ಜ್ಯೋತಿಷ್ಯ

ಶುಭ ಶುಕ್ರವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

524

ಇಂದು ಶುಕ್ರವಾರ,  16/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ದುಡಿದ ಹಣದಲ್ಲಿ ಸ್ವಲ್ಪ ಭಾಗ ದಾನ ಧರ್ಮ ಮಾಡಿದಲ್ಲಿ ನಿಮಗೂ ನಿಮ್ಮ ಕುಟುಂಬಕ್ಕೂ ಒಳಿತಾಗುವುದು. ಸ್ಥಿರಾಸ್ತಿ ಖರೀದಿಯ ಬಗ್ಗೆ ಮಾತುಕತೆ ಸಾಧ್ಯತೆ. ಕಿಡಿಗೇಡಿಗಳು ನಿಮಗೆ ಸಿಟ್ಟು ಬರಿಸುವ ಪ್ರಯತ್ನ ನಡೆಸಿದರೂ ನೀವು ವ್ಯವಧಾನದಿಂದಲೇ ಉತ್ತರಿಸಿ. ಶ್ರಮಪಡಿ, ಇದು ನಿಮ್ಮ ದಿನವಾದ್ದರಿಂದ ನೀವು ಖಂಡಿತವಾಗಿಯೂ ಅದೃಷ್ಟಶಾಲಿಯಾಗಿರುತ್ತೀರಿ.ಲೇವಾದೇವಿ ವ್ಯವಹಾರಗಳಿಂದಾಗಿ ಹೆಚ್ಚಿನ ಲಾಭದ ನಿರೀಕ್ಷೆ.

ವೃಷಭ:-

ಕೆಲಸ ಕಾರ್ಯಗಳಲ್ಲಿ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು. ನೀವು ಆರ್ಥಿಕವಾಗಿ ವ್ಯವಹರಿಸುವರ ಜೊತೆಗೆ ಎಚ್ಚರಿಕೆಯಿಂದಿರಿ.  ರಾಜಕಾರಣದ ಒಳ ಹೊರಗುಗಳ ಬಗ್ಗೆ ರಹಸ್ಯ ಮಾತುಕತೆ ಸಾಧ್ಯತೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಚಿಲ್ಲರೆ ವ್ಯಾಪಾರಸ್ಥರಿಗೆ ಹೆಚ್ಚಿನ ಆದಾಯ. ನಿಮ್ಮ ಹಿರಿಯರ ಮಾತು ಕೇಳಿ ಮತ್ತು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಶಾಂತವಾಗಿ ಆಲೋಚಿಸಿ.

ಮಿಥುನ:

ಸ್ವಸಾಮರ್ಥ್ಯದಿಂದ ಸಮಸ್ಯೆಗಳನ್ನು ಪರಿಹರಿಸಿ ಪರಿಸ್ಥಿತಿಯನ್ನು ಸುಧಾರಣೆ ಮಾಡಬೇಕಾದೀತು. ಅಧಿಕಾರದ ಇತಿಮಿತಿಯನ್ನರಿತು ಕಾರ್ಯ ನಿರ್ವಹಿಸುವುದು ಉತ್ತಮ. ವ್ಯವಹಾರದ ಬಂಡವಾಳ ಮಾಡಿಕೊಳ್ಳಿ. ಹಾಗಾಗಿ ಕೆಲಸಗಾರರನ್ನು ನಂಬಿ. ಮತ್ತು ಅವರೂ ಕೂಡಾ ನಿಮ್ಮನ್ನು ನಂಬುವಂತೆ ಮಾಡಿ. ನೀವು ಗುಂಪಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನೀವು ಹೊಸ ಸ್ನೇಹಿತರನ್ನು ಸಂಪಾದಿಸುತ್ತೀರಿ. ಶ್ರೇಷ್ಠ ಜನರೊಡನೆ ಸಂಬಂಧ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮತ್ತು ಯೋಜನೆಗಳನ್ನು ತರುತ್ತದೆ.

ಕಟಕ :-

ದೂರದ ಪ್ರಯಾಣ ಸಾಧ್ಯತೆ.ಉದ್ಯೋಗದ ವಿಚಾರವಾಗಿ ಶುಭ ಸಂದೇಶ ಬರುವುದು. ಒಂದು ತಪ್ಪಿದ ಅವಕಾಶ ಮತ್ತೆ ಮರಳದೇ ಇರಬಹುದಾದ್ದರಿಂದ ಹಿಂಜರಿಯಬೇಡಿ. ಉತ್ತಮರಾದ ಸ್ನೇಹಿತರ ಸಲಹೆಯನ್ನು ಪಡೆಯಿರಿ. ಗುರಿ ತಲುಪುವಲ್ಲಿ ನಿಮ್ಮ ಶ್ರಮ ಸಾರ್ಥಕ್ಯ ಪಡೆಯುವುದು. ಮೂರನೇ ವ್ಯಕ್ತಿಯ ಹಸ್ತಕ್ಷೇಪ ನೀವು ಮತ್ತು ನಿಮ್ಮ ಪ್ರೀತಿಪಾತ್ರರಲ್ಲಿ ಕಂದಕ ತರಬಹುದು.  ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಧಾವಂತದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ.

 ಸಿಂಹ:

ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ, ಇವು ನಿಮ್ಮ ಮನಸ್ಸಿನ ಮೇಲೆ ಒತ್ತಡ ತರುತ್ತವೆ. ದೂರದವರಿಂದ ಸಂತೋಷದ ಸುದ್ದಿಯೊಂದನ್ನು ಕೇಳಲಿದ್ದೀರಿ. ಯಾರಾದರೂ ಕೆಲಸದಲ್ಲಿ ನಿಮಗೆ ಅಡ್ಡಿ ಮಾಡಬಹುದು – ಆದ್ದರಿಂದ ಏನಾಗುತ್ತದೆ ಎನ್ನುವುದರ ಬಗ್ಗೆ ಗಮನವಿರಲಿ.ಸಾಮಾಜಿಕ ಮನ್ನಣೆ ದೊರಕುವುದು.

ಕನ್ಯಾ :-

ಸೃಜನ ಶೀಲ ಕುಶಲಕರ್ಮಿಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ. ನಿಮ್ಮನ್ನು ಯಾರಾದರೂ ಆಕರ್ಷಿಸಲು ಪ್ರಯತ್ನಿಸಬಹುದಾದ್ದರಿಂದ ಎಚ್ಚರಿಕೆಯಿಂದಿರಿ. ಲಭ್ಯವಿರುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಿ. ವ್ಯಾಪಾರದಲ್ಲಿ ತೊಡಗಿದವರಿಗೆ ಉತ್ತಮ ಲಾಭ ದೊರಕಲಿದೆ. ಅನ್ಯರನ್ನು ನಿಮ್ಮತ್ತ ಸೆಳೆಯಲು ಸಹಕಾರಿಯಾಗುವುದು. ವೃತ್ತಿಯಲ್ಲಿ ಅಥವಾ ವಾಸಸ್ಥಳದಲ್ಲಿ ಬದಲಾವಣೆ ಸಾಧ್ಯತೆ ಇದೆ. ಸಂಗಾತಿಯ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಒಳಿತಾಗುವುದು. ಅರ್ಹ ನೌಕರರಿಗೆ ಬಡ್ತಿ ಅಥವಾ ಆರ್ಥಿಕ ಲಾಭ. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ

ತುಲಾ:

ಜನರು ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನು ತಾಳುವರು. ನಿಮ್ಮನ್ನು ಗೌರವಿಸಲು ಬಂದ ವ್ಯಕ್ತಿಗಳೊಂದಿಗೆ ಸೌಜನ್ಯದಿಂದ ಮಾತನಾಡಿ. ಮನೆಯಿಂದ ಹೊರಡುವಾಗಲೇ ಪೂರ್ವ ತಯಾರಿ ಮಾಡಿಕೊಂಡು ಬಟ್ಟೆ ಅಂಗಡಿಗೆ ಪ್ರವೇಶಿಸುವುದರಿಂದ ಅನುಕೂಲವಾಗುವುದು. ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಬೇಕು.ಹಣಕಾಸಿನ ವಿಷಯದಲ್ಲಿ ಅಲ್ಪ ವ್ಯತ್ಯಯ ಕಂಡುಬರುವುದು. ನೀವು ಇಂದು ಚಿಕ್ಕ ಆದರೆ ಪ್ರಮುಖವಾದ ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ವೃಶ್ಚಿಕ :-

ಆರೋಗ್ಯದ ಕಡೆ ಗಮನ ಕೊಡಿ. ಇಂದು ಯಾರಾದರೂ ನಿಮ್ಮ ಪ್ರೀತಿಯ ನಡುವೆ ಬರಬಹುದು. ವೆಚ್ಚದ ಏರಿದರೂ ಆದಾಯದಲ್ಲಿನ ಹೆಚ್ಚಳ ನಿಮ್ಮ ಖರ್ಚುಗಳನ್ನು ನೋಡಿಕೊಳ್ಳುತ್ತದೆ.ನಿಮ್ಮ ಕೆಲಸದಲ್ಲಿನ ತಪ್ಪನ್ನು ಒಪ್ಪಿಕೊಳ್ಳುವುದು ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಆದರೆ ನೀವು ಅದನ್ನು ಹೇಗೆ ಸುಧಾರಿಸಬಹುದೆಂದು ವಿಶ್ಲೇಷಿಸಬೇಕು.

ಧನಸ್ಸು:

ಮನೆಯ ಹಿರಿಯರ ಆರೋಗ್ಯದ ವಿಷಯದಲ್ಲಿ ಆಸ್ಪತ್ರೆ ಖರ್ಚು ಬರುವ ಸಂಭವವಿದೆ. ವಿವಾಹಾಕಾಂಕ್ಷಿಗಳಿಗೆ ಸ್ವಲ್ಪಮಟ್ಟಿನ ತೊಡಕುಂಟಾದೀತು. ನಿಮ್ಮ ಸಂಗಾತಿ ಇಂದು ನಿಮ್ಮಿಂದ ನಿರಾಶೆ ಹೊಂದಿರುವಂತೆ ಕಾಣುತ್ತದೆ ಮತ್ತು ನಿಮಗೆ ಅದು ತಿಳಿಯುತ್ತದೆ. ಆರ್ಥಿಕ ಸುಧಾರಣೆಯನ್ನು ಕಂಡುಕೊಳ್ಳುವಿರಿ.ನಿಮ್ಮಲ್ಲಿನ ತಪ್ಪನ್ನು ತಿದ್ದುವವರನ್ನು ಗೌರವಿಸಿ. ಇಂದು ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ನಿಮ್ಮ ಜೀವನದಲ್ಲಿ ತೆರೆಮರೆಯಲ್ಲಿ ನಡೆಯುತ್ತಿದೆ.

ಮಕರ :-

ಆರ್ಥಿಕ ಸುಧಾರಣೆಯನ್ನು ಕಂಡುಕೊಳ್ಳುವ ದಿನ. ನಿಮ್ಮ ಒಳ್ಳೆಯ ನಿರ್ಧಾರದಿಂದಾಗಿ ಸಹೋದ್ಯೋಗಿಗಳ ಸಂತಸಕ್ಕೆ ಕಾರಣರಾಗುವಿರಿ. ಮನೆಯ ಕರ್ತವ್ಯಗಳನ್ನು ತಪ್ಪಿಸುವುದು ಮತ್ತು ಹಣಕ್ಕಾಗಿ ಪರಿತಪಿಸುವುದು ಇಂದು ನಿಮ್ಮ ವೈವಾಹಿಕ ಜೀವನಕ್ಕೆ ಹಾನಿ ತರಬಹುದು. ನೀವು ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ತಲುಪುತ್ತೀರಿ.

ಕುಂಭ:-

ಬ್ಯಾಂಕ್ ವ್ಯವಹಾರಗಳಿಂದ ಹೆಚ್ಚಿನ ಅನುಕೂಲ ದೊರಕಲಿದೆ. ಮಹತ್ವದ ವಿಚಾರವೊಂದರ ಪೂರ್ವ ತಯಾರಿಯ ಮಾತುಕತೆಗಳಿಗೆ ಸಂಬಂಧಿರೊಬ್ಬರು ಚಾಲನೆ ಮಾಡುವರು. ಯಾವುದಕ್ಕೂ ಹಿರಿಯರೊಂದಿಗೆ ಚರ್ಚಿಸಿ ಕಾರ್ಯಪ್ರವೃತ್ತರಾಗಿ. ಪುರಾಣ ಪುರುಷರ ಅಥವಾ ಧಾರ್ಮಿಕ ಪುಸ್ತಕಗಳನ್ನು ಓದುವತ್ತ ಗಮನ ಕೊಡಿ. ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ನಿಮ್ಮನ್ನೇ ಸ್ವಲ್ಪ ಬದಲಾಯಿಸಲು ಇರಬೇಕು ಹಾಗೂ ಜನರು ನಿಮ್ಮ ಸಲುವಾಗಿ ಬದಲಾಗಲು ಇರಬಾರದು.

ಮೀನ:-

ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸುವಿರಿ. ನಿಮ್ಮ ವೃತ್ತಿಗೆ ಗೌರವ ತರುವಂತಹ ಕೆಲಸ ನಿಮ್ಮಿಂದಾಗುವುದು. ಪ್ರೇಮಜೀವನವು ಇಂದು ನಿಮ್ಮನ್ನು ಆಶೀರ್ವದಿಸಿರುವಂತೆ ತೋರುತ್ತದೆ. ಕೆಲಸದಲ್ಲಿ ಇಂದು ಎಲ್ಲವೂ ನಿಮ್ಮ ಪರವಾಗಿರುತ್ತವೆ. ಉದ್ಯೋಗ, ವ್ಯವಹಾರಗಳಲ್ಲಿ ಕೂಲಂಕುಷ ಅವಲೋಕನ ಮಾಡುವುದು ಒಳಿತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ವೆಚ್ಚ ಭರಿಸಬೇಕಾದೀತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಇವನ ಒಂದು ಸೆಲ್ಪಿ ಫೋಟೋಗಾಗಿ ಹುಡುಗಿಯರು ಗಂಟೆಗಟ್ಟಲೆ ಕ್ಯೂ ನಿಲ್ತಾರೆ!ಈ ಪುಣ್ಯಾತ್ಮ ಯಾರೂ ಗೊತ್ತಾ?

    ಈಗಿನ ಸೋಶಿಯಲ್ ಮಿಡಿಯಾಗಳಾದ ಫೇಸ್ಬುಕ್,ಟ್ವಿಟ್ಟರ್, ಹಾಗೂ ಯೂ ಟೂಬ್’ಗಳಲ್ಲಿ ರಾತ್ರೋ ರಾತ್ರಿ ಫೇಮಸ್ ಆದವರಿದ್ದಾರೆ. ಅವರು ಹೇಗಿದ್ದಾರೆ ಅನ್ನುವುದು ಮುಖ್ಯ ಅಲ್ಲ. ಅವರಲ್ಲಿ ಏನು ಟ್ಯಾಲೆಂಟ್ ಇದೆ ಅನ್ನುವುದು ಮುಖ್ಯ. ಅಂತಹ ಟ್ಯಾಲೆಂಟ್ ಇದ್ದವರು ಸೋಶಿಯಲ್ ಮಿಡಿಯಾಗಳಿಂದ ಸೂಪರ್ ಸ್ಟಾರ್ ಆಗಬಹುದು.

  • ಆರೋಗ್ಯ

    ವೀಳ್ಯದೆಲೆ ಸೇವಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ವೀಳ್ಯದೆಲೆ ಸೇವಸುವುದು ಹಳೆ ಕಾಲದವರು ಎಂದು ಬಹಳ ಮಂದಿ ಮೂಗು ಮುರಿಯಬಹುದು. ಆದರೆ ಅಂತಹವರು ವೀಳ್ಯದೆಲೆಯಲ್ಲಿ ಇಷ್ಟೊಂದು ಆರೋಗ್ಯ ವೃದ್ಧಿಸುವು ಅಂಶಗಳು ಇವೆ ಎಂದು ತಿಳಿದರೆ ಆಶ್ಚರ್ಯ ಮಾಡುತ್ತಾರೆ.

  • ಜ್ಯೋತಿಷ್ಯ

    ಗುರು ರಾಯರನ್ನು ನೆನೆಯುತ್ತಾ ಗುರುವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 24 ಜನವರಿ, 2019 ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ನೀವು…

  • ಜ್ಯೋತಿಷ್ಯ

    ಶುಭ ಶುಕ್ರವಾರದ ಈ ದಿನ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(29 ಮಾರ್ಚ್, 2019) ನಿಮ್ಮ ಸಂತೋಷದ ಪ್ರಕೃತಿ ಇತರರಿಗೆ ಸಂತೋಷ ತರುತ್ತದೆ. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು…

  • ಸಿನಿಮಾ

    ಇಲ್ಲಿದೆ ನೋಡಿ ಯಶ್ ರಾಧಿಕಾ ಪಂಡಿತ್ ರವರ ಮುದ್ದು ಮಗಳ ಫೋಟೋ…

    ನಟ ರಾಕಿಂಗ್ ಸ್ಟಾರ್ ಯಶ್ ರವರಿಗೆ ಅವರು ಅಂದುಕೊಂಡಂತೆ ಪತ್ನಿ ರಾಧಿಕಾ ಪಂಡಿತ್ ರವರಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ.ತಮ್ಮ ಮುದ್ದಿನ ಮಗಳು ಕೈ ಬೆರಳನ್ನು ಬಿಗಿದಪ್ಪಿದ್ದ ವೇಳೆ ಪುಳಗೊಂಡಿರುವ ನಟ ಯಶ್, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾದ ಯಶ್ ಮಗಳ ಬಗ್ಗೆ, “ನನ್ನ ಬೆರಳುಗಳನ್ನು ಬಿಗಿಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ! ಯಾರನ್ನಾದರೂ ಕನಿಷ್ಠ ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವ. ಇನ್ನು ಅವಳನ್ನು ಕಣ್ತುಂಬಿಕೊಂಡ…

  • ಸುದ್ದಿ

    ಮಾತ್ರೆಯಿಲ್ಲದೆ ಕ್ಷಣ ಮಾತ್ರದಲ್ಲಿ ತಲೆನೋವು ಮಾಯವಾಗಲು ಸುಲಭ ಪರಿಹಾರಗಳು; ಹೀಗೆ ಮಾಡಿ..!

    ತಲೆ ನೋವು ಕಾಣಿಸಿಕೊಳ್ಳಲು ಕಾರಣ ಒಂದಾ ಅಥವಾ ಎರಡ ಅನೇಕ ಕಾರಣಗಳಿವೆ. ಅದರಲ್ಲಿಯೂ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತಾದೆ ಇಂತಹ ಸಂದರ್ಭದಲ್ಲಿ ಮಾತ್ರೆ ಬಳಸದೆ ಮುಕ್ತಿ ಪಡೆಯಬಹುದು. ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು 10 ಸುಲಭ ಪರಿಹಾರಗಳು: 1) ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತಾದೆ. 2) ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು…