ಸಿನಿಮಾ

ಸರಿಗಮಪ ಸೀಸನ್ 13 ರ ತೀರ್ಪಿನಲ್ಲಿ ಮೋಸ ಆಗಿದೆಯಾ!ಹಾಗಾದ್ರೆ ಈ ಲೇಖನಿ ಓದಿದ್ರೆ ನಿಜವಾದ ವಿನ್ನರ್ ಯಾರೆಂದು ತಿಳಿಯುತ್ತೆ?

8323

ಜೀ ಕನ್ನಡ ವಾಹಿನಿ ನಡೆಸುತ್ತಿರುವ ಕನ್ನಡ ರಿಯಾಲಿಟಿ ಶೋ  ಸರಿಗಮಪ ಸೀಸನ್ 13 ರ ತೀರ್ಪು ಹೊರಬಿದ್ದಿದೆ!
ಅಪ್ಪನ ಕನಸನ್ನು ಸಾಕಾರ ಮಾಡಿದ, ಶ್ರೀ ಪುಟ್ಟರಾಜ ಗವಾಯಿಗಳವರ ಸಂಗೀತ ಪರಂಪರೆಯ ಶ್ರದ್ಧಾವಂತ ವಿದ್ಯಾರ್ಥಿ ಸುನಿಲ್ ಸರಿಗಮಪ ಸೀಸನ್ 13 ರ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.

ಜೀ ಕನ್ನಡ ವಾಹಿನಿಯು ಕನ್ನಡ ರಿಯಾಲಿಟಿ ಶೋ  ಸರಿಗಮಪ ಸೀಸನ್ 13 ರ ಫೈನಲ್ ಸಂಚಿಕೆಯನ್ನು ನೇರ ಪ್ರಸಾರ ಮಾಡಿದ್ದು, ಸ್ಪರ್ಧಿಗಳ ಗೆಲುವು ಜನರ ವೋಟಿಂಗ್ ಮೇಲೆ ಅವಲಂಬಿತವಾಗಿತ್ತು.

ಹಾಗಾಗಿ ಇದರಲ್ಲಿ ಈ ಶೋನ ತೀರ್ಪುಗಾರರಿಗೆ ಸ್ಪರ್ಧಿಗಳ ಪ್ರತಿಭೆಯನ್ನಾಧರಿಸಿ ತೀರ್ಪು ಕೊಡುವ ಅವಕಾಶ ಇರಲಿಲ್ಲ. ಆದ್ದರಿಂದ ಜನರ ವೋಟಿಂಗ್ ಪ್ರಕಾರ ಶ್ರೀ ಪುಟ್ಟರಾಜ ಗವಾಯಿಗಳವರ ಸಂಗೀತ ಪರಂಪರೆಯ ಶ್ರದ್ಧಾವಂತ ವಿದ್ಯಾರ್ಥಿ ಸುನಿಲ್ ಸರಿಗಮಪ ಸೀಸನ್ 13 ರ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಹಾಗೂ ಇದೇ ಮಠದ ಮೆಹಬೂಬ್ ಸಾಬ್ ರನ್ನರ್ ಆಪ್ ಆಗಿದ್ದಾರೆ.

ಹಾಗೂ ಶ್ರೀ ಹರ್ಷರವರು ಮೂರನೇ ಸ್ತಾನ ಮತ್ತು ಧನುಶ್’ರವರು ನಾಲ್ಕನೇ ಸ್ತಾನಕ್ಕೆ ಅಲಂಕರಿಸಿದ್ದಾರೆ. ಇದರೆಲ್ಲದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಈ ತೀರ್ಪಿನ ಬಗ್ಗೆ ಅಸಮಾಧಾನವಾಗಿದ್ದು, ಇದು ನಿಜವಾದ ಕಾಲಾವಿದನಿಗೆ ಮಾಡಿದ ಮೋಸ ಎಂದು ಪ್ರತಿಕ್ರಯಿಸಿದ್ದಾರೆ.

ಅವರ ಪ್ರಕಾರ ನಿಜವಾದ ವಿನ್ನರ್ ಶ್ರೀ ಹರ್ಷ ರವರಾಗಿದ್ದು, ರನ್ನರ್ ಆಪ್ ಧನುಶ್’ರವರಿಗೆ ಮತ್ತು ಮೂರನೇ ಸ್ತಾನವಾಗಿ ಮೆಹಬೂಬ್ ಸಾಬ’ರವರಿಗೆ ನೀಡಬೇಕಿತ್ತೆಂದು ಅಸಮಾಧಾನಗೊಂಡಿದ್ದಾರೆ.

ಇದಕ್ಕೆ ಕಾರಣವೂ ಇದ್ದು, ಎಲ್ಲಾ ಜನರಿಗೂ ಸಂಗೀತದ ಬಗ್ಗೆ ಏನೂ ತಿಳುವಳಿಕೆ ಇರುತ್ತದೆ. ಸಂಗೀತದ ಗಂಧ ಗಾಳಿಯು ಗೊತ್ತಿಲ್ಲದವರು ಹೇಗೆ ತೀರ್ಪು ಕೊಡಲು ಸಾಧ್ಯ, ಎಂದು ಜನರ ತೀರ್ಪಿನ ಬಗ್ಗೆ ಅಸಮಧಾನದ ಹೊಗೆ ಎದ್ದಿದೆ.

ಹಾಗಾದ್ರೆ ನಿಮ್ಮ ಪ್ರಕಾರ ಯಾರಿಗೆ ಮೋಸ ಆಗಿದೆ! ಯಾರೂ ಜಯಶಾಲಿ ಆಗಬೇಕಿತ್ತು? ಮತ್ತು ಉಳಿದ ಸ್ತಾನಗಳಿಗೆ ಯಾರೂ ಅರ್ಹರಾಗಿದ್ದರು ಎಂಬುದನ್ನು ನಿಮ್ಮ ಕಾಮೆಂಟ್ ಮುಖಾಂತರ ತಿಳಿಸಿ…..

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ