ವಿಜ್ಞಾನ

ಕೊನೆಗೂ ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್, ರೋಚಕ ಮಾಹಿತಿ ಬಹಿರಂಗ,.!

53

ಭಾರತದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ISRO ವಿಜ್ಞಾನಿಗಳು ಆಹೋರಾತ್ರಿ ಪ್ರಯತ್ನಪಡುತ್ತಿದ್ದಾರೆ. ಕಳೆದ ಸೆ.7ರಂದುಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಈಗಚಂದ್ರನ ಮೇಲೆ ಲ್ಯಾಂಡ್ ಆಗಿದೆ.ವಿಕ್ರಮ್ ಲ್ಯಾಂಡರ್ ವಾಲಿದ ಸ್ಥಿತಿಯಲ್ಲಿದೆ ಎಂದುತಿಳಿದುಬಂದಿದೆ. ಆದರೆ ಸಂಪರ್ಕ ಇನ್ನೂಸಾಧ್ಯವಾಗಿಲ್ಲ. ನಾವಿನ್ನೂ ಭರವಸೆ ಕಳೆದುಕೊಂಡಿಲ್ಲ ಎಂದುವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಯ ಜತೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಅಪ್ಪಳಿಸಿರುವ ಚಂದ್ರಯಾನ-2 ನೌಕೆಯ ‘ಲ್ಯಾಂಡರ್‌’ ಛಿದ್ರವಾಗಿಲ್ಲ. ಆದರೆ ವಾಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಡರ್‌ ಜತೆ ಸಂಪರ್ಕವನ್ನು ಮರುಸ್ಥಾಪಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಅವಿರತ ಪ್ರಯತ್ನವನ್ನು ಮುಂದುವರಿಸಿದ್ದಾರೆ.

ಸೆ.7ರಂದು ನಸುಕಿನ ಜಾವ ಚಂದ್ರನಿಂದ 2.1 ಕಿ.ಮೀ. ಎತ್ತರದಲ್ಲಿರುವಾಗ ನಿಗೂಢ ರೀತಿಯಲ್ಲಿ ಸಂಪರ್ಕ ಕಳೆದುಕೊಂಡಿದ್ದ ಲ್ಯಾಂಡರ್‌ ಇರುವ ಜಾಗವನ್ನು ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್‌ ಭಾನುವಾರ ಪತ್ತೆ ಹಚ್ಚಿತ್ತು. ವಿಶೇಷ ಎಂದರೆ, ಇಸ್ರೋ ವಿಜ್ಞಾನಿಗಳು ಯಾವ ಜಾಗದಲ್ಲಿ ಲ್ಯಾಂಡರ್‌ ಅನ್ನು ಇಳಿಸಲು ಉದ್ದೇಶಿಸಿದ್ದರೋ ಅದಕ್ಕೆ ಸಮೀಪದಲ್ಲೇ ಲ್ಯಾಂಡರ್‌ ಬಿದ್ದಿರುವುದು ಆರ್ಬಿಟರ್‌ ಸೆರೆ ಹಿಡಿದಿರುವ ಚಿತ್ರದಲ್ಲಿ ಗೋಚರವಾಗಿದೆ ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಲ್ಯಾಂಡರ್‌ ಜತೆಗಿನ ಸಂಪರ್ಕವನ್ನು ಮರುಸ್ಥಾಪಿಸಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನೂ ವಿಜ್ಞಾನಿಗಳು ಆರಂಭಿಸಿದ್ದಾರೆ. ಬೆಂಗಳೂರಿನ ಪೀಣ್ಯದ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಹಾಗೂ ಕಮಾಂಡ್‌ ನೆಟ್‌ವರ್ಕ್ (ಇಸ್ಟ್ರಾಕ್‌) ಕೇಂದ್ರದಲ್ಲಿನ ವಿಜ್ಞಾನಿಗಳು ಈ ಸಂಬಂಧ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.ಲ್ಯಾಂಡರ್‌ನಲ್ಲಿನ ವ್ಯವಸ್ಥೆ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರೆ ಮಾತ್ರ ಸಂಪರ್ಕ ಮರುಸಾಧಿಸಬಹುದು. ಆದರೆ ಆ ಸಂಭವ ಇಲ್ಲದ ಕಾರಣ ಮರುಸಂಪರ್ಕ ಸಾಧ್ಯತೆ ಕ್ಷೀಣವಾಗಿದೆ ಎಂದೂ ಹೇಳಿದ್ದಾರೆ.

ಇಸ್ರೋ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿದ್ದು ಹೇಗೆ?:ಲ್ಯಾಂಡರ್‌ನಿಂದ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಲ್ಯಾಂಡರ್‌ ಇಳಿಯಲು ನಿಗದಿಯಾಗಿದ್ದ ಸ್ಥಳವನ್ನೇ ಗುರಿಯಾಗಿಸಿ, ಚಂದ್ರನ ಸುತ್ತಲೂ ಸುತ್ತುತ್ತಿರುವ ಆರ್ಬಿಟರ್‌ ಶನಿವಾರ ಫೋಟೋವೊಂದನ್ನು ಕ್ಲಿಕ್ಕಿಸಿತ್ತು. ಈ ಫೋಟೋದಲ್ಲಿ ಅಸ್ಪಷ್ಟವಸ್ತುವೊಂದು ಗೋಚರವಾಗಿತ್ತು. ಆದರೆ ಈ ವೇಳೆ ಫೋಟೋದಲ್ಲಿ ಸೆರೆಯಾಗಿದ್ದು ಲ್ಯಾಂಡರ್‌ ಹೌದೋ ಅಲ್ಲವೋ ಎಂಬುದು ಇಸ್ರೋಗೆ ಖಚಿತವಿರಲಿಲ್ಲ. ಅದಕ್ಕಾಗಿ ಅದೇ ಅಕ್ಷಾಂಶ ಮತ್ತು ರೇಖಾಂಶದಲ್ಲಿ ಹಿಂದಿನ ದಿನ ಆರ್ಬಿಟರ್‌ ತೆಗೆದಿದ್ದ ಫೋಟೋಗಳನ್ನೇ ತಾಳೆ ಹಾಕಲಾಯಿತು. 
ಈ ವೇಳೆ ಹಿಂದಿನ ದಿನದ ಫೋಟೋದಲ್ಲಿ ಲ್ಯಾಂಡರ್‌ ಬಿದ್ದ ಸ್ಥಳದಲ್ಲಿ ಯಾವುದೇ ವಸ್ತುಗಳ ಕುರುಹು ಸಿಕ್ಕಿರಲಿಲ್ಲ. ಹೀಗಾಗಿ ತಾವು ಸೆರೆಹಿಡಿದಿದ್ದು ವಿಕ್ರಂ ಲ್ಯಾಂಡರ್‌ನದ್ದೇ ಎಂದು ಇಸ್ರೋ ವಿಜ್ಞಾನಿಗಳಿಗೆ ಖಚಿತವಾಯ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ