ಸುದ್ದಿ

SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿ, 20 ಸಾವಿರ ರೂ. ವೇತನದ ಉದ್ಯೋಗಾವಕಾಶ,..!!

40

ರೈಲ್ವೆ ಇಲಾಖೆಯಲ್ಲಿನ ಸಹಾಯಕ ಲೊಕೊ ಪೈಲಟ್ (ALP) ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 306 ಹುದ್ದೆಗಳು ಖಾಲಿ ಇದ್ದು, ಆಸಕ್ತರು ನವೆಂಬರ್ 11ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ರೈಲ್ವೆ ನೇಮಕಾತಿ ಸೆಲ್ (ಆರ್‌ಆರ್‌ಸಿ) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಒಟ್ಟು ಹುದ್ದೆಗಳ ಸಂಖ್ಯೆ – 306
ಸಹಾಯಕ ಲೊಕೊ ಪೈಲಟ್ – 85 ಹುದ್ದೆಗಳು
ತಂತ್ರಜ್ಞ (ಟೆಕ್ನಿಷಿಯನ್) – 221 ಹುದ್ದೆಗಳು

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ ಅಭ್ಯರ್ಥಿಗಳು ಐಟಿಐ ಡಿಪ್ಲೊಮಾ ಕೂಡ ಪಡೆದಿರಬೇಕಾಗುತ್ತದೆ. ಹಾಗೆಯೇ ಇದರೊಂದಿಗೆ ಐಐಟಿಗೆ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ. ಇನ್ನು ವಿಭಿನ್ನ ಹುದ್ದೆಗಳಿಗೆ ವಿಭಿನ್ನ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.

ವಯೋಮಿತಿ: ಅರ್ಜಿದಾರರ ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ 42 ವರ್ಷಗಳ ಒಳಗಿರಬೇಕು. ಗರಿಷ್ಠ ವಯಸ್ಸಿನಲ್ಲಿ, ಒಬಿಸಿಗೆ 3, ಎಸ್‌ಸಿ / ಎಸ್‌ಟಿ 5 ವರ್ಷಗಳ ವಿನಾಯಿತಿ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ.

ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ವೇತನ 19,900 ರೂ. ನೀಡಲಾಗುತ್ತದೆ. ಇದರೊಂದಿಗೆ ತಿಂಗಳ ಬೋನಸ್ ಕೂಡ ಸಿಗಲಿದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 12, 2019
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ನವೆಂಬರ್ 11, 2019

ಹೆಚ್ಚಿನ ಮಾಹಿತಿ: ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಳನ್ನು Www.rrc-wr.com ಗೆ ಭೇಟಿ ನೀಡುವ ಮೂಲ ಪರಿಶೀಲಿಸಬಹುದು. ಹಾಗೆಯೇ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕಾನೂನು

    ಬಿಪಿಎಲ್ ಪಡಿತರ ಚೀಟಿದಾರರಿಗೆ ಸಚಿವ ‘ಯು.ಟಿ.ಖಾದರ್’ ತಿಳಿಸಿರುವ ಸಿಹಿ ಸುದ್ದಿ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

    ಬಿಪಿಎಲ್ ಪಡಿತರ ಚೀಟಿದಾರರು ಇನ್ನು ಮುಂದೆ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ತಮ್ಮ ಪಾಲಿನ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

  • inspirational

    ಮೆದುಳಿನ ಕ್ಯಾನ್ಸರ್

    – MAYOON N  ಮೆದುಳಿನ ಕ್ಯಾನ್ಸರ್ ಮೆದುಳಿನಲ್ಲಿ ಅಸಹಜವಾಗಿ ಬೆಳೆಯುವ ಜೀವಕೋಶಗಳು,ಇವು ಕ್ಯಾನ್ಸರ್ ಅಥವಾ (ಮಾಲಿಗಂಟ) ಇಲ್ಲವೆ ಕ್ಯಾನ್ಸರ್ ರಹಿತ ಗೆಡ್ಡೆ(ಬೆನಿಗ್ನ್ ) ಗಳಾಗಿ ಮಾರ್ಪಾಡಗಬಹುದು. ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.ಮೆದುಳು ಅಲ್ಲದೇ (ನ್ಯುರಾನ್ಗಳು, ಗ್ಲಿಯಾಲ್ ಕೋಶಗಳು(ಅಸ್ಟ್ರಿಸೈಟ್ಗಳು, ಒಲಿಗೊದೆಂಡ್ರೊಸೈಟ್ಗಳು, ಎಪೆಂಡಿಮಲ್ ಕೋಶಗಳು , ಮೈಲಿನ್-ಉತ್ಪಾದನೆಯ ಸ್ಕಾನ್ ಕೋಶಗಳು), ಲಿಂಫ್ಅಟಿಕ್ ಅಂಗಾಂಶ, ರಕ್ತ ನಾಳಗಳು ), ಕ್ರೇನಿಯಲ್ ನರಗಳಲ್ಲಿರುವವಗಳು , ಮೆದುಳಿನಲ್ಲಿ ಆವರಿಸಿದ (ಮೆನಿಂಗ್ಸ್), ಬುರುಡೆ, ಪಿಟ್ಯುಟರಿ ಮತ್ತು ಪೈನಿಯಲ್ ಗ್ಲಾಂಡ್, ಅಥವಾ ಕ್ಯಾನ್ಸರ್ಗಳ ಮೂಲಕ ಹರಡಿದ್ದು (ಮೆಟಾಸ್ಟಿಕ್ ಗೆಡೈಗಳು).ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ…

  • ನೆಲದ ಮಾತು

    ಪಾಕ್ ಗಡಿಗೆ ಸಂಬಂದಿಸಿ,ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್..!ತಿಳಿಯಲು ಇದನ್ನು ಓದಿ..

    ಭಾರತೀಯ ಸೇನೆ ಮತ್ತೊಮ್ಮೆ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿದೆ.ಕದನ ವಿರಾಮ ಉಲ್ಲಂಘಿಸಿ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮತ್ತೊಮ್ಮೆ ತಕ್ಕ ತಿರುಗೇಟು ನೀಡಿದೆ.

  • ಸುದ್ದಿ

    ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಪಡೆಯಬಹುದು ಇ-ಪ್ಯಾನ್ ಕಾರ್ಡ್,.!ಹೇಗೆ ಗೊತ್ತಾ,.?

    ಈ ಸಾಮಾಜಿಕ  ಯುಗದಲ್ಲಿ PAN CARD ಬಳಸದೆ ಇರುವ ವ್ಯಕ್ತಿಯನ್ನು ಹುಡುಕಲು ಕಷ್ಟ ಏಕೆಂದರೆ ಪ್ರತಿಯೊಂದು ಕೆಲಸಕ್ಕೂ ಮತ್ತು  ಬ್ಯಾಂಕಿಂಗ್ ಸಂಬಂಧಿತ ವಿವಿಧ ಸೇವೆ, ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕಿರುವ Permanent Account Number (PAN) ಕಾರ್ಡ್ ಪಡೆಯುವುದು ಈಗ ಸುಲಭವಾಗಲಿದೆ. ಆದಾಯ ತೆರಿಗೆ ಇಲಾಖೆಯು ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಹೆಚ್ಚೆಚ್ಚು ಅನುಷ್ಠಾನಗೊಳಿಸಲು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ. ಹೀಗಾಗಿ, ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಉಚಿತವಾಗಿ ಇ-ಪ್ಯಾನ್…

  • ವಿಚಿತ್ರ ಆದರೂ ಸತ್ಯ

    ಗೊಮಟೇಶ್ವರಕ್ಕೆ ಬಟ್ಟೆ ಹಾಕುವಂತೆ ಸಿ.ಎಂ ಗೆ ಪತ್ರ ಬರೆದ ಪತ್ರಕರ್ತ..!ತಿಳಿಯಲು ಈ ಲೇಖನ ಓದಿ…

    ಪ್ರಗತಿಪರ ಚಿಂತಕೆರೆನಿಸಿಕೊಂಡವರು ಐತಿಹಾಸಿಕ ಸ್ಥಳಗಳ ರಕ್ಷಣೆ, ಅವುಗಳ ನವೀಕರಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯುವುದನ್ನು ನಾವು ನೋಡಿದ್ದೇವೆ. ಮಾನ ಮುಚ್ಚಲು ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ವಿಚಿತ್ರ ಮನವಿ ಸಲ್ಲಿಸಿದ್ದಾರೆ.

  • ಸುದ್ದಿ

    ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಸಾಧನೆ!ಲೈವ್ ಸ್ಯಾಟೆಲೈಟ್ ಹೊಡೆದುರುಳಿಸಿದ ವಿಜ್ಞಾನಿಗಳು.. ಮೋದಿಯಿಂದ ಅಧಿಕೃತ ಘೋಷಣೆ..

    ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು ಬಾಹ್ಯಾಕಾಶದಲ್ಲೇ ಲೈವ್ ಸ್ಯಾಟೆಲೈಟ್ ವೊಂದನ್ನು ಹೊಡೆದುರುಳಿಸುವ ಮೂಲಕ ಅತ್ಯಂತ ಅಪರೂಪದ ಸಾಧನೆಯೊಂದನ್ನು ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಧ್ಯಾಹ್ನ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, 300 ಕಿ.ಮೀ ದೂರದಲ್ಲಿರುವ ಉಪಗ್ರಹವನ್ನು ಭಾರತ ಇಂದು ಹೊಡೆದು ಹಾಕಿದೆ. ಒಟ್ಟು ಮೂರು ನಿಮಿಷದಲ್ಲಿ ಉಪಗ್ರಹ ಪ್ರತಿರೋಧಿ ಕ್ಷಿಪಣಿ ಪ್ರಯೋಗದ ಮಿಶನ್ ಶಕ್ತಿ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಮೂಲಕ ಅಮೆರಿಕ, ರಷ್ಯಾ, ಚೀನಾದ ಬಳಿಕ ಈ…