿ. ಇದು ನಿಮ್ಮ ನೆಚ್ಚಿನ ಉಪಹಾರವಾಗದಿರಬಹುದು. ಆದ್ರೆ…
ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ. 1….