ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಉದ್ಯೋಗವನ್ನೂ, ಒಳ್ಳೆಯ ಭವಿಷ್ಯವನ್ನೂ ಅರಸುತ್ತಾ, ತಾಯ್ನಾಡನ್ನು ಬಿಟ್ಟು, ಹೊರದೇಶಗಳಿಗೆ ಹೋಗುವ ಭಾರತೀಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿಭೆಗೆ ಮನ್ನಣೆ, ಕೈತುಂಬಾ ಸಂಬಳ, ಉತ್ತಮ ಮಟ್ಟದ ಜೀವನ ವಿಧಾನಗಳಿರುವ ವಿದೇಶಗಳಲ್ಲಿರುವ ಭಾರತೀಯರು ಸಂತೋಷ, ತೃಪ್ತಿಯಿಂದ ಇರುವರು ಎಂದು ಹೇಳಲಾದೀತೇ? `ನಾವು ಕನಸು ಮನಸಿನಲ್ಲಿ ಊಹಿಸಲಾಗದಷ್ಟು ವೈಭೋಗವನ್ನು ಇಲ್ಲಿ ಕಂಡಿದ್ದೇವೆ. ಹಣವಿದೆ. ಸುಖಕೊಡುವ ವಸ್ತುಗಳಿವೆ. ವಿಸ್ಮಯ ಪಡುವ ವೈಜ್ಞಾನಿಕ ಸಲಕರಣೆಗಳಿವೆ. ಆದರೇನು ಮನಸ್ಸಿಗೆ ನೆಮ್ಮದಿ ಇಲ್ಲ. ಏನೋ ಅತೃಪ್ತಿ ನಮ್ಮನ್ನೂ ಕಾಡುತ್ತದೆ’ ಎಂದು ವಿದೇಶಗಳಲ್ಲಿರುವ ಭಾರತೀಯರು ಹೇಳುತ್ತಾರೆ. ಅನೇಕ ರೀತಿಯ ಮಾನಸಿಕ ಒತ್ತಡಗಳು ಅವರನ್ನೂ ಕಾಡುತ್ತವೆ. ಉದಾಹರಣೆಗೆ-
(೧) ಸಾಂಸ್ಕೃತಿಕ ಗೊಂದಲ (culture Shock): ಪ್ರಾರಂಭದಲ್ಲಿ ಪಾಶ್ಚಿಮಾತ್ಯ ಜೀವನಶೈಲಿ, ಸುಖನೀಡುವ ವಿವಿಧ ಸಲಕರಣೆಗಳು, ವ್ಯವಸ್ಥಿತ ಸಮಾಜವನ್ನು ಬೆರಗುಗಣ್ಣಿನಿಂದ ನೋಡಿ, ನಮ್ಮ ಭಾರತದ ಅವ್ಯವಸ್ಥೆಗೆ ಹೋಲಿಸಿದರೆ, ಈ ನಾಡು ಸ್ವರ್ಗ ಎಂದು ಭಾವಿಸಿ ಖುಷಿ ಪಡುವ ಭಾರತೀಯರು, ಕ್ರಮೇಣ ತಮ್ಮ ಸಂಸ್ಕೃತಿಗೂ ಈ ಸಂಸ್ಕೃತಿಗೂ ಇರುವ ಅನೇಕ ವ್ಯತ್ಯಾಸಗಳನ್ನು ಅರಗಿಸಿಕೊಳ್ಳಲಾರರು. ವಿಪರೀತ ಸ್ಫರ್ಧೆ, ಅಮಾನವೀಯ ಸಂಬಂಧಗಳು, ಎಲ್ಲವನ್ನೂ ಹಣದಿಂದಲೇ ಅಳೆಯುವ ಪ್ರವೃತ್ತಿ, ಭಾವನಾತ್ಮಕ ಸಂಬಂಧಗಳ ಅಭಾವ ಕ್ರಮೇಣ ದೊಡ್ಡ ಕೊರತೆಯನ್ನುಂಟುಮಾಡುತ್ತದೆ. ತಮ್ಮ ಮಕ್ಕಳು ಅಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕೇ ಅಥವಾ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕೇ ಎಂದು ನಿರ್ಧರಿಸಲಾರರು. ಯಾವುದೇ ದೇಶದ ಸ್ಥಳೀಯರು, ವಿದೇಶೀಯರನ್ನು ತಮ್ಮವರು ಎಂದು ಪೂರ್ಣವಾಗಿ ಒಪ್ಪಿಕೊಳ್ಳರು. ಸ್ವಲ್ಪ ಮಟ್ಟಿನ ಅಪನಂಬಿಕೆ, ಅವಿಶ್ವಾಸ, ಮತ್ಸರವನ್ನೂ ತೋರಿಸಿಯೇ ತೋರಿಸುತ್ತಾರೆ. ಮುಕ್ತ ಮನಸ್ಸಿನಿಂದ ಬೆರೆಯುವುದಿಲ್ಲ. ಹೀಗಾಗಿ ಅನೇಕ ಭಾರತೀಯರು ಸ್ಥಳೀಯರಿಗೆ ಪರಕೀಯರಾಗಿಯೇ ಉಳಿಯುತ್ತಾರೆ. ಇಲ್ಲವೇ ಹೆಚ್ಚು ಹೆಚ್ಚಾಗಿ ಭಾರತೀಯರೊಂದಿಗೇ ಒಡನಾಡಲು ಇಷ್ಟಪಟ್ಟು, ಸ್ಥಳೀಯರಿಂದ ಮತ್ತಷ್ಟು ದೂರವಾಗುತ್ತಾರೆ. ತಮ್ಮ ಸಂಸ್ಕೃತಿಯನ್ನೂ, ವಿದೇಶದ ಸಂಸ್ಕೃತಿಯನ್ನೂ ತುಲನೆ ಮಾಡುತ್ತಾ, ಯಾವುದು ಸರಿ ಎಂದು ನಿರ್ಧರಿಸಲಾಗದೇ ಗೊಂದಲಕ್ಕೀಡಾಗುತ್ತಾರೆ.
(೨) ಒಂಟಿತನದ ಭಾವನೆ: ಕೆಲಸಕ್ಕೆ ಹೋಗದವರಲ್ಲಿ, ಒಂಟಿತನದ ಭಾವನೆ ಹೆಚ್ಚು. ಮನೆಯಲ್ಲಿ ಮನೆಗೆಲಸ ಮುಗಿಸಿ, ಬಿಡುವಿನ ವೇಳೆಯನ್ನು ಹೇಗೆ ಕಳೆಯುವುದೆನ್ನುವುದು ವಿದೇಶದಲ್ಲಿರುವ ಭಾರತೀಯ ಗೃಹಿಣಿಯರಿಗೆ ಒಂದು ದೊಡ್ಡ ಸಮಸ್ಯೆ. ಟಿವಿ ನೋಡುವುದು, ವೀಡಿಯೋ ಗೇಮ್ಸ್ ಆಡುವುದು, ಓದುವುದು, ಶಾಪಿಂಗ್ ಹೋಗುವುದು ಬೇಸರವಾಗತೊಡಗುತ್ತದೆ. ಹಾಗೆಯೇ ಸ್ನೇಹಿತರೊಂದಿಗೆ, ಪರಿಚಯದವರೊಂದಿಗೆ ಎಷ್ಟು ಹೊತ್ತು ಫೋನ್‌ನಲ್ಲಿ ಮಾತನಾಡಲು ಸಾಧ್ಯ
(೩) ತಮ್ಮ ಮತ್ತು ಮಕ್ಕಳ ಭವಿಷ್ಯ: ದುಡಿಯುವ ಅವಧಿಯಲ್ಲಿ ನಾವೇನೋ ಇಲ್ಲಿದ್ದೇವೆ, ದುಡಿಯುತ್ತೇವೆ, ಸುಖಪಡುತ್ತೇವೆ, ಹಣ ಸಂಪತ್ತನ್ನೂ ಗಳಿಸುತ್ತೇವೆ. ಆದರೆ ದೇಶ ನಮ್ಮ ದೇಶವಾಗಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಇಲ್ಲೇ ಇದ್ದು, ಈ ದೇಶದ ನಾಗರೀಕರಾಗಬೇಕೆ, ಸ್ಥಳೀಯರ ಜೊತೆಗೆ ಮದುವೆ ಸಂಬಂಧ ಬೆಳೆಸಬೇಕೇ, ವಾಪಾಸ್ ಭಾರತಕ್ಕೆ ಹೋಗಿಬಿಡೋಣವೇ. ಅಲ್ಲಿ ಹೋಗಿ ಏನು ಮಾಡುವುದು. ಅಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳಲು ಸಾಧ್ಯವೇ. ನಾವು ತ್ರಿಶಂಕು ಸ್ಥಿತಿಗೆ ಒಳಗಾದೆವಲ್ಲ. ಇಲ್ಲಿಯೂ ಸಲ್ಲುವುದಿಲ್ಲ ಅಲ್ಲಿಯೂ (ಭಾರತದಲ್ಲಿ) ಸಲ್ಲುವುದಿಲ್ಲ. ತಮ್ಮ ಭವಿಷ್ಯವೇನು -ಈ ಅನಾಥ ಪ್ರಜ್ಞೆ ಹಲವರನ್ನು ಕಾಡತೊಡಗುತ್ತದೆ.

(೪) ಅಗತ್ಯಗಳಿಗೆ ಗುಲಾಮನಾಗುವುದು: ಗ್ರಾಹಕ ಸಂಸ್ಕೃತಿಯಲ್ಲಿ ಅಗತ್ಯಗಳಿಗೆ ಕೊನೆಯೇ ಇಲ್ಲ. ಇಷ್ಟಿದ್ದರೆ ಮತ್ತಷ್ಟು ಬೇಕು, ಮತ್ತಷ್ಟು ಸಿಕ್ಕಿದರೆ, ಇನ್ನಷ್ಟು ಬೇಕು. ಬೇಕುಗಳ ಪೂರೈಕೆ ಆಗದಿದ್ದರೆ, ಎಲ್ಲವನ್ನೂ ಕಳೆದುಕೊಂಡಂತಹ ಅನುಭವ, ತೃಪ್ತಿಯೇ ಇಲ್ಲ. ದೇಹಕ್ಕೆ ನಾವು ಸುಖ ಕೊಟ್ಟಷ್ಟು, ಅದು ಮತ್ತಷ್ಟು ಬೇಕು ಎನ್ನುತ್ತದೆ. ದೇಹ ಸೋಮಾರಿಯಾಗುತ್ತದೆ. ಬೊಜ್ಜು ಬೆಳೆಯುತ್ತದೆ. ಮನಸ್ಸು ಸದಾ ವಿಷಯ ಸುಖಗಳನ್ನಷ್ಟೇ ಬಯಸುತ್ತದೆ. ಹೀಗಾಗಿ ಮನಸ್ಥೈರ್ಯ ಕುಗ್ಗುತ್ತದೆ. ಆತ್ಮ ವಿಶ್ವಾಸ ತಗ್ಗುತ್ತದೆ. ಅಗತ್ಯಗಳ ಪೂರೈಕೆಗಾಗಿ ಚಡಪಡಿಸುತ್ತಾ, ಸದಾ ಒತ್ತಡದಲ್ಲಿದ್ದು, ಮೈ ಮನಸ್ಸುಗಳು ದುರ್ಬಲವಾಗತೊಡಗುತ್ತವೆ. ಪರಿಣಾಮ, ಮನೋದೈಹಿಕ ಬೇನೆಗಳು, ಖಿನ್ನತೆ, ಆತಂಕದಂತಹ ಮನೋಬೇನೆಗಳು, ಮದ್ಯಪಾನ ಮಾದಕ ವಸ್ತುಗಳ ದುರ್ಬಳಕೆ, ಅಪರಾಧ, ಆತ್ಮಹತ್ಯಾ ಪ್ರವೃತ್ತಿಗಳು ವಿದೇಶದಲ್ಲಿರುವ ಭಾರತೀಯರನ್ನು ಹೆಚ್ಚಾಗಿ ಕಾಡುತ್ತವೆ. ಚಿಕ್ಕವಯಸ್ಸಿನಲ್ಲೇ ಹೃಧಯಾಘಾತ, ಪಾರ್ಶ್ವವಾಯು, ಸಿಹಿಮೂತ್ರ ರೋಗ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗುತ್ತಿದೆ.
ವಿದೇಶಗಳಲ್ಲಿರುವ ಭಾರತೀಯರು ತಮ್ಮ ಧೋರಣೆ, ಜೀವನಶೈಲಿಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡರೆ, ಒತ್ತಡದ ದುಷ್ಪರಿಣಾಮಗಳನ್ನೂ ತಗ್ಗಿಸಬಹುದು. ತಮ್ಮ ಮೈಮನಸ್ಸುಗಳ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು.
(೧) ಆಸೆ-ಅಗತ್ಯಗಳನ್ನು ತಗ್ಗಿಸಿ, ಸರಳ ಜೀವನ ಶೈಲಿಯನ್ನು ರೂಢಿಸಿಕೊಳ್ಳವುದು. ಹಣ-ವಸ್ತುಗಳ ಸಂಪಾದನೆಯೇ ಜೀವನದ ಗುರಿಯಾಗಬಾರದು.
(೨) ಹಿತ ಮಿತ ಆಹಾರ ಸೇವನೆ: ಆದಷ್ಟು ನೈಸರ್ಗಿಕ ಆಹಾರವನ್ನು ಸೇವಿಸುವುದು. ಸಿಹಿ, ಕೊಬ್ಬು, ಸಿದ್ಧ ಪಡಿಸಿದ ಆಹಾರಗಳನ್ನೂ ಸೇವಿಸಬಾರದು.
(೩) ದಿನ ನಿತ್ಯ ವ್ಯಾಯಾಮ
(೪) ಸೃಜನಶೀಲ ಚಟುವಟಿಕೆಗಳು: ಸಾಹಿತ್ಯ, ಕಲೆ, ನೃತ್ಯ, ಸಂಗೀತದಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗುವುದು.
(೫) ಕಷ್ಟ ಸುಖ -ನೋವು ನಲಿವುಗಳನ್ನೂ ಆತ್ಮೀಯರಲ್ಲಿ ಹೇಳಿಕೊಳ್ಳುವುದು.
(೬) ಪ್ರಕೃತಿಯೊಂದಿಗೆ ಆದಷ್ಟು ಸಮೀಪದಲ್ಲಿರುವುದು. ಗಿಡ ಮರ ನದಿ ಬೆಟ್ಟಗಳಿರುವ ಸ್ಥಳಗಳಿಗೆ ಆಗಾಗ ಭೇಟಿಕೊಡುವುದು.
(೭) ಯೋಗ, ಧ್ಯಾನ, ಧಾರ್ಮಿಕ ಚಟುವಟಿಕೆಗಳು, ಧಾರ್ಮಿಕ ಗ್ರಂಥಗಳ ಪಠಣ, ಆಧ್ಯಾತ್ಮಿಕ ಚಿಂತನೆ.
(೮) ದಾನ, ಧರ್ಮ ಪರೋಪಕಾರದಂತಹ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗುವುದು.
ವಿಳಾಸ: ಮಯೂನ್ ಎನ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸೆ.28ಕ್ಕೆ 90ನೇ ವರ್ಷ ವಸಂತಕ್ಕೆ ಕಾಲಿಟ್ಟಿದ್ದ ಲತಾ ಮಂಗೇಶ್ಕರ್ ಅವರಿಗೆ ಇಂದು ನಸುಕಿನ ಜಾವ 2 ಗಂಟೆ ಸಮಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಸ್ಥರು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಹಿಂದಿ ಭಾಷೆಯೊಂದರಲ್ಲೇ ಸುಮಾರು1 ಸಾವಿರಕ್ಕೂ…
ವಿದ್ಯಾರ್ಥಿನಿಯೊಬ್ಬಳು ಯುವಕನೊಬ್ಬನನ್ನು ತಬ್ಬಿಕೊಂಡ ಕಾರಣ ಯೂನಿವರ್ಸಿಟಿ, ಅವಳನ್ನು ಕಾಲೇಜಿನಿಂದ ಉಚ್ಚಾಟಿಸಿದ್ದು, ಇದೀಗ ಅಪ್ಪುಗೆಯೇ ಆಕೆಯ ವಿದ್ಯಾರ್ಥಿ ಜೀವನಕ್ಕೆ ಸಂಚಕಾರ ತಂದಿದೆ. ಈಜಿಪ್ಟ್ ನ ಅಲ್-ಅಝರ್ ಯೂನಿವರ್ಸಿಟಿ, ವಿದ್ಯಾರ್ಥಿನಿಯ ಈ ವರ್ತನೆಯಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹೇಳಿ ಈ ಕ್ರಮಕೈಗೊಂಡಿದೆ. ಅಲ್-ಅಝರ್ ಯೂನಿವರ್ಸಿಟಿಯ ಮನ್ಸೌರಾದಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬ ಮಂಡಿಯೂರಿ ಹೂವಿನ ಬೊಕ್ಕೆ ಕೊಟ್ಟಿದ್ದು, ಬಳಿಕ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದರು. ಇದರ ವಿಡಿಯೊ ಎಲ್ಲ ಕಡೆ ಹರಿದಾಡಿದ್ದು, ಯೂನಿವರ್ಸಿಟಿಯ ಆಡಳಿತ ಮಂಡಳಿಯವರೆಗೂ ತಲುಪಿತ್ತು. ಅವಿವಾಹಿತ ಮಹಿಳೆ-ಪುರುಷ…
ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ…
ಬಡವರ ಬಾದಾಮಿ ಎಂದೇ ಕರೆಯುವ ಕಡಲೆಕಾಯಿಯಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಸದಾ ನೀವು ಯಂಗ್ ಆಗಿ ಕಾಣುವಂತೆ ಮಾಡುವುದಲ್ಲದೆ, ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತೆ. ಹಾಗಾದ್ರೆ ಕಡಲೆ ಕಾಯಿಯನ್ನು ತಿನ್ನುವುದರಿಂದ ಇನ್ನು ಹಲವಾರು ಪ್ರಯೋಜನಗಳಿವೆ.. *ಪ್ರತಿದಿನ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಗ್ಯಾಸ್ ಮತ್ತು ಎಸಿಡಿಟಿ ಸಮಸ್ಯೆ ಶಮನವಾಗುತ್ತದೆ.ಜೊತೆಗೆ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. *ದಿನಾಲೂ ಪುರುಷ ಹಾಗೂ ಮಹಿಳೆ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಹಾರ್ಮೋನುಗಳು ಸಮತೋಲನದಲ್ಲಿದ್ದು ಅವರ ಲೈಂಗಿಕ…
ದೇಹವು ಹೊಸ ಪ್ರೋಟೀನ್‌ನ್ನು ಉತ್ಪತ್ತಿ ಮಾಡಲು(ಪ್ರೋಟೀನ್ ಪ್ರತಿಧಾರಣ) ಮತ್ತು ಹಾನಿಗೊಂಡ ಪ್ರೋಟೀನ್‌ಗಳನ್ನು ಮರುಪೂರಣ ಮಾಡಲು(ನಿರ್ವಹಣೆ) ಅಮೈನೋ ಆಮ್ಲದ ಅಗತ್ಯವಿದೆv ಆಹಾರದಲ್ಲಿನ ಪ್ರೋಟೀನ್ ಮೂಲಗಳೆಂದರೆ ಮಾಂಸ, ತೋಫು ಮತ್ತು ಇತರ ಸೋಯಾ ಪದಾರ್ಥಗಳು
ಮಕ್ಕಳ ನೀಧಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರ ಮೇಲೆ ಅಪರಿಚಿತರು ಚಪ್ಪಲಿ ಎಸೆದ ಘಟನೆ ಬುಧವಾರ ನಡೆದಿದೆ. ಬುಧವಾರ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲ ಚಪ್ಪಲಿ ಎಸೆಯಲಾಗಿದ್ದು, ಅದು ಅವರಿಗೆ ತಾಕದೆ, ಜನರ ಗುಂಪಿನ ನಡುವೆ ಬಂದು ಬಿದ್ದಿದೆ.ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಹನುಮಾನ್ ಸೇನೆಯ ಒಟ್ಟು ಹನ್ನೊಂದು ಜನರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19…