ಜೀವನಶೈಲಿ

ಸರಿಯಾಗಿ “ನಿದ್ದೆಮಾಡಿಲ್ಲ” ಅಂದ್ರೆ ಏನಾಗುತ್ತೆ ಗೊತ್ತಾ? ಇದನ್ನು ಓದಿ ಶಾಕ್ ಆಗೋದು ಪಕ್ಕಾ!

3749

ನಮ್ಮ ಜೀವನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಅತ್ಯಾವಶ್ಯಕವಾಗಿದ್ದು, ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಾವು ನಿದ್ರೆಯಲ್ಲೇ ಕಳೆಯುತ್ತೇವೆ. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಇಂದು  ನಿದ್ದೆಗೆಡುವುದು ಸಾಮಾನ್ಯ ಎಂಬಂತಾಗಿ ಹೋಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯಕರ ದುಷ್ಪರಿಣಾಮಗಳು ಸಂಭವಿಸುತ್ತವೆ

ವೈದ್ಯರು ಪ್ರಕಾರ ಸಾಮಾನ್ಯವಾಗಿ ಕಾಡುವ ನಿದ್ರಾಹೀನತೆಯಿಂದ ಭವಿಷ್ಯದಲ್ಲಿ ಮಾರಕ ಆರೋಗ್ಯ ದುಷ್ಪರಿಣಾಮಗಳು ಎದುರಾಗುತ್ತವೆ…

ನಿದ್ದೆಗೆಡುವುದರಿಂದ ಏನೆಲ್ಲಾ ಆಗುತ್ತದೆ ಗೊತ್ತಾ ?

ಕೆಲುವು ವರದಿಗಳ ಪ್ರಕಾರ  ದೀರ್ಘಕಾಲದ ನಿದ್ರಾಹೀನತೆಯಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು ಎಂದು ಹೇಳಲಾಗಿದೆ. ಅಂತೆಯೇ ಪುರುಷರಿಂಗಿಂತ  ಹೆಚ್ಚಾಗಿ ಮಹಿಳೆಯರಿಗೇ ನಿದ್ರಾ ಹೀನತೆಯಿಂದ ಎದುರಾಗುವ ದುಷ್ಪರಿಣಾಮಗಳ ಅಪಾಯ ಹೆಚ್ಚಿದ್ದು, ಪುರುಷರಿಗಿಂತ ಬೇಗನೇ ಮಹಿಳೆಯರಲ್ಲಿ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು ಎಂದು ವೈದ್ಯರು  ಅಭಿಪ್ರಾಯಪಟ್ಟಿದ್ದಾರೆ.

ಇವು ನಿದ್ರಾ ಹೀನತೆಯ ಲಕ್ಷಣಗಳು :-

ಪದೇ ಪದೇ ಆನಾರೋಗ್ಯಕ್ಕೀಡಾಗುವವರಿಗಿಂತಲೂ, ನಿದ್ರಾಹೀನತೆಯಿಂದ ಬಳಲುತ್ತಿರುವವರಲ್ಲೇ ಹೆಚ್ಚಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತದ ಸಂಭವ ಹೆಚ್ಚಿರುತ್ತದೆ. ತೀರಾ ತಡವಾಗಿ ನಿದ್ರೆ ಬರುವುದು, ಅರೆ ನಿದ್ರೆಯಲ್ಲೇ  ಎಚ್ಚರವಾಗುವುದು, ಸಮಾಧಾನಕರವಲ್ಲದ ನಿದ್ರೆ ಮತ್ತು ಅಗತ್ಯಕ್ಕಿಂತ ಮೊದಲೇ ಅಂದರೆ ಮುಂಜಾನೆಯೇ ಎಚ್ಚರವಾಗುವುದು ಇವೆಲ್ಲವೂ ನಿದ್ರಾ ಹೀನತೆಯ ಲಕ್ಷಣಗಳು ಎಂದು ವೈದ್ಯರು ಹೇಳಿದ್ದಾರೆ.

ನಿದ್ರಾಹೀನತೆಯನ್ನು ಕಂಡುಹಿಡಿದದ್ದು ಹೇಗೆ ಗೊತ್ತಾ ?

ಸುಮಾರು 160, 867 ಮಂದಿಯ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಶೇ.27ರಷ್ಟು ಮಂದಿ ತಡವಾಗಿ ನಿದ್ರೆ ಮಾಡುವ ಅಭ್ಯಾಸ ಹೊಂದಿದ್ದು, ಶೇ.11ರಷ್ಟು ಮಂದಿಯಲ್ಲಿ ನಿದ್ರೆ ಮಧ್ಯೆ ಎಚ್ಚರವಾಗುವ  ಸಮಸ್ಯೆ ಕಂಡು ಬಂದಿದೆ. ಅಂತೆಯೇ ಶೇ.18ರಷ್ಟು ಮಂದಿಯಲ್ಲಿ ಅಗತ್ಯಕ್ಕೂ ಮೊದಲೇ ನಿದ್ರೆಯಿಂದ ಎಚ್ಚರವಾಗುವ ಸಮಸ್ಯೆ ಹೊಂದಿದ್ದಾರೆ. ಇಂತಹವರಲ್ಲಿ ಅತೀ ಬೇಗನೇ ಹೃದಯಾಘಾತವಾಗುವ ಅಪಾಯವಿದ್ದು, ಪಾರ್ಶ್ವವಾಯು  ಸಂಭವ ಕೂಡ ಹೆಚ್ಚಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ನಿದ್ದೆಗೆಡುವುದು ಹೃದಯಾಘಾತಕ್ಕೆ ಕಾರಣವಾಗಿ ಬಳಿಕ ಸಾವು ಕೂಡ ಸಂಭವಿಸಬಹುದು ಎಂದು ಹೇಳಿದ್ದಾರೆ. ಅಂತೆಯೇ ಅತೀ ಕಡಿಮೆ ನಿದ್ರೆ ನಮ್ಮ ಮೆದುಳಿನ ಮೇಲೂ ಅಗಾಧ ದುಷ್ಪರಿಣಾಮ ಬೀರಿ ಪಾರ್ಶ್ವವಾಯುವಿಗೆ ದಾರಿ  ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಾಗಾದರೆ, ನೀವೇನಾದರೂ ನಿದ್ರಾ ಹೀನತೆಯಿಂದ ಬಳಲುತ್ತಿದ್ದಾರೆ  ಆದಷ್ಟು ಬೇಗ ವೈದ್ಯರನ್ನು ಕಂಡು ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬೋರಲಾಗಿ ಮಲಗುವುದು ನಿಜಕ್ಕೂ ಕೆಟ್ಟದ್ದೇ..?ತಿಳಿಯಲು ಈ ಲೇಖನ ಓದಿ..

    ಈ ಪ್ರಶ್ನೆಗೆ ಹೌದು ಎಂದು ಉತ್ತರಿಸಬೇಕಾಗುತ್ತದೆ. ಬೋರಲಾಗಿ ಅಂದರೆ ಹೊಟ್ಟೆ ಅಡಿಯಾಗಿ ಮಲಗುವದರಿಂದ ನಿಮ್ಮ ಬೆನ್ನು ಮತ್ತು ಕುತ್ತಿಗೆ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಇದು ನಿದ್ರೆಯನ್ನು ಕೆಡಿಸುವ ಜೊತೆಗೆ ನಿಮ್ಮ ಶರೀರಕ್ಕೂ ಅನಾನುಕೂಲವನ್ನುಂಟು ಮಾಡುತ್ತದೆ.

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ

    ಕೋಲಾರ:- ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ, ಹನುಮಂತರಾಯನ ದಿನ್ನೆ ಗ್ರಾಮದ ವಾಸಿ ಹೆಚ್.ಎನ್.ವೆಂಕಟೇಶ್ ಬಿನ್ ನಾರಾಯಣಸ್ವಾಮಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಕೋಲಾರ ಮಹಿಳಾ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಎನ್.ಬೈರ ರವರು ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯವರು ಕಲಂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ…

  • ಕ್ರೀಡೆ, ಸಾಧನೆ, ಸುದ್ದಿ

    1500 ಮೀ. ಓಡಿ ಚಿನ್ನ ಗೆದ್ದು ಮೈದಾನದಲ್ಲೇ ಮೃತಪಟ್ಟ 78 ವರ್ಷದ ವೃದ್ಧ.

    78 ವರ್ಷದ ವೃದ್ಧರೊಬ್ಬರು 1500 ಮೀ. ಓಡಿ ಚಿನ್ನದ ಪದಕ ಗೆದ್ದು ಮೈದಾನದಲ್ಲೇ ಮೃತಪಟ್ಟ ಘಟನೆಯೊಂದು ಪಂಜಾಬ್‍ನ ಸಂಗ್ರೂರ್‍ನಲ್ಲಿ ನಡೆದಿದೆ. ಬಕ್ಷೀಶ್ ಸಿಂಗ್ ಮೃತಪಟ್ಟ ವ್ಯಕ್ತಿ. ಪಂಜಾಬ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವೃದ್ಧರಿಗೆ ಅಥ್ಲೆಟಿಕ್ ಮೀಟ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಕ್ಷೀಶ್ ಸಿಂಗ್ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬಳಿಕ ಮೈದಾನದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. 1500 ಮೀ. ರೇಸ್ ಪೂರ್ಣಗೊಳಿಸಿದ ನಂತರ ಬಕ್ಷೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಿಂಗ್ರೂರ್ ನ…

  • ರೆಸಿಪಿ

    ಎಲೆಕೋಸು ಮಂಚೂರಿ ಮನೆಯಲ್ಲೇ ಮಾಡುವುದು ಹೇಗೆ ಗೊತ್ತಾ?

    ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎರಡು ಬಟ್ಟಲು ಎಲೆಕೋಸು,ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಮೀಡಿಯಂ ಸೈಜು ಈರುಳ್ಳಿ, ಕಾನ್೯ ಫ್ಲೋರ್ ಎರಡು ಟೀ ಸ್ಪೂನ್, ಮೈದಾಹಿಟ್ಟು ಎರಡು ಟೀ ಸ್ಪೂನ್, ಅಜಿನ ಮೋಟು ಕಾಲು ಚಮಚ, ಅಚ್ಚ ಕಾರದ ಪುಡಿ 1 ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎಲೆಕೋಸನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ, ಅದಕ್ಕೆ ಎರಡು ಟೀ ಸ್ಪೂನ್ ಕಾನ್೯ ಫ್ಲೋರ್, ಎರಡು…

  • ಸುದ್ದಿ

    ಕರ್ನಾಟಕಕ್ಕೆ ಮೊಟ್ಟ ಮೊದಲ ಬಾರಿಗೆ ಸಿಗಲಿದೆ ಎಲೆಕ್ಟ್ರಿಕ್ ಲೋಕೋ ಶೆಡ್: ಕೆ ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆ….!

    ಸೌತ್ ವೆಸ್ಟ್ರನ್ ರೈಲ್ವೆ ವಲಯದಲ್ಲಿ ರೈಲು ಹಳಿಗಳ ವಿದ್ಯುತೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಇಂಜಿನ್ ಗಳನ್ನು ನಿರ್ವಹಣೆ ಮಾಡುವ ವ್ಯವಸ್ಥೆ ಪ್ರಾಮುಖ್ಯತೆ ಪಡೆಯಲಿದೆ. ಪ್ರಸ್ತುತ ಕೆ.ಆರ್ ಪುರಂ ನಲ್ಲಿರುವ ಡೀಸೆಲ್ ಲೋಕೋ ಶೆಡ್ ನ್ನು ಎಲೆಕ್ಟ್ರಿಕ್ ಲೋಕೋ ಶೆಡ್ ನ್ನಾಗಿ ಮಾರ್ಪಾಡು ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಲೋಕೋ ಶೆಡ್ ಸ್ಥಾಪನೆಯಾಗಲಿದೆ. ಬೆಂಗಳೂರು ಮೂಲದ ಬಾಲಾಜಿ ಬಿಲ್ಡರ್ಸ್ ಗೆ ಈ ಗುತ್ತಿಗೆ ಲಭ್ಯವಾಗಿದ್ದು, ವರ್ಷಾಂತ್ಯ ಅಥವಾ 2020 ರ ಜನವರಿಗೆ ಕಾಮಗಾರಿ…