ಸುದ್ದಿ

ವಿಕ್ರಮ್‌ ಲ್ಯಾಂಡರ್‌ನ್ನು ಚಂದ್ರನಿಗೆ ಮತ್ತಷ್ಟು ಸಮೀಪಕ್ಕೆ ಕಳುಹಿಸುವ ಪ್ರಯತ್ನ ಇಂದು ಮತ್ತೊಮ್ಮೆ ಯಶಸ್ವಿಯಾಗಿದೆ…!

21

ಬೆಂಗಳೂರು, ವಿಕ್ರಮ್‌ ಲ್ಯಾಂಡರ್‌ನ್ನು ಚಂದ್ರನಿಗೆ ಮತ್ತಷ್ಟುಸಮೀಪಕ್ಕೆ ಕಳುಹಿಸುವ ಪ್ರಯತ್ನ ಇಂದು ಮತ್ತೊಮ್ಮೆಯಶಸ್ವಿಯಾಗಿದ್ದು, ಕೊನೆಯ ಕ್ಷಣದ ಕಾರ್ಯಚರಣೆಗಳನ್ನುಇದೀಗ ಎದುರು ನೋಡಲಾಗುತ್ತಿದೆ

ಬುಧವಾರ ಬೆಳಿಗ್ಗೆ 3:42 ನಿಮಿಷಕ್ಕೆ ನೌಕೆಯಲ್ಲಿನ ಇಂಜಿನ್‌ನ್ನು 9 ಸೆಕೆಂಡುಗಳ ಕಾಲ ಉರಿಸಿ ಚಂದ್ರನಿಗೆ ಮತ್ತಷ್ಟು ಸಮೀಪದ ಕಕ್ಷೆಯಲ್ಲಿ ವಿಕ್ರಮ್‌ ಲ್ಯಾಂಡರ್‌ (ಪ್ರಗ್ಯಾನ್‌ ರೋವರ್‌ ಇದರ ಒಳಗಿದೆ)ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೆಲೆಗೊಳಿಸಿದೆ. 

ಸದ್ಯ ವಿಕ್ರಮ್‌ ಲ್ಯಾಂಡರ್‌35ಕಿ.ಮೀ x 101 ಕಿ.ಮೀ ಕಕ್ಷೆಯಲ್ಲಿದೆ. ಇನ್ನೊಂದು ಕಡೆ ಚಂದ್ರಯಾನ 2 ಕ್ಷಕೆಗಾಮಿಯು96 ಕಿ.ಮೀ x 125 ಕಿ.ಮೀ ಕಕ್ಷೆಯಲ್ಲಿ ಸುತ್ತುತ್ತಿದೆ. ಈ ಕಾರ್ಯಾಚರಣೆಯ ಅಂತ್ಯಕ್ಕೆ ಆರ್ಬಿಟರ್‌ ಮತ್ತು ಲ್ಯಾಂಡರ್‌ ಅಂದುಕೊಂಡಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಹೇಳಿದೆ. 

ಇವತ್ತಿನ ಕಾರ್ಯಾಚರಣೆಯೊಂದಿಗೆ ಚಂದ್ರನ ಮೇಲ್ಮೈನತ್ತ ವಿಕ್ರಮ್‌ ಲ್ಯಾಂಡರ್‌ನ್ನು ರವಾನಿಸುವ ಕೆಲಸ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಇದೀಗ ಸೆಪ್ಟೆಂಬರ್‌7ರಂದು ಮುಂಜಾನೆ 1 ರಿಂದ 2 ಗಂಟೆ ಮಧ್ಯೆ ಲ್ಯಾಂಡರ್‌ನ್ನು ಚಂದ್ರನ ಮೇಲ್ಮೈನತ್ತ ಕಳುಹಿಸಲಾಗುತ್ತದೆ, ಅಲ್ಲಿಂದ ಅದು1.30 ರಿಂದ 2.30ರ ಮಧ್ಯೆ ಚಂದ್ರನ ಮೇಲ್ಮೈ ಸ್ಪರ್ಷಿಸಲಿದೆ. ಇದೊಂದು ಸಂಕೀರ್ಣ ಪ್ರಕ್ರಿಯೆ ಎಂಬುದಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್‌ ಹೇಳಿದ್ದಾರೆ. 

ಈ ಕಾರ್ಯಚರಣೆಯನ್ನು ನೇರವಾಗಿ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌6 ಮತ್ತು 7ರಂದು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿ ಇರಲಿದ್ದಾರೆ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ