ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಿಕ್ಷುಕನ ಮನೆಯಲ್ಲಿ 1.70 ಕೋಟಿಗಳ ಹಣ ಸಿಕ್ಕಿದೆ. ಮುಂಬೈ ಪಟ್ಟಣದಲ್ಲಿನ ಕೊಳಗೇರಿಗೆ ಸೇರಿದ ಭಿಕ್ಷುಕನಿಗೆ ತನ್ನವರು ಎಂಬುವರು ಯಾರೂ ಇಲ್ಲ. ಪ್ರತಿದಿನ ಭಿಕ್ಷೆ ಬೇಡುವುದು, ದೊರೆತ್ತದ್ದನ್ನು ತಿನ್ನುವುದು, ಬಂದದ್ದನ್ನು ಎತ್ತಿಡುವುದು…..ಇದೇ ಆತನ ದಿನನಿತ್ಯದ ಕೆಲಸವಾಗಿತ್ತು.

ಕೆಲವು ವರ್ಷಗಳಿಂದಲೂ ಹೀಗೆಯೇ ಮಾಡುತ್ತಿದ್ದ ಆತನಿಗೆ ವಯಸ್ಸಾಗಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮೊದಲೇ ಹೇಳಿದಂತೆ ತನ್ನವರೆಂಬುವರು ಯಾರೂ ಇಲ್ಲದಿರುವುದರಿಂದ ಸ್ಥಳೀಯ ಸ್ವಯಂಸೇವಾ ಸಂಸ್ಥೆಯು ಮುಂದಾಗಿ ಆತನ ಅಂತ್ಯಕ್ರಿಯೆಗಳನ್ನು ನಡೆಸಿದೆ.

ಆತನ ಗುಡಿಸಲಲ್ಲಿ ಹುಡುಕುವಾಗ ಕಣ್ಣು ಕುಕ್ಕುವ ದೃಶ್ಯ ಕಂಡು ಬಂದಿತು. ಪ್ಲಾಸ್ಟಿಕ್ ಚೀಲಗಳಲ್ಲಿ, ಗೋಣಿ ಚೀಲಗಳಲ್ಲಿ ಹಣ ಕಾಣಿಸಿದ್ದು, ಅದನ್ನು ಲೆಕ್ಕ ಹಾಕಿದಾಗ 1 ಕೋಟಿ 70 ಲಕ್ಷ 35 ಸಾವಿರ ರೂಪಾಯಿಗಳಿದ್ದವು. ಇದನ್ನು ಕಂಡವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ.

ಆದರೆ ಆತ ಒಂದೊಂದು ಪೈಸೆಯನ್ನೂ ಕೂಡಿಟ್ಟ ಭಿಕ್ಷುಕನಾದ್ದರಿಂದ ಅನಾಥನಂತೆಯೇ ಲೋಕವನ್ನು ಬಿಟ್ಟಿದ್ದಾನೆ. ಕಳೆದ ವರ್ಷ ಇಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿಯೂ ನಡೆದಿದೆ. ಆದ್ದರಿಂದಲೇ ಹುಟ್ಟಿದಾಗ ಏನನ್ನೂ ತರುವುದಿಲ್ಲ. ಹೋಗುವಾಗ ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ ಎಂಬ ವೇದಾಂತದ ಮಾತಿದೆ.

ಈ ಮಾತನ್ನು ಯಾರಾದರೂ ಮೃತಪಟ್ಟಿದ್ದಾಗ ಆಡುತ್ತಾರೆ ಆದರೂ ಮನುಷ್ಯನು ಮಾತ್ರ ಜೀವನವಿಡೀ ಹಣದ ಸುತ್ತಲೂ ಸುತ್ತುತ್ತಿರುತ್ತಾನೆ. ಭಿಕ್ಷೆ ಬೇಡಿ ಅಷ್ಟು ಹಣವನ್ನು ಗಳಿಸಿದ್ದಾನೆ ಎಂದರೆ ನಂಬಲು ಸ್ವಲ್ಪ ಅಚ್ಚರಿಯೇ ಆಗುತ್ತದೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಂಪತ್ತು, ಬುದ್ಧಿವಂತಿಕೆ ಹೆಚ್ಚಬೇಕೆಂದರೆ ಮನಸ್ಸು ನಿರ್ಮಲವಾಗಿರುವುದು ಅತಿ ಮುಖ್ಯವಾಗುತ್ತದೆ. ಅಂತೆಯೇ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಲು ಸಹಕಾರಿಯಾಗುವಂತೆ ನಮ್ಮ ಭಾರತೀಯ ಸನಾತನ ಧರ್ಮದಲ್ಲಿ ಋಷಿ-ಮುನಿಗಳು ಹಲವು ಮಂತ್ರಗಳನ್ನು ಕೊಟ್ಟಿದ್ದಾರೆ
ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ. ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ. ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್…
ಯಾವುದೇ ರಾಜ್ಯದಲ್ಲಿ ಚುನಾವಣೆ ಬಂದಾಗ ತಮ್ಮ ನಾಯಕರು ಗೆಲ್ಲಲೆಂದು ಅಭಿಮಾನಿಗಳು ಎನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ತೆಲಂಗಾಣ ವಿಧಾನಸಭಾ ಚುನಾವಣಾ ಕಣ ಚಿತ್ರ, ವಿಚಿತ್ರ ಸಂಗತಿಗಳಿಂದ ಗಮನ ಸೆಳೆಯುತ್ತಿದೆ. ಚುನಾವಣೆಯಲ್ಲಿ ತಮ್ಮ ನಾಯಕರು ಗೆಲಲ್ಲಿ ಎಂದು ಜನರು ಹೋಮ, ಯಜ್ಞ ಮತ್ತಿತರ ಪೂಜೆ ಮಾಡುತ್ತಿದ್ದರೆ, ಕೆಲವರು ದೇವಾಲಯಗಳಿಗೆ ಲಕ್ಷ ಗಟ್ಟಲೇ ಹಣದ ಆಮಿಷವೊಡ್ಡುತ್ತಿದ್ದಾರೆ. ಮತ್ತೆ ಕೆಲವರು ಮೂಢನಂಬಿಕೆಗಳಿಗೆ ಜೋತು ಬಿದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಮಹೇಶ್ ಎಂಬಾತ ಇನ್ನೂ…
ಶ್ರಾವಣ ಶುಕ್ರವಾರ ನಡೆಯುವ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಬಳ್ಳಾರಿಗೆ ಬರುತ್ತಿದ್ದ ಭಾರತ ಸರಕಾರದ ಸಚಿವೆಯಾಗಿರುವ ಸುಷ್ಮಾ ಸ್ವರಾಜ್’ರವರು ಈ ವರ್ಷವಾದರೂ ಬಳ್ಳಾರಿಗೆ ಬರುತ್ತಾರೆಯೇ?
ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಇದೇ ತಿಂಗಳು 07ಕ್ಕೆ ಬೃಹತ್ ಉದ್ಯೋಗ ಮೇಳ ಅಯೋಜಿಸಲಾಗುತ್ತಿದೆ.
ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸಂಸದರ ಜತೆ ಸಭೆ ನಡೆಸಿ, ಪಡಿತರ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ನೀಡುವ ಬದಲಿಗೆ ಅದರ ಸಬ್ಸಿಡಿ ಹಣವನ್ನು ನೇರವಾಗಿ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.ಇದು ರೇಷನ್ ಕಾರ್ಡುದಾರರಿಗೆ ಲಾಭದಾಯಕವಾದರೆ ಕಾಳಸಂತೆಕೋರರ ಮೇಲೆ ನಿಯಂತ್ರಣ ಹಾಕಲಿದೆ.