ಆಧ್ಯಾತ್ಮ

ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಪೂಜಿಸುವ ರೀತಿ ನೀತಿಗಳ ಸಂಪೂರ್ಣ ಮಾಹಿತಿಗೆ ಈ ಲೇಖನಿ ಓದಿ…

1336

ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರ ಪೂಜಿತೆ|

ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ||

ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರಿಯವಾದ ವರಮಹಾಲಕ್ಷ್ಮಿ ಹಬ್ಬವೂ ಸಹ ಈ ಮಾಸದಲ್ಲೇ ಬರುತ್ತದೆ. ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು.

ಭಾರತದ ದಕ್ಷಿಣ ಭಾಗದಲ್ಲಿ ನೆಲೆಸಿರುವವರಿಗೆ ವರಮಹಾಲಕ್ಷ್ಮಿ ವೃತವು ಹೆಚ್ಚು ಮಹತ್ವಪೂರ್ಣ ಮತ್ತು ವಿಶೇಷ ಎಂದೆನಿಸಿದೆ. ಈ ದಿನಂದು ಲಕ್ಷ್ಮೀಯನ್ನು ಪೂಜಿಸುವುದರಿಂದ ಆಕೆ ನಮ್ಮ ಮನದ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆ ಇರುವುದರಿಂದ ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ.ವರಮಹಾಲಕ್ಷ್ಮಿ ಹಬ್ಬ ಆಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಆಡಂಬರವಾಗಿ ಅಲ್ಲದಿದ್ದರೂ ಚಿಕ್ಕದಾದ ಲಕ್ಷ್ಮಿ ದೇವಿಯನ್ನು ಕೂರಿಸಿ ಆಚರಣೆ ಮಾಡಲು ಜನರು ಮುಂದಾಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಲಕ್ಷ್ಮಿ ಕೂರಿಸುವುದಕ್ಕೆ ಬೇಕಾದ ಎಲ್ಲಾ ವಸ್ತುಗಳು ದೊರೆಯುವುದುಂಟು.ಲಕ್ಷ್ಮಿ ಕೂರಿಸುವುದು ಕೇವಲ ಇತರರು ನೋಡುವುದಕ್ಕಾಗಿ ಅಲ್ಲ. ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ. ರೀತಿನೀತಿ ನಿಯಮಗಳ ಮೂಲಕ ಲಕ್ಷ್ಮಿಪೂಜೆಯನ್ನು ಮಾಡಬೇಕು.

ಪ್ರತಿಯೊಂದು ಪೂಜೆಗೂ ಒಂದಲ್ಲ ಒಂದು ರೀತಿಯ ನಿಯಮ ಹಾಗೂ ಪದ್ಧತಿ ಇರುತ್ತದೆ. ಹಾಗೆಯೇ ಲಕ್ಷ್ಮಿ ಪೂಜೆಗೂ ನಿಯಮಗಳಿದ್ದು, ಅವುಗಳನ್ನು ಪಾಲಿಸಿ ಪೂಜೆ ಮಾಡಿದರೆ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು ಎಂದು ಹಿರಿಯರು ಹೇಳುತ್ತಾರೆ.

ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸುತ್ತಾಳೆ ಲಕ್ಷ್ಮೀ.

ಲಕ್ಷ್ಮಿ ಪೂಜೆ ಮಾಡುವ ವಿಧಿ ವಿಧಾನಗಳ ಮಾಹಿತಿಯನ್ನು ತಿಳಿಯಲು ಮುಂದೆ ಓದಿ:-

  • ಲಕ್ಷ್ಮಿ ಪೂಜೆ ಮಾಡುವ ಹಿಂದಿನ ದಿನವೇ ಶುಭ್ರವಾಗಿ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತಯಾರು ಮಾಡಿಟ್ಟುಕೊಳ್ಳಬೇಕು. ಉದಾಹರಣೆಗೆ: ಸೀರೆ, ಹಣ್ಣು, ಅಲಂಕಾರಿಕ ವಸ್ತು, ಶುದ್ಧ ನೀರು ಇತ್ಯಾದಿ…
  • ಲಕ್ಷ್ಮಿಯನ್ನು ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸುವುದಾದರೆ ಹಸಿರು ಬಣ್ಣದ ಸೀರೆಯನ್ನು ತೊಡಿಸಬೇಕು. ಕೆಂಪು ಮತ್ತು ಹಳದಿ ಹೂವುಗಳನ್ನು ಬಳಸಬೇಕು. ದೀಪವನ್ನು ತುಪ್ಪದಿಂದ ಹಚ್ಚಬೇಕು.
  • ಪೂಜೆಯ ದಿನದಂದು ಮಹಿಳೆಯರು ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಎದ್ದು, ಶುದ್ಧ ನೀರಿನಿಂದ ಸ್ನಾನ ಮಾಡಬೇಕು. ಲಕ್ಷ್ಮಿ ವ್ರತ ಮಾಡುವವರೇ ಕಲಶ ಸ್ಥಾಪನೆ ಮಾಡಬೇಕು.
  • ಪೂಜಾ ಸ್ಥಳವನ್ನು ತುಂಬಿದ ಕೊಡದ ನೀರಿನಿಂದ ಶುದ್ಧ ಮಾಡಿ. ಸ್ಥಳದಲ್ಲಿ ಅಷ್ಟದಳದ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಬೇಕು.
  • ಕಲಶಕ್ಕೆ ತುಂಬಿದ ಕೊಡದ ಶುದ್ಧ ನೀರು ಹಾಕಿ/ಶುದ್ಧ ಅಕ್ಕಿ ಹಾಕಬೇಕು. ಇದರ ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ಅಥವಾ ಯಾವುದೇ ನಾಣ್ಯ, ದ್ರಾಕ್ಷಿ, ಗೋಡಂಬಿ, ಕರ್ಜೂರ, ಬಾದಾಮಿ, ಕಲ್ಲುಸಕ್ಕರೆ ಹಾಕಬೇಕು. ನಂತರ ಒಂಬತ್ತು ಎಳೆಯ ದಾರ ತೆಗೆದುಕೊಂಡು ಇದಕ್ಕೆ ಅರಿಶಿಣ ಹಚ್ಚಿ, ಅರಿಶಿಣದ ಕೊಂಬನ್ನು ಕಟ್ಟಿ ತಾಳಿ ಮಾಡಬೇಕು. ಇದನ್ನು ಕಲಶದ ಚೊಂಬಿಗೆ ಕಟ್ಟಿದರೆ ಕಲಶ ತಯಾರಾಗುತ್ತದೆ.

  • ನಂತರ ಶುಭ್ರವಾಗಿ ತೊಳೆದ ತೆಂಗಿನಕಾಯಿಗೆ ಅರಿಶಿಣ ಹಚ್ಚಿಬೇಕು. ಅರಿಶಿಣ ಹಚ್ಚಿದ ತೆಂಗಿನಕಾಯಿಗೆ ಕುಂಕುಮ ಬೊಟ್ಟು ಇಡಬೇಕು. ಕಳಶದ ಬಾಯಿಗೆ ವೀಳ್ಯದೆಲೆ ಅಥವಾ ಮಾವಿನ ಎಲೆ ಇಡಬೇಕು. ನಂತರ ತಟ್ಟೆಯೊಂದಕ್ಕೆ ಅಕ್ಕಿ ಹಾಕಿ ಇದರ ಮೇಲೆ ಕಲಶವನ್ನು ಇಡಬೇಕು. ಅರಿಶಿಣವನ್ನು ಸ್ವಲ್ಪ ನೀರಿನಿಂದ ಮಿಶ್ರಣ ಮಾಡಿ ಒಂದು ನಾಣ್ಯ ತೆಗೆದುಕೊಂಡು ಅದರ ಹಿಂದೆ ಹಾಕಬೇಕು. ನಂತರ ದೇವರ ಬಳಿ ಇಚ್ಛೆಯನ್ನು ಹೇಳಿಕೊಂಡು ದೇವಿಯನ್ನು ಬೇಡಿ ಸಂಕಲ್ಪ ಮಾಡಿಕೊಳ್ಳಬೇಕು. ನಂತರ ದೇವಿಯನ್ನು ಆವಾಹನೆ ಮಾಡಬೇಕು ಅಂದರೆ ಪ್ರಾಣ ಪ್ರತಿಷ್ಠಾಪನೆ.

  • ಇಷ್ಟಾದ ನಂತರ ಲಕ್ಷ್ಮಿ ದೇವಿಗೆ ಪ್ರಾಣಪ್ರತಿಷ್ಠಾಪನೆ ಮಾಡಬೇಕು. ಇದಕ್ಕೆ ಷೋಡಶೋಪಚಾರ ಪೂಜೆಯೆಂದು ಕರೆಯಲಾಗುತ್ತದೆ. ದೇವಯು ತನ್ನ ಎಲ್ಲ ಆಂಗಾಂಗ, ಪರಿವಾರ, ಆಯುಧ ಮತ್ತು ಶಕ್ತಿಸಹತಿವಾಗಿ ಬಂದು ಮೂರ್ತಿಯಲ್ಲಿ ಪ್ರತಿಷ್ಟಿತಳಾಬೇಕು ಮತ್ತು ನಮ್ಮ ಪೂಜೆಯನ್ನು ಸ್ವೀಕರಿಸಬೇಕು ಎಂದು ದೇವತೆಯಲ್ಲಿ ಸಂಪೂರ್ಣ ಶರಣಾಗತಭಾವದಿಂದ ಮಾಡುವ ಪ್ರಾರ್ಥನೆಯೆ ಪ್ರಾಣಪ್ರತಿಪ್ಠಾಪನೆ ಎಂದು ಕರೆಯಲಾಗುತ್ತದೆ.
  • ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿ ಕೈಯಲ್ಲಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವುಗಳನ್ನು ತೆಗೆದುಕೊಳ್ಳಬೇಕು. ದೇವಿಯ ಸಹಸ್ರ ನಾಮವನ್ನು ಹೇಳಿ ಕೊನೆಗೆ ನಮಃ ಎಂದು ಹೇಳಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವನ್ನು ದೇವತೆಗೆ ಅರ್ಪಿಸಿ ನಮಸ್ಕರಿಸಬೇಕು.
  • ಪ್ರಾಣ ಪ್ರತಿಷ್ಟಾಪನೆ ಬಳಿಕ ನಂತರ ಲಕ್ಷ್ಮಿ ದೇವಿಗೆ ಸೀರೆಯನ್ನು ಉಡಿಸಿ, ಅಲಂಕಾರ ಮಾಡಬೇಕು.

ಅಲಂಕಾರವಾದ ಬಳಿಕ ಪೂಜೆಗೆ ಯಾವುದೇ ವಿಘ್ನಗಳು ಬಾರದಿರುವುದಕ್ಕೆ, ನಮ್ಮ ಕಾರ್ಯವನ್ನು ಸಿದ್ಧಿ ಮಾಡು ಎಂದು ವಿಘ್ನೇಶ್ವರನ ಬಳಿ ಪ್ರಾರ್ಥಿಸಬೇಕು.

ಗಣಪತಿಗೆ ಪೂಜೆ ಮಾಡುವಾಗ ಅಷ್ಟನಾಮ ಸಹಸ್ರ ನಾಮಾವಳಿಯನ್ನು ಮಾಡಬೇಕು. ಹೇಳಲು ಸಾಧ್ಯವಾಗದಿದ್ದರೆ ಮಾರುಕಟ್ಟೆಯಲ್ಲಿ ಗಣಪತಿಯ ಸಹಸ್ರ ನಾಮಾವಳಿಯ ಸಿಡಿಗಳು ಲಭ್ಯವಿದೆ ಇದನ್ನು ಹಾಕಬಹುದು.

ಗಣಪತಿ ಪೂಜೆಯ ಬಳಿಕ ಲಕ್ಷ್ಮಿಗೆ ಇಷ್ಟವಾಗುವ ಹಣ್ಣು, ತಿಂಡಿ, ತಿನಿಸುಗಳನ್ನು ದೇವಿಯ ಮುಂದೆ ಇಡಬೇಕು. ಮತ್ತೊಂದು ತಟ್ಟೆಯಲ್ಲಿ ಚಿಕ್ಕ ಕಳಶ, ಅರಿಶಿನದ ಕೊಂಬು, ಮರದ ಜೊತೆ / ಬಾಗಿನ, ಹಸಿರು ಬಳೆ, ಬಳೆ ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ, ರವಿಕೆ ಬಟ್ಟೆ (ಬಾಗಿನದ ಸಾಮಾನು ಎಂದರೆ ಇದೀಗ ಮಾರುಕಟ್ಟೆಯ ಅಂಗಡಿಗಳಲ್ಲಿ ಸಿಗುತ್ತದೆ) ಇಡಬೇಕು.

 

ಲಕ್ಷ್ಮಿ ಪೂಜೆ ಮಾಡುವಾಗ ಪೂಜೆಯ ತಟ್ಟೆಯೊಂದರಲ್ಲಿ 9ಸುತ್ತಿನ ದಾರ ಇಟ್ಟಿರಬೇಕು. ಪೂಜೆಯಾದ ಬಳಿಕ ಈ ದಾರವನ್ನು ಮನೆಯಲ್ಲಿರುವವರು ತಮ್ಮ ಕೈಗಳಿಗೆ ಕಟ್ಟಿಕೊಳ್ಳಬೇಕು.

ಲಕ್ಷ್ಮಿ ಪೂಜೆ ಮಾಡಿದ ಬಳಿಕ ಸುಮಂಗಲಿಯರನ್ನು ಮನೆಗೆ ಕರೆದು ದೇವಿಯ ಕಥಾ ಶ್ರವಣ ಮಾಡಬೇಕು. ನಂತರ ಸುಮಂಗಲಿಯರಿಗೆ ಅರಿಶಿನ, ಕುಂಕುಮ ರವಿಕೆ ಬಟ್ಟೆ ಹಾಗೂ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು ಕೊಟ್ಟು ಅವರನ್ನು ಸಂಸತದಿಂದ ಕಳುಹಿಸಿಕೊಡಬೇಕು. ಪೂಜೆಗೆ ಬಂದವರಿಗೆಲ್ಲಾ ದೇವಿಯನ್ನು ಆರಾಧನೆ ಮಾಡಿ ಆರತಿ ಕೊಡಬೇಕು.

ದೇವಿಯ ವಿಸರ್ಜನೆ…

ವರಮಹಾಲಕ್ಷ್ಮಿ ದಿನ ಮುಗಿಯಿತು….ಪೂಜೆ ಮಾಡಿ ಆಯಿತೆಂದು ಹೇಗೆಂದರೆ ಹಾಗೆ ದೇವಿಯನ್ನು ತೆಗೆದುಬಿಡುವುದಲ್ಲ…ಪ್ರಾಣಪ್ರತಿಷ್ಠಾಪನೆ ಹಾಗೂ ಕಳಶವನ್ನು ಹೇಗೆ ಶ್ರದ್ಧಾ ಭಕ್ತಿ, ನೀತಿ, ನಿಯಮಗಳಿಂದ ಮಾಡುತ್ತೇವೆಯೋ ಹಾಗೆಯೇ ದೇವಿಯ ಕಳಶ ವಿಸರ್ಜನೆಯನ್ನೂ ಕ್ರಮಬದ್ಧವಾಗಿ, ಪದ್ಧತಿಯಿಂದ ಮಾಡಬೇಕು. ಸಾಮಾನ್ಯವಾಗಿ ವರಲಕ್ಷ್ಮಿಯನ್ನು ಒಂದು, ಮೂರು ಹಾಗೂ ಐದು ದಿನಗಳ ಕಾಲ ಮನೆಯಲ್ಲಿಟ್ಟು ಪೂಜಿಸುವುದುಂಟು.

ದೇವಿಯ ವಿಸರ್ಜನೆ ಮಾಡುವಾಗ ಸುಮಂಗಲಿಯರು ಸಂಕಲ್ಪ ಮುದ್ರೆಯಲ್ಲಿ ಕುಳಿತುಕೊಂಡು ಕೈಯ ನಡುಬೆರಳಿನಿಂದ ನೆಲದಲ್ಲಿ ಬರೆದಿರುವ ಚೌಕದ ಗೆರೆಯನ್ನು ಭಿನ್ನಗೊಳಿಸಬೇಕು. ಪ್ರತಿಷ್ಠಾಪನೆ ಉತ್ತಾರಾಭಿಮುಖವಾಗಿದ್ದರೆ ಉತ್ತರದ ಗೆರೆಯನ್ನು ಭಿನ್ನ ಮಾಡಬೇಕು. ಪೂರ್ವಾಭಿಮುಖವಾಗಿದ್ದರೆ ಪೂರ್ವದ ಗೆರೆಯನ್ನು ಭಿನ್ನಗೊಳಿಸಬೇಕು. ನಂತರ ನಿಧಾನವಾಗಿ ಕಳಶವನ್ನು ಅಲುಗಾಡಿಬೇಕು.

ಇದೆಲ್ಲಾ ಆದ ಮೇಲೆ ಒಳ್ಳೆಯ ಸಮಯ ನೋಡಿ ದೇವಿಯ ಬಳಿಯಿರುವ ಎಲ್ಲಾ ಸಾಮಾಗ್ರಿಗಳನ್ನು ನಿಧಾನವಾಗಿ ತೆಗೆಯಬೇಕು. ಕಲಶ ಪಾತ್ರೆಯಲ್ಲಿರುವ ಅಕ್ಕಿ ಹಾಗೂ ತೆಂಗಿನ ಕಾಯಿಯನ್ನು ಸಿಹಿ ಅಡುಗೆಗೆ ಉಪಯೋಗಿಸಿ ಮಕ್ಕಳಿಗೆ ಹಂಚಬೇಕು.

ಚೌಕ ಹಾಗೂ ರಂಗೋಲಿ ಬರೆದ ಪುಡಿ, ಹೂವು, ಎಲ್ಲಾ ವಸ್ತುವನ್ನು ತೆಗೆದು ಎಲ್ಲೆಂದರಲ್ಲಿ ಬಿಸಾಡದೆ ಗಲೀಜು ಮಾಡದೆ ನದಿ ದಡದಲ್ಲಿ ಇಡಬೇಕು. ನದಿಗೆ ಎಸೆಯಬಾರದು. ನದಿಗೆ ಎಸೆದರೆ ದೋಷ ಉಂಟಾಗುತ್ತದೆ. ಪೂಜೆ ಮಾಡುವುದು ಎಷ್ಟು ಮುಖ್ಯವೋ ಪೂಜೆ ನಂತರವಿರುವ ಪದ್ಧತಿಗಳನ್ನೂ ಅನುಸರಿಸುವುದೂ ಸಹ ಅಷ್ಟೇ ಮುಖ್ಯ.

ಈ ವರಮಹಾಲಕ್ಷ್ಮಿ ಹಬ್ಬದ ಮತ್ತೊಂದು ವಿಶೇಷತೆಯೇನೆಂದರೆ ಜಾತಿ, ಮತ, ಭೇದವಿಲ್ಲದೆ ಹಿಂದೂ ಧರ್ಮದ ಎಲ್ಲರೂ ಆ ತಾಯಿಯನ್ನು ವಿವಿಧ ರೀತಿಯಲ್ಲಿ ಪೂಜಿಸಿ ಅವಳನ್ನು ಆರಾಧಿಸುತ್ತಾರೆ.

ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ ನಂಬಿಕೆಯೂ ಇದೆ. ಎಷ್ಟೇ ಈ ನಮ್ಮ ಆಧುನಿಕ, ಪಾಶ್ಚಿಮಾತ್ಯ ಜೀವನ ನಮ್ಮನ್ನು ಆವರಿಸದರೂ ನಾವು ನಮ್ಮ ಸಂಪ್ರದಾಯ, ಪದ್ದತಿಗಳನ್ನು ಇನ್ನೂ ಉಳಿಸಿಕೊಂಡು ಬಂದಿದ್ದೇವೆ ಎನ್ನುವುದಕ್ಕೆ ಈ ವರಮಹಾಲಕ್ಷ್ಮಿ ಹಬ್ಬದ ಆಚರಣೆಯೇ ಸಾಕ್ಷಿ. ಎಲ್ಲರೂ ಹಬ್ಬವನ್ನು ಸಡಗರ, ಸಂಭ್ರಮದೊಂದಿಗೆ ಆಚರಿಸಿ, ವಿಷ್ಣುವಿನ ಹೃದಯವಾಸಿ ಲಕ್ಷ್ಮಿದೇವಿಯನ್ನು ಪೂಜಿಸಿ, ಶ್ರದ್ಧೆ ಭಕ್ತಿಯೊಂದಿಗೆ ಅವಳನ್ನು ಆರಾಧಿಸಿ ಅವಳ ಕೃಪೆಗೆ ಪಾತ್ರರಾಗಿ.

ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು…

ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರ ಪೂಜಿತೆ|

ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ||

ಮೂಲ:

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪಿತೃಪಕ್ಷ ಹಮಾವಾಸೆ ದಿನ ಏನು ತಿನ್ನಬಹುದು…? ಏನು ತಿನ್ನಬಾರದು ಗೊತ್ತಾ…?

    ಪ್ರತಿ ವರ್ಷದಂತೆ ಈ ವರ್ಷವೂ 15 ದಿನಗಳ ಕಾಲ ಆಚರಿಸಲ್ಪಡುವ ಪಿತೃಪಕ್ಷ ಶುರುವಾಗಿದೆ. ಪಿತೃ ಪಕ್ಷದಲ್ಲಿ ಪೂರ್ವಜರ ಆರಾಧನೆ ನಡೆಯುತ್ತದೆ. ಪಿತೃಪಕ್ಷದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಜ್ಯೋತಿಷ್ಯ ಕಾರಣಗಳಿಂದ ಮಾತ್ರವಲ್ಲ ಇದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. ಪಿತೃಪಕ್ಷದಲ್ಲಿ ಕೆಲ ಆಹಾರ ಸೇವನೆ ಮಾಡುವುದ್ರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದು ಶ್ರಾದ್ಧದ ಕೆಲಸ ಮಾಡಲು ಅಡ್ಡಿಯುಂಟು ಮಾಡುತ್ತದೆ. ಈ ಸಮಯದಲ್ಲಿ ಹಸುವಿನ ಹಾಲನ್ನು ಕುಡಿಯಬಾರದು. ಹಸು ಈಗಷ್ಟೆ ಮಗುವಿಗೆ ಜನ್ಮ ನೀಡಿದ್ದರೆ ಆ ಹಾಲನ್ನು ಅಪ್ಪಿತಪ್ಪಿಯೂ ಕುಡಿಯಬಾರದು. ಈ ಸಮಯದಲ್ಲಿ…

  • ಜ್ಯೋತಿಷ್ಯ

    ನಿಮ್ಮ ರಾಶಿ ಪ್ರಕಾರ ಈ ನಾಣ್ಯ ನಿಮ್ಮ ಪರ್ಸ್ ನಲ್ಲಿದ್ದರೆ ಏನಾಗುತ್ತೆ ಗೊತ್ತಾ?ನಿಮ್ಮ ರಾಶಿಗೆ ಯಾವ ನಾಣ್ಯ ನೋಡಿ…

    ಪ್ರತಿಯೊಬ್ಬರ ಪರ್ಸ್ ನಲ್ಲಿಯೂ ನಾಣ್ಯಗಳು ಇದ್ದೇ ಇರುತ್ವೆ. ಕೆಲವರ ಪರ್ಸ್ ನಲ್ಲಿ 10 ರೂಪಾಯಿ ನಾಣ್ಯವಿದ್ರೆ ಇನ್ನು ಕೆಲವರ ಪರ್ಸ್ ನಲ್ಲಿ 2 ರೂಪಾಯಿ, ಒಂದು ರೂಪಾಯಿ ನಾಣ್ಯವಿರುತ್ತದೆ. ಶಾಸ್ತ್ರದ ಪ್ರಕಾರ, ರಾಶಿಗನುಗುಣವಾಗಿ ನಾಣ್ಯವನ್ನು ಪರ್ಸಿನಲ್ಲಿಟ್ಟರೆ ಶುಭಕರ. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಲೋಹ ಶುಭ ಫಲ ನೀಡುತ್ತವೆ. ಹಾಗಾಗಿ ರಾಶಿಗನುಗುಣವಾಗಿ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಎಂದೂ ಪರ್ಸ್ ಖಾಲಿಯಾಗುವುದಿಲ್ಲ. ಮೇಷ : ಈ ರಾಶಿಯವರು ಪರ್ಸ್ ನಲ್ಲಿ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು. ವೃಷಭ : ಈ ರಾಶಿಯವರು…

  • ಆಟೋಮೊಬೈಲ್ಸ್

    ಬೈಕ್‌ಗಳ ಮಹಾರಾಜ ರಾಯಲ್ ಎನ್‌ಫೀಲ್ಡ್’ಗೆ ಗೇಲಿ ಮಾಡಿ ಟಾಂಗ್ ಕೊಟ್ಟ, ಬಜಾಜ್ ಡೊಮಿನರ್!

    ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್‌, ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ಇದರ ಹೆಸರು ಕೇಳಿದ್ರೆ ಸಾಕು, ಮೈ ಜುಮ್ಮೆನ್ನುತ್ತಿತ್ತು. ಯಾಕೆಂದ್ರೆ ಈ ಬೈಕ್’ನ್ನು ಒಮ್ಮೆ ಆದ್ರೂ ಓಡಿಸಬೇಕು ಅಂತ ಮನಸ್ಸಿಗೂ ಬಂದ್ರೂ, ಸಾಮಾನ್ಯ ಜನರ ಕೈಗೆ ಇದು ಎಟುಕುತ್ತಿರಲಿಲ್ಲ.

  • ಸುದ್ದಿ

    ಭಾರತದ ಈ ಹಳ್ಳಿಯಲ್ಲಿರುವ ಎಲ್ಲರೂ ಕೋಟ್ಯಾಧಿಪತಿಗಳೇ..!ಇದು ಏಷ್ಯಾದ ಕೋಟ್ಯಾಧಿಪತಿಗಳ ಹಳ್ಳಿ…!

    ಹಳ್ಳಿಗಳು ಅಂದ್ರೆ ನಮ್ಮಲ್ಲಿ ಬಡತನ, ಅನಕ್ಷರತೆ, ಬಂಡವಾಳದ ಕೊರತೆ, ಹಣದ ಅಭಾವ ಎನ್ನುವ ಮಾತುಗಳು ನಮ್ಮ ಕಾಣಿಸುತ್ತವೆ.ಆದರೆ ನಮ್ಮ ಭಾರತದಲ್ಲಿರುವ ಈ ಹಳ್ಳಿ, ಏಷ್ಯಾದ ಶ್ರೀಮಂತ ಹಳ್ಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

  • ಸುದ್ದಿ

    ಜಾರಿಯಾಯ್ತು ಕೇಂದ್ರ ಸರ್ಕಾರದ ಹೊಸ ರೂಲ್ಸ್ ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ, ಇಲ್ಲಿದೆ ನೋಡಿ ಮಾಹಿತಿ,.!

    ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಟ್ರಾಫಿಕ್ ನಿಯಮ ಹಾಗೂ ದಂಡ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಜಾರಿಯಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿಯಮ ಉಲ್ಲಂಘನೆ, ದಂಡ ಹಾಗೂ ನೂತನ ನಿಯಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು, ನೂತನ ಟ್ರಾಫಿಕ್ ನಿಯಮ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಜಾರಿಯಾಗಿದೆ. ಸರ್ಕಾರದಿಂದ ಯಾವುದೇ ನೊಟಿಫಿಕೇಶನ್ ಬಾರದ ಹಿನ್ನಲೆಯಲ್ಲಿ ಆರಂಭಿಕ 4 ದಿನ ಹಳೆ ನಿಯಮ ಮುಂದುವರಿದಿತ್ತು. ಇದೀಗ…

  • ಉಪಯುಕ್ತ ಮಾಹಿತಿ

    ಸಿಇಟಿ ಫಲಿತಾಂಶ ಪ್ರಕಟಣೆ: ಇಂಜಿನಿಯರಿಂಗ್‌ನಲ್ಲಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ಸ್ತಾನ…!

    ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಸಕ್ತ ಸಾಲಿನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದಲ್ಲಿಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ಬಾರಿ 1.90 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದು, ಶೇ 92ರಷ್ಟು ಮಂದಿ ಪರೀಕ್ಷೆ ಬರೆದಿದ್ದರು. ಎಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು (ಪ್ರಥಮ) ಪಡೆದಿದ್ದಾರೆ. ಇವರು ಬೆಂಗಳೂರಿನ ಚೈತನ್ಯ ಟೆಕ್ನೋ…