ಸುದ್ದಿ

ಸರ್ಕಾರಿ ಕೆಲಸದ ಸಮಯ ಬದಲು;ಇನ್ನು ಮುಂದೆ 8 ಗಂಟೆ ಕೆಲಸದ ಅವಧಿಯನ್ನು 9 ಗಂಟೆಗೆ ಬದಲು…!

62

ಕೇಂದ್ರದ ಪ್ರಸ್ತಾವನೆ ಜಾರಿಗೊಂಡರೆ ಇನ್ನು ಸರಕಾರಿ ನೌಕರರು 8 ಗಂಟೆ ಬದಲು 9 ಗಂಟೆ ಕೆಲಸ ಮಾಡಬೇಕಾಗುತ್ತದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗಿನ ಕೆಲಸದ ಅವಧಿ 6 ಗಂಟೆವರೆಗೆ ವಿಸ್ತರಣೆಯಾಗಲಿದೆ! ಕೇಂದ್ರ ಸರಕಾರ ಪ್ರಕಟಿಸುವ ವೇತನ ನಿಯಮಾವಳಿಯ ಕರಡು ವರದಿಯಲ್ಲಿಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಆದರೆ, ಬಹು ಚರ್ಚೆಯಲ್ಲಿರುವ ಕನಿಷ್ಠ ವೇತನದ ವಿಷಯವನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ. ಭವಿಷ್ಯದಲ್ಲಿ ವೇತನ ನಿಗದಿ ಮಾಡುವಾಗ ಮೂರು ಭೌಗೋಳಿಕ ವರ್ಗೀಕರಣವನ್ನು ಪರಿಗಣಿಸಬೇಕು ಎಂಬುದನ್ನು ಹೊರತು ಪಡಿಸಿದರೆ ಉಳಿದುದೆಲ್ಲವೂ ಹಳೆ ವಿಚಾರಗಳೆ.

ಹಾಗಂತ,ಇದು ಏಕಾಏಕಿ ಜಾರಿಯಾಗಲಿರುವ ನಿಯಮವಲ್ಲ.ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಬೇಕು ಎಂಬ ಕಾರಣಕ್ಕೆ ಆಕ್ಷೇಪಗಳನ್ನುಆಹ್ವಾನಿಸಲಾಗಿದೆ. ಕರಡಿನಲ್ಲಿರುವ ಇನ್ನೊಂದು ಗೊಂದಲ ಅಂಶವೆಂದರೆ, ಈಗ ತಿಂಗಳ ವೇತನ ನೀಡುವಾಗ ಈಗ 8 ಗಂಟೆಯ ಕೆಲಸದ ಅವಧಿಯನ್ನು ಗಮನಿಸಿ,26 ಕಾರ್ಯ ದಿನಗಳೆಂದು ಪರಿಗಣಿಸಲಾಗುತ್ತಿತ್ತು. ಮುಂದೆ ಅದು ಬದಲಾಗುವುದೇಎಂಬ ಸ್ಪಷ್ಟತೆ ಇಲ್ಲ.

ಕೇಂದ್ರದ ಪ್ರಸ್ತಾವನೆಗೆ ಸಿಐಟಿಯು, ಬಿಎಎಂಎಸ್‌ ಸೇರಿದಂತೆ ಬಹುತೇಕ ಎಲ್ಲ ಕಾರ್ಮಿಕ ಸಂಘಟನೆಗಳು ಆಕ್ಷೇಪ ಎತ್ತಿವೆ. ಕೆಲವು ಕಾರ್ಖಾನೆಗಳು ಆಗಲೇದಿನಕ್ಕೆ ಒಂಬತ್ತು ಗಂಟೆ ಕೆಲಸ ಮಾಡಿಸುತ್ತಿವೆ. ಈ ನಿಯಮಾವಳಿ ಅದಕ್ಕೊಂದು ಅಧಿಕೃತ ಮುದ್ರೆ ಒತ್ತಲಿದೆ. ಈ ನಿಯಮಾವಳಿಯು ಜನರ ಕಲ್ಯಾಣದ ಬಗ್ಗೆ ಮೌನವಾಗಿರುವುದರಿಂದ ನಮ್ಮ ವಿರೋಧವಿದೆ ಎಂದು ಸಿಐಟಿಯು ಉಪಾಧ್ಯಕ್ಷ ಎ.ಕೆ. ಪದ್ಮನಾಭನ್‌ ಹೇಳಿದ್ದಾರೆ. ‘ಸ್ವಾತಂತ್ರ್ಯ ಪಡೆದು 70 ವರ್ಷ ಕಳೆದರೂ ಕನಿಷ್ಠವೇತನ ಜಾರಿಯಾಗಿಲ್ಲ. ಈ ನಿಯಮಾವಳಿಗಳಲ್ಲಿ ಬದುಕಿನ ಗುಣಮಟ್ಟದ ಉಲ್ಲೇಖವೇ ಇಲ್ಲ’ ಎಂದು ಬಿ ಎಂ ಎಸ್‌ ಅಧ್ಯಕ್ಷ  ಸಿ.ಕೆ. ಸಾಜಿನಾರಾಯಣನ್‌ ಹೇಳಿದ್ದಾರೆ.

ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯೊಂದು ದಿನಕ್ಕೆ 375 ರೂ.ವನ್ನು ರಾಷ್ಟ್ರೀಯ ಕನಿಷ್ಠ ವೇತನವಾಗಿ ಪರಿಗಣಿಸಬೇಕು ಎಂದು ಸೂಚಿಸಿತ್ತು. ಅಂದರೆ,ತಿಂಗಳಿಗೆ ಕನಿಷ್ಠ ವೇತನ 9,750 ರೂ.ಹಾಗೂ ನಗರ ವಾಸಿಗಳಿಗೆ 1,430 ರೂ. ವಸತಿ ಭತ್ಯೆ ನೀಡಲುಸಲಹೆ ನೀಡಿತ್ತು. ಆದರೆ, ಹೊಸ ಕಾರ್ಮಿಕವೇತನ ನಿಯಮಾವಳಿ ಕರಡಿನಲ್ಲಿ ಈ ಅಂಶಗಳನ್ನು ಪರಿಗಣಿಸಲಾಗಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿಗೆ ಆನ್ ಲೈನ್ ವೆಬ್ಸೈಟ್ ಆರಂಭ….!

    ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ವಸ್ತುಗಳನ್ನು ಖರೀದಿಸಿದಂತೆಯೇ ಸುಲಭ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರಾಯಿತು. ಜನರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುಲಭವಾಗಿ ಮರಳು ಸಿಗುವಂತಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ dksandbazaar.com ಎಂಬ ಆನ್ ಲೈನ್ ಪೋರ್ಟಲ್ ನ್ನು ಆರಂಭಿಸಿದೆ. ಈ ಆನ್ ಲೈನ್ ಪೋರ್ಟಲ್ ಆರಂಭವಾದ ಕೆಲವೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. 50ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಈಗಾಗಲೇ ಕಂಡಿದೆ. ಜಿಲ್ಲಾಧಿಕಾರಿ ಎಸ್…

  • ಜ್ಯೋತಿಷ್ಯ

    ವೆಂಕಟೇಶ್ವರ ಸ್ವಾಮಿಯನ್ನು ನೆನೆಯುತ್ತಾ ನಿಮ್ಮ ರಾಶಿಯ ಶುಭಫಲಗಳನ್ನು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(31 ಮಾರ್ಚ್, 2019) ಮಾನಸಿಕ ಒತ್ತಡ ತರುವ ಸುಪ್ತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೀವು ತ್ವರಿತ ಹಣ ಪಡೆಯುವ…

  • ಜ್ಯೋತಿಷ್ಯ

    ಇದ್ದಕಿದ್ದಂತೆ ನಿಮ್ಮ ಜೇಬಿನಲ್ಲಿರುವ ನಾಣ್ಯ ಅಥ್ವಾ ನೋಟು ಕೆಳಗಡೆ ಬಿದ್ರೆ ಏನಾಗುತ್ತೆ ಗೊತ್ತಾ..?

    ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಹಣ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ. ನಿಮ್ಮ ಜೇಬಿನಿಂದ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುವ ಮೊದಲು ಅದ್ರಿಂದಾಗುವ ಶುಭ…

  • ಜ್ಯೋತಿಷ್ಯ

    ಹನುಮಂತ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Saturday, December 11, 2021) ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಲು ಆಸಕ್ತಿದಾಯಕವಾದದ್ದನ್ನೇನಾದರೂ ಓದುವ ಮೂಲಕ ಸ್ವಲ್ಪ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ. ತಮ್ಮ ವ್ಯಾಪರಕ್ಕಾಗಿ ಮನೆಯಿಂದ ಹೊರಗೆ ಹೋಗಿರುವ ವ್ಯಾಪಾರಿಗಳು, ತನ್ನ ಹಣವನ್ನು ಜಾಗರೂಕವಾಗಿಡಿ, ಹಣದ ಕಳ್ಳತನವಾಗುವ ಸಾಧ್ಯತೆ ಇದೆ. ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ತನ್ನ ಪ್ರೀತಿಪಾತ್ರರಿಂದ ದೂರವಿರುವ…

  • ಸುದ್ದಿ

    ಬಿಳಿ ಎಕ್ಕದ ಗಿಡದಲ್ಲಿರುವ ಈ ರಹಸ್ಯದ ಬಗ್ಗೆ ನಿಮಗೆಷ್ಟು ಗೊತ್ತು, ನೀವು ತಪ್ಪದೆ ತಿಳಿಯಬೇಕಾದ ವಿಷಯ,.!

    ಬಿಳಿ ಎಕ್ಕದ ಗಿಡದಲ್ಲಿ  ನಮಗೆ ತಿಳಿಯದ  ಔಷಧಿ ಗುಣಗಳು ತುಂಬಾನೇ ಇದೆ, ನಮ್ಮ ಮನೆ ಹತ್ತಿರ ಅಥವಾ ರೋಡ್ನಲ್ಲಿ ಒಂದು ಔಷಧಿ ಗಿಡ ತುಂಬಾ ಜನರಿಗೆ ಗೊತ್ತಿಲ್ಲ ನಮ್ಮಲ್ಲಿ ಈಗಲೂ ಕೂಡ ಇದನ್ನು ಹಳ್ಳಿಕಡೆ ಬಳಸುತ್ತ ಬಂದಿದ್ದಾರೆ.ಎಕ್ಕದ ಗಿಡದಲ್ಲಿ ಎರಡು ಪ್ರಭೇದಗಳಿವೆ ಅವು ಬಿಳಿ ಮತ್ತು ಕೆಂಪು ಗಿಡಗಳು ಎಕ್ಕದ ಗಿಡದ ಎಲೆ ವಿನಾಯಕ ಚತುರ್ಥಿ ಗೆ ಬೇಕಾದ ಶ್ರೇಷ್ಠ ವಾದ ಎಲೆ. ಈ ಒಂದು ಗಿಡ ಅಪ್ಪು ಸೈನಿಸಿ ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು…

  • ದೇಶ-ವಿದೇಶ

    ಇದು ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ! ಈ ಲೇಖನಿ ಓದಿ ಶಾಕ್ ಆಗ್ತೀರಾ…

    ನಮ್ಮ ಭಾರತ ಶಾಂತಿ ಪ್ರಿಯ ರಾಷ್ಟ್ರ. ಪಕ್ಕದ ಶತ್ರು ರಾಷ್ಟ್ರಗಳು ಏನೇ ಮಾಡಿದರೂ,ಅವರಿಗೆ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ.ಇನ್ನೊಮ್ಮೆ ಹೀಗೆ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ. ಆದ್ರೆ ಕೆಲವೊಂದು ರಾಷ್ಟ್ರಗಳು ಇದಕ್ಕೆ ತದ್ವಿರುದ್ದ.ಏಕೆಂದರೆ ಅವರು ನಮ್ಮ ತರ ಎಚ್ಚರಿಕೆ ಮಾತ್ರ, ಯಾವುದೋ ಒಂದು ರೀತಿ ಸೇಡು ತೀರಿಸಿಕೊಳ್ಳುತ್ತವೆ