ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಣಕಾಸು ರಾಜ್ಯ ಸಚಿವ ಸಂತೋಷ ಕುಮಾರ್ ಗಂಗಾವರ್‌ರು ಸಂಸತ್ತಿಗೆ ಲಿಖಿತ ಪ್ರಶ್ನೆಗೆ ಉತ್ತರಿಸಿ ಒಬ್ಬವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹಂಚಲಾಗಿತ್ತು. ಜುಲೈ 27ರವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್ ಗುರುತಿಸಿ ರದ್ದು ಪಡಿಸಲಾಗಿದೆ. ಎಂದು ತಿಳಿಸಿದ್ದಾರೆ. ಒಬ್ಬನೆ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ನೀಡಿದ್ದು ಪತ್ತೆಯಾಗಿದೆ.
ಸರ್ಕಾರದ ನಿಯಮ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಸಂಖ್ಯೆಯನ್ನು ಹೊಂದುವಂತಿಲ್ಲ. ಒಬ್ಬ ವ್ಯಕ್ತಿಯ ತೆರಿಗೆ ಅಸ್ತಿತ್ವ ಹಾಗು ಅವನ ಎಲ್ಲ ಹಣಕಾಸು ವಹಿವಾಟುಗಳನ್ನು ಗುರುತಿಸಲು ಪ್ಯಾನ್ ಕಾರ್ಡ್ ಅತ್ಯಗತ್ಯ.
ಜುಲೈ 27ರ ವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್ ಗಳನ್ನು ಪತ್ತೆ ಹಚ್ಚಲಾಗಿದೆ, ಅವುಗಳಲ್ಲಿ ಅಸ್ತಿತ್ವದಲ್ಲಿದ್ದ ವ್ಯಕ್ತಿ ಅಥವಾ ತಪ್ಪು ಗುರುತಿನ ವ್ಯಕ್ತಿಗಳ ಹೆಸರು ಇವೆ.
ಹೀಗಿರುವಾಗ ಹಲವು ಜನರಲ್ಲಿ ರದ್ದಾದ ಪಾನ್ ಕಾರ್ಡ್‌ನಲ್ಲಿ ತಮ್ಮದೂ ಸೇರಿರಬಹುದೇ ಎನ್ನುವ ಸಂಶಯ ಹುಟ್ಟಿಕೊಳ್ಳಬಹುದು. ಮೊದಲು ಆದಾಯ ತೆರಿಗೆ ವೆಬ್‌ಸೈಟ್‌ಗೆ ಕ್ಲಿಕ್ ಮಾಡಿರಿ .ನಂತರ ವೆಬ್‌ಸೈಟ್‌ನಲ್ಲಿ ನೋ ಯುವರ್ ಪಾನ್ (Know you PAN)ಎಂದು ಬರೆದಿರುತ್ತದೆ.
ನಿಮ್ಮ ಪ್ಯಾನ್ ಕಾರ್ಡ್ ಮಾಹಿತಿಯನ್ನು ಚೆಕ್ ಮಾಡುವುದು ಹೇಗೆ?
ಮೊದಲು (www.incometaxindiaefiling.gov.in) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ನೋ ಯುವರ್ ಪಾನ್ (Know you PAN) ಈ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ನಂತರ ಒಂದು ಪುಟದಲ್ಲಿ ಫಾರ್ಮ್ ಸಿಗುತ್ತದೆ. ಈ ಫಾರ್ಮ್‌ನಲ್ಲಿ ನಿಮ್ಮಮಧ್ಯ ಹೆಸರು. ಉಪನಾಮ ಮತ್ತು ಮೊದಲ ಹೆಸರನ್ನು ತುಂಬಬೇಕು. ಇದು ಪಾನ್ ಕಾರ್ಡ್‌ನಲ್ಲಿ ಬರೆದಿರುವ ರೀತಿಯಲ್ಲಿಯೇ ಆಗಿರಬೇಕು. ಮಧ್ಯ ಹೆಸರು ಇಲ್ಲದಿದ್ದರೆ ಈ ಕಾಲಮ್‌ನ್ನು ಹಾಗೆಯೆ ಬಿಟ್ಟು ಬಿಡಿರಿ. ಪಾನ್ ಕಾರ್ಡ್‌ಗೆ ನೀಡಿದ ಹುಟ್ಟಿದ ದಿನಾಂಕ ಹಾಕಿರಿ. ಹೀಗೆ ನಿಮ್ಮ ಪಾನ್ ಕಾರ್ಡ್ ವ್ಯಾಲಿಡಿಟಿ ಚೆಕ್‌ಮಾಡಿಕೊಳ್ಳಬಹುದಾಗಿದೆ.
ಅಲ್ಲಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ, Submit ಬಟನ್ ಒತ್ತಿ. ನಂತರ ನಿಮ್ಮ ಮೊಬೈಲ್‍ಗೆ OTP ಪಾಸ್‍ವರ್ಡ್ ಬರುತ್ತದೆ. ಆ ಪಾಸ್‍ವರ್ಡ್‍ನ್ನು ನಮೂದಿಸಿ, “Validate” ಬಟನ್ ಒತ್ತಿ.
ಒಂದು ವೇಳೆ ನಿಮ್ಮ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ನೋಂದಣಿಯಾಗಿದ್ದರೆ, ಅಲ್ಲಿ ಹೊಸ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ. ನಿಮ್ಮ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಹೊಸ ಪುಟ ತೆರೆದುಕೊಳ್ಳುವುದು. ಅಲ್ಲಿ ನಿಮ್ಮ ಪ್ಯಾನ್‍ಕಾರ್ಡ್ ಸಕ್ರಿವಾಗಿರುವ ಬಗ್ಗೆ ಸಂದೇಶ ಕಾಣಿಸುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶನಿ ಭಗವಾನನ ‘ಕೆಟ್ಟ ಪ್ರಭಾವ’ದಿಂದ, ಪರಿಣಾಮಗಳಿಂದ ಪಾರಾಗಲು ಭಗವಾನ್ ಹನುಮಂತನ ಪ್ರಾರ್ಥನೆಯೊಂದೇ ಸರ್ವ ಔಷಧಿ.
ಅನೇಕರು ನಿಯಮಿತ ಆದಾಯ ಗಳಿಸುವ ದಾರಿ ಹುಡುಕುತ್ತಾರೆ. ನೌಕರಿ ಬಿಟ್ಟು ಸ್ವಂತ ಬ್ಯುಸಿನೆಸ್ ಶುರು ಮಾಡಿ, ಕೈತುಂಬ ಲಾಭ ಗಳಿಸುವ ಬ್ಯುಸಿನೆಸ್ ಹುಡುಕಾಟ ನಡೆಸುತ್ತಾರೆ. ಅಂತವರಿಗೆ ಮೊಟ್ಟೆ ಮಾರಾಟಕ್ಕಾಗಿ ಕೋಳಿ ಸಾಕಣಿಕೆ ಬೆಸ್ಟ್. 1,500 ಕೋಳಿಗಳನ್ನು ಸಾಕಿ ಸಣ್ಣ ಮಟ್ಟದಲ್ಲಿಯೂ ನೀವು ಮೊಟ್ಟೆ ಮಾರಾಟ ಶುರು ಮಾಡಬಹುದು. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ 7-9 ಲಕ್ಷ ರೂಪಾಯಿಯಷ್ಟು ಖರ್ಚು ಬರುತ್ತದೆ. ಒಮ್ಮೆ ಕ್ಲಿಕ್ ಆದ್ರೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಉತ್ತಮ…
ಉತ್ತರ ಕೊರಿಯಾ ಎರಡನೇ ಬಾರಿಗೆ ಅಂತರ ಖಂಡಾತರ ಕ್ಷಿಪಣಿ ICBM (ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್-ಐಸಿಬಿಎಂ) ಪ್ರಯೋಗ ಮಾಡಿದ್ದು, ಇದೆ ಸಮಯದಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಸದ್ಯ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರೈತ ನಾಯಕ ,ಶಾಸಕ ಕೆ ಎಸ್ ಪುಟ್ಟಣ್ಣಯ್ಯ (69) ಹೃದಯಾಘಾಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ.ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯವನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಹಠಾತ್ ಕುಸಿದುಬಿದ್ದ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕರಿಬೇವು ಮನುಷ್ಯನ ದೇಹಕ್ಕೆ ಬೇಕಾಗುವ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ಕೊಡುವಲ್ಲಿ ಇದರ ಪಾತ್ರ ಮಹತ್ವವಾದದ್ದು…
ಇಂದು ಪೆಟ್ರೋಲ್ ಬೆಲೆ 55 ಪೈಸೆ ಹಾಗೂ ಡೀಸೆಲ್ 69 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಕೇವಲ 11 ದಿನಗಳಲ್ಲಿ ಪೆಟ್ರೋಲ್ ಬೆಲೆ 6 ರೂ. ಹಾಗೂ ಡೀಸೆಲ್ 6.49 ರೂ.ಗಳಷ್ಟು ಹೆಚ್ಚಳವಾಗಿದೆ. ಕಳೆದ 11 ದಿನಗಳಲ್ಲಿ ಪ್ರತಿ ದಿನ 20 ಪೈಸೆಯಿಂದ 80 ಪೈಸೆ ವರೆಗೂ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಬೆಲೆ ಹೆಚ್ಚಳದಿಂದಾಗಿ ಜನ ಕಂಗಾಲಾಗಿದ್ದಾರೆ. ಮೊದಲೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ಕೆಲಸವಿದ್ದರೂ ಸಂಬಳ ಸರಿಯಾಗಿ ಬರುತ್ತಿಲ್ಲ. ಅಲ್ಲದೆ ಇನ್ನೊಂದೆಡೆ ಸಾರ್ವಜನಿಕ ಸಾರಿಗೆ…