ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು ಬಾಲಗಂಗಾಧರನಾಥ ಸ್ವಾಮೀಜಿ ಮಹಾ ಸಮಾಧಿಯಾದ ಬಳಿಕ ಆದಿ ಚುಂಚನಗಿರಿ ಮಠದ 72ನೇ ಪೀಠಾಧಿಕಾರಿಯಾದ ನಿರ್ಮಲಾನಂದನಾಥ ಸ್ವಾಮೀಜಿ ಪೂರ್ವಾಶ್ರಮದ ವೃತ್ತಾಂತ.
ನಿರ್ಮಲಾನಂದನಾಥ ಸ್ವಾಮೀಜಿ ಪೂರ್ವಾಶ್ರಮದ ಊರು ಗುಬ್ಬಿ ತಾಲ್ಲೂಕು ಮಾವಿನಹಳ್ಳಿ, ಸಮೀಪದ ಚೀರನಹಳ್ಳಿಯಲ್ಲಿ 20 ಜುಲೈ 1969ರಲ್ಲಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ಸಿ.ಎನ್.ನಾಗರಾಜ್. ತಂದೆ ನರಸೇಗೌಡ, ಈಗ ಅವರಿಲ್ಲ. ತಾಯಿ ನಂಜಮ್ಮ ಇದ್ದಾರೆ. ಆರು ಮಕ್ಕಳಲ್ಲಿ ನಾಗರಾಜ್ ನಾಲ್ಕನೇಯವರು. ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ, ಕೂಲಿ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ. ಈಗಲೂ ಕುಟುಂಬದವರು ಕೂಲಿ ಮಾಡಿಯೇ ಜೀವನದ ನೊಗ ಹೊತ್ತಿದ್ದಾರೆ. ಸನ್ಯಾಸ ಸ್ವೀಕರಿಸಿದ ನಂತರ ಒಮ್ಮೆಯೂ ಊರಿನತ್ತ ಬಂದಿಲ್ಲ. ತಂದೆ ತೀರಿಕೊಂಡಾಗಲೂ ಊರಿನತ್ತ ಮುಖ ಮಾಡಿಲ್ಲ.
ಕೂಲಿ ಮಾಡುತ್ತಲೇ ಪ್ರಾಥಮಿಕ ಶಿಕ್ಷಣ- ಮಾವಿನಹಳ್ಳಿ ಸರ್ಕಾರಿ ಶಾಲೆಯಲ್ಲಿ, ಪ್ರೌ ಶಿಕ್ಷಣವನ್ನು ಮಾವಿನಹಳ್ಳಿ ಪ್ರಗತಿಪರ ವಿದ್ಯಾವರ್ಧಕ ಶಾಲೆಯಲ್ಲಿ ಪೂರ್ಣಗೊಳಿಸಿದರು.`ಪ್ರೌಢಶಾಲೆ ತರಗತಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಪಡೆದಿರುವ ಅಂಕಗಳ ದಾಖಲೆಯನ್ನು ಇಲ್ಲಿಯವರೆಗೂ ಈ ಶಾಲೆಯಲ್ಲಿ ಯಾರೂ ಮುರಿದಿಲ್ಲ’ ಎನ್ನುತ್ತದೆ ಶಾಲೆಯ ಆಡಳಿತ ಮಂಡಳಿ.
ಬಡತನದ ಕಾರಣ ಡಿಪ್ಲೊಮಾ ಪಾಲಿಟೆಕ್ನಿಕ್ ಅಧ್ಯಯನವನ್ನು ಒಂದು ವರ್ಷ ಮೊಟಕುಗೊಳಿಸಿದ್ದರು. ಆಗ ಅವರ ತಾತ, ಗುಬ್ಬಿ ಮಾಜಿ ಶಾಸಕ ಎನ್.ವೀರಣ್ಣಗೌಡರ ಬಳಿ ಕರೆದುಕೊಂಡು ಬಂದರು. ಅವರ ನೆರವಿನಿಂದ ಶಿಕ್ಷಣ ಮುಂದುವರಿಸಿದರು. ವೀರಣ್ಣಗೌಡರ ಮನೆ ಹಾಗೂ ತುಮಕೂರು ಬಿ.ಎಚ್.ರಸ್ತೆಯ ಸೈಕಲ್ ಮುದ್ದಣ್ಣ ಕಟ್ಟಡದಲ್ಲಿದ್ದ ವೀರಣ್ಣಗೌಡರ ಕಚೇರಿಯೇ ಅವರ ಆಶ್ರಯತಾಣವಾಗಿತ್ತು.
ತುಮಕೂರಿನಲ್ಲಿ ಡಿಪ್ಲೊಮಾ ಮುಗಿಸಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರಿದ ಅವರು, ವಿಜಯನಗರದ ಆದಿಚುಂಚನಗಿರಿ ಮಠದ ವಿದ್ಯಾರ್ಥಿ ನಿಲಯದಲ್ಲಿ ಸೀಟಿಗೆ ಪರದಾಡಿದರು. ಆಗ ಸೀಟು ನಿರಾಕರಿಸಲಾಯಿತು. ವಿದ್ಯಾರ್ಥಿ ನಿಲಯದಲ್ಲಿ ಸೀಟು ಸಿಗದ ನೋವಿನಲ್ಲೇ ತೆರಳಿದ ನಾಗರಾಜ್ ಮುಂದೆ ವೀರಣ್ಣಗೌಡರ ಶಿಫಾರಸಿನ ಮೇಲೆ ಹಾಸ್ಟೆಲ್‌ಗೆ ಪ್ರವೇಶ ಗಿಟ್ಟಿಸಿಕೊಂಡರು.ಈಗ ಮಠದ ಪೀಠಾಧಿಪತಿಯಾಗುವವರೆಗೆ ಬೆಳೆದಿದ್ದು ಇತಿಹಾಸ.
ಎಂಜಿನಿಯರಿಂಗ್ ಬಳಿಕ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದು ಅಮೆರಿಕದಲ್ಲಿ ಕೈತುಂಬ ಸಂಬಳದ ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಅಮೆರಿಕಕ್ಕೆ ಹೋಗುವ ಮುನ್ನ ಹಳೆ ಸ್ನೇಹಿತರನ್ನು ಮಾತನಾಡಿಸಿಕೊಂಡು ಬರಲು ವಿಜಯನಗರದ ಮಠದ ಹಾಸ್ಟೆಲ್‌ಗೆ ಬಂದಿದ್ದರು. ಅಲ್ಲಿಯವರೆಗೂ ಬಾಲಗಂಗಾಧರನಾಥ ಸ್ವಾಮೀಜಿ ಜತೆ ಸಣ್ಣ ಸಂಪರ್ಕ ಕೂಡ ಇರಲಿಲ್ಲ. ಮಠದ ಹಾಸ್ಟೆಲ್ ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗನ್ನು (ನಾಗರಾಜ್) ಕಂಡ ಬಾಲಗಂಗಾಧರನಾಥ ಸ್ವಾಮೀಜಿ, ಆ ಹುಡುಗನನ್ನು ಚುಂಚನಗಿರಿಗೆ ಕರೆ ತರುವಂತೆ ಆದೇಶಿಸಿದ್ದರು. ನಿರ್ಮಲಾನಂದನಾಥರಿಗೆ ಆವರೆಗೂ ಸನ್ಯಾಸದ ಆಸಕ್ತಿಯೇ ಇರಲಿಲ್ಲ.
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದು, ಏಳನೇ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಕ್ಕಾಗಿ ಜಿಂದಾಲ್ ಸಂಸ್ಥೆ ನೀಡುವ ಸ್ಕಾಲರ್ ಶಿಪ್ ಪಡೆದುಕೊಂಡಿದ್ದರು.ಮುಂದೆ ಮೈಸೂರಿನ ಹಿಂದುಳಿದ ವರ್ಗದ ವಸತಿ ನಿಲಯದಲ್ಲಿದ್ದುಕೊಂಡು ಎಂಜಿನಿಯರಿಂಗ್ ಅಭ್ಯಾಸ ಮಾಡಿದರು. ಪುಣೆಯ ಭಾರತ ಸರ್ಕಾರದ ಸಂಶೋಧನಾ ಕೇಂದ್ರಕ್ಕೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದರು. ಆದರೆ, ಅಧ್ಯಾತ್ಮದ ಸೆಳೆತ ಅವರನ್ನು ಶ್ರೀಮಠಕ್ಕೆ ಕರೆದುಕೊಂಡು ಬಂದಿತು.ಶ್ರೀಮಠದ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದಲ್ಲಿ ಅದ್ವೈತ ವೇದಾಂತ ವಿದ್ವುದುತ್ತಮ ಮತ್ತು ಶೈವಾಗಮದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು
ಸ್ವಾಮೀಜಿ ಬಳಿಗೆ ನಾಗರಾಜ್ ಅವರನ್ನು ಕರೆದುಕೊಂಡು ಹೋಗಬೇಕಾದರೆ ಆಗ ಮಠದ ಮ್ಯಾನೇಜರ್ ಆಗಿದ್ದ ಸಿದ್ದಲಿಂಗೇಗೌಡರು ಪಟ್ಟ ಪಾಡು ಅಷ್ಟಿಷ್ಟಲ್ಲ. ವಿಜಯನಗರದ ಕೊಠಡಿಯಲ್ಲಿ ಅವರನ್ನು ಇರಿಸಲಾಗಿತ್ತು. ಕೊಠಡಿಯಿಂದಲೇ ಕಾಣೆಯಾದ ನಾಗರಾಜ್ ಮಾರನೇ ದಿನ ಚುಂಚನಗಿರಿ ಮಠದಲ್ಲಿ ಪ್ರತ್ಯಕ್ಷವಾದುದ್ದು ಏಕೆ ಎಂದು ಇಲ್ಲಿವರೆಗೂ ಯಾರಿಗೂ ಗೊತ್ತಿಲ್ಲ.
`ಚುಂಚನಗಿರಿ ಮಠದಲ್ಲಿ ಸ್ವಾಮೀಜಿ ಎದುರು ನಾಗರಾಜ್ ಅವರನ್ನು ತಂದು ನಿಲ್ಲಿಸಿದಾಗ ನಾಳೆ ಗುರು ಪೂರ್ಣಿಮೆ, ನಿನಗೆ ದೀಕ್ಷೆ ಕೊಡುತ್ತೇನೆ’ ಎಂದು ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದರು.
`ಸುಮ್ಮನೆ ತಲೆ ಅಲ್ಲಾಡಿಸಿದ ಅವರಿಗೆ ಮರುದಿನ ಇನ್ನಿತರರೊಂದಿಗೆ ದೀಕ್ಷೆ ನೀಡಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತಿದೆ’ ಎನ್ನುತ್ತಾರೆ ಸಿದ್ದಲಿಂಗೇಗೌಡ.
ಮೊದಲಿಗೆ ಬಿಳಿ ಬಟ್ಟೆ ತೊಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಿದ ನಂತರ ನಾಗರಾಜ್, ಹೆಸರನ್ನು ನಿರ್ಮಲಾನಂದನಾಥ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು.
ಪೂರ್ವಾಶ್ರಮ ತೊರೆದು ಮಠದ ದೀಕ್ಷೆ ತೊಟ್ಟ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮೊದಲಿಗೆ ರಾಮನಗರ ಬಳಿಯ ಬಾನಂದೂರು (ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು) ಮಠಕ್ಕೆ ಕಳುಹಿಸಿಕೊಡಲಾಯಿತು.
ಕೆಲ ವರ್ಷಗಳ ಸೇವೆ ಬಳಿಕ ನಿರ್ಮಲಾನಂದನಾಥರಿಗೆ ಕಾವಿ ಬಟ್ಟೆ ನೀಡಿ ಚಿಕ್ಕಬಳ್ಳಾಪುರ ಶಾಖಾ ಮಠಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ನೇಮಿಸಿದರು. ಚಿಕ್ಕಬಳ್ಳಾಪುರದ ಮಠವನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ ಜೊತೆ ಜೊತೆಯಲ್ಲೇ ಬಾಲಗಂಗಾಧರನಾಥ ಸ್ವಾಮೀಜಿಗೆ ಅವರು ಅಚ್ಚುಮೆಚ್ಚಿನ ಶಿಷ್ಯರಾದರು. ಅದೀಗ ಅವರನ್ನು ಅತಿ ದೊಡ್ಡ ಮಠದ ಪೀಠಾಧಿಪತಿಯಾಗಿ ಮಾಡಿದೆ. ಅತ್ಯಂತ ಸರಳ, ಮೃದು ಮಾತಿನಿಂದಾಗಿ ನಿರ್ಮಲಾನಂದನಾಥ ಸ್ವಾಮೀಜಿ ಭಕ್ತರ ಮೆಚ್ಚುಗೆ ಗಳಿಸಿರುವುದು ಕೂಡ ನಿಜ.
ಮೃದು ಸ್ವಭಾವಿ, ಮೆದು ಮಾತಿನವರಾಗಿದ್ದು, ಅಧ್ಯಾತ್ಮದ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡೇ ಮಠದ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧರ್ಮ ಮತ್ತು ವಿಜ್ಞಾನದ ನಡುವೆ ಅಂತರ ಇರಬಾರದು ಎಂಬುದು ಶ್ರೀಗಳ ನಿಲುವಾಗಿದೆ. ಹಾಗಾಗಿ ಭಕ್ತಾದಿಗಳಿಗೆಂದು ಮಠದ ಆವರಣದಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವ ಮೂಲಕ ಧರ್ಮ ಮತ್ತು ವಿಜ್ಞಾನದ ಸಂಯೋಜನೆ ಮಾಡುವುದರ ಮೂಲಕ “ಉಚಿತ ಅಂತರ್ಜಾಲ ವ್ಯವಸ್ಥೆ” ಮಾಡಿರುವ ಭಾರತದ ಮೊದಲ ಮಠ ಎಂಬ ಖ್ಯಾತಿಗೆ ಆದಿಚುಂಚನಗಿರಿ ಶ್ರೀಕ್ಷೇತ್ರ ಪಾತ್ರವಾಗಲು ಕಾರಣರಾಗಿದ್ದಾರೆ.
ಕೃಪೆ: ಸಂಗ್ರಹ ಮಾಹಿತಿ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಚಿತ್ರ ರಂಗದ ನವರಸನಾಯಕ ನಟ ಮತ್ತು ರಾಜಕಾರಣಿ ಜಗ್ಗೇಶ್’ರವರು ಮಾಡಿದ ಒಂದು ಟ್ವೀಟ್ ಕಾರಣದಿಂದಾಗಿ ವಿವಾದದಲ್ಲಿ ಸಿಲುಕಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೀತಿಯಲ್ಲಿ ಬಿದ್ದವರು ಪ್ರೇಮಿಗಳ ದಿನ ಆಚರಣೆಗೆ ತಯಾರಿ ನಡೆಸುತ್ತಿದ್ದರೆ ಇನ್ನು ಕೆಲವರು ಪ್ರೇಮ ಪರೀಕ್ಷೆಗೆ ಸಿದ್ಧವಾಗ್ತಿದ್ದಾರೆ. ತಮ್ಮ ಹೃದಯ ಕದ್ದವರ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ನಿಜವಾದ ಪ್ರೀತಿ ಸಿಗಬೇಕೆಂದ್ರೆ ಅದೃಷ್ಟ ಕೂಡ ಚೆನ್ನಾಗಿರಬೇಕು. ಈ ಬಾರಿ ಫೆಬ್ರವರಿ 14ರಂದು ಮೂರು ರಾಶಿಯವರ ಅದೃಷ್ಟ ಬದಲಾಗಲಿದೆ. ಅವ್ರಿಗೆ ನಿಜವಾದ ಪ್ರೀತಿ ಸಿಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಪ್ರೇಮಿಗಳ ದಿನ ವೃಷಭ ರಾಶಿಯವರಿಗೆ ಖುಷಿ ತರಲಿದೆಯಂತೆ. ವೃಷಭ ರಾಶಿಯವರು…
ಚಿಕ್ಕಬಳ್ಳಾಪುರ/ಬೆಂಗಳೂರು: ಮನೆ ಮಾಲೀಕರು ಮತ್ತು ಪೊಲೀಸರ ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮೊದಲು ಮಂಜುಳಾ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಬಾಡಿಗೆ ಮನೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಜಗಳ ನಡೆದಿತ್ತು. ಜಗಳದ ಹಿನ್ನೆಲೆಯಲ್ಲಿ ಮಾಲೀಕರು ಮತ್ತು ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟೆಲೇರಿದ್ದರು….
*ರಥಸಪ್ತಮಿಯಂದು ಎಕ್ಕದ ಎಲೆಗಳ ಸ್ನಾನ ಮಾಡುವುದರ ಮಹತ್ವ ಏನು ಗೊತ್ತಾ?* ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಯಂದು ರಥಸಪ್ತಮಿ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದ್ದು, ರಥ ಸಪ್ತಮಿಯನ್ನು ಭಗವಾನ್ ಸೂರ್ಯನಾರಾಯಣನಿಗೆ ಅರ್ಪಿಸಲಾಗಿದೆ. ಸೂರ್ಯ ಸಮಸ್ತ ಜೀವಕೋಟಿಗೆ ಆಧಾರವಾಗಿದ್ದು, ಈ ದಿನ ಒಳ್ಳೆಯ ಆರೋಗ್ಯಕ್ಕಾಗಿ ಸೂರ್ಯನಲ್ಲಿ ಬೇಡುವುದು ರಥಸಪ್ತಮಿಯ ಮಹತ್ವಗಳಲ್ಲಿ ಒಂದಾಗಿದೆ. ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. 9 ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಸೌರಮಂಡಲದ ರಾಜ…
ನುಗ್ಗೆಯಲ್ಲಿ ಬಿಸುಡಲು ಏನಿಲ್ಲ. ಅದರ ಕಾಯಿ ಮಾತ್ರವಲ್ಲ; ಎಲೆ, ಬೇರು, ಹೂ, ತೊಗಟೆ ಎಲ್ಲವೂ ಬಳಕೆಯ ದೃಷ್ಟಿಯಿಂದ ಮಹತ್ವ ಪಡೆದಿವೆ. ಇದರ ಮರವನ್ನು ಕೆತ್ತಿದಾಗ ಒಸರುವ ಅಂಟನ್ನು ಹಾಲಿನಲ್ಲಿ ಬೆರೆಸಿ ಲೇಪಿಸಿದರೆ ತಲೆಶೂಲೆ ಶೀಘ್ರ ಶಮನವಾಗುತ್ತದೆ ಎಂದಿದೆ ವೈದ್ಯಗ್ರಂಥ. ನುಗ್ಗೆ ಎಲೆಗಳನ್ನು ಹಲವಾರು ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಎಲೆಗಳಲ್ಲಿ ಅಮೂಲ್ಯ ಖನಿಜಗಳು, ವಿಟಮಿನ್ನುಗಳು ಹಾಗೂ ಪ್ರೋಟೀನುಗಳೂ ಇವೆ. ಸಾಮಾನ್ಯವಾಗಿ ಈ ಎಲೆಗಳನ್ನು ದಾಲ್, ಸಾಂಬಾರ್ ಅಥವಾ ಕೆಲವು ಸೂಪ್ಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎಲೆಗಳ ಸೇವನೆಯಿಂದ…
ಮೆಟ್ರೋ ರೈಲು ಪ್ರಯಾಣಿಕರು ಇನ್ನು ಮುಂದೆ 25 ಕೆಜಿವರೆಗೂ ಲಗೇಜ್ ಕೊಂಡೊಯ್ಯಬಹುದಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಲಗೇಜ್ ತೂಕ ಮಿತಿಯನ್ನು 25 ಕೆಜಿ ಗೆ ಹೆಚ್ಚಳ ಮಾಡಿದೆ. ಪ್ರಸ್ತುತ ಮೆಟ್ರೋ ರೈಲುಗಳಲ್ಲಿ 15 ಕೆಜಿ ತೂಕದ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. ಅದನ್ನು 25 ಕೆಜಿಗೆ ಹೆಚ್ಚಿಸಲಾಗಿದೆ. ಆದರೆ ಇಷ್ಟು ತೂಕದ ಒಂದು ಬ್ಯಾಗ್ ಗೆ ಮಾತ್ರ ಅನುಮತಿ ಇರುತ್ತದೆ. ಮೊದಲಿಗೆ ಮೆಟ್ರೋ ರೈಲ್ವೆ ಅಧಿಕಾರಿಗಳಿಂದಲೂ ಪೂರ್ವ ಅನುಮತಿ ಪಡೆಯಬೇಕಿದೆ. ವಿಮಾನ ನಿಲ್ದಾಣಗಳಿಗೆ ಸಂಪರ್ಕ…