ಸುದ್ದಿ

ಒಂದು ಎಕರೆಗೆ ಆಗುವಷ್ಟು ಶ್ರೀಗಂಧ ಬೀಜ ಮಾರಿದ್ರೆ ಲಕ್ಷಗಟ್ಟಲೆ ಲಾಭ ಪಡೆಯಬಹುದು,

311

ತುಂಬಾ ಜನರತಲೇಲಿರೋದೇನಂದ್ರೆ, ಶ್ರೀಗಂಧ ಹಾಕಿದರೆ ಕಳ್ಳರ ಕಾಟ, ಮಾರುಕಟ್ಟೆಗ್ಯಾರಂಟಿ ಇಲ್ಲ ಹಾಗೂ 15-20 ವರ್ಷದನಂತರವೇ ಅದರಿಂದ ಆದಾಯ ಸಿಗುವುದು, ಅಲ್ಲಿವರೆಗೆ ಬರೀ ನಾವ್‌ ಹಾಕ್ತಾ ಇರಬೇಕು… ಆದರೆ ವಾಸ್ತವವೇಬೇರೆ, ಶ್ರೀಗಂಧ ನೆಟ್ಟಮೂರೇ ವರ್ಷದಿಂದ ಆದಾಯ ಪಡೆಯಬಹುದು. ಶ್ರೀಗಂಧ ತನ್ನ ಬೀಜಗಳ ಮೂಲಕ ನಿಮಗೆ ಹಣ ತಂದುಕೊಡುತ್ತದೆ. ಏನಿಲ್ಲವೆಂದರೂ ಒಂದು ಎಕರೆಯಲ್ಲಿ ಹಾಕಿದ ಶ್ರೀಗಂಧದಿಂದ ಪ್ರತಿವರ್ಷ ಬೀಜ ಮಾರಾಟದಿಂದಲೇ ಅಂದಾಜು ಎರಡು ಲಕ್ಷ ಆದಾಯ ಇದೆ. ಎಲ್‌.ಐ.ಸಿ ಯ ಮನಿ ಬ್ಯಾಕ್‌ ಪಾಲಿಸಿಯ ಹಾಗೆ ಪ್ರತಿ ವರ್ಷ ಬೀಜದ ರೂಪದಲ್ಲಿ ಶ್ರೀಗಂಧ ಮರಳಿ ದುಡ್ಡು ಕೊಡುತ್ತಾ ಇರುತ್ತದೆ.

ಕೃಷಿ ಕ್ಷೇತ್ರದ ಸಾಧಕಿ ಕವಿತಾ ಮಿಶ್ರಾರವರ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇದೆ. ಕಂಪ್ಯೂಟರ್‌ ಸೈನ್ಸ್‌ ಡಿಪ್ಲೋಮಾ ಜೊತೆಗೆ ಎಂಎ ಸೈಕಾಲಜಿ ಓದಿರುವ ಇವರು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ತಮ್ಮ 10 ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ, ಆ ಬರಡು ಭೂಮಿಯನ್ನ ಸ್ವರ್ಗಮಾಡಿದ್ದಾರೆ. 2100 ಶ್ರೀಗಂಧ, 1500 ದಾಳಿಂಬೆ, 90 ಮಾವು, 300 ನಿಂಬೆ, 800 ಸೀಬೆ, 150 ನೇರಳೆ, 150 ಬೆಟ್ಟದ ನಲ್ಲಿಕಾಯಿ, 150 ನುಗ್ಗೆ, 100 ಕರಿಬೇವು, 100 ಮಲ್ಲಿಗೆ, 100 ತೆಂಗು, 450 ಸೀತಾಫಲ… ಜೊತೆಗೆ ಮೂಸಂಬಿ, ಸಪೋಟ, ಬಾರೇಹಣ್ಣು, ಮತ್ತಿ, ರಕ್ತಚಂದನ, ಕಾಫಿ, ಮೆಣಸು, ಅರಿಷಿಣ.. ಸೇರಿದಂತೆ ನಾನಾ ಬಗೆಯ ಗಿಡಗಳನ್ನು ಬೆಳೆದಿದ್ದಾರೆ! ಎಲ್ಲಕ್ಕಿಂತ ಮುಖ್ಯವಾಗಿ ಕೃಷಿಯಲ್ಲಿರುವ ತಮ್ಮ ಜ್ಞಾನವನ್ನು ತಮ್ಮದೇ ವಿಶಿಷ್ಟಶೈಲಿಯಲ್ಲಿ ರೈತರಿಗೆ ಹಂಚುವ ಮೂಲಕ ನೂರಾರು ರೈತರು ಕೃಷಿಯತ್ತ, ಅದರಲ್ಲೂ ಶ್ರೀಗಂಧ ಕೃಷಿಯತ್ತ ವಾಲುವಂತೆ ಮಾಡಿದ್ದಾರೆ. ಜೊತೆಗೆ ಉತ್ತಮ ಗುಣಮಟ್ಟದ ಶ್ರೀಗಂಧದ ಸಸಿಗಳನ್ನು ತಯಾರಿಸಿ ರೈತರಿಗೆ ಒದಗಿಸುವ ಕವಿತಾ ಮಿಶ್ರಾರವರನ್ನು ಹತ್ತಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.

ಈಗ ಈ ಶ್ರೀಗಂಧದ ಬೀಜದ ವಿಷಯಕ್ಕೆ ಬಂದರೆ, ಕವಿತಾ ಮಿಶ್ರಾ ಅವರು ಈಗಾಗಲೆ ಶ್ರೀಗಂಧದಿಂದ ಆದಾಯ ಪಡೆಯುತ್ತಿದ್ದಾರೆ. ಒಂದು ಎಕರೆಗೆ ಸುಮಾರು 250 ಶ್ರೀಗಂಧದ ಮರಗಳನ್ನು ನೆಡಬಹುದು. ಅದರ ಜೊತೆ ಶ್ರೀಗಂಧಕ್ಕಿಂತ ಕಡಿಮೆ ಎತ್ತರ ಬೆಳೆಯುವ ಯಾವುದಾದರೂ ಇತರೆ ಗಿಡಗಳನ್ನು ಹಾಕಬಹುದು. ಎಲ್ಲ ರೀತಿಯ ಹಣ್ಣಿನ ಗಿಡಗಳನ್ನು ಬೆಳೆದು ಅದರಿಂದ ಉಪ ಆದಾಯ ಪಡೆಯಬಹುದು. ಶ್ರೀಗಂಧವನ್ನು 15 ವರ್ಷ ಮೇಲ್ಪಟ್ಟು ಕಟಾವು ಮಾಡಬಹುದು, ಅಲ್ಲಿಯವರೆಗೆ ಇತರ ಮಿಶ್ರ ಬೆಳೆ ಹಾಗೂ ಶ್ರೀಗಂಧದ ಬೀಜದಿಂದ ಹಣ ಗಳಿಸಬಹುದು. ಹೆಚ್ಚು ನೀರು, ಗೊಬ್ಬರ , ಕಾಳಜಿ ಬೇಡದ ಶ್ರೀಗಂಧ ನಾಟಿ ಮಾಡಿದ ಮೂರು ವರ್ಷದಿಂದ ಬೀಜ ಕೊಡಲು ಆರಂಭಿಸುತ್ತದೆ. ಮೊದಲ ಕೆಲವು ವರ್ಷ ಕಡಿಮೆ ಬೀಜಗಳು ದೊರಕುತ್ತವೆ, ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಒಂದು ಗಿಡದಿಂದ ಒಂದೆರಡು ಕೆ.ಜಿ ಯಿಂದ ಹಿಡಿದುಎಂಟ್ಹತ್ತು ಕೆ.ಜಿಯವರೆಗೆ ಬೀಜಗಳು ದೊರೆಯುತ್ತವೆ. ಬೆಲೆಯ ಬಗ್ಗೆ ಹೇಳಬೇಕೆಂದರೆ, ಒಂದು ಕೆ.ಜಿ ಬೀಜಕ್ಕೆ 500 ರಿಂದ ಹಿಡಿದು 1200 ರವರೆಗೆ ಇದೆ. ಔಷಧಿ ತಯಾರಿಸುವ ಕಂಪನಿಗಳು ಸದ್ಯ ಕೆಜಿಗೆ 1000ರು. ನಂತೆ ಕೊಳ್ಳುತ್ತಿದ್ದಾರೆ. ಒಂದು ಎಕರೆಗೆ 250 ಗಿಡ, ಒಂದು ಗಿಡದಿಂದ ಕೇವಲ ಒಂದೇ ಕೆ.ಜಿ ಬೀಜದಂತೆ ಲೆಕ್ಕ ಮಾಡಿದರೂ, ಬೀಜದಿಂದಲೇ ಎರಡು ಲಕ್ಷ ಆದಾಯ ಗಳಿಸಬಹುದು.

ಶ್ರೀಗಂಧದ ಭದ್ರತೆಯ ವಿಷಯದಲ್ಲೂ ಮೊದಲಿನ ಹಾಗೆ ಆತಂಕಪಡಬೇಕಿಲ್ಲ, ಈಗ ತಂತ್ರಜ್ಞಾನ ಸಾಕಷ್ಟುಮುಂದುವರೆದಿದೆ. ಇ ಸೆಕ್ಯೂರಿಟಿ ಅಳವಡಿಸಿ ಮನೇಲಿ ಕೂತ್ಗೊಂಡು ತೋಟ ಕಾಯಬಹುದು. ಇ-ಪ್ರೊಟೆಕ್ಷನ್‌ನಲ್ಲಿ ಶ್ರೀಗಂಧದ ಮರಗಳಿಗೆ ಒಂದು ಮೈಕ್ರೋಚಿಪ್‌ ಅಳವಡಿಸಲಾಗುವುದು, ಕಳ್ಳ ಮರದ ಹತ್ತಿರ 2 ಅಡಿ ದೂರದಲ್ಲಿ ಸುಳಿದಾಡಿದರೂ ಸೈರನ್‌ ಕೂಗುತ್ತದೆ. ಅಷ್ಟೇ ಅಲ್ಲ ಸಮೀಪದ ಪೊಲೀಸ್‌ ಠಾಣೆಗೂ ಲಿಂಕ್‌ ಹೊಂದಿ ಅಲ್ಲೂ ಸೈರನ್‌ ಹೊಡೆದು ಕೊಳ್ಳುತ್ತದೆ. ಮತ್ತೊಂದು ಪ್ರಯೋಜನವೆಂದರೆ ಅಕಸ್ಮಾತ್‌ ಕಳ್ಳ ಕದ್ದೊಯ್ದರೂ ಕದ್ದ ಮಾಲು ಎಲ್ಲಿದೆ ಎಂಬುದನ್ನು ಕರಾರುವಕ್ಕಾಗಿ ಪತ್ತೆ ಹಚ್ಚಬಹುದು. ಮಾರುಕಟ್ಟೆಬಗ್ಗೆಯೂ ಚಿಂತಿಸಬೇಕಿಲ್ಲ. ಹೊರಗೆ ಮಾರಾಟ ಮಾಡಲಾರದವರು ಕೆಎಸ್‌ಡಿಎಲ್‌ಗೇ ಮಾರಬಹುದು.

ಮಾಹಿತಿಯ ಆಗರ ಕವಿತಾ ಮಿಶ್ರಾ : ತೋಟದಲ್ಲೇ ಮನೆ ಮಾಡಿಕೊಂಡು ಹತ್ತಾರು ಮರಗಿಡಗಳ ಜೊತೆಗೆ ಹಸು, ಕುರಿ, ಕೋಳಿ ಸಾಕಾಣಿಕೆ ಕೂಡ ಮಾಡುತ್ತಿರುವ ಕವಿತಾರವರು ಇಂಗ್ಲಿಷ್‌, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳನ್ನ ಸುಲಲಿತವಾಗಿ ಮಾತನಾಡಬಲ್ಲರು. ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ಅದನ್ನು ರೈತರಿಗೆ ವರ್ಗಾಯಿಸಿ ಅವರ ಮನ ಬದಲಿಸಬಲ್ಲರು. ತಮ್ಮಲ್ಲೇ ಶ್ರೀಗಂಧದ ಸಸಿ ತಯಾರು ಮಾಡುವ ಇವರು ಅವುಗಳನ್ನು ಕೇವಲ 35 ರೂ.ನಂತೆ ಮಾರಾಟ ಮಾಡುತ್ತಾರೆ. ಜೊತೆಗೆ ಅಪಾರ ತಾಂತ್ರಿಕ ಮಾಹಿತಿ ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಸಂಜೆ 7 ರಿಂದ 9 ಗಂಟೆಯವರೆಗೆ ಅವರನ್ನು ಮೊಬೈಲ್‌ ಸಂಖ್ಯೆ 9448777045 ಸಂಪರ್ಕಿಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬೆಳ್ಳುಳ್ಳಿಯಲ್ಲಿರುವ ಪ್ರಮುಖ ಆರೋಗ್ಯಗುಣಗಳು ತಿಳಿಯಲು…! ಈ ಲೇಖನವನ್ನು ಓದಿ…

    ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಬೆಳ್ಳುಳ್ಳಿಯ ವಿವರಣೆ ಅದರ ಔಷಧೀಯ ಗುಣಗಳ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ.

  • ದೇಗುಲ ದರ್ಶನ, ದೇವರು

    ಮಕ್ಕಳಾಗದ ದಂಪತಿ ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ. ನಿಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಿ.!

    ಬೆಳ್ತಂಗಡಿಯಿಂದ ಆರು ಕಿ.ಮೀ. ಅಂತರದ ಕಾರ್ಕಳ ರಸ್ತೆಯಲ್ಲಿ ಬಂದರೆ ಬದ್ಯಾರ್ ಎಂಬಲ್ಲಿ ಇಳಿದು ಮತ್ತೆ ಒಂದು ಕಿ.ಮೀ. ಸಾಗಿದರೆ ಪುರಾತನವಾದ ಸಂತಾನ ಗೋಪಾಲಕೃಷ್ಣ ದೇವಸ್ಥಾನ ತಲುಪಬಹುದು. ಕರಾವಳಿಯಲ್ಲಿ ಇಂತಹ ದೇವಾಲಯವಿರುವುದು ಒಂದೆರಡು ಮಾತ್ರ. ಈ ಬಾರಿಯ ಜಾತ್ರೆ 2020ರ ಜನವರಿ ಇಂದ ನಡೆಯಲಿದೆ. ಮಕ್ಕಳಿಲ್ಲದ ದಂಪತಿ ಇಷ್ಟಾರ್ಥ ಪ್ರಾಪ್ತಿಯಾದಾಗ ನಿರ್ಮಾಣ ಮಾಡಿದ್ದ ಈ ದೇವಾಲಯಕ್ಕೆ ಆರುನೂರು ವರ್ಷಗಳ ಇತಿಹಾಸವಿದೆ. ಚಾಲುಕ್ಯ ಶಿಲ್ಪ ಶೈಲಿಯ ವೇಣುಗೋಪಾಲನ ವಿಗ್ರಹ ಇಲ್ಲಿದೆ. ಪ್ರತ್ಯೇಕವಾಗಿ ದುರ್ಗೆ ಮತ್ತು ದೈವಗಳಿಗೂ ಆರಾಧನೆ ನಡೆಯುತ್ತದೆ. 2012ರಲ್ಲಿ ದೇವಾಲಯ…

  • ಆರೋಗ್ಯ

    ಹುಣಸೆ ಬೀಜದಲ್ಲಿ ಅಡಗಿದೆ ಕೀಲು ನೋವಿಗೆ ಸುಲಭವಾದ ಮದ್ದು….! ತಿಳಿಯಲು ಈ ಲೇಖನ ಓದಿ…

    ಇತ್ತೀಚಿನ ಜೀವನ ಶೈಲಿಯಲ್ಲಿ ಎಲ್ಲವು ಕಷ್ಟವಾಗುತ್ತಿವೆ. ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ ದೊಡ್ಡವರಿಗೆ ಮಾತ್ರ ಮಂಡಿ ನೋವು ಅಥವಾ ಕೀಲುಗಳ ನೋವು ಕಾಣಿಸುಕೊಳ್ಳುತಿತ್ತು, ಆದರೆ ಈಗ ಎಲ್ಲಾ ಬದಲಾಗಿದೆ.

  • ಉಪಯುಕ್ತ ಮಾಹಿತಿ, ದೇಶ-ವಿದೇಶ, ಹಣ

    ಈ ದೇಶಗಳಲ್ಲಿ ನಮ್ಮ ದೇಶದ ಒಂದು ರೂಪಾಯಿಗೆ ಇರುವ ಬೆಲೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ನಮ್ಮ ಭಾರತ ದೇಶದಲ್ಲಿ ಹಣದ ವಿಷಯದ ಬಗ್ಗೆ ಮಾತನಾಡುವಾಗ ನಮ್ಮ ರುಪಾಯಿಯನ್ನು ಬೇರೆ ದೇಶದ ಕರೆನ್ಸಿಗಳ ಜೊತೆ ಹೋಲಿಸಿ ಮಾತನಾಡುವುದುಂಟು. ಅದರಲ್ಲೂ ಅಮೇರಿಕಾದ ಡಾಲರ್ ಜೊತೆಗೆ  ಹೋಲಿಸಿಕೊಂಡು ಮಾತನಾಡುವುದು ಜಾಸ್ತಿ. ಅದರಲ್ಲೂ ನಮ್ಮ ರುಪಾಯಿ ಮುಂದೆ ಡಾಲರ್ ಮೌಲ್ಯ ಜಾಸ್ತಿ ಇರುವುದರಿಂದ ಅದರ ಬಗ್ಗೆಯೇ ನಮ್ಮಲ್ಲಿ ಚರ್ಚೆ ನಡೆಯುತ್ತದೆ. ಆದರೆ ನಮಗೆ ಗೊತ್ತೇ ಇಲ್ಲದ ವಿಷಯ ಏನಪ್ಪಾ ಅಂದ್ರೆ ಜಗತ್ತಿನಲ್ಲಿ ನಮ್ಮ  ದೇಶದ ರುಪಾಯಿಗಿಂತ ಕಡಿಮೆ ಬೆಲೆಯುಳ್ಳ ಕರೆನ್ಸಿ…

  • ಸುದ್ದಿ

    ರೈತ ಯುವಕನನ್ನು ಮಾಡುವೆ ಆಗೋ ಹುಡುಗಿಗೆ ಸಿಗಲಿದೆ ಒಂದು ಲಕ್ಷ ಬಂಪರ್ ಆಫರ್..!

    ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ಗ್ರಾಮದ ಸಹಕಾರ ಸೊಸೈಟಿ  ಶಾದಿಭಾಗ್ಯ ಯೋಜನೆಯಡಿ ಬಂಪರ್ ಬಹುಮಾನ ಘೋಷಿಸಿದೆ.ಆನಗೋಡು ಗ್ರಾಮದ ರೈತನನ್ನು ವಿವಾಹವಾದ ಯಾವುದೇ ಯುವತಿಯ ಅಕೌಂಟ್ ಗೆ 1 ಲಕ್ಷ ರು ಹಣ ಡೆಪಾಸಿಟ್ ಮಾಡಲಾಗುವುದು. ಈ ಆಫರ್ ಆನಗೋಡು ಗ್ರಾಮಸ್ಥರಿಗೆ ಹಾಗೂ ಆನಗೋಡು ಸೇವಾ ಸಹಕಾರಿ ಸಂಘದ ಸದಸ್ಯರಿಗೆ  ಮಾತ್ರ ಅನ್ವಯಿಸುತ್ತಿದೆ.ಈ ಯೋಜನೆ 2019ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಸಹಾಯಕರಾಗಿರುವ ಕುಟುಂಬಗಳಿಗೆ ಧನ ಸಹಾಯವಾಗಲಿದೆ, ಭವಿಷ್ಯದಲ್ಲಿ ಅವರಿಗೆ ಸಹಾಯವಾಗಲಿ ಎಂಬ…

  • ರೆಸಿಪಿ

    ಬೇಕರಿ ಸ್ಟೈಲ್ ಸಿಹಿ ಬೂಂದಿ & ಖಾರಾ ಬೂಂದಿ ಮಾಡುವ ವಿಧಾನ.

    ಸಿಹಿ ಬೂಂದಿ ಮಾಡಲು ಬೇಕಾದ ಪದಾರ್ಥಗಳು : ಕಡ್ಲೆ ಹಿಟ್ಟು 2 ಕಪ್, ಅಡುಗೆ ಸೋಡ 1/4 ಚಮಚ, ಉಪ್ಪು ಚಿಟಿಕೆ, ದ್ರಾಕ್ಷಿ 2 ಚಮಚ, ಗೋಡಂಬಿ 2 ಚಮಚ, ತುಪ್ಪ 2 ಚಮಚ, ಸಕ್ಕರೆ 1/2ಕಪ್, ಏಲಕ್ಕಿ ಪುಡಿ 1/2 ಚಮಚ, ಅಡುಗೆ ಎಣ್ಣೆ 2 ಕಪ್. ಮಾಡುವ ವಿಧಾನ : ಕಡ್ಲೆಹಿಟ್ಟು , ಉಪ್ಪುಚಿಟಿಕೆ , ಅಡುಗೆ ಸೋಡ ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ ,ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ…