ಸುದ್ದಿ

ವೀರ ಯೋಧ ಅಭಿನಂದನ್ ಅವರ ತಂದೆ ತಾಯಿಗಳನ್ನು ಕಂಡ ಜನ ಮಾಡಿದ್ದೇನು ಗೊತ್ತಾ?ಎಷ್ಟು ಗಂಟೆಗೆ ಭಾರತಕ್ಕೆ ಬರ್ತಾರೆ ಗೊತ್ತಾ?

156

ಪಾಕಿಸ್ತಾನ ತನ್ನ ವಶದಲ್ಲಿಟ್ಟುಕೊಂಡಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಇಂದು ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಪೋಷಕರು ಅಮೃತಸರದ ವಾಘಾ ಗಡಿಗೆ ತೆರಳಿದ್ದಾರೆ.

ಹೆಮ್ಮೆಯ ಪುತ್ರ ಅಭಿನಂದನ್ ಬರುತ್ತಿರುವ ಮಾಹಿತಿ ತಿಳಿದ ತಕ್ಷಣ ಅವರ ತಂದೆ ನಿವೃತ್ತ ಏರ್‍ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್ ಮತ್ತು ತಾಯಿ ಶೋಭಾ ವರ್ಥಮಾನ್ ಅವರು ಗುರುವಾರ ರಾತ್ರಿ ಚೆನ್ನೈನಿಂದ ದೆಹಲಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದರು.

ಅಭಿನಂದನ್ ಪೋಷಕರು ವಿಮಾನದ ಒಳಗೆ ಪ್ರವೇಶ ಮಾಡುತ್ತಿದ್ದಂತೆಯೇ ಅದರೊಳಗಿದ್ದ ಸಹ ಪ್ರಯಾಣಿಕರು ಹರ್ಷೋದ್ಗಾರ ಕೂಗಿದ್ದು, ಅಲ್ಲದೇ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಬರಮಾಡಿಕೊಂಡಿದ್ದರು. ಮಧ್ಯರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಏರ್ ಪೋರ್ಟ್ ನಲ್ಲಿಯೂ ಕೂಡ ಸೇನೆಯವರು ಅವರನ್ನು ಗೌರವದಿಂದ ಸ್ವಾಗತಿಸಿದ್ದಾರೆ.

ಈ ವೇಳೆ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್, “ಮೊದಲು ನನ್ನ ಮಗನನ್ನು ನೋಡಬೇಕು, ಆಮೇಲಷ್ಟೇ ಪ್ರತಿಕ್ರಿಯೆ ಕೊಡ್ತೇನೆ” ಎಂದು ಹೇಳಿದ್ದಾರೆ. ಅಭಿನಂದನ್ ತಂದೆ ನಿವೃತ್ತ ಏರ್ ಮಾರ್ಷಲ್ ಆಗಿದ್ದು, ತಾಯಿ ಶೋಭಾ ವರ್ಥಮಾನ್ ವೈದ್ಯರಾಗಿದ್ದಾರೆ. ಪೋಷಕರು ದೆಹಲಿಗೆ ಬಂದು ಇಳಿದ ಕೂಡಲೇ ಅಮೃತಸರಕ್ಕೆ ತೆರಳಿದ್ದಾರೆ.

ಪಾಕಿಸ್ತಾನವು ವಾಘಾ ಗಡಿಯಲ್ಲಿ ಇಂದು ಮಧ್ಯಾಹ್ನದ ಬಳಿಕ 4ರ ಸುಮಾರಿಗೆ ಅಭಿನಂದನ್ ಅವರನ್ನು ಭಾರತಕ್ಕೆ ಒಪ್ಪಿಸುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತೀಯರ ಸಂಭ್ರಮ ಮುಗಿಲುಮುಟ್ಟಿದೆ. ಅಲ್ಲದೇ ವಾಘಾ ಗಡಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಹೆಮ್ಮೆಯ ಸೈನಿಕ ಅಭಿಯನ್ನು ಅದ್ಧೂರಿಯಿಂದ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಪ್ರೇಮ, ಸ್ಪೂರ್ತಿ

    ತನ್ನ ಮರಿಗಾಗಿ ಈ ಕೋತಿ ಆಸ್ಪತ್ರೆಯ ಬಳಿ ಮಾಡಿದ ಕೆಲಸವನ್ನ ನೋಡಿದರೆ ಕಣ್ಣೀರು ಬರುತ್ತದೆ.

    ಸ್ನೇಹಿತರೆ ನಾವು ಮನುಷ್ಯತ್ವದ ಬಗ್ಗೆ ಮತ್ತು ಮನುಷ್ಯರು ಮಾಡುವ ಸಹಾಯದ ಬಗ್ಗೆ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ, ಆದರೆ ಪ್ರಾಣಿಗಳು ತೋರುವ ಪ್ರೀತಿಯ ಬಗ್ಗೆ ನಾವು ನೋಡಿರುವುದು ಮತ್ತು ಕೇಳಿರುವುದು ತುಂಬಾ ಕಡಿಮೆ. ಸ್ನೇಹಿತರೆ ನಿಮ್ಮ ಹೃದಯಕ್ಕೆ ಹತ್ತಿರವಾಗುವ ಘಟನೆಯೊಂದು ನಮ್ಮ ದೇಶದಲ್ಲಿ ನಡೆದಿದ್ದು ಅದನ್ನ ಕೇಳಿದ ಜನರ ಕಣ್ಣಲ್ಲಿ ಕೂಡ ನೀರು ಬಂದಿದೆ. ತುಂಬಾ ಜನರು ಅವರ ಕಷ್ಟಗಳನ್ನ ನಿವಾರಣೆ ಮಾಡಿಕೊಳ್ಳುವುದರಲ್ಲಿಯೇ ದಿನವನ್ನ ಕಳೆಯುತ್ತಾರೆ, ತಮ್ಮ ಕಷ್ಟಗಳನ್ನ ಬಗೆಹರಿಸಿಕೊಳ್ಳುವುದಕ್ಕೆ ಅವರಿಗೆ ಸಮಯ ಇರುವುದಿಲ್ಲ ಇಂತಹ ಸಮಯದಲ್ಲಿ ಬೇರೆಯವರ…

  • ಸ್ಪೂರ್ತಿ

    ಸಂಕಷ್ಟದಲ್ಲಿದ್ದಗಲೇ ಕೈ ಬಿಟ್ಟ ಸಿ ಎಂ ಧೋಸ್ತಿ….!

    ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದ್ದಾಗಲೇ ಸಚಿವ ಡಿಕೆ ಶಿವಕುಮಾರ್ ಅವರು ವಿದೇಶಕ್ಕೆ ಹೊರಟಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು. ಏನೇ ಸಮಸ್ಯೆ ಇದ್ದರೂ ನಾನೀದ್ದೇನೆ ಎಂದು ಹೇಳುತ್ತಾ, ಸರ್ಕಾರದ ಹಿತ ಕಾಯಲು ನಿಂತಿದ್ದ ಟ್ರಬಲ್ ಶೂಟರ್ ಸಂಕಷ್ಟದ ಸಮಯದಲ್ಲೇ ಕೈ ಕೊಟ್ರಾ ಅನ್ನೋ ಅನುಮಾನವೊಂದು ಮೂಡಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇನ್ನು 7 ದಿನಗಳ ಕಾಲ ನಾಟ್ ರೀಚೆಬಲ್‍ನಲ್ಲಿ ಇರಲಿದ್ದಾರೆ. ಭಾನುವಾರ ರಾತ್ರಿ ದೆಹಲಿಯಿಂದ ಕುಟುಂಬ ಸಮೇತ ಆಸ್ಟ್ರೇಲಿಯಾ…

  • ಆಧ್ಯಾತ್ಮ, ದೇವರು, ದೇವರು-ಧರ್ಮ

    ಇಲ್ಲಿದೆ ಪಂಚಮುಖಿ ಆಂಜನೇಯನ ಅವತಾರದ ಕತೆ..!ಹನುಮಂತನ 5 ತಲೆಗಳಿಗಿದೆ ಒಂದೊಂದು ವಿಶೇಷತೆ…ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಹಲವು ಹೆಸರುಗಳಿಂದ ಕರೆಯಲ್ಪಡುವ ಆಂಜನೇಯನ ವಿಶೇಷತೆ ಮಹತ್ವ ಪೂರ್ಣವಾದದ್ದು. ರಾಮನ ಪರಮ ಭಕ್ತನಾದ ಹನುಮಂತನಿಗೆ ಅಪಾರ ಸಂಖ್ಯೆಯ ಭಕ್ತರು… ಮೊದಲಿಗೆ ಪಂಚಮುಖಿ ಆಂಜನೇಯನ ಅವತಾರವಾಗಿದ್ದು ಹೇಗೆ ಎಂದು ತಿಳಿಯೋಣ… ರಾಮಾಯಣದ ಯದ್ಧದಲ್ಲಿ ರಾಮ ರಾವಣರು ಯುದ್ದ ಮಾಡುತ್ತಿರುವಾಗ, ರಾವಣನು ಪಾತಾಳಲೋಕದ ದೊರೆಯಾದ ಅಹಿರಾವಣನ ಸಹಾಯ ಪಡೆಯುತ್ತಾನೆ ಹನುಮಂತನು ರಾಮ ಲಕ್ಷ್ಮಣರ ರಕ್ಷಣೆಗೆ ನಿಲ್ಲುತ್ತಾನೆ. ಹನುಮಂತನು ರಾಮ ಲಕ್ಷ್ಮಣರನ್ನು ರಕ್ಷಿಸಲು ಬೃಹತ್ ಆಕಾರ ತಳೆಯುತ್ತಾನೆ, ಅಹಿರಾವಣನು ರಾವಣನ ತಮ್ಮನಾದ ವಿಭೀಷಣನ…

  • ಸುದ್ದಿ

    ಬಾಲಕನಿಂದ ಮೋದಿಯವರಿಗೆ 37ನೇ ಪತ್ರ….ಕಾರಣ ಏನು?

    ಉತ್ತರ ಪ್ರದೇಶದ ಕಾನ್ಪುರದಲ್ಲಿ 8ನೇ ತರಗತಿಯ ಬಾಲಕನೊಬ್ಬ ತನ್ನ ತಂದೆಯ ಕೆಲಸವನ್ನು ಮರಳಿ ಕೊಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಬರೋಬ್ಬರಿ 37 ಪತ್ರವನ್ನು ಬರೆದಿದ್ದಾನೆ.13 ವರ್ಷದ ಈ ಬಾಲಕ 2016ರಿಂದ ಮೋದಿಗೆ ಪತ್ರಗಳನ್ನು ಬರೆಯುತ್ತಿದ್ದಾನೆ. ಇದುವರೆಗೆ 36 ಪತ್ರಗಳನ್ನು ಬರೆದಿದ್ದಾನೆ. ಆದರೆ ಪ್ರಧಾನಿ ಮೋದಿ ಅವರಿಂದ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಸರ್ಥಕ್ ತ್ರಿಪಾಠಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಬಾಲಕ. ಈತನ ತಂದೆ ಉತ್ತರ ಪ್ರದೇಶದಲ್ಲಿ ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ(ಯುಪಿಎಸ್‍ಇ)ಯಲ್ಲಿ ಕೆಲಸ ಮಾಡುತ್ತಿದ್ದರು….