ದೇಶ-ವಿದೇಶ

ವಿಧವೆಯನ್ನು ಮದುವೆಯಾದ್ರೆ ಸಿಗಲಿರುವ ಹಣ ಎಷ್ಟು ಗೊತ್ತಾ..?ಶಾಕ್ ಆಗ್ಬೇಡಿ!ಈ ಲೇಖನ ಓದಿ…

2987

ಮಧ್ಯಪ್ರದೇಶ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ ,ವಿಧವೆಯರ ಬಾಳು ಬಂಗಾರಗೊಳಿಸುವ ಕಾರಣಕ್ಕಾಗಿ ಹೊಸ ಯೋಜನೆ ರೂಪಿಸಿದೆ.ಈ ಯೋಜನೆಯ ಪ್ರಕಾರ ವಿಧವೆಯನ್ನು ಪುನರ್‌ ವಿವಾಹವಾಗುವ ವ್ಯಕ್ತಿಗೆ, ಪ್ರೋತ್ಸಾಹ ಧನ ನೀಡಲಾಗುತ್ತದೆ.

2 ಲಕ್ಷ ರೂಪಾಯಿ ಪ್ರೋತ್ಸಾಹ ಧನ:-

ಹೌದು, 45ಕ್ಕೂ ಕಡಿಮೆ ವಯಸ್ಸಿನ ವಿಧವೆಯನ್ನು ಪುನರ್‌ ವಿವಾಹವಾಗುವ ವ್ಯಕ್ತಿಗೆ ಮಧ್ಯಪ್ರದೇಶ ಸರ್ಕಾರ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಿದೆ. ಮಧ್ಯಪ್ರದೇಶ ಸರ್ಕಾರದ ಈ ಯೋಜನೆ  ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಈ ಯೋಜನೆ ಅನುಷ್ಠಾನಗೊಂಡು ಬಳಿಕ ಪ್ರತಿ ವರ್ಷ ಒಂದು ಸಾವಿರ ವಿಧವೆಯರ ಬಾಳು ಬೆಳಗಲಿದೆ ಎಂದು ಸರ್ಕಾರ ಹೇಳಿದೆ.

ವಿಧವೆಯರ ಮರುವಿವಾಹಕ್ಕೆ ಪ್ರೋತ್ಸಾಹಿಸುವ ನೀತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ಕೇಳಿಕೊಂಡಿದ್ದು, ಮಧ್ಯ ಪ್ರದೇಶ ಸರಕಾರ ಈ ತರದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತಿದ್ದು, ಈ ಯೋಜನೆಯಿಂದ ಸರಕಾರಕ್ಕೆ ಪ್ರತಿವರ್ಷ 20 ಕೋಟಿ ರೂಪಾಯಿ ಭಾರ ಬೀಳಲಿದೆಯಂತೆ.

ಈ ಯೋಜನೆಯ ಪ್ರಕಾರ 18 ರಿಂದ 45 ವಯಸ್ಸಿನ ವಿಧವೆಯರನ್ನು ವಿವಾಹವಾಗುವ ವ್ಯಕ್ತಿಗೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಮೂರು ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆಯಂತೆ.

ವಿಧವೆಯರ ಮರುವಿವಾಹಕ್ಕೆ ವಿಧಿಸಲಾಗಿರುವ ಷರತ್ತುಗಳು :-

ಈ ಯೋಜನೆ ದುರುಪಯೋಗಪಡಿಸಕೊಳ್ಳಬಾರದೆಂದು ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ.

  • ಇದು ವ್ಯಕ್ತಿಯ ಮೊದಲನೇ ಮದುವೆಯಾಗಿರಬೇಕು.
  • ವಿಧವಾ ವಿವಾಹವನ್ನು ನೋಂದಣಿಗೊಳಿಸುವುದು ಕಡ್ಡಾಯ.
  • ವಿವಾಹ ಸಂಬಂಧ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಇಲಾಖೆ ನೀಡುವ ದಾಖಲೆ ಅರ್ಹವಲ್ಲ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ