ಸುದ್ದಿ

15,000 ಕೆಜಿ ಕಾಗದ ತ್ಯಾಜ್ಯ ಸಂಗ್ರಹಿಸಿ ಪ್ರಶಸ್ತಿಯನ್ನು ಗೆದ್ದ ಭಾರತೀಯ ಹುಡುಗಿ…!

77

ದುಬೈ: 8 ವರ್ಷದ ಭಾರತೀಯ ಬಾಲಕಿಯೊಬ್ಬಳು ಬರೋಬ್ಬರಿ 15 ಸಾವಿರ ಕಿಲೋಗ್ರಾಂ ಕಾಗದದ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾಳೆ.ಭಾರತೀಯ ಮೂಲದ ನಿಯಾ ಟೋನಿ 15 ಸಾವಿರ ಕೆಜಿ ತೂಕದ ಪೇಪರ್ ತ್ಯಾಜ್ಯ ಸಂಗ್ರಹಿಸಿದ್ದಾಳೆ. ಈಕೆ ಪೋಷಕರ ಜೊತೆ ದುಬೈನಲ್ಲಿ ನೆಲೆಸಿದ್ದಾಳೆ. ಟೋನಿ ಎಮಿರೇಟ್ಸ್ ಎನ್ವಿರಾನ್ಮೆಂಟಲ್ ಗ್ರೂಪ್‍ನ ರಾಷ್ಟ್ರವ್ಯಾಪಿ ಮರುಬಳಕೆ ಅಭಿಯಾನದ ಭಾಗವಾಗಿ ವೇಸ್ಟ್ ಪೇಪರ್‌ಗಳನ್ನು ಸಂಗ್ರಹಿಸಿದ್ದಾಳೆ. ಇತ್ತೀಚೆಗಷ್ಟೆ ದುಬೈಯ ಎಮಿರೇಟ್ಸ್ ರಿಸೈಕ್ಲಿಂಗ್ ಅವಾರ್ಡ್ಸ್ ನ 22ನೇ ಆವೃತ್ತಿಯಲ್ಲಿ ಬಾಲಕಿಯ ಅಸಾಮಾನ್ಯ ಸಾಧನೆಗೆ ಆಕೆಯನ್ನು ಗೌರವಿಸಲಾಗಿದೆ.

ಇಂಗಾಲದ ಡೈಆಕ್ಸೈಡ್ ಹೊರಹೊಮ್ಮುವುದನ್ನು ತಡೆಯುವ ನಿಟ್ಟಿನಲ್ಲಿ ಎಮಿರೇಟ್ಸ್ ಗ್ರೂಪ್ ಅಭಿಯಾನವನ್ನು ಕೈಗೊಂಡಿತ್ತು. ಅದರಲ್ಲಿ ಬರೋಬ್ಬರಿ 73,393 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಈ ಅಭಿಯಾನದಲ್ಲಿ ಕಾರ್ಪೋರೇಷನ್‍ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವ್ಯಕ್ತಿಗಳು ಅಥವಾ ಕುಟುಂಬದವರು ಎಂದು ಭಾಗ ಮಾಡಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿತ್ತು.

ಈ ಅಭಿಯಾನದಲ್ಲಿ ಕಾಗದದ ಹೊರತಾಗಿಯೂ ಪ್ಲಾಸ್ಟಿಕ್, ಗಾಜು, ಡಬ್ಬಿಗಳು ಮತ್ತು ಮೊಬೈಲ್ ಫೋನ್‍ಗಳು ಸಂಗ್ರಹಿಸಲಾಗಿದೆ. ಅನೇಕ ಜನರು ಈ ಅಭಿಯಾನದಲ್ಲಿ ಭಾಗವಹಿಸಿ ತ್ಯಾಜ್ಯ ಪೇಪರ್‌ಗಳನ್ನು ಸಂಗ್ರಹಿಸಿದ್ದರು. ಆದರೆ 8 ವರ್ಷದ ಟೋನಿ 14,914 ಕೆಜಿ ತ್ಯಾಜ್ಯ ಸಂಗ್ರಹಿಸಿ ಎಲ್ಲರಿಗೂ ಅಚ್ಚರಿ ನೀಡಿದ್ದಳು. ಪ್ರತಿವಾರ ಕಾಗದಗಳನ್ನು ಸಂಗ್ರಹಿಸಲು ನಾನು ನಮ್ಮ ಪ್ರದೇಶದ ಸುತ್ತಮುತ್ತ ಅಭಿಯಾನ ನಡೆಸುತ್ತಿದ್ದೆ. ಪ್ರತಿಯೊಬ್ಬರ ಮನೆಗೆ ಹೋಗಿ ಕಾಗದ ತ್ಯಾಜ್ಯ, ಓದಿ ಮುಗಿದ ಪತ್ರಿಕೆ, ನಿಯತಕಾಲಿಕೆ ಇತ್ಯಾದಿಗಳನ್ನು ಸಂಗ್ರಹಿಸಿ ತರುತ್ತಿದ್ದೆ ಎಂದು ಟೋನಿ ಹೇಳಿದ್ದಾಳೆ.

ಯಾರೂ ಕೂಡ ಬಳಸಿದ ಪೇಪರ್‌ಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಇಟ್ಟಪಡುವುದಿಲ್ಲ. ಅದರಲ್ಲೂ ಮರುಬಳಕೆ ಮಾಡುವಂತಹ ತ್ಯಾಜ್ಯವನ್ನು ಸಂಗ್ರಹಿಸಬೇಕು. ನನ್ನಂತೆಯೇ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸಬೇಕು. ಆಗ ಮುಂದಿನ ದಿನದಲ್ಲಿ ನಾವು ಪರಿಸರ ಮಧ್ಯೆ ವಾಸಿಸಬಹುದು ಎಂದು ತಿಳಿಸಿದ್ದಾಳೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ಗರ್ಭಿಣಿಯೊಬ್ಬರು ಸ್ಕ್ಯಾನ್ ಮಾಡಿಸಿಕೊಂಡಾಗ ಅಲ್ಲಿ ನಿಜಕ್ಕೂ ಕಂಡಿದ್ದು ಏನು ಗೊತ್ತಾ..?ಶಾಕ್ ಆಗ್ತೀರಾ..!ಮುಂದೆ ಓದಿ…

    ಪ್ರತಿ ಆಸ್ಪತ್ರೆಗಳಲ್ಲೂ ಗರ್ಭಿಣಿಯರಿಗೆ ಸ್ಕ್ಯಾನ್ ಮಾಡುತ್ತಾರೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಷಯವೇ. ಪ್ರತಿಯೊಬ್ಬ ಗರ್ಭಿಣಿಯು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸುತ್ತಾರೆ ಹಾಗು ತನ್ನ ಮಗುವಿನ ಚಿತ್ರವನ್ನು ಅಲ್ಲಿಯೇ ನೋಡಿ ಕಣ್ತುಂಬಿಕೊಳ್ಳುತ್ತಿರುತ್ತಾಳೆ.

  • Health, ಉಪಯುಕ್ತ ಮಾಹಿತಿ

    ಸೌತೆಕಾಯಿ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಸೌತೆಕಾಯಿಗಳು 95% ನೀರನ್ನು ಒಳಗೊಂಡಿರುತ್ತವೆ ಮತ್ತು ಇದು ಅವರಿಗೆ ಸೂಕ್ತವಾದ ಹೈಡ್ರೇಟಿಂಗ್ ಮತ್ತು ತಂಪಾಗಿಸುವ ಆಹಾರವಾಗಿಸುತ್ತದೆ. ಸೌತೆಕಾಯಿಗಳು ಫಿಸೆಟಿನ್ ಎಂಬ ಉರಿಯೂತದ ಫ್ಲೇವನಾಲ್ ಅನ್ನು ಹೊಂದಿರುತ್ತವೆ, ಇದು ನಿಮ್ಮ ಮೆದುಳಿನ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸೌತೆಕಾಯಿಗಳಲ್ಲಿ ಲಿಗ್ನಾನ್ಸ್ ಎಂಬ ಪಾಲಿಫಿನಾಲ್‌ಗಳಿವೆ, ಇದು ಸ್ತನ, ಗರ್ಭಾಶಯ, ಅಂಡಾಶಯ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೌತೆಕಾಯಿ ಸಾರವು ಅನಗತ್ಯ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತದ ಪರ ಕಿಣ್ವಗಳ ಚಟುವಟಿಕೆಯನ್ನು ತಡೆಯುವ…

  • ಉಪಯುಕ್ತ ಮಾಹಿತಿ

    ನಿಜವಾದ ಬಡವ, ಶ್ರೀಮಂತ ಎಂದ್ರೆ ಯಾರೂ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ? ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ. ಬಡವರು ಯಾರು? ಶ್ರೀಮಂತರು ಯಾರು? ಈ ಲೇಖನ ಓದಿ ನೀವೆ ನಿರ್ಧರಿಸಿ ಹೇಳಿ.

  • ಚುನಾವಣೆ

    ಕರ್ನಾಟಕ ಮೇ.೧೦ ಚುನಾವಣೆ

    ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಬುಧವಾರ ಚುನಾವಣೆ ನಡೆಯಲಿದ್ದು, ಮೇ.೧೩ ಶನಿವಾರ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗವು ಬುಧವಾರ ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಇಂದಿನಿಂದಲೇ ತಕ್ಷಣ ಜಾರಿಗೆ ಬರುವಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿದೆ. ಚುನಾವಣಾ ವೇಳಾಪಟ್ಟಿಯು ಏಪ್ರಿಲ್ ೧೩ ರಂದು ಚುನಾವಣಾ ಅಧಿಸೂಚನೆ ಅಧಿಕೃತವಾಗಿ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಕಾರ್ಯವು ಅಂದಿನಿಂದಲೂ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೦ ಕೊನೆಯ ದಿನವಾಗಿದ್ದು,…

  • ಉಪಯುಕ್ತ ಮಾಹಿತಿ, ದೇವರು

    ಸಂಕ್ರಾಂತಿ ಯಾಕೆ ಮಾಡ್ತಾರೆ ಗೊತ್ತಾ? ಈ ದಿನ ಎಳ್ಳಿಗೆ ಯಾಕೆ ಇಷ್ಟು ಮಹತ್ವ.

    ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು…

  • ದೇವರು-ಧರ್ಮ, ರಾಜಕೀಯ

    ‘ಪ್ರಧಾನಿ ಮೋದಿ’ಆಜಾನ್(ನಮಾಜ್) ಧ್ವನಿ ಕೇಳಿಸಿ ಭಾಷಣ ನಿಲ್ಲಿಸಿದರು..!ಏಕೆ ಗೊತ್ತಾ?ಶಾಕ್ ಆಗ್ತೀರಾ!ಮುಂದೆ ಓದಿ…

    ಗುಜರಾತ್ ಚುನಾವಣಾ ಪ್ರಚಾರದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿಶೇಷ ಪ್ರಸಂಗ ನಡೆದಿದೆ.