ಕರ್ನಾಟಕದ ಸಾಧಕರು

ಸಾಧನೆ ಮಾಡುವವನಿಗೆ ಬಡವ ಎನ್ನುವ ಬವಣೆ ಇರಲೇ ಬಾರದು ಅಂತ ಒಂದು ಸಾಧಕರಲ್ಲಿ ಒಬ್ಬರು ದ.ರಾ.ಬೇಂದ್ರೆ

7528

ಸಾಧಕ-೧ ,  ದ.ರಾ.ಬೇಂದ್ರೆ ಯವರ ಜೀವನ ಮತ್ತು ಅವರ ಸಾಧನೆ ಬಗ್ಗೆ ಕಿರು ಲೇಖನ.

( ನಿಮ್ಮ ಅಭಿಪ್ರಾಯ ಮತ್ತು ಮುಂದಿನ  ಸಾಧಕರನ್ನು ನೀವೇ ನಮಗೆ ತಿಳಿಸಿ )

“ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.

ಜೀವನ

ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ – ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ”-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.

  • ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.
  • ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ “ಧಾರವಾಡ ದ ಅಜ್ಜ” ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.

ಸಾಹಿತ್ಯ

ಬೇಂದ್ರೆ ಸ್ಮಾರಕ, ಧಾರವಾಡ

ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ “, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.

  • ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
  • ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
  • ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
  • ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ” ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
  • ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ “ಕನ್ನಡದ ಠಾಗೋರ್” ಎಂದು ಕರೆಯಲಾಗುತ್ತದೆ. “ನಮನ” ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು.

ಬೇಂದ್ರೆಯವರ ಸಾಹಿತ್ಯ

ಕವನ ಸಂಕಲನ

(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು

  • ೧೯೨೨: ಕೃಷ್ಣಾಕುಮಾರಿ;
  • ೧೯೩೨: ಗರಿ;
  • ೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
  • ೧೯೩೭: ಸಖೀಗೀತ;
  • ೧೯೩೮: ಉಯ್ಯಾಲೆ;
  • ೧೯೩೮: ನಾದಲೀಲೆ;
  • ೧೯೪೩: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
  • ೧೯೪೬: ಹಾಡುಪಾಡು;
  • ೧೯೫೧: ಗಂಗಾವತರಣ;
  • ೧೯೫೬: ಸೂರ್ಯಪಾನ;
  • ೧೯೫೬: ಹೃದಯಸಮುದ್ರ;
  • ೧೯೫೬: ಮುಕ್ತಕಂಠ;
  • ೧೯೫೭: ಚೈತ್ಯಾಲಯ;
  • ೧೯೫೭: ಜೀವಲಹರಿ;
  • ೧೯೫೭: ಅರಳು ಮರಳು;
  • ೧೯೫೮: ನಮನ;
  • ೧೯೫೯: ಸಂಚಯ;
  • ೧೯೬೦: ಉತ್ತರಾಯಣ;
  • ೧೯೬೧: ಮುಗಿಲಮಲ್ಲಿಗೆ;
  • ೧೯೬೨: ಯಕ್ಷ ಯಕ್ಷಿ;
  • ೧೯೬೪: ನಾಕುತಂತಿ;
  • ೧೯೬೬: ಮರ್ಯಾದೆ;
  • ೧೯೬೮: ಶ್ರೀಮಾತಾ;
  • ೧೯೬೯: ಬಾ ಹತ್ತರ;
  • ೧೯೭೦: ಇದು ನಭೋವಾಣಿ;
  • ೧೯೭೨: ವಿನಯ;
  • ೧೯೭೩: ಮತ್ತೆ ಶ್ರಾವಣಾ ಬಂತು;
  • ೧೯೭೭: ಒಲವೇ ನಮ್ಮ ಬದುಕು;
  • ೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
  • ೧೯೮೨: ಪರಾಕಿ;
  • ೧೯೮೨: ಕಾವ್ಯವೈಖರಿ;
  • ೧೯೮೩: ತಾ ಲೆಕ್ಕಣಕಿ ತಾ ದೌತಿ;
  • ೧೯೮೩: ಬಾಲಬೋಧೆ;
  • ೧೯೮೬: ಚೈತನ್ಯದ ಪೂಜೆ;
  • ೧೯೮೭: ಪ್ರತಿಬಿಂಬಗಳು;

ವಿಮರ್ಶೆ

  • ೧೯೪೦: ಸಾಹಿತ್ಯಸಂಶೋಧನೆ;
  • ೧೯೪೫: ವಿಚಾರ ಮಂಜರಿ;
  • ೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
  • ೧೯೫೯: ಮಹಾರಾಷ್ಟ್ರ ಸಾಹಿತ್ಯ;
  • ಸಾಯೋ ಆಟ (ನಾಟಕ)
  • ೧೯೬೨: ಕಾವ್ಯೋದ್ಯೋಗ;
  • ೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
  • ೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;
  • ೧೯೭೬: ಕುಮಾರವ್ಯಾಸ ಪುಸ್ತಿಕೆ;

ಪ್ರಶಸ್ತಿ, ಪುರಸ್ಕಾರ, ಬಿರುದು

  • ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
  • ೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
  • ೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
  • ೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
  • ೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
  • ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
  • ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಟ್ರೂ ಕಾಲರ್ ಆ್ಯಪ್‍’ನ ಹಿಂದಿನ ಕರಾಳ ಸತ್ಯ ಗೊತ್ತಾ ನಿಮ್ಗೆ?

    ಕೆಲವು ಅನಾಮಿಕ ವ್ಯಕ್ತಿಗಳು ನಮ್ಮ ಮೊಬೈಲ್’ಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಾರೆ.ಅವರು ಯಾರೂ ಎಂದು ನಮಗೆ ತಿಳಿಯುವುದಿಲ್ಲ.ಹಾಗಾಗಿ ನಾವು ಹೆಚ್ಚಾಗಿ ಈಗ ನಮ್ಮ ಮೊಬೈಲ್’ಗಳಲ್ಲಿ ಟ್ರೂ ಕಾಲರ್ ಆ್ಯಪ್‍’ನ್ನು ಬಳಸುವುದು ಹೆಚ್ಚು.ನಮ್ಮ ಮೊಬೈಲ್‍ನಲ್ಲಿ ನಂಬರ್ ಸೇವ್‍ ಆಗದೇ ಇದ್ದರೂ ಅಪರಿಚತರು ಕರೆ ಮಾಡಿದಾಗ ಅವರ ಹೆಸರು ನಮ್ಮ ಮೊಬೈಲ್‍ನಲ್ಲಿ ಕಾಣುತ್ತದೆ. ಹಾಗಾಗಿ ಅನಾಮಿಕ ಕರೆಗಳಿಂದ ಪಾರಾಗಬಹುದು ಎಂದು ನಾವು ಟ್ರೂ ಕಾಲರ್ ಆ್ಯಪ್‍ ಅನ್ನು ಮೊಬೈಲ್‍ಗೆ ಡೌನ್‍ಲೋಡ್ ಮಾಡಿಕೊಂಡಿರುತ್ತೇವೆ.

  • ಸುದ್ದಿ

    FlipCart Big Billion Days Offer; 50,000 ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ,.!

    ಸಾಲು ಸಾಲು ಹಬ್ಬಗಳು ಬರುತ್ತಿರುವುದು ಮತ್ತು ಬಿಗ್ ಬಿಲಿಯನ್ ಡೇಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ 50,000 ಕ್ಕೂ ಅಧಿಕ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಫ್ಲಿಪ್‍ಕಾರ್ಟ್‍ನ ಸಪ್ಲೈ ಚೇನ್, ಲಾಜಿಸ್ಟಿಕ್ ಮತ್ತು ಗ್ರಾಹಕ ಬೆಂಬಲ ವಿಭಾಗಗಳಲ್ಲಿ ಈ ಉದ್ಯೋಗಗಳನ್ನು ಸೃಜಿಸಿದೆ. ಇದಲ್ಲದೇ, ಬಿಬಿಡಿ ಅಂದರೆ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಮಾರಾಟ ಜಾಲದಲ್ಲಿ ಶೇ.30 ರಷ್ಟು ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವರ್ಷದ ದೊಡ್ಡ ಕಾರ್ಯಕ್ರಮವಾದ ಬಿಬಿಡಿ ಸೆಪ್ಟಂಬರ್29 ಕ್ಕೆ…

  • ಸುದ್ದಿ

    ಸಿಎಂ ಗ್ರಾಮ ವಾಸ್ತವ್ಯ ಮತ್ತು ಜನತಾದರ್ಶನವನ್ನು ಮುಂದೂಡಿಕೆ….!ಯಾಕೆ?

    ನಿನ್ನೆ ಜೂನ್ 21 ರ ಸಂಜೆ ಮತ್ತು ರಾತ್ರಿ ಸುರಿದ ಮಳೆಯಿಂದಾಗಿ ಕಲಬುರ್ಗಿ ತಾಲೂಕಿನ ಹೇರೂರು ( ಬಿ) ಗ್ರಾಮದಲ್ಲಿ ಇಂದು ಜೂನ್ 22 ರಂದು ನಡೆಯಬೇಕಿದ್ದ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಹಾಗೂ ಅಲ್ಲಿನ ಜಿಲ್ಲಾಧಿಕಾರಿ ವೆಂಕಟೇಶ ಅವರೊಂದಿಗೆ ನಿನ್ನೆ ಮಧ್ಯರಾತ್ರಿಯವರೆಗೂ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಿ ಅಂತಿಮವಾಗಿ ಮುಂದೂಡುವ ನಿರ್ಣಯ ಕೈಗೊಳ್ಳಬೇಕಾಯಿತು, ಇದು ಒಂದೆಡೆ ತೀವ್ರ ನಿರಾಶೆ ಉಂಟು…

  • ಸುದ್ದಿ

    ಬಿಲ್ಡಿಂಗ್ ಕುಸಿದು 6 ಮಂದಿ ಸೇನಾ ಸಿಬ್ಬಂದಿ ಸೇರಿ ಓರ್ವ ನಾಗರೀಕ ಸಾವು ; ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ…..!

    ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್‍ನಲ್ಲಿ ನಡೆದಿದೆ.ಭಾನುವಾರ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರಾಜ್ಯ ರಾಜಧಾನಿ ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲನ್‍ನ ಕುಮಾರ್ಹಟ್ಟಿ-ನಹಾನ್ ಹೆದ್ದಾರಿಯಲ್ಲಿ ಈ ಕಟ್ಟಡ ಇದ್ದು, ಭಾರೀ ಮಳೆಯಿಂದಾಗಿ ಕುಸಿದಿದೆ…

  • ಸುದ್ದಿ

    ಇಷ್ಟುದಿನ ಸಗಣಿಗೆ ಮಾತ್ರ ಬೇಡಿಕೆ ಇತ್ತು ಆದರೆ ಈಗ ನಾಯಿ ಮಲಕ್ಕೂ ಬಂತು ಬೇಡಿಕೆ! ಏನ್ ಕಾಲ ಬಂತು ಗುರು..,

    ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ಸಾಕುವ ಜಮಾನ ಕಡಿಮೆಯಾಗುತ್ತಾ ಬರುತ್ತಿದೆ. ಹೀಗಾಗಿ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಜನ ಅಲೆದಾಡುತ್ತಾರೆ. ಸಗಣಿಯನ್ನು ರಸಗೊಬ್ಬರವಾಗಿ ಕೃಷಿಗಳಿಗೆ ಬಳಸುವುದರಿಂದ ಸದ್ಯ ಇದಕ್ಕೆ ಬೇಡಿಕೆ ಇದೆ. ಇದರಂತೆಯೇ ಇದೀಗ ನಾಯಿಗಳ ಮಲಕ್ಕೂ ಬೇಡಿಕೆಯಿದೆ. ಹೌದು. ಪಿಲಿಫೈನ್ಸ್ ಶಾಲೆಯೊಂದರ ವಿದ್ಯಾರ್ಥಿಗಳು ಹೊಸ ಆವಿಷ್ಕಾರವೊಂದನ್ನು ಮಾಡಿದ್ದು, ಅದರಲ್ಲಿ ನಾಯಿಗಳ ಮಲದಿಂದಲೂ ಉಪಯೋಗವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾಯಿಗಳ ಮಲಕ್ಕೂ ಹೆಚ್ಚಿನ ಬೇಡಿಕೆ ಬರಬಹುದಾದ ಸಾಧ್ಯತೆಗಳಿವೆ. ಸಿಮೆಂಟ್ ನೊಂದಿಗೆ ನಾಯಿ ಮಲವನ್ನು ಮಿಕ್ಸ್ ಮಾಡಿ ಇಟ್ಟಿಗೆ…

  • ವಿಸ್ಮಯ ಜಗತ್ತು

    ಚಿಕ್ಕ ರಂದ್ರ ಮಾಡಿ ವೀರ್ಯವನ್ನು ತುಂಬಿದ 21 ದಿನಗಳ ನಂತರ ಹೊರಬಂದದ್ದು ಏನ್ ಅಂತ ತಿಳಿದರೆ ಬೆಚ್ಚಿ ಬಿಳ್ತೀರಾ

    ಪ್ರತಿದಿನ ನಾವು ಯಾವುದಾದರೊಂದು ಪ್ರಯೋಗಳನ್ನು ಮಾಡುತ್ತಿರುತ್ತಾರೆ ವಿಧವಿಧವಾದ ವಸ್ತುಗಳ ಮೇಲೆ ಪ್ರಯೋಗಗಳನ್ನು ಮಾಡುತ್ತಾರೆ. ಕೆಲವರು ಮನುಷ್ಯರ ಮೇಲೆ ಪ್ರಯೋಗ ಮಾಡಿದರೆ ಇನ್ನು ಕೆಲವರು ಮನುಷ್ಯನರ ಆಲೋಚನೆಗಳ ಮೇಲೆ ಪ್ರಯೋಗ ಮಾಡುತ್ತಾರೆ. ಪ್ರಯೋಗ ಮಾಡುವ ಕೆಲವರು ವಿಚಿತ್ರವಾದ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ರೀತಿಯ ವಿಚಿತ್ರ ಪ್ರಯೋಗಗಳಲ್ಲಿ ಒಂದು ನಾವು ತಿಳಿಸಿಕೊಡುತ್ತೇವೆ ನೋಡಿ. ಒಬ್ಬ ವ್ಯಕ್ತಿಗೆ ಪ್ರಯೋಗಗಳ ಮೇಲೆ ಅವುಗಳನ್ನು ಮಾಡುವುದರ ಮೇಲೆ ತುಂಬಾ ಹುಚ್ಚು ಆಸಕ್ತಿ ಹುಚ್ಚು ಎಷ್ಟರ ಮಟ್ಟಿಗೆ ಇದೆ ಅಂದರೆ ಕೋಳಿ ಮೊಟ್ಟೆಯಲ್ಲಿ ಮನುಷ್ಯರನ್ನು ಹುಟ್ಟಿಸಬೇಕು…